Subscribe to Gizbot

ಲೀಕೊದ ಲೀ2 ಸ್ಮಾರ್ಟ್‌ಫೋನ್ ಆಕರ್ಷಕ ಕಂದು ಬಣ್ಣದಲ್ಲಿ!

Written By:

ಕಂದು ಬಣ್ಣವು ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಅಂದವನ್ನು ತಂದುಕೊಡುತ್ತದೆ. ದಿರಿಸಿನಲ್ಲೂ ಗ್ಯಾಜೆಟ್‌ನಲ್ಲೂ ಈ ಬಣ್ಣ ಹೆಚ್ಚು ಮೋಡಿಯನ್ನುಂಟು ಮಾಡುವಂತಹದ್ದು. ಗ್ಯಾಜೆಟ್ ತಯಾರಕರೂ ತಮ್ಮ ಹೆಚ್ಚಿನ ಡಿವೈಸ್‌ಗಳನ್ನು ಇದೇ ಬಣ್ಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಲೀಕೊ ಈಗ ಇದೇ ಬಣ್ಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ. ತನ್ನ ಹೆಚ್ಚು ಜನಪ್ರಿಯ ಲೀ 2 ಸ್ಮಾರ್ಟ್‌ಫೋನ್ ಅನ್ನು ಇದೇ ಬಣ್ಣದಲ್ಲಿ ಲಾಂಚ್ ಮಾಡಿದೆ.

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್ಸ್ ಮೇಲೆ ವಿಶೇಷ ಆಫರ್

ಲೀಕೊದ ಲೀ2 ಸ್ಮಾರ್ಟ್‌ಫೋನ್ ಆಕರ್ಷಕ ಕಂದು ಬಣ್ಣದಲ್ಲಿ!

ಪ್ರಸ್ತುತ ಲೀ 2 ಸ್ಟೈಲಿಶ್ ರೋಸ್ ಗೋಲ್ಡ್ ಬಣ್ಣದಲ್ಲಿ ಬಂದಿದ್ದು ಯುವ ಜನರು ಮಾತ್ರವಲ್ಲದೆ ಹೆಚ್ಚಿನ ಎಲ್ಲ ವರ್ಗದವರೂ ಇದನ್ನು ಇಷ್ಟಪಡುತ್ತಿದ್ದಾರೆ. ಲೀಕೋದ ಲೀ 2 ಸ್ಮಾರ್ಟ್‌ಫೋನ್ ಕಂದು ಬಣ್ಣದಲ್ಲೂ ಬರುತ್ತಿದ್ದು "ಮೈ ಗ್ರೇ" ಎಂಬುದಾಗಿ ಇದು ಹೆಸರನ್ನು ಪಡೆದುಕೊಂಡಿದೆ. ಈ ಹೊಸ ಕಂದು ಬಣ್ಣ ಆಕರ್ಷಕವಾಗಿದ್ದು ಆಸೆಯನ್ನು ಪೂರೈಸುವಂತಿದೆ.

ಲೀಕೊದ ಲೀ2 ಸ್ಮಾರ್ಟ್‌ಫೋನ್ ಆಕರ್ಷಕ ಕಂದು ಬಣ್ಣದಲ್ಲಿ!

ಲೀ 2 ಫೋನ್ ಲೀಕೊದ ಸೂಪರ್ ಸ್ಟೈಲಿಶ್ ಫೋನ್ ಎಂದೆನಿಸಿದ್ದು ಯೂನಿಬಾಡಿ ಮೆಟಲ್ ಡಿಸೈನ್‌ಗೆ ಇದು ಒತ್ತು ನೀಡಿದೆ. ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 652 ನಲ್ಲಿ ಇದು ಬಂದಿದ್ದು, 3ಜಿಬಿ RAM ಮತ್ತು 32 ಜಿಬಿ ಆನ್‌ಬೋರ್ಡ್ ಸ್ಟೋರೇಜ್ ಅನ್ನು ಒಳಗೊಂಡಿದೆ.

ಓದಿರಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲೀಕೊದಿಂದ ಭರ್ಜರಿ ಆಫರ್

ಲೀಕೊದ ಲೀ2 ಸ್ಮಾರ್ಟ್‌ಫೋನ್ ಆಕರ್ಷಕ ಕಂದು ಬಣ್ಣದಲ್ಲಿ!

ಫೋನ್‌ನ ಡಿಸ್‌ಪ್ಲೇ ಗುಣಮಟ್ಟ ಕೂಡ ಇನ್ನಷ್ಟು ಉತ್ತಮವಾಗಿ ಬರಲಿದ್ದು ಲೀಕೊದ ಲೀ 2 ಸ್ಮಾರ್ಟ್‌ಫೋನ್ 5.5 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡು ಬಂದಿದೆ. ಸಿಡಿಎಲ್ಎ ಆಡಿಯೊ ತಂತ್ರಜ್ಞಾನವನ್ನು ಡಿವೈಸ್ ಹೊಂದಿದ್ದು, ವಿಶ್ವದ ಪ್ರಥಮ ಸಿಡಿಎಲ್‌ಎ ಪ್ರಮಾಣದಲ್ಲಿ ಇದು ಬಂದಿದೆ. 3.5mm ಜ್ಯಾಕ್ ಅನ್ನು ಫೋನ್ ಒಳಗೊಂಡಿದೆ.

 

English summary
LeEco, the internet and technology conglomerate is now planning to offer a Grey variant for its immensely popular Le 2 Superphone.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot