ಭಾರತದಲ್ಲಿ ಲಾಂಚ್ ಆಯ್ತು LG G6: ಬೆಲೆ, ವಿಶೇಷತೆಗಳ ಸಂಪೂರ್ಣ ವಿವರ

Written By:

ಸದ್ಯ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳ ಸದ್ದು ಹೆಚ್ಚಾಗಿದೆ. ಈ ಹಿಂದಿನ ಸಿಸನ್ ನಲ್ಲಿ ಬಜೆಟ್ ಫೋನ್‌ಗಳು ಹೆಚ್ಚು ಲಾಂಚ್ ಆಗಿತ್ತು. ಆದರೆ ಈ ತಿಂಗಳಲ್ಲಿ ಟಾಪ್‌ ಎಂಡ್ ಫೋನ್‌ಗಳ ಲಾಂಚ್ ಹೆಚ್ಚಾಗಿದೆ. ಮೊನ್ನೆ ಸ್ಯಾಮ್ ಸಂಗ್ S8 ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಇಂದು ಅದೇ ಮಾದರಿಯಲ್ಲಿ LG ಕಂಪನಿಯೂ ತನ್ನ ಟಾಪ್ ಎಂಡ್ ಫೋನ್ G6ಅನ್ನು ಭಾರತೀಯ ಮರುಕಟ್ಟೆಗೆ ಪರಿಚಯಿಸಿದೆ.

ಭಾರತದಲ್ಲಿ ಲಾಂಚ್ ಆಯ್ತು LG G6: ಬೆಲೆ, ವಿಶೇಷತೆಗಳ ಸಂಪೂರ್ಣ ವಿವರ

ಓದಿರಿ: ಜಿಯೋ ನೀಡುತ್ತಿರುವ ಬೆಲೆಕಟ್ಟಲಾದ ಉಚಿತ ಸೇವೆಗಳಿದು..!!!

ಇಂದು LG ಕಂಪನಿಯೂ ತನ್ನ ಟಾಪ್ ಎಂಡ್ ಫೋನ್ G6ಅನ್ನು ಲಾಂಚ್ ಮಾಡಿದ್ದು, ರೂ.52,990 ಗಳಿಗೆ ಈ ಫೋನ್ ಮಾರಾಟವಾಗಲಿದೆ. ಇದೇ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನಿನ ವಿಶೇಷತೆಗಳೆನು ಎಂಬುದರ ಕುರಿತು ಮಾಹಿತಿ ಮುಂದಿನಂತಿದೆ. ಏಪ್ರಿಲ್ 25 ರಿಂದ ಈ ಫೋನ್ ಆಮೆಜಾನ್‌ನಲ್ಲಿ ಮಾತ್ರವೇ ಲಭ್ಯವಿರಲಿದೆ.

ಓದಿರಿ: 10,000 ರೂ. ಹೊಸ ಆಫರ್ ಬಿಡುಗಡೆ ಮಾಡಿದೆ ಜಿಯೋ..!! ಏನು ಗೊತ್ತಾ..??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
QHD ಗುಣಮಟ್ಟದ ಫುಲ್ ವಿಷನ್ ಡಿಸ್‌ಪ್ಲೇ :

QHD ಗುಣಮಟ್ಟದ ಫುಲ್ ವಿಷನ್ ಡಿಸ್‌ಪ್ಲೇ :

ಸದ್ಯ ಭಾರತದಲ್ಲಿ ಲಾಂಚ್ ಆದ LG G6 ಸ್ಮಾರ್ಟ್‌ಫೋನಿನಲ್ಲಿ 5.7 ಇಂಚಿನ QHD ಗುಣಮಟ್ಟದ (2880x1440p) ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಇದು ಬ್ರೆಜಿಲ್ ಲೈಸ್ ವಿನ್ಯಾವನ್ನು ಹೊಂದಿದೆ. ಇದನ್ನು LG ಫುಲ್ ವಿಷನ್ ಡಿಸ್‌ಪ್ಲೇ ಎಂದು ಕರೆದಿದೆ. ಇದು 18:9 ಅನುಪಾತದಲ್ಲಿದೆ. ಡಿಸ್‌ಪ್ಲೇ ರಕ್ಷಣೆಗಾಗಿ ಗೊರಿಲ್ಲ ಗ್ಲಾಸ್ ಅಳವಡಿಲಾಗಿದೆ.

4 GB RAM/ 64 GB ROM:

4 GB RAM/ 64 GB ROM:

LG G6 ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ ಕ್ವಾಲ್ಕಮ್ ಸ್ನಾಪ್ಡ್ರಾಗನ್ 821 ಪ್ರೋಸೆಸರ್ ಅಳವಡಿಸಲಾಗಿದೆ. ಇದರೊಂದಿಗೆ GB RAM ಅಳವಡಿಲಾಗಿದೆ. ಅಲ್ಲದೇ 64 GB ಇಂಟರ್ನಲ್ ಮೆಮೊರಿಯನ್ನು ಈ ಫೋನ್ ಒಳಗೊಂಡಿದೆ. ಇದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಂಡು ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಡ್ಯುಯಲ್ ಕ್ಯಾಮೆರಾ ಆಯ್ಕೆ:

ಡ್ಯುಯಲ್ ಕ್ಯಾಮೆರಾ ಆಯ್ಕೆ:

ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟಿಹಾಕಿರುವ ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು LG G6 ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಲಾಗಿದೆ. 13 MPಯ ಎರಡು ಕ್ಯಾಮೆರಾ ಗಳು LG G6 ಫೋನಿನ ಹಿಂಭಾಗದಲ್ಲಿದೆ ಎನ್ನಲಾಗಿದೆ. ಇದರಲ್ಲಿ 4K ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವ ಅವಕಾಶವು ಇದೆ. ಇದೇ ಮಾದರಿಯಲ್ಲಿ ಮುಂಭಾದಲ್ಲಿ 5 MP ಕ್ಯಾಮೆರಾವನ್ನು ಸಹ ನೀಡಲಾಗಿದೆ.

3,300 mAh ಬ್ಯಾಟರಿ:

3,300 mAh ಬ್ಯಾಟರಿ:

ಇದೇ ಮಾದರಿಲ್ಲಿ LG G6 ಸ್ಮಾರ್ಟ್‌ಫೋನಿನಲ್ಲಿ 3,300 mAh ಬ್ಯಾಟರಿತಯನ್ನು ಅಳವಡಿಸಲಾಗಿದೆ. ಇದರೊಂದಿಗೆ ಕ್ವೀಕ್ ಚಾರ್ಜಿಂಗ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. USB ಟೈಪ್ C ಇದರಲ್ಲಿದೆ. 4G VoLTE ಸಫೋರ್ಟ್ ಮಾಡುವ ಈ ಫೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
LG has just announced the launch of the LG G6 smartphone in India at an event. The smartphone is priced at Rs. 51,990 as it is a premium and high-end device. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot