ಮ್ಯೀಜು ಎಂ5: ಹೊಸ ಸ್ಮಾರ್ಟ್ ಫೋನಿನ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು.

ಮ್ಯೀಜು ಎಂ5ನಲ್ಲಿ 5.2 ಇಂಚಿನ ಹೆಚ್.ಡಿ ಪರದೆ ಮತ್ತು ಆಕ್ಟಾ ಕೋರ್ ಮೀಡಿಯಾ ಟೆಕ್ ಸಿಪಿಯು ಇದೆ.

|

ಚೀನಾದ ಸ್ಮಾರ್ಟ್ ಫೋನ್ ತಯಾರಕ ಮ್ಯೀಜು ಕಂಪನಿಯ ಹೊಸ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಮ್ಯೀಜು ಎಂ5 ಅನ್ನು ಘೋಷಿಸಿದೆ. ಚೀನಾದ ಮಾರುಕಟ್ಟೆಯಲ್ಲಿ ಇದು ಎರಡು ಆವೃತ್ತಿಯಲ್ಲಿ ಬಿಡುಗಡೆಗೊಂಡಿದೆ. 2ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಫೋನಿನ ಬೆಲೆ ಅಂದಾಜು 6,900 ರುಪಾಯಿ ಮತ್ತು 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಫೋನಿನ ಬೆಲೆ ಅಂದಾಜು 8,900 ರುಪಾಯಿ.

ಮ್ಯೀಜು ಎಂ5: ಹೊಸ ಸ್ಮಾರ್ಟ್ ಫೋನಿನ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು.

ಈ ಬೆಲೆ ಶ್ರೇಣಿಯಲ್ಲಿ ಮ್ಯೀಜು ಎಂ5 ಲಿನೊವೊ, ಶಿಯೋಮಿ, ಜಿಯೋನಿ, ಏಸಸ್ ಕಂಪನಿಗಳ ಫೋನುಗಳೊಂದಿಗೆ ಸ್ಪರ್ಧೆಗೆ ಇಳಿಯುತ್ತಿದೆ. ಮ್ಯೀಜು ಎಂ5 ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕವಿನ್ನೂ ನಿಗದಿಯಾಗಿಲ್ಲ, 2016ರ ಕೊನೆಯಷ್ಟೊತ್ತಿಗೆ ಭಾರತಕ್ಕೆ ಬರಬಹುದೆಂಬ ನಿರೀಕ್ಷೆಗಳಿವೆ.

ಓದಿರಿ: ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಲಾನ್: 500 ರೂಗೆ 600GB ಡಾಟಾ!

ಮ್ಯೀಜು ಎಂ5 ಫೋನಿನಲ್ಲಿ ಈ ಬೆಲೆಗೆ ಇರುವ ವಿಶೇಷತೆಗಳೇನು ಎನ್ನುವುದನ್ನು ನೋಡೋಣ ಬನ್ನಿ.

ಹೆಚ್.ಡಿ ಪರದೆ ಮತ್ತು ಸಾಮಾನ್ಯ ವಿನ್ಯಾಸ.

ಹೆಚ್.ಡಿ ಪರದೆ ಮತ್ತು ಸಾಮಾನ್ಯ ವಿನ್ಯಾಸ.

ಮ್ಯೀಜು ಎಂ5ನಲ್ಲಿ 5.2 ಇಂಚಿನ ಹೆಚ್.ಡಿ ಪರದೆಯಿದೆ, 2.5 ಡಿ ಕರ್ವ್ಡ್ ಗಾಜಿನೊಂದಿಗೆ. ಪಾಲಿಕಾರ್ಬೊನೇಟ್ ನಿಂದ ಮಾಡಲಾಗಿರುವ ಈ ಫೋನು ಮಿಂಟ್ ಗ್ರೀನ್, ಗ್ಲೇಷಿಯರ್ ವೈಟ್, ಶ್ಯಾಂಪೇನ್ ಗೋಲ್ಡ್, ಸ್ಯಾಫೈರ್ ಬ್ಲೂ ಮತ್ತು ಮ್ಯಾಟೆ ಬ್ಲ್ಯಾಕ್ ಆವೃತ್ತಿಗಳಲ್ಲಿ ಲಭ್ಯವಿದೆ. ವಿನ್ಯಾಸದಲ್ಲಿ ವಿಶೇಷತೆಯಿಲ್ಲ, ಆದರೂ ಆಕರ್ಷಕವಾಗಿದೆ.

ಉತ್ತಮ ಕ್ಯಾಮೆರಾಗಳು.

ಉತ್ತಮ ಕ್ಯಾಮೆರಾಗಳು.

ಮ್ಯೀಜು ಎಂ5ನಲ್ಲಿ ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಫೇಸ್ ಡಿಟೆಕ್ಷನ್ ಆಟೋ ಫೋಕಸ್, ಎಫ್/2.2 ಅಪರ್ಚರ್, 5ಪಿ ಲೆನ್ಸ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಇದೆ.

ಮುಂಬದಿಯಲ್ಲಿ ಎಫ್/2.0 ಅಪರ್ಚರ್, 4ಪಿ ಲೆನ್ಸ್ ಇರುವ 5 ಮೆಗಾಪಿಕ್ಸೆಲ್ಲಿನ ಕ್ಯಾಮೆರಾ ಇದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಕ್ಟಾ ಕೋರ್ ಪ್ರೊಸೆಸರ್ ಮತ್ತು ಯುನ್ ಒಎಸ್ (ಲಿನಕ್ಸ್).

ಆಕ್ಟಾ ಕೋರ್ ಪ್ರೊಸೆಸರ್ ಮತ್ತು ಯುನ್ ಒಎಸ್ (ಲಿನಕ್ಸ್).

ಮ್ಯೀಜು ಎಂ5ನಲ್ಲಿ ಮೀಡಿಯಾಟೆಕ್ ಎಂಟಿ6750 ಆಕ್ಟಾ ಕೋರ್ ಪ್ರೊಸೆಸರ್ (4x1.5 GHz ಕಾರ್ಟೆಕ್ಸ್ ಎ53 + 4x1.0 GHz ಕಾರ್ಟೆಕ್ಸ್ ಎ53) ಜೊತೆಗೆ ಮಾಟಿ ಟಿ860 ಜಿಪಿಯು ಇದೆ. 2/3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್ ಇದೆ.

ಈ ಮೊಬೈಲಿನ ಆಕರ್ಷಣೆಯೆಂದರೆ ಇದರ ಆಪರೇಟಿಂಗ್ ಸಿಸ್ಟಮ್. ಇದರಲ್ಲಿ ಆ್ಯಂಡ್ರಾಯ್ಡ್ ಮೇಲೆ ರೂಪಿತವಾದ ಲಿನಕ್ಸ್ ಆಧಾರಿತ ಯುನ್ ಒಎಸ್ ಇದೆ. ಜೊತೆಗೆ ಫ್ಲೈಮ್ ಒಎಸ್ 5.5 ಯುಐ ಇದೆ. ಈ ಒ.ಎಸ್ ಬಗ್ಗೆ ನಮಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿಗಳಿಲ್ಲ. ಮಾಹಿತಿ ದೊರೆಯುತ್ತಿದ್ದಂತೆಯೇ ನಿಮಗೆ ತಿಳಿಸುತ್ತೇವೆ.

ದೊಡ್ಡ ಬ್ಯಾಟರಿ, ಉತ್ತಮ ಸಂಪರ್ಕ.

ದೊಡ್ಡ ಬ್ಯಾಟರಿ, ಉತ್ತಮ ಸಂಪರ್ಕ.

ಮ್ಯೀಜು ಎಂ5ನಲ್ಲಿ 3,070 ಎಂ.ಎ.ಹೆಚ್ ಬ್ಯಾಟರಿ ಇದೆ, 66 ಘಂಟೆಗಳ ಕಾಲ ಹಾಡುಗಳನ್ನು ಕೇಳಬಹುದು ಎನ್ನಲಾಗಿದೆ.

ಸಂಪರ್ಕದ ವಿಷಯಕ್ಕೆ ಬಂದರೆ ಈ ಫೋನಿನಲ್ಲಿ 4ಜಿ ಎಲ್.ಟಿ.ಇ, ವೋಲ್ಟೇ, ವೈಫೈ, ಬ್ಲೂಟೂಥ್ 4.0 ಮತ್ತು ಜಿಪಿಎಸ್/ಎ-ಜಿಪಿಎಸ್ ಬೆಂಬಲವಿದೆ.

ಇತರೆ ವಿಶೇಷತೆಗಳು.

ಇತರೆ ವಿಶೇಷತೆಗಳು.

ಮ್ಯೀಜು ಎಂ5ನಲ್ಲಿ ಬೆರಳಚ್ಚು ಸಂವೇದಕವಿದೆ. ಹೋಮ್ ಬಟನ್ ನಲ್ಲಿ ಅಡಕವಾಗಿರುವ ಈ ಸಂವೇದಕ 0.2 ಸೆಕೆಂಡುಗಳಲ್ಲಿ ಬೆರಳಚ್ಚನ್ನು ಸ್ಕ್ಯಾನ್ ಮಾಡಿಬಿಡುತ್ತದೆ ಎನ್ನಲಾಗಿದೆ.

ಮ್ಯೀಜು ಎಂ5ನಲ್ಲಿ ಹೈಬ್ರಿಡ್ ಡುಯಲ್ ನ್ಯಾನೋ ಸಿಮ್ ಸ್ಲಾಟ್ ಇದೆ. ಒಂದು ಸ್ಲಾಟ್ ನಲ್ಲಿ ಸಿಮ್ ಬದಲಿಗೆ ಮೈಕ್ರೋ ಎಸ್.ಡಿ ಕಾರ್ಡ್ ಬಳಸಿಕೊಂಡು ಸಂಗ್ರಹವನ್ನು 128 ಜಿಬಿವರೆಗೆ ಹೆಚ್ಚಿಸಿಕೊಳ್ಳಬಹುದು. ಸ್ಮಾರ್ಟ್ ಫೋನ್ 16/32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದೊಂದಿಗೆ ಲಭ್ಯವಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Meizu M5 features a 5.2-inch HD display and is powered by an Octa-Core MediaTek CPU.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X