ಬಂದಿದೆ ಭಾರತದ್ದೇ 5000mAh ಬ್ಯಾಟರಿ ಸ್ಮಾರ್ಟ್‌ಫೋನ್: ಚೀನಾ ಶಿಯೋಮಿ ಫೋನ್‌ಗೆ ಹೊಡೆತ ನೀಡಲು...!

|

ಈಗಾಗಲೇ ಭಾರತ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಸಾಕಷ್ಟು ಜನರನ್ನು ಸೆಳೆದಿರುವ ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೋ ಮಾಕ್ಸ್, ಮತ್ತೊಂದು ಭಾರತ್ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ.

ಬಂದಿದೆ ಭಾರತದ್ದೇ ಸ್ಮಾರ್ಟ್‌ಫೋನ್: ಚೀನಾ ಶಿಯೋಮಿ ಫೋನ್‌ಗೆ ಹೊಡೆತ ನೀಡಲು

ಓದಿರಿ: ಗೂಗಲ್ ಪ್ಲೇ ಸ್ಟೋರಿನಲ್ಲಿ ಇದೇ ಟಾಪ್‌ಆಪ್‌..? ಊಹಿಸಲು ಸಾಧ್ಯವಿಲ್ಲ..!

ಭಾರತೀಯ ಮಾರುಕಟ್ಟೆಗೆ ಮೈಕ್ರೋಮಾಕ್ಸ್ 'ಭಾರತ್ 5' ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಕಡಿಮೆ ಬೆಲೆಯ 4G ಫೋನಾಗಿದ್ದು, ಅದರಲ್ಲೂ 5000mAh ಬ್ಯಾಟರಿಯನ್ನು ಹೊಂದಿದ್ದು, ಈ ವಿಶೇಷತೆ ಮೂಲಕ ಗ್ರಾಹಕರನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಿದೆ.

ಭಾರತ್ 5 ಸ್ಮಾರ್ಟ್‌ಫೋನ್ ಬೆಲೆ:

ಭಾರತ್ 5 ಸ್ಮಾರ್ಟ್‌ಫೋನ್ ಬೆಲೆ:

ಭಾರತ್ 5 ಸ್ಮಾರ್ಟ್‌ಫೋನ್ ಬೆಲೆ ರೂ. 5,555 ಆಗಲಿದ್ದು, ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ ಫೋನ್ ದೊರೆಯಲಿದ್ದು, ಈ ಸ್ಮಾರ್ಟ್‌ಫೋನ್ ಕೊಂಡವರಿಗೆ ವೊಡಾಫೋನ್ 50GB 4G ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ.

ಭಾರತ್ 5 ವಿಶೇಷತೆಗಳು:

ಭಾರತ್ 5 ವಿಶೇಷತೆಗಳು:

ಭಾರತ್ 5 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 5.2 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ.

ವೇಗದ ಕಾರ್ಯಚರಣೆ ಸಾಧ್ಯ:

ವೇಗದ ಕಾರ್ಯಚರಣೆ ಸಾಧ್ಯ:

ಇದಲ್ಲದೇ ಭಾರತ್ 5 ಸ್ಮಾರ್ಟ್‌ಫೋನಿನಲ್ಲಿ 1GB RAM ಕಾಣಬಹುದಾಗಿದ್ದು, 16GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಹಿಂಭಾಗ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಎರಡು ಕಡೆಯಲ್ಲಿ LED ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ.

5000mAh ಬ್ಯಾಟರಿ:

5000mAh ಬ್ಯಾಟರಿ:

ಇದಲ್ಲದೇ ಭಾರತ್ 5 ಸ್ಮಾರ್ಟ್‌ಫೋನಿನಲ್ಲಿ 5000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು 2 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ ಎನ್ನಲಾಗಿದೆ. ಇದೇ ಈ ಸ್ಮಾರ್ಟ್‌ಫೋನಿನ್ ವಿಶೇಷತೆಗಳಲ್ಲಿ ಪ್ರಮುಖವಾದದ್ದು.

How to create two accounts in one Telegram app (KANNADA)
ಮತ್ತೇರೆಡು ಸ್ಮಾರ್ಟ್‌ಪೋನ್ ಲಾಂಚ್:

ಮತ್ತೇರೆಡು ಸ್ಮಾರ್ಟ್‌ಪೋನ್ ಲಾಂಚ್:

ಇದಲ್ಲದೇ ಮುಂದಿನ ಎರಡು ತಿಂಗಳಲ್ಲಿ ಮತ್ತೇರೆಡು ಬಜೆಟ್‌ ಫೋನ್‌ಗಳನ್ನು ಮೈಕ್ರೋಮಾಕ್ಸ್ ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಭಾರತ್ 5 ಪ್ಲಸ್ ಮತ್ತು ಭಾರತ್‌ 5 ಪ್ರೋ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿದೆ.

Best Mobiles in India

English summary
Micromax Bharat 5 With 5000mAh Battery Launched: Price, Specifications. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X