Subscribe to Gizbot

ಫುಲ್‌ಸ್ಕ್ರಿನ್‌ ಡಿಸ್‌ಪ್ಲೇ ಮೆರೆತು ಬಿಡಿ: ಡ್ಯುಯಲ್-ಫೋಲ್ಡಿಂಗ್‌ ಡಿಸ್‌ಪ್ಲೇಯೊಂದಿಗೆ ಬರಲಿದೆ ವಿಂಡೋಸ್ ಫೋನ್..!

Written By:

ಮಾರುಕಟ್ಟೆಯಲ್ಲಿ ಹೊಸ ವಿಂಡೋಸ್ ಫೋನ್ ಕಾಣಿಸಿಕೊಂಡು ತುಂಬ ದಿನಗಳೇ ಕಳೆದಿದೆ. ಮೂಲಗಳ ಪ್ರಕಾರ ಇನ್ನು ಮುಂದೆ ಮೈಕ್ರೋಸಾಫ್ಟ್ ಯಾವುದೇ ವಿಂಡೋಸ್ ಫೋನ್‌ಗಳನ್ನು ಲಾಂಚ್ ಮಾಡುವುದಿಲ್ಲ ಎನ್ನಲಾಗಿದೆ. ಆದರೆ ಸದ್ಯ ಮತ್ತೊಂದು ರೂಮರ್ ಶುರುವಾಗಿದ್ದು, ಫೋಲ್ಡಿಂಗ್ ಡಿಸ್‌ಪ್ಲೇ ಇರುವ ಸರ್‌ಫಸ್ ಫೋನ್‌ ವೊಂದನ್ನು ಲಾಂಚ್ ಮಾಡಲು ಮೈಕ್ರೋ ಸಾಫ್ಟ್ ಮುಂದಾಗಿದೆ.

ಡ್ಯುಯಲ್-ಫೋಲ್ಡಿಂಗ್‌ ಡಿಸ್‌ಪ್ಲೇಯೊಂದಿಗೆ ಬರಲಿದೆ ವಿಂಡೋಸ್ ಫೋನ್..!

ಓದಿರಿ: ಜಿಯೋ 'ಸರ್ಪೈಸ್ ಕ್ಯಾಷ್ ಬ್ಯಾಕ್': ರೂ.3300 ಪಡೆದುಕೊಳ್ಳುವ ಸಿಂಪಲ್ ಟಿಪ್ಸ್...!

ಈಗಾಗಲೇ ಮಾರುಕಟ್ಟೆಯಲ್ಲಿ ಬ್ರೆಜಿಲ್ ಲೈಸ್ ಡಿಸ್‌ಪ್ಲೇ, ಫುಲ್‌ಸ್ಕ್ರಿನ್‌ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ವಿಂಡೋಸ್ ಫೋಲ್ಡಿಂಗ್ ಡಿಸ್‌ಪ್ಲೇಯನ್ನು ನೀಡುವ ಮೂಲಕ ಮಾರುಕಟ್ಟೆಗೆ ಹೊಸ ಮಾದರಿಯಲ್ಲಿ ಕಾಲಿಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಸೈಜ್ ಹೆಚ್ಚಿಸಲು:

ಡಿಸ್‌ಪ್ಲೇ ಸೈಜ್ ಹೆಚ್ಚಿಸಲು:

ವಿಂಡೋಸ್ ತನ್ನ ಸರ್ಫಸ್ ಫೋನಿನ ಡಿಸ್‌ಪ್ಲೇ ಸೈಜ್‌ ಅನ್ನು ಹೆಚ್ಚು ಮಾಡುವ ಸಲುವಾಗಿ ಫೋಲ್ಡಿಂಗ್ ಫೋನ್‌ ಅನ್ನು ಲಾಂಚ್ ಮಾಡಲು ಸಿದ್ದತೆಯನ್ನು ನಡೆಸಿದ್ದು, ಈಗಾಗಲೇ ವಿನ್ಯಾಸವನ್ನು ತಯಾರು ಮಾಡಿದೆ ಎನ್ನಲಾಗಿದೆ. ಫೋಲ್ಡಿಂಗ್‌ ಫೋನ್‌ನಲ್ಲಿ ಹೆಚ್ಚಿನ ಪ್ರಮಾಣದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ಪ್ಯಾಬ್ಲೆಟ್ ಮಾದರಿ:

ಪ್ಯಾಬ್ಲೆಟ್ ಮಾದರಿ:

ಮೊಬೈಲ್ ಹಾಗೂ ಟ್ಯಾಬ್ಲೆಟ್ ಎರಡಕ್ಕೂ ಮಧ್ಯದಲ್ಲಿ ಫ್ಯಾಬ್ಲೆಟ್‌ ಮಾದರಿಯಲ್ಲಿ ಈ ಫೋನ್ ಕಾಣಿಸಿಕೊಳ್ಳಲಿದ್ದು, ಡ್ಯುಯಲ್ ಡಿಸ್‌ಪ್ಲೆಯನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. ಇದು ಟ್ಯಾಬ್ಲೆಟ್ ಪರ್ಯಯವಾಗಿ ಬಳಕೆಯಾಗಲಿದೆ.

ವಿಂಡೋಸ್‌ 10:

ವಿಂಡೋಸ್‌ 10:

ಈ ಮಡಚುವ ಸ್ಮಾರ್ಟ್‌ಫೋನ್ ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲಿದ್ದು, ವಿಂಡೋಸ್ ಪ್ರಿಯರಿಗೆ ಇದೊಂದು ಸಂತೋಷದ ಸುದ್ದಿಯಾಗಿರಲಿದೆ. ಮೂಲಕಗಳ ಪ್ರಕಾರ ಈ ಫೋನ್ ಮುಂದಿನ ವರ್ಷದ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಇತರೆ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಭಾರೀ ನಷ್ಟವನ್ನು ಉಂಟು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Microsoft Says a Surface Phone with Foldable Displays. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot