Subscribe to Gizbot

ಜಿಯೋ 'ಸರ್ಪೈಸ್ ಕ್ಯಾಷ್ ಬ್ಯಾಕ್': ರೂ.3300 ಪಡೆದುಕೊಳ್ಳುವ ಸಿಂಪಲ್ ಟಿಪ್ಸ್...!

Written By:

ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ ಜಿಯೋ ಬಳಕೆದಾರರಿಗೆ ಹೊಸ ವರ್ಷದ ಸಂಭ್ರಮಕ್ಕೆ ಆಚ್ಚರಿಯ ಕೊಡುಗೆಯನ್ನು ನೀಡಿದ್ದಾರೆ. 'ಸರ್ಪೈಸ್ ಕ್ಯಾಷ್ ಬ್ಯಾಕ್ ಆಫರ್' ಅನ್ನು ಘೋಷಣೆಯನ್ನು ಮಾಡಿದ್ದಾರೆ. ಈ ಮೂಲಕ ಜಿಯೋ ಗ್ರಾಹಕರು ರೂ.399ಗಿಂತಲೂ ಅಧಿಕ ರೀಚಾರ್ಜ್ ಮಾಡಿದರೆ ರೂ.3300ರ ವರೆಗೂ ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ಜಿಯೋ 'ಸರ್ಪೈಸ್ ಕ್ಯಾಷ್ ಬ್ಯಾಕ್': ರೂ.3300 ಪಡೆದುಕೊಳ್ಳುವ ಸಿಂಪಲ್ ಟಿಪ್ಸ್...!

ಓದಿರಿ: ನಿಮ್ಮದು 3G ಫೋನಾ..? ಹೊಸ ವರ್ಷದಿಂದ ವಾಟ್ಸ್‌ಆಪ್‌ ಬಂದ್..! ಏನು ಮಾಡಬೇಕು..?

ಈ ಕ್ಯಾಷ್ ಬ್ಯಾಕ್ ಪಡೆಯವುದು ಕೊಂಚ ಟ್ರಿಕಿಯಾಗಿದ್ದು, ಇದರಲ್ಲಿ ರೂ.400 ಮೈ ಜಿಯೋ ಕ್ಯಾಷ್ ಬ್ಯಾಕ್, ರೂ.300 ಇನ್‌ಸ್ಟೆಂಟ್ ಕ್ಯಾಷ್ ಬ್ಯಾಕ್ ಮತ್ತು ಡಿಜಿಟಲ್ ವ್ಯಾಲೆಟ್ ನಲ್ಲಿ ರೂ. 2600ರ ವರೆಗೂ ನೀವು ವೋಚರ್ ಗಳನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಎಲ್ಲಿವರೆಗೂ ಆಫರ್ ಇದೆ:

ಎಲ್ಲಿವರೆಗೂ ಆಫರ್ ಇದೆ:

ಡಿಸೆಂಬರ್ 26 ರಿಂದ ಜನರವರಿ 15ರ ವರೆಗೂ ಈ ಆಫರ್ ಚಾಲ್ತಿಯಲ್ಲಿ ಇರಲಿದೆ. ಅಲ್ಲದೇ ಈ ಆಫರ್ ನಲ್ಲಿ ದೊರೆಯುವ ಕ್ಯಾಷ್ ಬ್ಯಾಕ್, ವೋಚರ್ ಗಳನ್ನು ಮಾರ್ಚ್ 31ರ ವರೆಗೂ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಜಿಯೋ ದಿಂದ ಮಾಡಿಕೊಡಲಾಗಿದೆ.

ಕ್ಯಾಷ್ ಬ್ಯಾಕ್ ಹೇಗೆ: ಜಿಯೋದಲ್ಲಿ ಮಾಡಿದರೆ:

ಕ್ಯಾಷ್ ಬ್ಯಾಕ್ ಹೇಗೆ: ಜಿಯೋದಲ್ಲಿ ಮಾಡಿದರೆ:

ಜಿಯೋ ನೆಟ್‌ವರ್ಕ್‌ನಲ್ಲಿ ನಲ್ಲಿ ರಿಚಾರ್ಜ್ ಮಾಡಿಕೊಂಡರೆ ಒಟ್ಟು 8 ಕ್ಯಾಷ್ ಬ್ಯಾಕ್ ಹಿಂದಿರುಗಿ ಬರಲಿದೆ (50X8=400). ಇದು ನಿಮ್ಮ ಮೈ ಜಿಯೋ ಆಪ್‌ಗೆ ಬಂದು ಸೇರಿಕೊಳ್ಳಲಿದೆ. ಈ ಹಿಂದಿನ ಟ್ರಿಪಲ್ ಕ್ಯಾಷ್ ಬ್ಯಾಕ್ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ.

ಇ-ವ್ಯಾಲೆಟ್ ನೊಂದಿಗೆ:

ಇ-ವ್ಯಾಲೆಟ್ ನೊಂದಿಗೆ:

ಇದಲ್ಲದೇ ಜಿಯೋ ಇ-ವ್ಯಾಲೆಟ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, ಅಮೆಜಾನ್ ಪೇ, ಪೇಟಿಎಂ, ಫೋನ್ ಪೇ, ಮೊಬಿಕ್ಷೀಕ್, ಆಕ್ಸಿಸ್ ಪೇ ಮತ್ತು ಫೀಚಾರ್ಜ್‌ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ಇನ್‌ಸೆಂಟ್ ಕ್ಯಾಷ್ ಬ್ಯಾಕ್ ದೊರೆಯಲಿದೆ. ಅಮೆಜಾನ್ ಪೇನಲ್ಲಿ ಮಾಡಿದರೆ ರೂ.100 ಕ್ಯಾಷ್ ಬ್ಯಾಕ್, ಪೇಟೆಎಂ ನಲ್ಲಿ ರೂ.5೦ ಹೀಗೆ ಪ್ರತಿಯೊಂದರಲ್ಲೂ ವ್ಯತ್ಯಾಸವಾಗಲಿದೆ. ಮೊಬಿಕ್ವೀಕ್‌ನಲ್ಲಿ ರೂ.300 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ಇ-ಕಾಮರ್ಸ್ ಸೈಟ್ ಗಳೊಂದಿಗೆ:

ಇ-ಕಾಮರ್ಸ್ ಸೈಟ್ ಗಳೊಂದಿಗೆ:

ಜಿಯೋ ಜೂಮ್ ಕಾರ್, ಓಯೋ ರೂಮ್ಸ್, ಯಾತ್ರಾ, ಪೇಟಿಎಂ ಮಾಲ್, ಗೋಫರಿಸ್, ಬಿಗ್ ಬಾಸ್ಕೆಟ್ ಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಜೂಮ್ ಕಾರ್‌ನಲ್ಲಿ ಶೇ.20% ಆಫ್‌, ಓಯೋ ರೂಮ್‌ನಲ್ಲಿ 30% ಆಫ್, ಪೇಟಿಎಂ ಮಾಲ್‌ನಲ್ಲಿ 100% ಕ್ಯಾಷ್ ಬ್ಯಾಕ್ ಸೇರಿದಂತೆ ಹಲವು ಆಯ್ಕೆಗಳನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio Surprise cashback offe how to claim
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot