ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ನ ಒಪ್ಪಂದದ ನಂತರ ಮೈಕ್ರೊಸೊಫ್ಟ್ ಆಪಲ್ ಐಫೋನ್ ಮಾರಲಾರಂಭಿಸಿದೆ

ಮೈಕ್ರೊಸೊಫ್ಟ್ ಆಪಲ್ ನ ಒಪ್ಪಂದದ ನಂತರ ಮೈಕ್ರೊಸೊಫ್ಟ್ ಎಡಿಷನ್ ಐಫೋನ್ ಆಗಲಿದೆ ಜೊತೆಗೆ ಐಫೋನ್ ಹಿಂದೆ ಮೈಕ್ರೊಸೊಫ್ಟ್ ಲೊಗೊ ಇರಲಿದೆ.

By Prateeksha
|

ಮುಂಚೆ ನಾವು ಮೈಕ್ರೊಸೊಫ್ಟ್ ಸ್ಯಾಮ್ಸಂಗ್ ಜೊತೆಗೆ ಅದರ ಹೊಸ ಸ್ಮಾರ್ಟ್‍ಫೋನ್ ಗಳಾದ ಗೆಲಾಕ್ಸಿ ಎಸ್8 ಮತ್ತು ಎಸ್8+ ಗಾಗಿ ಒಪ್ಪಂದದ ಸಹಿ ಹಾಕಿದ್ದಾರೆ ಎನ್ನುವ ವಿಷಯ ತಿಳಿಸಿದೆವು. ಅದಕ್ಕಿಂತ ಹೆಚ್ಚಾಗಿ ಅವರಿಬ್ಬರ ಪಾಲುದಾರಿಕೆಯಲ್ಲಿ ಈ ಎರಡು ಫೋನುಗಳು ಮೈಕ್ರೊಸೊಫ್ಟ್ ನ ಮಾಡೆಲ್ ಗಳಾಗಿ ಬರಲಿವೆ.

ಮೈಕ್ರೊಸೊಫ್ಟ್ ನಿಂದ ಆಪಲ್ ಐಫೋನ್ ಮಾರಾಟ ಆರಂಭ

ಮತ್ತೆ ಅಷ್ಟೇ ಅಲ್ಲಾ, ಮೈಕ್ರೊಸೊಫ್ಟ್ ಸ್ಟೋರ್ಸ್ ಗೆ ಗ್ರಾಹಕ ಭೇಟಿಯಾದರೆ ಅಲ್ಲಿ ವಿಂಡೊಸ್ ಫೋನಿನ ಜೊತೆಗೆ ಗೆಲಾಕ್ಸಿ ಎಸ್8 ಸ್ಮಾರ್ಟ್‍ಫೋನ್ ಗಳು ಕೂಡ ಕಾಣಸಿಗುವುದು. ಈ ಹೊಸ ಹೆಜ್ಜೆಯಿಂದ ಮೈಕ್ರೊಸೊಫ್ಟ್ ಫೋನಿನ ವ್ಯಾಪಾರೊದ್ಯಮದಲ್ಲಿ ಕಾಲಿಡುವಂತೆ ಕಾಣುತ್ತಿದೆ.

ಇಂತಹ ಗುರಿಯಿಂದ, ಮೈಕ್ರೊಸೊಫ್ಟ್ ಸ್ಯಾಮ್ಸಂಗ್ ಅನ್ನು ಮಾತ್ರ ಪಾಲುದಾರನನ್ನಾಗಿ ಮಾಡಿ ತೃಪ್ತಿ ಪಡಲಿಕ್ಕಿಲ್ಲಾ. ವ್ಯಾಪಾರೊದ್ಯಮಕ್ಕೆ ಹೆಚ್ಚಿನ ಬ್ರ್ಯಾಂಡ್ ಗಳು ಬೇಕಾಗುತ್ತದೆ ಮತ್ತು ಮೈಕ್ರೊಸೊಫ್ಟ್ ಆಪಲ್ ನೊಂದಿಗೆ ಕೂಡ ಅದರ ಐಫೋನ್ ಮಾರುವುದಾಗಿ ಇನ್ನೊಂದು ಒಪ್ಪಂದ ಮಾಡಿಕೊಂಡಿದೆ.

ಓದಿರಿ: ವಿಮಾನ ಪ್ರಯಾಣಕ್ಕೆ ಪಾಸ್‌ಪೋರ್ಟ್ ಬೇಕಿಲ್ಲ!! ಆಧಾರ್ ಇದ್ರೆ ಸಾಕು!?

ಒಪ್ಪಂದ ಎಂದ ಮೇಲೆ ಗ್ರಾಹಕ ಕೇವಲ ಸ್ಯಾಮ್ಸಂಗ್ ಫೋನನ್ನು ಮಾತ್ರ ನೋಡದೆ ಐಫೋನನ್ನು ಕೂಡ ನೋಡುತ್ತಾನೆ. ಇನ್ನೊಂದೆಡೆಗೆ ಐಫೋನ್ ಮೈಕ್ರೊಸೊಫ್ಟ್ ಮಾಡೆಲ್ ಎಂದು ಕೂಡ ಕರೆಯಲಾಗುವುದು. ಸೊಫ್ಟ್‍ಪೀಡಿಯಾ ವರದಿ ಪ್ರಕಾರ ಐಫೊನ್ಸ್ ಹಿಂದು ಬದಿಯಲ್ಲಿ ಮೈಕ್ರೊಸೊಫ್ಟ್ ಗುರುತನ್ನು ಕೂಡ ಹೊಂದಿರುತ್ತದೆ.

ಮೈಕ್ರೊಸೊಫ್ಟ್ ರಾಯಭಾರಿ ಹೇಳಿರುವ ಹಾಗೆ ತಮ್ಮ ಸ್ಟೋರ್ ನ ವ್ಯಾಪಾರ ಹೆಚ್ಚಿಸಲು ಇದೊಂದು ಪರಿಣಾಮಕಾರಿ ಹೆಜ್ಜೆ ಯಾಗಿದ್ದು ಕಂಪನಿಯ ವ್ಯಾಪಾರ ಹೆಚ್ಚಲಿದೆ.” ನಮ್ಮ ಆಪಲ್ ನೊಂದಿಗಿನ ಒಪ್ಪಂದ ಗ್ರಾಹಕರಿಗೆ ನಮ್ಮ ಸೇವೆ ಬೇರೆ ಮೊಬೈಲ್ ಪ್ಲಾಟ್‍ಫಾರ್ಮ್ ಹೊಂದಿದ್ದರೂ ಸುಲಭವಾಗಿ ದೊರಕುವುದು. ನಾವು ಎಲ್ಲರ ನಿರ್ಧಾರವನ್ನು ಗೌರವಿಸುತ್ತೇವೆ ಆಂಡ್ರೊಯಿಡ್ ಅಥವಾ ಐಒಎಸ್ ಆಗಿರಲಿ ಮತ್ತು ಇದಕ್ಕಾಗಿ ಅವರು ಯಾವುದೇ ರೀತಿಯಲ್ಲಿ ರಾಜಿ ಮಾಡಬೇಕಾಗಿಲ್ಲಾ. ಮೈಕ್ರೊಸೊಫ್ಟ್ ಆಪ್ಸ್ ಅನ್ನು ಆದಷ್ಟು ಎಲ್ಲಾ ಡಿವೈಜ್ ಗಳಲ್ಲಿ ತರಬೇಕೆನ್ನುವುದೇ ನಮ್ಮ ಆದ್ಯತೆ” ಎಂದಿದ್ದಾರೆ.

ಓದಿರಿ: ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್‌ನಲ್ಲಿದೆ 100GB ಡೇಟಾ: ನಿಮಗೆ ಇದು ಗೊತ್ತಾ..?

ಈಗ ಒಪ್ಪಂದಗಳೆಲ್ಲಾ ಮುಗಿದಿದ್ದು ಮೈಕ್ರೊಸೊಫ್ಟ್ ಎಡಿಷನ್ ನ ಐಫೋನ್‍ಗಳು ಗ್ರಾಹಕರಿಗೆ ಎಪ್ರಿಲ್ 1 ರಿಂದ ಲಭ್ಯವಿದ್ದು ಬಾಕ್ಸ್ ಕಸ್ಟಮೈಸೆಷನ್ ವಿಲ್ಲದೆ ಬರಲಿದೆ ಕೊರ್ಟಾನಾ ಸಿರಿ ಬದಲಿಗೆ, ಡಿಫೊಲ್ಟ್ ಮೇಲ್ ಆಪ್ ಔಟ್‍ಲುಕ್ ನೊಂದಿಗೆ ಮತ್ತು ಐಕ್ಲೌಡ್ ಇಂಟಿಗ್ರೇಷನ್ ಒನ್‍ಡ್ರೈವ್ ನೊಂದಿಗೆ.

ಇದರ ಜೊತೆಗೆ ಐಫೋನ್ 7 ಮೈಕ್ರೊಸೊಫ್ಟ್ ಎಡಿಷನ್ ಬೆಳ್ಳಿ, ಗುಲಾಬಿ, ಬಂಗಾರ, ಸಾದು ಕಪ್ಪು ಮತ್ತು ಕಡು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಬೆಲೆಯ ಬಗ್ಗೆ ಹೇಳಬೇಕೆಂದರೆ ಇದರ ಬೆಲೆ ಪ್ರಾರಂಭವಾಗುವುದು $899 ರಿಂದ ( ಸುಮಾರು ರೂ. 58,261).

Best Mobiles in India

English summary
Microsoft starts selling Apple iPhones after Samsung Galaxy S8 deal.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X