ಈ ಎಂಟು ತಪ್ಪುಗಳನ್ನು ಮಾಡಲೇಬೇಡಿ.

|

ಸ್ಮಾರ್ಟ್ ಫೋನುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ಈ ಹೇಳಿಕೆಯನ್ನು ನೀವು ಒಪ್ಪದಿದ್ದರೆ ದಿನಪೂರ್ತಿ ಎಷ್ಟು ಸಲ ನಿಮ್ಮ ಫೋನನ್ನು ಉಪಯೋಗಿಸುತ್ತೀರಿ ಎಂದು ಯೋಚಿಸಿ!

ಈ ಎಂಟು ತಪ್ಪುಗಳನ್ನು ಮಾಡಲೇಬೇಡಿ.

ನಮ್ಮ ಫೋನಿನ ಮೇಲೆ ನಾವು ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಕ್ರೆಡಿಟ್ ಕಾರ್ಡ್ ವಿವರಗಳು, ಪಾಸ್ ವರ್ಡ್ ಗಳನ್ನೆಲ್ಲ ಅದರಲ್ಲೇ ಸಂಗ್ರಹಿಸಿಡುತ್ತೇವೆ. ಈ ರೀತಿ ಸಂಗ್ರಹಿಸುವುದು ತಪ್ಪಲ್ಲ, ಆದರೆ ಅದರ ಜೊತೆಗೆ ನಮ್ಮ ಮೊಬೈಲ್ ಸಾಕಷ್ಟು ಸುರಕ್ಷಿತವಾಗಿದೆ ಎಂದು ಖಾತ್ರಿಪಡಿಸಿಕೊಳ್ಳುವುದೂ ಅತ್ಯವಶ್ಯ.

ಓದಿರಿ: ಜಿಯೋಗೆ ಸ್ಪರ್ಧಿಯಾಗಿ ಆಫರ್‌ಗಳ ಪೂರ ಹರಿಸಲಿರುವ ಏರ್‌ಟೆಲ್, ವೊಡಾಫೋನ್

ಸುಭದ್ರ ಸ್ಮಾರ್ಟ್ ಫೋನ್ ಅಷ್ಟೇ ನಮ್ಮ ವಿವರಗಳನ್ನು ರಕ್ಷಿಸಬಲ್ಲದು. ನಿಮ್ಮ ಸ್ಮಾರ್ಟ್ ಫೋನಿನ ರಕ್ಷಣೆ ಸರಿಯಿಲ್ಲದೇ ಇದ್ದರೆ ನೀವು ಮೋಸಗಾರರಿಗೆ ಬಲಿಪಶುವಾಗಿಬಿಡಬಹುದು, ತೊಂದರೆಗೆ ಸಿಲುಕಬಹುದು. ರಕ್ಷಣೆಗೆ ಹಾನಿಕಾರಕವಾದ ಕೆಲವು ಸಂಗತಿಗಳನ್ನು ಇಲ್ಲಿ ನೀಡಿದ್ದೇವೆ. ಒಮ್ಮೆ ಗಮನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಾಕ್ ಮಾಡಲು ಮರೆತುಬಿಡುವುದು.

ಲಾಕ್ ಮಾಡಲು ಮರೆತುಬಿಡುವುದು.

ಪ್ರತಿ ಬಾರಿಯೂ ನಿಮ್ಮ ಫೋನಿನ ಪಾಸ್ ವರ್ಡ್ ಅಥವಾ ಪಿನ್ ಉಪಯೋಗಿಸುವುದು ತೊಂದರೆಯೆನ್ನಿಸಬಹುದು ಆದರೆ ನೆನಪಿಡಿ ಇದು ನಿಮ್ಮ ಫೋನನ್ನು ಅತ್ಯಂತ ಸುಭದ್ರವಾಗಿಡುವುದಕ್ಕೆ ಅತ್ಯವಶ್ಯ. ಸ್ಕ್ರೀನ್ ಲಾಕ್ ಪ್ಯಾಟರ್ನುಗಳನ್ನು ಸುಲಭವಾಗಿ ಹ್ಯಾಕ್ ಮಾಡಿಬಿಡುವ ಕಾರಣ ಪಾಸ್ ವರ್ಡ್ ಅಥವಾ ಪಿನ್ ಉಪಯೋಗಿಸುವುದು ಉತ್ತಮ. ಫೋನನ್ನು ಉಪಯೋಗಿಸದ ಒಂದು ನಿಮಿಷದ ನಂತರ ಲಾಕ್ ಆಗುವಂತೆ ಸೆಟ್ಟಿಂಗ್ಸ್ ಇಡಿ.

ಸಾರ್ವಜನಿಕ ವೈಫೈ ನೆಟ್ ವರ್ಕ್ ಬಳಸುವುದು.

ಸಾರ್ವಜನಿಕ ವೈಫೈ ನೆಟ್ ವರ್ಕ್ ಬಳಸುವುದು.

ಸಾರ್ವಜನಿಕ ವೈಫೈ ನೆಟ್ ವರ್ಕ್ ಅಗ್ಗವಾದದ್ದು, ಆದರೆ ಭದ್ತತೆಗೆ ಹಾನಿಯಾಗುವ ಸಾಧ್ಯತೆ ಅಧಿಕ. ಅಂತಹ ನೆಟ್ ವರ್ಕನ್ನು ಉಪಯೋಗಿಸುತ್ತಿರುವ ಇತರರು ನಿಮ್ಮ ಮಾಹಿತಿಯನ್ನು ಕದ್ದು ಬಿಡಬಹುದು. ಹ್ಯಾಕರ್ ಗಳು ಸಾರ್ವಜನಿಕ ವೈಫೈ ನೆಟ್ ವರ್ಕ್ ಉಪಯೋಗಿಸಿಕೊಂಡು ನಿಮ್ಮ ಮಾಹಿತಿಯನ್ನು ಕದ್ದು ಬಿಡಬಹುದು. ಆ ರೀತಿಯ ವೈಫೈ ನೆಟ್ ವರ್ಕ್ ಬಳಸಿದರೆ ವರ್ಚುಯಲ್ ಪ್ರೈವೇಟ್ ನೆಟ್ ವರ್ಕ್(ವಿ.ಪಿ.ಎನ್) ಬಳಸಲು ಮರೆಯದಿರಿ.

ಆ್ಯಂಟಿ ವೈರಸ್ ಸಾಫ್ಟ್ ವೇರ್ ಬಳಸದೇ ಇರುವುದು.

ಆ್ಯಂಟಿ ವೈರಸ್ ಸಾಫ್ಟ್ ವೇರ್ ಬಳಸದೇ ಇರುವುದು.

ಆ್ಯಂಟಿ ವೈರಸ್ ಸಾಫ್ಟ್ ವೇರುಗಳ ಮಹತ್ವವೇ ಬಹಳಷ್ಟು ಜನರಿಗೆ ತಿಳಿಯದು. ತಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪಿನಲ್ಲಿ ಇದನ್ನು ಉಪಯೋಗಿಸುತ್ತಾರೆ ಆದರೆ ಸ್ಮಾರ್ಟ್ ಫೋನಿನಲ್ಲಿ ಬಳಸುವುದಿಲ್ಲ. 96 ಪರ್ಸೆಂಟ್ ಸ್ಮಾರ್ಟ್ ಫೋನ್ ಬಳಕೆದಾರರು ಇಂತಹ ಸಾಫ್ಟ್ ವೇರುಗಳನ್ನು ಉಪಯೋಗಿಸುವುದಿಲ್ಲ ಎಂದು ಅಧ್ಯಯನಗಳು ತಿಳಿಸಿವೆ. ಕೆಲವೇ ಕೆಲವು ಮಂದಿ ಆ್ಯಂಟಿ ವೈರಸ್ ಉಪಯೋಗಿಸುತ್ತಾರೆ.

ಅಪ್ ಡೇಟ್ ಮಾಡದಿರುವುದು.

ಅಪ್ ಡೇಟ್ ಮಾಡದಿರುವುದು.

ಸ್ಮಾರ್ಟ್ ಫೋನಿನ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಲು ಹಾಗೂ ಭದ್ರತೆಯನ್ನು ಕಾಪಿಡುವ ಸಲುವಾಗಿ ತಂತ್ರಾಂಶ ಅಭಿವೃದ್ದಿ ಪಡಿಸುವವರು ಹಾಗೂ ಸ್ಮಾರ್ಟ್ ಫೋನ್ ತಯಾರಕರು ಅಪ್ ಡೇಟುಗಳನ್ನು ಹೊರತರುತ್ತಾರೆ. ಅಪ್ ಡೇಟ್ ಮಾಡುವುದು ಯಾವಾಗಲೂ ಒಳ್ಳೆಯದು.

ಆ್ಯಪ್ ಗಳನ್ನು ವೆರಿಫೈ ಮಾಡದಿರುವುದು.

ಆ್ಯಪ್ ಗಳನ್ನು ವೆರಿಫೈ ಮಾಡದಿರುವುದು.

ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡುವ ಮೊದಲು ಅದನ್ನು ವೆರಿಫೈ ಮಾಡುವ ಜನರು ತುಂಬಾ ಕಡಿಮೆ. ವೆರಿಫೈ ಮಾಡುವುದೆಂದರೆ, ತಂತ್ರಾಂಶ ಅಭಿವೃದ್ಧಿಪಡಿಸಿದವರ ಇತಿಹಾಸ ನೋಡುವುದು, ಅವರ ಇತರೆ ಆ್ಯಪ್ ಗಳು, ಅವರಿಗಿರುವ ವಿಮರ್ಶೆಗಳು. ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರು ಆ್ಯಪ್ ಗಳನ್ನು ಡೌನ್ ಲೋಡ್ ಮಾಡುತ್ತಾರೆ ಇನ್ಸ್ಟಾಲ್ ಮಾಡುತ್ತಾರೆ, ವೆರಿಫೈ ಮಾಡುವುದಿಲ್ಲ. ಇದರಿಂದ ನಿಮ್ಮ ಡಾಟಾವನ್ನು ಕದಿಯಬಹುದು.

ಲಿಂಕುಗಳನ್ನು ಕ್ಲಿಕ್ಕಿಸುವುದು.

ಲಿಂಕುಗಳನ್ನು ಕ್ಲಿಕ್ಕಿಸುವುದು.

ಇತ್ತೀಚಿನ ವರದಿಗಳ ಪ್ರಕಾರ ಡೆಸ್ಕ್ ಟಾಪ್ ಬಳಕೆದಾರರಿಗಿಂತ ಮೊಬೈಲ್ ಬಳಕೆದಾರರು ಫಿಶಿಂಗ್ ದಾಳಿಗೆ ಒಳಗಾಗುವ ಸಾಧ್ಯತೆಗಳು ಅಧಿಕ, ಕಾರಣ ಅವರು ಭದ್ರತೆಯ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿರುವುದಿಲ್ಲ. ನಕಲಿ ಲಾಗಿನ್ ಪುಟವನ್ನು ಸ್ಮಾರ್ಟ್ ಫೋನಿನಲ್ಲಿ ಕಂಡು ಹಿಡಿಯುವುದು ಕಂಪ್ಯೂಟರಿನಲ್ಲಿ ಕಂಡುಹಿಡಿಯುವುದಕ್ಕಿಂತ ಕಷ್ಟ. ಚಿಕ್ಕ ಯು.ಆರ್.ಎಲ್ ಗಳು ನಕಲಿ ವಿಳಾಸವನ್ನು ಪತ್ತೆ ಹಚ್ಚುವುದನ್ನು ಮತ್ತಷ್ಟು ಕಷ್ಟಕರವಾಗಿಸಿದೆ. ಉತ್ತಮ ರಕ್ಷಣೆಯೆಂದರೆ ಎಸ್.ಎಂ.ಎಸ್ ಅಥವಾ ಮೆಸೇಜಿಂಗ್ ಆ್ಯಪ್ ಗಳಲ್ಲಿ ಬರುವ ಲಿಂಕುಗಳನ್ನು ಕ್ಲಿಕ್ಕಿಸಬೇಡಿ. ಇಮೇಲ್ ಲಿಂಕುಗಳನ್ನು ಕಂಪ್ಯೂಟರಿನಲ್ಲೇ ತೆರೆಯಿರಿ.

ಬ್ಲೂಟೂಥನ್ನು ಯಾವಾಗಲೂ ಆನ್ ಮಾಡಿಡುವುದು.

ಬ್ಲೂಟೂಥನ್ನು ಯಾವಾಗಲೂ ಆನ್ ಮಾಡಿಡುವುದು.

ಬ್ಲೂಸ್ನೇರಿಂಗ್, ಬ್ಲೂಬಗ್ಗಿಂಗ್ ಅಥವಾ ಬ್ಲೂಜ್ಯಾಕಿಂಗ್ ಅಂತಹ ಪದಗಳ ಬಗ್ಗೆ ಕೇಳಿದ್ದೀರಾ? ಇವೆಲ್ಲವೂ ನಿಮ್ಮ ಬ್ಲೂಟೂಥ್ ಸಂಪರ್ಕವನ್ನು ಬಳಸಿಕೊಂಡು ನಿಮ್ಮ ಫೋನಿಗೆ ಲಗ್ಗೆ ಹಿಡಿವ ಹ್ಯಾಕರುಗಳ ಮಾರ್ಗ. ಕ್ಷಣಮಾತ್ರದಲ್ಲಿ ನಿಮ್ಮ ಅನೇಕ ಲಾಗಿನ್ ಡಾಟಾವನ್ನು ಹ್ಯಾಕರ್ ಗಳು ಪಡೆದುಕೊಂಡುಬಿಡುತ್ತಾರೆ. ಆದ್ದರಿಂದ ನಿಮ್ಮ ಬ್ಲೂಟೂಥ್ ಅನ್ನು ಅಗತ್ಯವಿದ್ದಾಗ ಮಾತ್ರ ಆನ್ ಮಾಡಿಕೊಳ್ಳಿ, ಯಾವಾಗಲೂ ಆನ್ ಮಾಡಿಡಬೇಡಿ.

ಲಾಗ್ ಔಟ್ ಮಾಡುವುದನ್ನು ಮರೆಯುವುದು.

ಲಾಗ್ ಔಟ್ ಮಾಡುವುದನ್ನು ಮರೆಯುವುದು.

ನೀವು ಸೂಕ್ಷ್ಮ ವೆಬ್ ಪುಟಗಳಾದ ಅಮೆಜಾನ್, ಇಬೇ ಅಥವಾ ಪೇ ಪಾಲ್ ನಿಂದ ಲಾಗ್ ಔಟ್ ಆಗುವುದು ಮರೆತುಬಿಟ್ಟರೆ ನಿಮ್ಮ ಆರ್ಥಿಕತೆ ಅಪಾಯದಲ್ಲಿದೆ ಎಂದರ್ಥ. ಹಣಕಾಸಿನ ವಿಚಾರಗಳಿರುವ ವೆಬ್ ಪುಟಗಳಿಂದ ಕೆಲಸ ಮುಗಿದ ತಕ್ಷಣ ಲಾಗ್ ಔಟ್ ಆಗಿ.

Best Mobiles in India

English summary
Smartphone users do a lot of common mistakes that actually expose them to some great security threats such as stealing their data, exposing their financial details, etc. Take a look at these mistakes and how you can avoid them from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X