Subscribe to Gizbot

ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮೊಟೋ G5 ಪ್ಲಸ್ ಸೇಲ್‌ ಆರಂಭ

Written By:

ಬಾರ್ಸಿಲೋನದಲ್ಲಿ ನಡೆದ ಮೊಬೈಲ್ ವರ್ಡ್‌ ಕಾಂಗ್ರೆಸ್ ಸಮಾವೇಶದಲ್ಲಿ ಅನಾವರಣಗೊಂಡಿದ್ದ ಲಿನೋವೋ ಮಾಲಿಕತ್ವದ ಮೊಟೋರೊಲಾ ಕಂಪನಿಯ ಹೊಸ ಸ್ಮಾರ್ಟ್‌ ಪೋನ್ ಮೊಟೊ G ಸರಣಿಯ G5 ಪ್ಲಸ್ ಸ್ಮಾರ್ಟ್‌ಪೋನು ಇಂದಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮೊಟೋ G5 ಪ್ಲಸ್ ಸೇಲ್‌ ಆರಂಭ

ಓದಿರಿ: ಹೊಸ ದಾಖಲೆ ನಿರ್ಮಿಸಿದ ರೆಡ್‌ಮಿ ನೋಟ್ 4: 4 ಸೆಕೆಂಡ್‌ಗೊಂದು ಪೋನ್ ಮಾರಾಟ

ಮೊಟೊ G5 ಪ್ಲಸ್ ಸ್ಮಾರ್ಟ್‌ಪೋನು ಇಂದಿನಿಂದ ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ ಎನ್ನಲಾಗಿದ್ದು, ಈ ಹಿಂದೆಯೂ ಸಹ ಮೊಟೋ ಫ್ಲಿಪ್ ಕಾರ್ಟಿನಲ್ಲಿ ತಮ್ಮ ಮೊಬೈಲ್‌ಗಳನ್ನು ಸೇಲ್ ಮಾಡುತ್ತಿತ್ತು. ಈ ಬಾರಿಯೂ ಇಲ್ಲಯೇ ಮೊಬೈಲ್ ಮಾರಾಟ ಮಾಡುತ್ತಿದೆ.

ಮೊಟೊ G5 ಪ್ಲಸ್ 3GB, ಮತ್ತು 4GB RAM ಮಾದರಿಯಲ್ಲಿ ಲಭ್ಯವಿದ್ದು, 32GB ಇಲ್ಲವೇ 64GB ಇಂಟರ್ನಲ್ ಮೆಮೊರಿಯನ್ನು ಈ ಪೋನ್‌ ಹೊಂದಿರಲಿದೆ. 5.5 ಇಂಚಿನ full-HD ಡಿಸ್‌ಪ್ಲೇ 080x1920 p ರೆಸಲ್ಯೂಷನ್‌ನಿಂದ ಕೂಡಿದೆ. 2GHz ಸ್ನಾಪ್‌ಡ್ರಾಗನ್ 625 ಆಕ್ವಾ ಪ್ರೋಸೆಸರ್ ಇದರಲ್ಲಿದೆ.

ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮೊಟೋ G5 ಪ್ಲಸ್ ಸೇಲ್‌ ಆರಂಭ

ಓದಿರಿ: ಗೂಗಲ್ ನಿಂದ ಸ್ಮಾರ್ಟ್‌ ಜಾಕೆಟ್: ಇದು ಹೇಗೆ ಕಾರ್ಯನಿರ್ವಹಿಸುತ್ತೇ ನೀವೆ ನೋಡಿ..!!

3000mAh ತೆಗೆಯಲಾಗದ ಬ್ಯಾಟರಿ ಇದರಲಿದ್ದು, 12 MP ಹಿಂಬದಿ ಕ್ಯಾಮರೆ ಹೊಂದಿದೆ. ಜೊತೆಗೆ ಡುಯಲ್ LED ಫ್ಲಾಶ್‌ಲೈಟು ಸಹ ಇದೆ. ಅಲ್ಲದೇ ವೇಗದ ಚಾರ್ಜಿಂಗ್ ಸಹ ಇದರಲ್ಲಿದೆ.

2GB RAM/ 32GB ಮೆಮೊರಿ ಹೊಂದಿರುವ ಮೊಟೊ G5 ಪ್ಲಸ್ ರೂ. 15,300 ರೂಗಳಿಗೆ ಮಾರಾಟವಾಗಲಿದೆ ಎನ್ನಲಾಗಿದೆ. ಅಲ್ಲದೇ 3GB RAM and 32GB ಮೆಮೊರಿ ಹೊಂದಿರುವ ಮೊಟೊ G5 ಪ್ಲಸ್ 19,700 ರೂಗಳಿಗೆ ಮಾರಾಟವಾಗಲಿದೆ ಎನ್ನವ ಮಾಹಿತಿ ಲಭ್ಯವಾಗಿದೆ.

Read more about:
English summary
Moto G5 Plus, which was unveiled at the MWC 2017 late last month is all set to be released in India today. The device is confirmed to be a Flipkart exclusive and go on sale tomorrow itself. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot