Subscribe to Gizbot

ಹೊಸ ದಾಖಲೆ ನಿರ್ಮಿಸಿದ ರೆಡ್‌ಮಿ ನೋಟ್ 4: 4 ಸೆಕೆಂಡ್‌ಗೊಂದು ಪೋನ್ ಮಾರಾಟ

Written By:

ಚೀನಾ ಮೂಲದ ಕ್ಸಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಅಭಿಮಾನಿ ವೃಂದವನ್ನು ಸೃಷ್ಟಿಸಿಕೊಂಡಿದೆ, ಮೊನ್ನೆ ಮಾರುಕಟ್ಟೆಗೆ ಬಿಡುಗಡೆಗೊಂಡ ಕ್ಸಿಯೋಮಿ ರೆಡ್‌ಮಿ ನೋಟ್ 4 ಹೊಸದೊಂದು ದಾಖಲೆಯನ್ನು ನಿರ್ಮಾಣ ಮಾಡಿದೆ.

ಹೊಸ ದಾಖಲೆ ನಿರ್ಮಿಸಿದ ರೆಡ್‌ಮಿ ನೋಟ್ 4: 4 ಸೆಕೆಂಡ್‌ಗೊಂದು ಪೋನ್ ಮಾರಾಟ

ಓದಿರಿ: ಗೂಗಲ್ ನಿಂದ ಸ್ಮಾರ್ಟ್‌ ಜಾಕೆಟ್: ಇದು ಹೇಗೆ ಕಾರ್ಯನಿರ್ವಹಿಸುತ್ತೇ ನೀವೆ ನೋಡಿ..!!

ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಅತೀ ವೇಗವಾಗಿ ಮಾರಾಟವಾದ ಸ್ಮಾರ್ಟ್‌ಪೋನ್‌ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ. ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವಿದ್ದ ಕ್ಸಿಯೋಮಿ ರೆಡ್‌ಮಿ ನೋಟ್ 4 ಕೇವಲ 45 ದಿನಗಳಲ್ಲಿ 1 ಮಿಲಿಯನ್ ಯುನಿಟ್‌ಗಳು ಸೇಲಾಗಿದೆ. ಅಂದರೆ ಪ್ರತಿ ನಾಲ್ಕು ಸೆಕೆಂಡ್‌ಗೆ ಒಂದು ಪೋನಿನಂತೆ ಮಾರಾಟಗೊಂಡಿದೆ.

ಜನವರಿ 23 ರಂದು ಆರಂಭವಾದ ಕ್ಸಿಯೋಮಿ ರೆಡ್‌ಮಿ ನೋಟ್ 4, ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಮ್ ನಲ್ಲಿ ಮಾರಾಟಕ್ಕಿದ್ದ ದಿನದಂದು ಕ್ಸಿಯೋಮಿ ರೆಡ್‌ಮಿ ನೋಟ್ ಬಿಸಿ ದೋಸೆಯಂತೆ ಮಾರಾಟವಾಗಿದ್ದು, ಈ ಎರಡು ಕಡೆಗಳಲ್ಲಿ ಸೇಲ್ ಆರಂಭವಾಗುತ್ತಿದ್ದಂತೆ 5 ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದ್ದವು.

ಹೊಸ ದಾಖಲೆ ನಿರ್ಮಿಸಿದ ರೆಡ್‌ಮಿ ನೋಟ್ 4: 4 ಸೆಕೆಂಡ್‌ಗೊಂದು ಪೋನ್ ಮಾರಾಟ

ಓದಿರಿ: ಗೂಗಲ್ ಜೊತೆ ಸೇರಿದ ಜಿಯೋ: ಮುಂದಿನ ಪ್ಲಾನ್‌ ಕೇಳಿದ್ರೆ ಶಾಕ್ ಆಗ್ತಿರಾ..!!

ಕ್ಸಿಯೋಮಿ ರೆಡ್‌ಮಿ ನೋಟ್ 4 ಮೂರು ವಿಧದಲ್ಲಿ ಲಭ್ಯವಿತ್ತು. 2GB RAM/ 32GB ಮೆಮೊರಿ ಮಾದರಿಯ ಪೋನು ರೂ. 9,999 ಗಳಿಗೆ ಮಾರಾಟವಾದರೆ, 3GB RAM/ 32GB ಮೆಮೊರಿಯ ಪೋನು ರೂ.10,999ಗಳಿಗೆ ದೊರೆಯುತ್ತಿತ್ತು, ಹಾಗೆಯೇ 4GB RAM/ 64GB ಮೆಮೊರಿ ಸಾಮಾರ್ಥ್ಯದ ಪೋನು ರೂ.12,999ಗಳಿಗೆ ಲಭ್ಯವಿತ್ತು.

ಈ ಹಿಂದೆ ಕ್ಸಿಯೋಮಿ ರೆಡ್‌ಮಿ ನೋಟ್ 3 ಬಿಡುಗಡೆಯಾದ ಸಂದರ್ಭದಲ್ಲಿಯೂ ಇದೇ ಮಾದರಿಯ ವಾತಾವರಣ ನಿರ್ಮಾಣವಾಗಿತ್ತು ಈ ಪೋನ ಸಹ ಅತ್ಯಂತ ವೇಗವಾಗಿ ಮಾರುಕಟ್ಟೆಯಲ್ಲಿ ಬಿಕರಿಯಾಗಿತ್ತು.

Read more about:
English summary
The company on Tuesday announced that it has managed to sell 1 million Xiaomi Redmi Note 4. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot