'ಮೊಟೊ ಎಂ' ಸ್ಮಾರ್ಟ್‌ಫೋನ್‌ ಮಂಗಳವಾರ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?

4GB RAM, 16MP ಕ್ಯಾಮೆರಾ, 3050mAh ಬ್ಯಾಟರಿ ಫೀಚರ್

By Suneel
|

ಲೆನೊವೋ ತನ್ನ ಮೊಟೊರೊಲಾ ಡಿವೈಸ್ ವಿಭಾಗದಲ್ಲಿ ಭಾರತದ ಮಾರುಕಟ್ಟೆಗೆ ಇನ್ನೊಂದು ಪೋನ್ ಅನ್ನು ಪರಿಚಯಿಸುತ್ತಿದೆ. ಚೀನದಲ್ಲಿ ಕಳೆದ ತಿಂಗಳು CNY 1,999 (19, 700 ರೂ) ಬೆಲೆಗೆ ಲಾಂಚ್‌ ಮಾಡಿದ ಸ್ಮಾರ್ಟ್‌ಫೋನ್‌ ಮೊಟೊ ಎಂ(Moto M) ಅನ್ನು ಮುಂದಿನ ಮಂಗಳವಾರ ಭಾರತದಲ್ಲಿ ಲಾಂಚ್‌ ಮಾಡುವುದಾಗಿ ಟ್ವಿಟರ್‌ನಲ್ಲಿ ಹೇಳಿದೆ.

ಮೊಟೊ ಜಿ ಪ್ಲಸ್‌(Moto G Plus) ನಂತರದಲ್ಲಿ ಮೊಟೊರೊಲಾ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಲಾಂಚ್‌ ಆಗುತ್ತಿರುವ ಸ್ಮಾರ್ಟ್‌ಫೋನ್‌ ಮೊಟೊ ಎಂ ಆಗಿದೆ. ಮುಂದಿನ ಮಂಗಳವಾರ ಲಾಂಚ್‌ ಆಗಲಿರುವ ಮೊಟೊ ಎಂ ಡಿವೈಸ್‌ನ ವಿಶೇಷ ಫೀಚರ್‌ಗಳು ಏನಿರಲಿವೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಬಜೆಟ್ ಬೆಲೆಯಲ್ಲಿ ಲೆನೊವೋ ಕೆ6: ಖರೀದಿಸಲು ಐದು ಮುಖ್ಯಕಾರಣಗಳು?

ಸಂಪೂರ್ಣ ಮೆಟಲ್‌ ಬಾಡಿ

ಸಂಪೂರ್ಣ ಮೆಟಲ್‌ ಬಾಡಿ

ಮೊಟೊ ಎಂ ಡಿವೈಸ್, ಮೊಟೊ ಜಿ4 ಮತ್ತು ಮೊಟೊ ಜಿ4 ಪ್ಲಸ್ ರೀತಿಯಲ್ಲಿ ನೀರು ನಿರೋಧಕವಾಗಿದ್ದು, ಮೆಟಲ್‌ ಯುನಿಬಾಡಿ ವಿನ್ಯಾಸ ಹೊಂದಿದೆ. ಹಿಂದೆ ರೌಂಡೆಡ್ ವಿನ್ಯಾಸ ಮತ್ತು 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೊಸೆಸರ್ ಮತ್ತು ಬ್ಯಾಟರಿ

ಪ್ರೊಸೆಸರ್ ಮತ್ತು ಬ್ಯಾಟರಿ

ಮೊಟೊ ಎಂ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 617 ಚಿಪ್‌ಸೆಟ್ ಮತ್ತು 3050mAh ಬ್ಯಾಟರಿ ಫೀಚರ್ ಹೊಂದಿದೆ. ಪ್ರಮುಖ ವ್ಯತ್ಯಾಸವನ್ನು ಫಿಂಗರ್‌ಪ್ರಿಂಟ್ ಸೆನ್ಸಾರ್ ಫೀಚರ್‌ನಲ್ಲಿ ನೋಡಬಹುದು. ಈ ಮೊಟೊ ಎಂ ಡಿವೈಸ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹಿಂಭಾಗದಲ್ಲಿ ಸೆಟಪ್‌ ಮಾಡಲಾಗಿದೆ. ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದೆ.

ನೀರು ನಿರೋಧಕ ಮತ್ತು ಸ್ಟೋರೇಜ್ ಫೀಚರ್

ನೀರು ನಿರೋಧಕ ಮತ್ತು ಸ್ಟೋರೇಜ್ ಫೀಚರ್

ಮೊಟೊ ಎಂ ಡಿವೈಸ್ ನೀರು ನಿರೋಧಕ ಮೆಟಲ್‌ ಬಾಡಿ ಹೊಂದಿದ್ದು, 4GB ಅಪ್‌ಗ್ರೇಡೆಡ್ RAM ಹೊಂದಿದೆ. 32GB ಆಂತರಿಕ ಮೆಮೊರಿ ಹೊಂದಿದ್ದು, 64GB ವರೆಗೆ ವಿಸ್ತರಣೆ ಮಾಡಬಹುದು.

 ಕ್ಯಾಮೆರಾ

ಕ್ಯಾಮೆರಾ

ಮೊಟೊ ಎಂ ಡಿವೈಸ್ 1 ಮೈಕ್ರೋಮೀಟರ್ ಪಿಕ್ಸೆಲ್‌ ಅಳತೆಯ 16MP ಉನ್ನತ ಮಟ್ಟದ ರೆಶಲ್ಯೂಶನ್‌ ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಸಂಪರ್ಕಗಳು ಮತ್ತು ಇತರೆ

ಸಂಪರ್ಕಗಳು ಮತ್ತು ಇತರೆ

4G ಜೊತೆಗೆ VoLTE, ವೈಫೈ 802.11ac, ಬ್ಲೂಟೂತ್ v4.1, ಜಿಪಿಎಸ್/ ಎ-ಜಿಪಿಎಸ್, USB ಟೈಪ್‌-ಸಿ (ಯುಎಸ್‌ಬಿ 3.1), NFC, and 3.5mm ಸಂಪರ್ಕ ಆಪ್ಶನ್‌ಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ 20,000 ರೂಗಿಂತ ಕಡಿಮೆ ಬೆಲೆಯಲ್ಲಿ ಲಾಂಚ್‌ ಮಾಡುವ ಸಾಧ್ಯತೆಗಳಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Moto M Smartphone to Launch in India on Tuesday. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X