Subscribe to Gizbot

ಮೊಟೊ X4: ಇದಕ್ಕಿಂತ ಕಡಿಮೆ ಬೆಲೆಗೆ ಇನ್ಯಾವುದೇ ಡ್ಯುಯಲ್ ಕ್ಯಾಮೆರಾ ಫೋನ್ ಇಲ್ಲ

Written By:

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಓನ್ ಕಾರ್ಯಚರಣೆಯನ್ನು ಹೊಂದಿರುವ ಡ್ಯುಯಲ್ ಕ್ಯಾಮೆರಾ ಫೋನ್ ಅನ್ನು ಕಡಿಮೆ ಬೆಲೆಗೆ ಲಾಂಚ್ ಮಾಡಿದ ಮಾದರಿಯಲ್ಲಿ ಲಿನೊವೊ ಕಂಪನಿಯ ಮೊಟೊ ಸಹ ಆಂಡ್ರಾಯ್ಡ್ ಓನ್ ಡ್ಯುಯಲ್ ಕ್ಯಾಮೆರಾ ಫೋನ್ ಅನ್ನು ಲಾಂಚ್ ಮಾಡುವ ಸನಿಹದಲ್ಲಿದೆ.

ಮೊಟೊ X4: ಇದಕ್ಕಿಂತ ಕಡಿಮೆ ಬೆಲೆಗೆ ಇನ್ಯಾವುದೇ ಡ್ಯುಯಲ್ ಕ್ಯಾಮೆರಾ ಫೋನ್ ಇಲ್ಲ

ಓದಿರಿ: ಭಾರತದಲ್ಲಿ ಇನ್ನು ಅಗಾಧ ಸಂಪತ್ತಿದೆ ಎಂದು ಗೂಗಲ್-ಫೇಸ್‌ಬುಕ್‌ಗೆ ತಿಳಿಸಿದ್ದು ಯಾರು ಗೊತ್ತಾ..?

ಈಗಾಗಲೇ ಮೊಟೊ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದರೊಂದಿಗೆ ಆಂಡ್ರಾಯ್ಡ್ ಓನ್ ಸ್ಮಾರ್ಟ್‌ಫೋನ್ ಸಹ ಬರುತ್ತಿದೆ. ಇದರಿಂದ ಉಳಿದ ಚೀನಾ ಕಂಪನಿಗಳಿಗೆ ನಡುಕ ಶುರುವಾಗಿದೆ. ಶೀಘ್ರವೇ ಈ ಫೋನ್ ಲಾಂಚ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ X4 ಶೀಘ್ರವೇ ಲಾಂಚ್:

ಮೊಟೊ X4 ಶೀಘ್ರವೇ ಲಾಂಚ್:

ಮೊಟೊ X4 ಸ್ಮಾರ್ಟ್‌ಫೋನ್ ಶೀಘ್ರವೇ ಲಾಂಚ್ ಆಗಲಿದ್ದು, ಇದು ಅಂಡ್ರಾಯ್ಡ್ ಓನ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಮೊಟೊ ಬಿಡುಗಡೆ ಮಾಡುತ್ತಿರುವ ಮೊದಲ ಆಂಡ್ರಾಯ್ಡ್ ಓನ್ ಸ್ಮಾರ್ಟ್‌ಫೋನ್ ಆಗಿರಲಿದೆ. ಅಲ್ಲದೇ ಇದರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ.

ಬೆಲೆ ರೂ.12,000 ಮಾತ್ರವೇ:

ಬೆಲೆ ರೂ.12,000 ಮಾತ್ರವೇ:

ಈ ಸ್ಮಾರ್ಟ್‌ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಈ ಫೋನಿನ ಬೆಲೆ ರೂ. 12,000ನಿಂದ ಆರಂಭವಾಗಲಿದೆ. ಒಟ್ಟು ಎರಡು ಮೂರು ಆವೃತ್ತಿಯಲ್ಲಿ ಈ ಫೋನ್ ದೊರೆಯಲಿದೆ. ಒಟ್ಟಿನಲ್ಲಿ ಶಿಯೋಮಿ ಡ್ಯುಯಲ್ ಕ್ಯಾಮೆರಾ ಫೋನ್‌ಗೆ ಸ್ಪರ್ಧೆಯನ್ನು ಒಡ್ಡಲಿದೆ.

ಮೊಟೊ X4 ವಿಶೇಷತೆಗಳು:

ಮೊಟೊ X4 ವಿಶೇಷತೆಗಳು:

ಮೊಟೊ X4 ಫೋನಿನಲ್ಲಿ 5.2 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅದುವೇ HD ಗುಣಮಟ್ಟವನ್ನು ಹೊಂದಿರಲಿದೆ. ಅಲ್ಲದೇ ಮೆಟಲ್ ಮತ್ತು ಗ್ಲಾಸ್ ಡಿಸೈನ್ ಹೊಂದಿದೆ ಎನ್ನಲಾಗಿದೆ. ಹಿಂಭಾಗದಲ್ಲಿ 12MP + 12MP ಡ್ಯುಯಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8MP ಸೆಲ್ಪಿ ಕ್ಯಾಮೆರಾವನ್ನು ನೀಡಲಿದೆ.

3GB RAM-32GB ROM:

3GB RAM-32GB ROM:

ಈ ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 630 ಪ್ರೋಸೆಸರ್ ಹಾಗೂ 3 GB RAM ನೀಡಲಾಗಿದೆ. ಇದರೊಂದಿಗೆ 32 GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ. 3000mAh ಬ್ಯಾಟರಿಯೂ ಇದ್ದು, ಟರ್ಬೋ ಚಾರ್ಜರ್ ಸಹ ದೊರೆಯಲಿದೆ. ಅಲ್ಲದೇ ಅಮೆಜಾನ್ ಆಪ್‌ಗಳು ಈ ಫೋನಿನಲ್ಲಿ ಕಾಣಿಸಿಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The company confirmed that the phone that is set to launch in India will come with dual cameras. It could either be the base variant of the Moto X4, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot