ಕ್ಯಾಮೆರಾ ಇಲ್ಲ, ಇಂಟರ್‌ನೆಟ್‌ ಇಲ್ಲ. ಆದರೂ ಇದು ಸ್ಮಾರ್ಟ್‌ಪೋನಂತೆ..!!

Written By:

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಣ್ಣ ಮೊಬೈಲ್‌ ತಯಾರಿಸಿ ವಿವಿಧ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದ, ZTE ಕಂಪನಿಯೂ ಈ ಬಾರಿ ತನ್ನದೇ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದ್ದು, ಈ ಬಾರಿ ಹೊಸ ಮಾದರಿಯ ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಇಲ್ಲೊಂದು ವಿಚಿತ್ರ ಸ್ಮಾರ್ಟ್‌ಪೋನು: ಕ್ಯಾಮೆರಾ ಇಲ್ಲ, ಇಂಟರ್‌ನೆಟ್‌ ಇಲ್ಲ

ಓದಿರಿ: ನೋಕಿಯಾ 3310 ರಿಬೋಟ್: ಹಳೇ ಪೋನಿನ 5 ಹೊಸ ಆಯ್ಕೆಗಳೇ..?

ಇದೊಂದು ವಿಚಿತ್ರ ಸ್ಮಾರ್ಟ್‌ಪೋನು ಆಗಲಿದ್ದು, ಸ್ಮಾರ್ಟ್‌ ಎನ್ನಿಸಿಕೊಳ್ಳಲು ಬೇಕಾದ ಯಾವುದೇ ಆಯ್ಕೆಗಳು ಇದರಲಿಲ್ಲ. ಕ್ಯಾಮೆರಾ ಇಲ್ಲ, ಇಂಟರ್‌ನೆಟ್‌ ಇಲ್ಲ. ಆದರೂ ಇದು ಸ್ಮಾರ್ಟ್‌ಪೋನಂತೆ. ಹಾಗಿದ್ದರೇ ಈ ಪೋನಿನ್ನ ವಿಶೇಷತೆ ಏನು ಎಂಬುದನ್ನು ನೋಡುವುದಾದರೆ...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಮೆರಾ ಇಲ್ಲ, ಇಂಟರ್‌ನೆಟ್‌ ಇಲ್ಲ:

ಕ್ಯಾಮೆರಾ ಇಲ್ಲ, ಇಂಟರ್‌ನೆಟ್‌ ಇಲ್ಲ:

ZTE ಬಿಡುಗಡೆ ಮಾಡಲು ಹೊರಟಿರುವ ZTE S3003 ಸ್ಮಾರ್ಟ್‌ಪೋನಿನಲ್ಲಿ ಹಿಂದೆಯಾಗಲಿ ಅಥಾವ ಮುಂದೆಯಾಗಲಿ ಯಾವುದೇ ಕ್ಯಾಮೆರಾವನ್ನು ಅಳವಡಿಸಲಾಗಿಲ್ಲ. ಅಲ್ಲದೇ ಈ ಪೋನು ಸ್ಮಾರ್ಟ್ ಎನ್ನಿಸಿಕೊಳ್ಳಲು ಬೇಕಾದ ಇಂಟರ್‌ನೆಟ್‌ ಸೌಲಭ್ಯವನ್ನು ಹೊಂದಿಲ್ಲ ಎನ್ನಲಾಗಿದೆ.

ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ, ಮೆಟಾಲಿಕ್ ಬಾಡಿ ಹೊಂದಿದೆ:

ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ, ಮೆಟಾಲಿಕ್ ಬಾಡಿ ಹೊಂದಿದೆ:

ಈ ಸ್ಮಾರ್ಟ್‌ಪೋನಿನಲ್ಲಿ ಸಾಮಾನ್ಯ ಸ್ಮಾರ್ಟ್‌ಪೋನಿನಲ್ಲಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ. ಆದರೆ ಸಿಮ್ ಆಗಿದ್ದು, ಮೆಟಾಲಿಕ್ ಬಾಡಿ ಹೊಂದಿದೆ ಎನ್ನಲಾಗಿದೆ. ನೋಡಲು ಸುಂದರವಾಗಿದ್ದು, ಕೈನಲ್ಲಿ ಹಿಡಿದು ಬಳಸಲು ಉತ್ತಮವಾಗಿದೆ.

5 ಇಂಚಿನ HD ಪರದೆ:

5 ಇಂಚಿನ HD ಪರದೆ:

ZTE S3003 ಸ್ಮಾರ್ಟ್‌ಪೋನಿನಲ್ಲಿ 1280X720p ಗುಣಮಟ್ಟದ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಅಲ್ಲದೇ ಕ್ವಾಡ್‌ಕೋರ್ ಪ್ರೋಸೆಸರ್ ಸಹ ಈ ಪೋನಿನಲ್ಲಿದೆ. ಜೊತೆಗೆ 1GB RAM ಮತ್ತು 8GB ಇಂಟರ್‌ನಲ್ ಮೆಮೋರಿಯೂ ಈ ಫೋನಿನಲ್ಲಿದೆ.

4G ಸಪೋರ್ಟ್‌ ಮಾಡುವುದು ಆದರೆ ಡೇಟಾ ಬಳಸಲಾಗುವುದಿಲ್ಲ:

4G ಸಪೋರ್ಟ್‌ ಮಾಡುವುದು ಆದರೆ ಡೇಟಾ ಬಳಸಲಾಗುವುದಿಲ್ಲ:

ZTE S3003 ಸ್ಮಾರ್ಟ್‌ಪೋನು ವಿಚಿತ್ರವಾಗಿದೆ ಎಂದು ಹೇಳಿದ ಕಾರಣ ಇದೆ. ಈ ಪೋನಿ 4G ಸಪೋರ್ಟ್ ಮಾಡಲಿದೆಯಾದರು ಕೇವಲ ಕಾಲಿಂಗ್‌ಗೆ ಮಾತ್ರ. ಬೇರೆಯಾವುದೇ ಉದ್ದೇಶಕ್ಕೂ ಇದು ಬಳಕೆಯಾಗುವುದಿಲ್ಲ. ಡೇಟಾ ಬಳಸಲು ಸಾಧ್ಯವೇ ಇಲ್ಲ.

ಬೆಲೆ ತುಂಬನೇ ಕಡಿಮೆ:

ಬೆಲೆ ತುಂಬನೇ ಕಡಿಮೆ:

ZTE S3003 ಸ್ಮಾರ್ಟ್‌ಪೋನು Bluetooth ಮತ್ತು GPS ನಂತಹ ಆಯ್ಕೆಗಳನ್ನು ಒಳಗೊಂಡಿದ್ದು, ಸದ್ಯ ಚೀನಾ ಮಾರುಕಟ್ಟೆಯಲ್ಲಿ 3,900 ರೂಗಳಿಗೆ ಮಾರಾಟವಾಗುತ್ತಿದ್ದು, ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರೆ ಇನಷ್ಟು ಬೆಲೆ ಕಡಿಮೆಯಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
budget smartphone, it's a smartphone which comes without a camera or internet connectivity. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot