Subscribe to Gizbot

ಚಾರ್ಜಿಂಗ್ ವೇಳೆ ಫೋನ್ ಬಳಕೆ ಸ್ಪೋಟಕ್ಕೆ ಕಾರಣವಲ್ಲ: ನಿಜವಾದ ಕಾರಣ ಇಲ್ಲಿದೆ?

Written By:

ಸ್ಯಾಮ್‌ಸಂಗ್ ನೋಟ್ 7, ಐಫೋನ್ 7, ಸ್ಯಾಮಸಂಗ್ ಜೆ5 ಮತ್ತು ಎಸ್‌7 ಎಡ್ಜ್ ಮತ್ತು ಇತರೆ ಮೊಬೈಲ್‌ಗಳ ಸ್ಫೋಟಕ್ಕೆ, ಬಳಕೆದಾರರು ಚಾರ್ಜ್‌ ಮಾಡುವ ವಿಧಾನವೇ ಕಾರಣ ಎಂದು ಕಂಪನಿಗಳು ಹೇಳಿದ್ದವು.

ಅಲ್ಲದೇ ಮೊಬೈಲ್ ಚಾರ್ಜ್‌ ಮಾಡುವಾಗ ಫೋನ್ ಅನ್ನು ಬಳಕೆ ಸಹ ಮಾಡಬಾರದು ಎಂಬ ಹಲವು ರೀತಿಯ ತಪ್ಪು ಮಾಹಿತಿಗಳನ್ನು ನೀಡಿದ್ದವು. ಆದರೆ ನಿಜವಾಗಿ ಹೇಳುವುದಾದರೇ ಯಾವುದೇ ರೀತಿಯಲ್ಲಿ ಫೋನ್‌ ಬಳಸುವ ಬಗ್ಗೆ ನಿಯಮಗಳು ಮತ್ತು ಷರತ್ತುಗಳು ಇಲ್ಲ. ಸ್ಯಾಮ್‌ಸಂಗ್, ಐಫೋನ್ ಮತ್ತು ಇತರೆ ಹಲವು ಕಂಪನಿಗಳು ಹೇಳುವಂತೆ "ಚಾರ್ಜ್‌ ಮಾಡುವಾಗ ವ್ಯಕ್ತಿಗಳು ಫೋನ್ ಬಳಸುತ್ತಾರೆ" ಮತ್ತು "ರಾತ್ರಿ ಇಡೀ ಚಾರ್ಜ್‌ ಮಾಡುವುದು" ಎಂಬ ಕಾರಣಗಳು ಅಂತೆ ಕಂತೆಯ ಪುರಾಣಗಳು ಅಷ್ಟೇ.

ಸ್ಮಾರ್ಟ್‌ಫೋನ್‌ ಸ್ಫೋಟಗೊಳ್ಳುವುದೇ ಎಂಬುದರ ಪತ್ತೆ ಹೇಗೆ?

ಬ್ಯಾಟರಿ ಸ್ಫೋಟದ ಬಗ್ಗೆ ಮೊಬೈಲ್‌ ಕಂಪನಿಗಳು ಹಲವು ಕಾರಣ ಪುರಾಣಗಳನ್ನು ಹೇಳುತ್ತವೆ. ಅವುಗಳನ್ನು ನಂಬಿ ಅಥವಾ ನಂಬದಿರಿ. ಆದರೆ ಈ ಕಾರಣ ಪುರಾಣಗಳು ಸಂಪೂರ್ಣ ಫೇಕ್‌ ಆಗಿವೆ. ಅಂತಹ ಹಲವು ಕಾರಣಗಳನ್ನು ಮುಂದೆ ಓದಿರಿ. ಸ್ಫೋಟಕ್ಕೆ ಕಾರಣ ಏನು ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಟರಿ ಫುಲ್ ಚಾರ್ಜ್ ಮಾಡದಿರುವುದು ಫೋನ್‌ ಸಮಸ್ಯೆಗೆ ಪರಿಣಾಮವಲ್ಲ

ಬ್ಯಾಟರಿ ಫುಲ್ ಚಾರ್ಜ್ ಮಾಡದಿರುವುದು ಫೋನ್‌ ಸಮಸ್ಯೆಗೆ ಪರಿಣಾಮವಲ್ಲ

ಇದೊಂದು ಪುರಾಣ ಕಾರಣವಷ್ಟೆ. ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ದಿನಗಳಲ್ಲಿ ಲಿಥಿಯಂ-ಐಯಾನ್ ರೀಚಾರ್ಜ್‌ಜೇಬಲ್ ಬ್ಯಾಟರಿಗಳನ್ನು ಹೊಂದಿದ್ದು, ಇವುಗಳು ಬ್ಯಾಟರಿ ಚಾರ್ಜ್‌ ಮಾಡಲು ಯಾವುದೇ ರೀತಿಯ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿಲ್ಲ. ಬಳಕೆದಾರರು ತಮಗೆ ಬೇಕೆನಿಸಿದಾಗಲೆಲ್ಲ ಬ್ಯಾಟರಿ ಚಾರ್ಜ್‌ ಮಾಡಬಹುದು. ಫೋನ್‌ಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ.

 ಯಾವ ಚಾರ್ಜ್‌ ಬಳಕೆ ಮಾಡುತ್ತೀರಿ ಎಂಬುದು ಮುಖ್ಯವಲ್ಲ

ಯಾವ ಚಾರ್ಜ್‌ ಬಳಕೆ ಮಾಡುತ್ತೀರಿ ಎಂಬುದು ಮುಖ್ಯವಲ್ಲ

ಯಾವ ಚಾರ್ಜ್‌ ಬಳಕೆ ಮಾಡುತ್ತೀವಿ ಎಂಬುದು ಮುಖ್ಯವೇ ಅಲ್ಲಾ. ಇದು ಚೀಪ್ ಚಾರ್ಜರ್ ಆಗಿರಬಹುದು ಅಥವಾ ಕಂಪನಿ ಅಧಿಕೃತ ಚಾರ್ಜರ್ ಆಗಿರಬಹುದು. ಎರಡು ಚಾರ್ಜರ್‌ಗಳು ಒಂದೇ ರೀತಿಯ ವೋಲ್ಟೇಜ್‌ ಅನ್ನು ಬಿಡುಗಡೆ ಮಾಡುತ್ತವೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾತ್ರಿ ಪೂರ್ಣ ಚಾರ್ಜರ್

ರಾತ್ರಿ ಪೂರ್ಣ ಚಾರ್ಜರ್

ಇತ್ತೀಚೆಗೆ ಸ್ಯಾಮ್‌ಸಂಗ್ ನೋಟ್ 7, ಐಫೋನ್ 7 ಮತ್ತು ಇತರೆ ಫೋನ್‌ಗಳು ಸ್ಫೋಟಗೊಂಡವು, ಕಂಪನಿಗಳು ಇದಕ್ಕೆ ಕಾರಣ ರಾತ್ರಿಯೆಲ್ಲಾ ಚಾರ್ಜ್‌ ಮಾಡುವುದು ಎಂದು ಹೇಳಿದವು. ಇದು ಸಂಪೂರ್ಣ ಸುಳ್ಳು. ಆದರೆ ನಿಜವಾಗಿ ಹೇಳುವುದಾದರೇ ಸ್ಮಾರ್ಟ್‌ಫೋನ್ ರಾತ್ರಿಯೆಲ್ಲಾ ಚಾರ್ಜ್‌'ನಲ್ಲಿ ಇಡುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಫೋನ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಫೋನ್ ಬಳಸದ ವೇಳೆಯು ಆನ್‌ನಲ್ಲಿ ಇಡಬಹುದು

ಫೋನ್ ಬಳಸದ ವೇಳೆಯು ಆನ್‌ನಲ್ಲಿ ಇಡಬಹುದು

ಹಲವರು ಬ್ಯಾಟರಿ ಉಳಿತಾಯಕ್ಕೆ, ಫೋನ್‌ ಬಳಸದ ವೇಳೆ ಸ್ವಿಚ್‌ ಆಫ್ ಮಾಡಿ ಎಂದು ಹೇಳುತ್ತಾರೆ. ಜನರು ನಂಬಿರುವ ಇನ್ನೊಂದು ಪುರಾಣವಾಗಿದೆ. ಫೋನ್‌ ಬಳಸದಿದ್ದಲ್ಲಿ ಸ್ವಿಚ್‌ ಆಫ್‌ ಮಾಡುವ ಅಗತ್ಯವಿಲ್ಲ, ಆನ್‌ನಲ್ಲೇ ಇಡಬಹುದು. ಆದರೆ ಹೆಚ್ಚು ಬ್ಯಾಟರಿ ಬಳಸುವ ಅನಗತ್ಯ ಆಪ್‌ಗಳನ್ನು ಡಿಲೀಟ್ ಮಾಡಿ.

ಫೋನ್‌ ಚಾರ್ಜಿಂಗ್ ವೇಳೆ ಸ್ವಿಚ್‌ ಆಫ್‌ ಮಾಡಿ

ಫೋನ್‌ ಚಾರ್ಜಿಂಗ್ ವೇಳೆ ಸ್ವಿಚ್‌ ಆಫ್‌ ಮಾಡಿ

ಹ್ಹಾ.... ಈ ಮಾಹಿತಿಯನ್ನು ಎಲ್ಲರೂ ನಂಬಿದ್ದಾರೆ. ಫೋನ್‌ ಚಾರ್ಜಿಂಗ್ ವೇಳೆ ಸ್ವಿಚ್‌ ಆಫ್‌ ಮಾಡುವುದರಿಂದ, ಫೋನ್ ಸ್ಪೋಟಗೊಳ್ಳುವುದನ್ನು ತಡೆಯಬಹುದು ಎಂದು. ಆದರೆ ಚಾರ್ಜಿಂಗ್ ವೇಳೆ ಫೋನ್ ಆನ್‌ ಆಗಿದ್ದರೂ ಸ್ಫೋಟಗೊಳ್ಳುವುದಿಲ್ಲ. ಸ್ಮಾರ್ಟ್‌ಫೋನ್‌ಗಳ ಸ್ಪೋಟಕ್ಕೆ ತಯಾರಕರ ತಪ್ಪುಗಳೇ ಕಾರಣವಾಗಿವೆ. ಬಳಸುವ ವಿಧಾನ ಕಾರಣವಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
No! Using Phone While Charging Is Definitely Not The Reason For Explosion. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot