ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?

By Suneel
|

ಸ್ಮಾರ್ಟ್‌ಫೋನ್‌, ಐಫೋನ್‌ ಬರುವ ಮೊದಲು ಫೇಮಸ್‌ ಆಗಿದ್ದ ಫೋನ್‌ ಯಾವುದು ಅಂದ್ರೆ ಈಗಲೂ ಸಹ ತಟ್‌ ಅಂತ ಉತ್ತರ ನೀಡೋದು ಒನ್‌ ಅಂಡ್‌ ಓನ್ಲಿ "ನೋಕಿಯಾ" ಅಂತ. ಈಗಲೂ ಸಹ ನೋಕಿಯಾ ಬ್ರ್ಯಾಂಡ್ ಮೊಬೈಲ್‌ ಫೋನ್‌ ಪ್ರೇಮಿಗಳಿಗೆ ಬರವಿಲ್ಲ. ವಿಶೇಷ ಅಂದ್ರೆ ಹಲವು ವರ್ಷಗಳ ನಂತರ ನೋಕಿಯಾ ಕಳೆದ ದಿನಗಳ ಹಿಂದಷ್ಟೇ ತನ್ನ ಬ್ರ್ಯಾಂಡ್‌ ಲೈಸೆನ್ಸ್‌ನೊಂದಿದೆ ಮೊಬೈಲ್‌ ಮಾರುಕಟ್ಟೆಗೆ ಪುನರಾಗಮನ ಮಾಡಿದೆ.

ಹಿರಿಯರಿಂದ ಹಿಡಿದು ಯಂಗ್‌ಸ್ಟರ್‌ಗಳು ಸಹ ನೋಕಿಯಾ ಬ್ರ್ಯಾಂಡ್‌ ಫೋನ್‌ಗಳಿಗೆ ಆದ್ಯತೆ ನೀಡುತ್ತಿದ್ದ ಅದ್ಭುತ ಕಾಲವೊಂದು ಇತ್ತು. ಈಗಲೂ ಸಹ ನೋಕಿಯಾ 1100 ಮೊಬೈಲ್‌ ಅಂದ್ರೆ ಬಹುಸಂಖ್ಯಾತರಿಗೆ ಅಚ್ಚು ಮೆಚ್ಚು. ನೋಕಿಯಾ ಬ್ರ್ಯಾಂಡ್‌ನ ಪ್ರತಿಯೊಂದು ಮೊಬೈಲ್‌ಗಳು ಸಹ ಟ್ರೆಂಡ್‌ಸೆಟರ್‌ ಆಗಿದ್ದವು. ನೋಕಿಯಾ, ಮೊಬೈಲ್‌ ಮಾರುಕಟ್ಟೆಗೆ ಮತ್ತೆ ಕಾಲಿರಿಸಿರುವ ಈ ವೇಳೆಯಲ್ಲಿ ನೋಕಿಯಾ ಕಂಪನಿಯ ಹಳೆಯ ಟಾಪ್‌ 15 ಮೊಬೈಲ್‌ಗಳ ವಿಶೇಷ ಮಾಹಿತಿಯನ್ನು ನಿಮಗೆ ತಿಳಿಸುತ್ತಿದ್ದೇವೆ. ಅಂದಹಾಗೆ ನೋಕಿಯಾ ಪ್ರಿಯರಂತು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು. ಟಾಪ್‌ 15 ನೋಕಿಯಾ ಫೋನ್‌ಗಳು ಹೇಗಿದ್ದವು, ನೋಕಿಯಾದ ಮೊದಲ ಮೊಬೈಲ್ ಹೇಗಿತ್ತು ಎಂಬ ಮಾಹಿತಿಯನ್ನು ಸಹ ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ರೂ 700 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ ಮೊಬೈಲ್‌ಗಳು

1

1

ನೋಕಿಯಾ 9000 ಕಮ್ಯೂನಿಕೇಟರ್ ಮೆಸೇಜಿಂಗ್‌ ಫೋನ್‌ ಆಗಿದ್ದು, ಪ್ರತಿಯೊಬ್ಬ ಪ್ರವಾಸಿಗನ ನಿಜವಾದ ಗೆಳೆಯ ಆಗಿತ್ತು. 1996 ರಲ್ಲಿ ಲಾಂಚ್‌ ಆದ ನೋಕಿಯಾ ಕಂಪನಿಯ ಈ ಮೊಬೈಲ್‌, 1999 ರಲ್ಲಿ ಬಿಡುಗಡೆಯಾದ ಬ್ಲಾಕ್‌ಬೆರ್ರಿ ಮೊಬೈಲ್‌ ಫೀಚರ್‌ ಅನ್ನು ಹೊಂದಿತ್ತು. ಬ್ಲಾಕ್‌ಬೆರ್ರಿಯಲ್ಲಿ ನಿರ್ವಹಿಸಬಹುದಾದ ಎಲ್ಲಾ ಕಾರ್ಯಗಳನ್ನು ನೋಕಿಯಾ 9000 - ಕಮ್ಯೂನಿಕೇಟರ್ ನಲ್ಲಿ ನಿರ್ವಹಿಸಬಹುದಾಗಿತ್ತು.
ಚಿತ್ರ ಕೃಪೆ:pocket-lint

2

2

ಹೆಸರೇ ಹೇಳುವಂತೆ "ನೋಕಿಯಾ 5110" ಬ್ಯುಸಿನೆಸ್ ಜನರಿಗಾಗಿ ಅಭಿವೃದ್ದಿಪಡಿಸಲಾದ ಫೋನ್‌. ಅಲ್ಲದೇ ಇದು ಸ್ನೇಕ್‌ ಗೇಮ್‌ ಅನ್ನು ಪರಿಚಯಿಸಿದ ಫೋನ್‌.
ಚಿತ್ರ ಕೃಪೆ: YouTube

3

3

"ನೋಕಿಯಾ 3210" ಬಣ್ಣ ಬದಲಿಸಬಹುದಾದ ಅವಕಾಶದೊಂದಿಗೆ ಬಂದಿತು. ಹಸಿರು, ಹಳದಿ ಕೆಂಪು ಅಥವಾ ನೀಲಿ ಬಣ್ಣಗಳನ್ನು ಪ್ಯಾನೆಲ್‌ನೊಂದಿಗೆ ಬದಲಿಸುವ ಅವಕಾಶ ಇತ್ತು.
ಚಿತ್ರ ಕೃಪೆ:guardian

4

4

ಈ ಮೊಬೈಲ್‌ ಅನ್ನು "ದಿ ಸ್ವರ್ಡ್ಫಿಶ್" ಫೋನ್‌ ಎಂದು ಕರೆಯಲಾಗುತ್ತಿತ್ತು. ಕಾರಣ ಈ ಮೊಬೈಲ್‌ ಅನ್ನು 'ಜಾನ್‌ ಟ್ರವೊಲ್ಟ", "ದಿ ಸ್ವರ್ಡ್ಫಿಶ್" ಎಂಬ ಸಿನಿಮಾದಲ್ಲಿ ಬಳಸಿದ್ದರು.
ಚಿತ್ರ ಕೃಪೆ: retrogameforum

5

5

ಈ ಫೋನ್‌ನೊಂದಿಗೆ ನೋಕಿಯಾ ಸರಳತೆಯನ್ನು ತರಲು ಪ್ರಯತ್ನಿಸಿ ವರ್ಟಿಕಲ್‌ ಕೀಪ್ಯಾಡ್‌ ಅನ್ನು ಸರ್ಕ್ಯೂಲರ್‌ ಆಗಿ ಪರಿಚಯಿಸಿತು. ವಿಶೇಷ ಅಂದ್ರೆ ಗ್ರಾಹಕರ ಪ್ರತಿಕ್ರಿಯೆ ಮೇರೆಗೆ ಇದನ್ನು ವಿನ್ಯಾಸಗೊಳಿಸಲಾಗಿತ್ತು.
ಚಿತ್ರ ಕೃಪೆ:wikipedia

6

6

ನೋಕಿಯಾ ಮೊಟ್ಟ ಮೊದಲ ಬಾರಿಗೆ ಗೇಮಿಂಗ್‌ ಫೋನ್‌ ಅನ್ನು ಪರಿಚಯಿಸಿತು. ಇದು ಟ್ಯಾಕೊ ರೀತಿಯಲ್ಲಿ ಕಾಣುತ್ತಿದ್ದ ಕಾರಣದಿಂದ ಇದನ್ನು "ಟ್ಯಾಕೊ" ಎಂದೇ ಕರೆಯಲಾಗುತ್ತಿತ್ತು.
ಚಿತ್ರ ಕೃಪೆ:wikipedia

7

7

ಅಸಂಪ್ರದಾಯಿಕ ವಿನ್ಯಾಸದೊಂದಿಗೆ ಅಭಿವೃದ್ದಿಗೊಂಡ ಮೊದಲ ನೋಕಿಯಾ ಫೋನ್‌ ಇದು.
ಚಿತ್ರ ಕೃಪೆ: YouTube

8

8

ಈ ಫೋನ್‌ಗಳನ್ನು ಕ್ಯಾಮ್‌ ರೆಕಾರ್ಡರ್‌ ಆಗಿ ಸಹ ಬದಲಿಸಬಹುದಾದ ವಿಶೇಷ ವಿನ್ಯಾಸದಲ್ಲಿ ಅಭಿವೃದ್ದಿಪಡಿಸಲಾಗಿತ್ತು.
ಚಿತ್ರ ಕೃಪೆ: blog.windows.com

9

9

ಇಂದಿಗೂ ಸಹ ಎಲ್ಲರ ಅಚ್ಚುಮೆಚ್ಚಿನ ಫೋನ್‌ " ನೋಕಿಯಾ 1100". ಬೇಸಿಕ್‌ GSM ಮೊಬೈಲ್‌ ಆದ " ನೋಕಿಯಾ 1100" ಬಳಸಲು ಅತಿ ಸುಲಭವಾದ ಫೋನ್‌ ಆಗಿತ್ತು. 2011 ರಲ್ಲಿ 250 ದಶಲಕ್ಷ ಜನರು " ನೋಕಿಯಾ 1100' ಖರೀದಿಸಿದ್ದರು. ಆ ಸಮಯದಲ್ಲಿ ಅತಿಹೆಚ್ಚು ಪ್ರಖ್ಯಾತ ಮೊಬೈಲ್‌ ಆಗಿತ್ತು.
ಚಿತ್ರ ಕೃಪೆ:pocket-lint

10

10

ಅತಿಹೆಚ್ಚು ನಿಯಂತ್ರಣ ಫೀಚರ್‌ಗಳನ್ನು ಹೊಂದುವ ಮೂಲಕ 6600 ಜಾಯ್ಸ್‌ಟಿಕ್‌ ಅಭಿವೃದ್ದಿ ಹೊಂದಿತ್ತು. ಅಲ್ಲದೇ ಭಾರತದಲ್ಲಿ ಹೆಚ್ಚು ಮಾರಾಟ ಪಡೆದಿತ್ತು.
ಚಿತ್ರ ಕೃಪೆ:ebay

11

11

ಮ್ಯೂಸಿಕ್ ಸಂಗ್ರಹದಲ್ಲಿ ಅತ್ಯಧಿಕ ಪ್ರಖ್ಯಾತ ಹೊಂದಿದ ಮೊಬೈಲ್‌ ಎಂದರೆ 'ನೋಕಿಯಾ 5300'. ಈ ಮೊಬೈಲ್ ಅನ್ನು ಮಹಿಳೆಯರು ಹೆಚ್ಚು ಇಷ್ಟ ಪಡುತ್ತಿದ್ದರು.
ಚಿತ್ರ ಕೃಪೆ:mobile88

12

12

ನೋಕಿಯಾ ಬೇಸಿಕ್‌ ಮೊಬೈಲ್‌ನಲ್ಲಿ ಮೊದಲು ರೇಡಿಯೋ ಕೇಳುವ ಫೀಚರ್‌ ಅನ್ನು ಅಳವಡಿಸಿದ್ದು " ನೋಕಿಯಾ 2300"ಗೆ. ಜನರು ವಿಶೇಷವಾಗಿ 'ನೋಕಿಯಾ 2300' ಅನ್ನು FM ಕೇಳಲೆಂದು ಖರೀದಿಸುತ್ತಿದ್ದರು.
ಚಿತ್ರ ಕೃಪೆ: resimbul

13

13

ಅಂದಹಾಗೆ " ನೋಕಿಯಾ E72" ಬ್ಲಾಕ್‌ಬೆರ್ರಿ ಸೆಟ್‌ಗಳಿಗೆ ಪೈಪೋಟಿ ನೀಡಿದ ಉತ್ತಮ ಫೋನ್‌. ಇದನ್ನು ಹೆಚ್ಚಿನದಾಗಿ ಬ್ಯುಸಿನೆಸ್ ಮಾಡುವ ಜನರು ಆಧ್ಯತೆ ನೀಡುತ್ತಿದ್ದರು. ಈಗಲೂ ಸಹ ಈ ಮೊಬೈಲ್‌ ಮೇಲ್‌ಗಳನ್ನು ಮತ್ತು ಮೆಸೇಜ್‌ಗಳನ್ನು ನಿರ್ವಹಿಸಲು ಉತ್ತಮ ಫೋನ್‌ ಆಗಿದೆ.
ಚಿತ್ರ ಕೃಪೆ:allaboutsymbian

14

14

ಐಷಾರಾಮಿ ಫೋನ್‌ ವಿಭಾಗಕ್ಕೆ ಸೇರಿದ ಫೋನ್‌ ಇದು. ಕ್ರಿಸ್ಟಲ್‌ ವಿನ್ಯಾಸ ಪಡೆದಿದ್ದ ಈ ಫೋನ್‌ ನಿರೀಕ್ಷಿಸಿದ ಪ್ರಖ್ಯಾತಿ ಪಡೆಯಲಿಲ್ಲ.
ಚಿತ್ರ ಕೃಪೆ:dailyicon

15

15

ಈ ಫೋನ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಾರಣ ಹಾನಿಗೊಳಗಾದ ಫೋನ್‌ ಇದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಫೋಟೋಗಳುಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಫೋಟೋಗಳು

ಉದ್ಯೋಗಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಭಾರತದ ಟಾಪ್‌ ಕಂಪನಿಗಳುಉದ್ಯೋಗಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಭಾರತದ ಟಾಪ್‌ ಕಂಪನಿಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
15 Epic Old Nokia Phones That We Will Always Remember. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X