Subscribe to Gizbot

ಜಿಯೋ ಫೋನ್ ಪ್ರಭಾವ: ರೂ. 5000ಕ್ಕೆ ನೋಕಿಯಾ 2 ಸ್ಮಾರ್ಟ್‌ಫೋನ್..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಕಾಲಿಟ್ಟ ಕ್ಷಣದಿಂದಲೇ ಇತರೆ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ನಡುಕ ಶುರುವಾಗಿದೆ. ಈಗಾಗಲೇ ಮೂರು ಸ್ಮಾರ್ಟ್‌ಫೋನ್ ಗಳನ್ನು ಪರಿಚಯ ಮಾಡಿದ್ದು, ಅದರಲ್ಲಿ ಒಂದು ಮಾತ್ರವೇ ಗ್ರಾಹಕರ ಕೈ ಸೇರಿದೆ. ಉಳಿದ ಎರಡು ಫೋನ್ ಗಳು ಮುಂದಿನವಾರದಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಜಿಯೋ ಫೋನ್ ಪ್ರಭಾವ: ರೂ. 5000ಕ್ಕೆ ನೋಕಿಯಾ ಸ್ಮಾರ್ಟ್‌ಫೋನ್..!!

ಓದಿರಿ: ವಾಟ್ಸ್‌ಆಪ್ ಬಿಟ್ಟು ಟೆಲಿಗ್ರಾಂ ಬಳಕೆ ಶುರು ಮಾಡಲು ಇದೊಂದೆ ಕಾರಣ ಸಾಕು..!!

ಇದೇ ಸಂದರ್ಭದಲ್ಲಿ ಮತ್ತೊಂದು ಸುದ್ದಿ ನೋಕಿಯಾದಿಂದ ಹೊರ ಬಿದ್ದಿದ್ದು, ಬಜೆಟ್ ಬೆಲೆಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆಯಂತೆ, ಸದ್ಯ ಲಭ್ಯವಿರುವ ನೋಕಿಯಾ 3 ಗಿಂತಲೂ ಕಡಿಮೆ ಬೆಲೆಗೆ ನೋಕಿಯಾ 2 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸದ್ದಿಲ್ಲದೇ ತಯಾರಿ ನಡೆಸಿದೆ. ಈ ಮೂಲಕ ಚೀನಾ ಕಂಪನಿಗಳಿಗೆ ಚಳ್ಳೆ ಹಣ್ಣು ತಿನ್ನಸಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಂಟ್ರಿ ಲೆವೆಲ್:

ಎಂಟ್ರಿ ಲೆವೆಲ್:

ನೋಕಿಯಾ 2 ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್‌ನದ್ದಾಗಿದ್ದು, ಇದು ನೇರವಾಗಿ ಶಿಯೋಮಿ-ಮೊಟೊ ಕಂಪನಿಗಳ ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ ಎಂದು ತಿಳಿದುಬಂದಿದೆ.

ಬೆಲೆ ಕಡಿಮೆ:

ಬೆಲೆ ಕಡಿಮೆ:

ನೋಕಿಯಾ ಸಹ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ನೀಡುವ ಸಲುವಾಗಿ ರೂ.5000ಕ್ಕೆ ನೋಕಿಯಾ 2 ಸ್ಮಾರ್ಟ್‌ಫೋನ್ ನೀಡಲಿದೆ ಎನ್ನುವ ಮಾತು ಕೇಳಿ ಬಂದಿದೆಯಾದರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಾಗಿಲ್ಲ.

ಈ ವರ್ಷವೇ ಮಾರುಕಟ್ಟೆಗೆ:

ಈ ವರ್ಷವೇ ಮಾರುಕಟ್ಟೆಗೆ:

ಈ ನೋಕಿಯಾ 2 ಸ್ಮಾರ್ಟ್‌ಫೋನ್ ಇದೇ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನುವ ಮಾತು ಮಾರುಕಟ್ಟೆಯಲ್ಲಿ ಕೇಳಿಬಂದಿದೆ. ನೋಕಿಯಾ ಆಂಡ್ರಾಯ್ಡ್ ಫೋನ್ ಗಳಲ್ಲೇ ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ಫೋನ್ ಇದಾಗಲಿದೆ.

ವಿಶೇಷತೆ:

ವಿಶೇಷತೆ:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ ಪ್ರೋಸೆಸರ್ ಒಳಗೊಂಡಿರಲಿದ್ದು, 5 ಇಂಚಿನ ಡಿಸ್‌ಪ್ಲೇ ಇದರಲ್ಲಿರಲಿದೆ. ಇದು ಬೇರೆ ಫೋನ್ ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡುವುದು ಗ್ಯಾರೆಂಟಿಯಾಗಿದೆ.

ನೋಕಿಯಾ 8 ಮತ್ತು ನೋಕಿಯಾ 9;

ನೋಕಿಯಾ 8 ಮತ್ತು ನೋಕಿಯಾ 9;

ಇದೇ ಮಾದರಿಯಲ್ಲಿ ನೋಕಿಯಾ ಟಾಪ್ ಎಂಡ್ ಮಾಡಲ್ ಗಳಾಗದ ನೋಕಿಯಾ 8 ಮತ್ತು ನೋಕಿಯಾ 9 ಸ್ಮಾರ್ಟ್‌ಫೋನ್ ಗಳು ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ, ಒಟ್ಟಿನಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಅಭಿಮಾನಿಗಳಿಗೆ ಸುಗ್ಗಿಕಾಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
From the leaked information, it was clear that the Nokia 2 will be the most entry-level smartphone to be launched by HMD Global. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot