ಜೂನ್ 15 ರಿಂದ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರಾಟ ಆರಂಭ.! ಇಲ್ಲಿದೇ ಬೆಲೆಗಳ ಸಂಪೂರ್ಣ ವಿವರ..!!

ಜೂನ್ 15 ರಿಂದ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳ ಮಾರಾಟವೂ ಆರಂಭವಾಗಲಿದೆ.

|

ನೋಕಿಯಾ ಮತ್ತೇ ಸ್ಮಾರ್ಟ್‌ಫೋನ್ ಲೋಕವನ್ನು ಪ್ರವೇಶಿಸಲಿದೆ ಎನ್ನುವ ವಿಚಾರವನ್ನು ಕಳೆದ ಆರು ತಿಂಗಳಿಂದಲೂ ಕೇಳುತ್ತಿದ್ದ ಅಭಿಮಾನಿಗಳದ್ದು ಒಂದೇ ಪ್ರಶ್ನೆ ಭಾರತದಲ್ಲಿ ಎಂದು ನೋಕಿಯಾ ರಿಲೀಸ್ ಆಗಲಿದೆ ಎನ್ನುವುದು. ಅದಕ್ಕೆ ಸದ್ಯ ಉತ್ತರ ದೊರೆತಿದ್ದು, ಜೂನ್ 15 ರಿಂದ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳ ಮಾರಾಟವೂ ಆರಂಭವಾಗಲಿದೆ.

ಜೂನ್ 15 ರಿಂದ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರಾಟ ಆರಂಭ..!!!

ಓದಿರಿ: ಐಫೋನಿಗೆ ಹುಟ್ಟಿಕೊಂಡಿದೆ ಪ್ರತಿಸ್ಪರ್ಧಿ: ಈ ಹೊಸ ಫೋನಿಗೆ ಸರಿಸಾಟಿಯೇ ಇಲ್ಲ ಅಂದ್ರೆ ನಂಬಲೇ ಬೇಕು...!!!

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ನೋಕಿಯಾ 3 ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದ್ದು, ಇದರ ಬೆಲೆ ರೂ.10,000 ದ ಅಸುಪಾಸಿನಲ್ಲಿರಲಿದೆ. ಇದರೊಂದಿಗೆ ಮಧ್ಯಮ ಬೆಲೆಯ ಎರಡು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿದ್ದು, ನೋಕಿಯಾ 5 ಇದರ ಬೆಲೆ 15,000 ರೂಗಳ ಸನಿಹದಲ್ಲಿಯೇ ಇರಲಿದೆ. ಇದಲ್ಲದೇ ನೋಕಿಯಾ 6 ಸಹ ಬಿಡುಗಡೆಯಾಗಲಿದೆ. ರೂ.18,000ಕ್ಕೆ ಈ ಫೋನ್ ದೊರೆಯಲಿದೆ.

ಓದಿರಿ: ಮತ್ತೆ ಬಂದಿದ್ದಾನೆ ಆಂಡ್ರಾಯ್ಡ್ ಜನಕ: ತಯಾರಿಸಿದ್ದಾನೆ ಆಂಟಿ ಐಫೋನ್

ನೋಕಿಯಾ 3 ಸ್ಮಾರ್ಟ್‌ಫೋನ್ ವಿಶೇಷತೆಗಳು:

ನೋಕಿಯಾ 3 ಸ್ಮಾರ್ಟ್‌ಫೋನ್ ವಿಶೇಷತೆಗಳು:

ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್, ಮೀಡಿಯಾ ಟೆಕ್ ಕ್ವಾಡ್ ಕೋರ್ 1.3GHz ಪ್ರೋಸೆಸರ್, ನೂತನ ಆಂಡ್ರಾಯ್ಡ್ ನ್ಯಾಗಾ, 2 GB RAM ಹಾಗೂ 16 GB ಆಂತರಿಕ ಮೆಮೊರಿ ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ, ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 2650mAh ಬ್ಯಾಟರಿ ಇದೆ, 4G ಸಪೋರ್ಟ್ ಮಾಡಲಿದೆ.

ನೋಕಿಯಾ 5 ಸ್ಮಾರ್ಟ್‌ಫೋನ್ ವಿಶೇಷತೆಗಳು:

ನೋಕಿಯಾ 5 ಸ್ಮಾರ್ಟ್‌ಫೋನ್ ವಿಶೇಷತೆಗಳು:

ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ 5.2 ಇಂಚಿನ HD ಡಿಸ್‌ಪ್ಲೇ, ನೂತನ ಆಂಡ್ರಾಯ್ಡ್ ನ್ಯಾಗಾ, ಸ್ನಾಪ್ ಡ್ರಾಗನ್ 430 ಪ್ರೋಸೆಸರ್, 2 GB RAM ಹಾಗೂ 16 GB ಆಂತರಿಕ ಮೆಮೊರಿ, ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಹಿಂಭಾಗದಲ್ಲಿ 13 MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾ ಇದೆ. 3000 mAh ಬ್ಯಾಟರಿ ಇದ್ದು, 4G ಸಪೋರ್ಟ್ ಮಾಡಲಿದೆ.

ನೋಕಿಯಾ 6 ಸ್ಮಾರ್ಟ್‌ಫೋನ್ ವಿಶೇಷತೆಗಳು:

ನೋಕಿಯಾ 6 ಸ್ಮಾರ್ಟ್‌ಫೋನ್ ವಿಶೇಷತೆಗಳು:

ನೋಕಿಯಾ 6 ಸ್ಮಾರ್ಟ್‌ಪೋನಲ್ಲಿ 5.5 ಇಂಚಿನ Full HD ಡಿಸ್‌ಪ್ಲೇ 2.5D ವಿನ್ಯಾಸ, ಗೋರಿಲ್ಲ ಗ್ಲಾಸ್ ರಕ್ಷಣೆ ಇದೆ. ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಒಂದು ಮಾದರಿ ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಇರುವ ಮತ್ತೊಂದು ಮಾದರಿಯೂ ಲಭ್ಯವಿದೆ. ಆಂಡ್ರಾಯ್ಡ್ ನ್ಯಾಗಾ, ಹಿಂಭಾಗದಲ್ಲಿ ಡುಯಲ್ ಟೋನ್ LED ಫ್ಲಾಶ್ ನೊಂದಿಗೆ 16 MP ಕ್ಯಾಮೆರಾ, ಮುಂಭಾಗದಲ್ಲಿ 8 MP ಕ್ಯಾಮೆರಾ ಮತ್ತು 3000mAh ಬ್ಯಾಟರಿ ಅಳವಡಿಸಲಾಗಿದೆ.

ನೋಕಿಯಾ 3 ಹೇಗಿದೆ ವಿಡಿಯೋ ನೋಡಿ..!!

ಜೂನ್ ನಲ್ಲಿ ಮಾರುಕಟ್ಟೆಗೆ ಬರುವ ನೋಕಿಯಾ 3 ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ಈ ವಿಡಿಯೋ ನೋಡಿ.

Best Mobiles in India

Read more about:
English summary
Nokia Android smartphone might finally be available in India starting June 15. According to a report by Nokia Power User. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X