ಈ ವಿಶೇಷ ಫೀಚರ್‌ಗಳನ್ನು ನೋಕಿಯಾ 6.2 ಹೊಂದಿರಲಿದೆ!.

|

ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಹಿರಿಯಣ್ಣ ಎಂದೆನಿಸಿಕೊಂಡಿರುವ ನೋಕಿಯಾ ಸಂಸ್ಥೆ ಆಂಡ್ರಾಯ್ಡ್ ಮಾದರಿ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿ ಈಗಾಗಲೇ ಸೈ ಎನಿಸಿಕೊಂಡಿದೆ. ಆದರೆ ಇದೀಗ ಅತೀ ಶೀಘ್ರದಲ್ಲಿಯೇ ಸ್ಮಾರ್ಟ್‌ಫೋನ್ ಪ್ರಿಯರಿಗೆ ಮತ್ತೆ ಹೊಸ ಸುದ್ದಿಯೊಂದನ್ನು ನೀಡಲಿದ್ದು, ಇದು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಿರೀಕ್ಷೆ ಮೂಡಿಸಿದೆ.

ಈ ವಿಶೇಷ ಫೀಚರ್‌ಗಳನ್ನು ನೋಕಿಯಾ 6.2 ಹೊಂದಿರಲಿದೆ!.

ಹೌದು, ನೋಕಿಯಾ ಸಂಸ್ಥೆಯ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ 6.1 ಮಾದರಿ ಜನಪ್ರಿಯತೆ ಗಳಿಸಿದ್ದು, ಅದರ ಮುಂದುವರಿದ ಭಾಗವಾಗಿ ಇದೀಗ ಸಂಸ್ಥೆಯು 'ನೋಕಿಯಾ 6.2' ಹೆಸರಿನ ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮಾಹಿತಿ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಜನೆವರಿ ಅಂತ್ಯದೊಳಗೆ ಇಲ್ಲವೇ ಫೇಬ್ರವರಿ ತಿಂಗಳಲ್ಲಿ ಮೊದಲು ಚೀನಾ ಮೊಬೈಲ್ ಮಾರುಕಟ್ಟೆಗೆ ಎಂಟ್ರಿಕೊಡಲಿದೆಯಂತೆ.

ಈ ವಿಶೇಷ ಫೀಚರ್‌ಗಳನ್ನು ನೋಕಿಯಾ 6.2 ಹೊಂದಿರಲಿದೆ!.

ನೋಕಿಯಾ ಸಂಸ್ಥೆಯ ಈ ಹೊಸ ಸ್ಮಾರ್ಟ್‌ಫೋನ ಅತೀ ನವಿನವಾದ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನಲಾಗುತ್ತಿದ್ದು, ಖಂಡಿತವಾಗಿಯು ಈ ಫೋನಿನ ವಿಶೇಷತೆಗಳು ಸ್ಮಾರ್ಟ್‌ಫೋನ ಪ್ರೇಮಿಗಳಿಗೆ ಇಷ್ಟವಾಗುವುದು ಎನ್ನಲಾಗುತ್ತಿದೆ. ಹಾಗಾದರೇ ಏನೇಲ್ಲಾ ಫೀಚರ್ಸ್‌ಗಳನ್ನು ಈ ಸ್ಮಾರ್ಟ್‌ಫೋನ್‌ ಹೊಂದಿರಲಿದೆ ಎನ್ನುವ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ.

ಈ ವಿಶೇಷ ಫೀಚರ್‌ಗಳನ್ನು ನೋಕಿಯಾ 6.2 ಹೊಂದಿರಲಿದೆ!.

ಪಂಚ್‌ ಹೋಲ್ ಕ್ಯಾಮರಾ!
ಬರಲಿರುವ ಬಹುನಿರೀಕ್ಷಿತ ಹೊಸ ನೋಕಿಯಾ 6.2 ಸ್ಮಾರ್ಟ್‌ಫೋನಿನ್ ಅತೀ ಪ್ರಮುಖ ಆಕರ್ಷಣೆ ಎಂದರೇ ಪಂಚ್‌ಹೋಲ್ ಕ್ಯಾಮರಾ. ಇದೇ ಮೊದಲ ಬಾರಿಗೆ ನೋಕಿಯಾ ಈ ಪಂಚ್‌ಹೋಲ್ ಇರುವ ಕ್ಯಾಮರಾ ಪರಿಚಯಿಸುತ್ತಿದೆ.

ಪ್ರಮುಖ ಗುಣವಿಶೇಷತೆಗಳು

* ಗೊರಿಲ್ಲಾ ಗ್ಲಾಸ್ ರಕ್ಷಣೆಯ ಬೆಂಬಲದೊಂದಿಗೆ, 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಇರಲಿದೆ.
* ಕ್ವಾಲ್ಕಂ ಸ್ನಾಪ್‌ಡ್ರಾಗನ್ 632 ಪ್ರೊಸೆಸರ್‌ ಹೊಂದಿರಲಿದೆ.
* 4GB ಅಥವಾ 6GB RAM ಆಯ್ಕೆ ಇರಲಿದೆ. 64GB ಆಂತರಿಕ ಸಂಗ್ರಹ ಸಾಮರ್ಥ್ಯ ನೀಡಲಾಗಿದೆ.
* 16 ಮೆಗಾಪಿಕ್ಸಲ್‌ಗಳ ರಿಯರ್ ಡ್ಯುಯಲ್ ಕ್ಯಾಮರಾ ಇರಲಿವೆ.
* OZO ಆಡಿಯೋ ಸೌಲಭ್ಯ ಹೊಂದಿರಲಿದೆ.

Best Mobiles in India

English summary
It appears that Nokia 9 PureView and Nokia 6.2 may get launched at MWC 2019, which kicks off in Barcelona in late February. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X