Subscribe to Gizbot

ನೋಕಿಯಾ 6 ಖರೀದಿಸುವ ಮುನ್ನ ಈ ಸ್ಟೋರಿ ನೋಡಿ..! ಇಲ್ಲಿದೇ ಅಮೆಜಾನ್ ಫ್ಲಾಷ್ ಕುರಿತ ವಿವರ...!!!

Written By:

ಭಾರತದಲ್ಲಿ ಈಗಾಗಲೇ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಜುಲೈ 14ರಿಂದ ಮೊದಲಿಗೆ ನೋಕಿಯಾ 6 ಸ್ಮಾರ್ಟ್‌ಫೋನ್ ಫ್ಲಾಷ್ ಸೇಲಿಗೆ ರಿಜಿಸ್ಟ್ರೆಷನ್ ಶುರುವಾಗಲಿದ್ದು, ಅದುವೇ ದೈತ್ಯ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್‌ನಲ್ಲಿ. ಈ ಫೋನ್‌ ಖರೀದಿಸುವವರಿಗೆ ಅಮೆಜಾನ್ ಕೆಲವು ಆಫರ್ ಗಳನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ಅವುಗಳ ಕುರಿತ ಸಂಫೂರ್ಣ ಮಾಹಿತಿ ಇಲ್ಲಿದೆ.

ನೋಕಿಯಾ 6 ಖರೀದಿಸುವ ಮುನ್ನ ಈ ಸ್ಟೋರಿ ನೋಡಿ..!


ಓದಿರಿ: ರೆಡ್ಮಿ, ಲಿನೋವೊ, ಮೊಟೊ ಗಳಿಗೆ ಭರ್ಜರಿ ಸ್ಪರ್ಧೆ ನೀಡುವ ನೋಕಿಯಾ 3 ಸ್ಮಾರ್ಟ್ಫೋನ್ ಅಚ್ಚರಿ ಬೆಲೆಗೆ ಮಾರಾಟ..!!

ಭಾರತ ಸೇರಿದಂತೆ ವಿಶ್ವದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವ ಹಕ್ಕನ್ನು ಪಡೆದುಕೊಂಡಿರುವ HDM ಗ್ಲೋಬಲ್ ಸಂಸ್ಥೆಯೂ ಭಾರತದಲ್ಲಿ ನೋಕಿಯಾ 6 ಸ್ಮಾರ್ಟ್‌ಫೋನಿನ ಬೆಲೆಯನ್ನು ರೂ14,999ಕ್ಕೆ ನೀಡುವುದಾಗಿ ಘೋಷಣೆ ಮಾಡಿದ್ದು, ಈಗಾಗಲೇ ಈ ಫೋನ್ ಬುಕ್ ಮಾಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಈಗಾಗಲೇ ಅಮೆಜಾನ್‌ನಲ್ಲಿ ನೋಕಿಯಾ 6 ಸ್ಮಾರ್ಟ್‌ಫೋನಿನ ಜಾಹೀರಾತು ಕಾಣಿಸಿಕೊಂಡಿದ್ದು, ಜುಲೈ 17 ರಿಂದ ರಿಜಿಸ್ಟ್ರೆಷನ್ ಶುರುವಾಗಲಿದೆ. ಅಮೆಜಾನ್ ನಲ್ಲಿ ಮಾತ್ರವೇ ಏಕ್ಸ್‌ಕ್ಲೂಸಿವ್ ಆಗಿ ಸೇಲ್ ನಡೆಯುತ್ತಿರುವುದರಿಂದ ಅಮೆಜಾನ್ ಪ್ರೈಮ್ ಮೆಂಬರ್ ಗಳಿಗೆ 1000 ರೂ. ಪೇ ಬ್ಯಾಕ್ ದೊರೆಯಲಿದೆ.

ನೋಕಿಯಾ 6 ಖರೀದಿಸುವ ಮುನ್ನ ಈ ಸ್ಟೋರಿ ನೋಡಿ..!

ಓದಿರಿ: ನಾಳೆ ನೋಕಿಯಾ ಸ್ಮಾರ್ಟ್ಫೋನ್ಗಳು ಲಾಂಚ್: ದೊರೆಯುವುದು ಎಲ್ಲಿ..?

ನೋಕಿಯಾ 6 ಸ್ಮಾರ್ಟ್‌ಪೋನು 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, 5.5 ಇಂಚಿನ Full HD ಡಿಸ್‌ಪ್ಲೇ 2.5D ವಿನ್ಯಾಸ, ಗೋರಿಲ್ಲ ಗ್ಲಾಸ್ ರಕ್ಷಣೆ ಇದಕ್ಕಿದೆ. ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಾಯ್ಡ್ ನ್ಯಾಗಾ ಕಾಣಬಹುದಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದರಲ್ಲಿದೆ.

ಇದರೊಂದಿಗೆ ಹಿಂಭಾಗದಲ್ಲಿ ಡುಯಲ್ ಟೋನ್ LED ಫ್ಲಾಶ್ ನೊಂದಿಗೆ 16 MP ಕ್ಯಾಮೆರಾ, ಮುಂಭಾಗದಲ್ಲಿ 8 MP ಕ್ಯಾಮೆರಾ ಮತ್ತು 3000mAh ಬ್ಯಾಟರಿ ಅಳವಡಿಸಲಾಗಿದೆ. ಒಟ್ಟಿನಲ್ಲಿ ನೀವು ಈ ಫೋನ್ ಅನ್ನು ಬುಕ್ ಮಾಡಬೇಕಾದರೆ ಇನ್ನು ಒಂದು ತಿಂಗಳು ಕಾಯಲೇ ಬೇಕಾಗಿದೆ.

Read more about:
English summary
Nokia 6 is the best-specced smartphone among the three. It features a 5.5-inch full-HD 2.5D screen with Corning Gorilla Glass protection and a fingerprint sensor. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot