ನೋಕಿಯಾ 7 ಪ್ಲಸ್ ಸ್ಮಾರ್ಟ್‌ಪೋನ್ ಪ್ರೀ ಬುಕ್ಕಿಂಗ್ ಶುರು!!..ಆಕರ್ಷಕ ಲಾಂಚ್ ಆಫರ್ಗಳು!!

|

ಇತ್ತೀಚೆಗಷ್ಟೇ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಪ್ರೀ ಬುಕ್ಕಿಂಗ್ ಇಂದಿನಿಂದ ಆರಂಭವಾಗಿದೆ. ಈ ಎರಡೂ ಮಾದರಿಯ ಫೋನ್‌ಗಳ ಮಾರಾಟ ಏ.30 ರಿಂದ ಪ್ರಾರಂಭವಾಗಲಿದ್ದು, ಇಂದಿನಿಂದಲೇ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಆನ್‌ಲೈನಿನಲ್ಲಿ ಬುಕ್ ಮಾಡಬಹುದಾಗಿದೆ.!

ಮಾರಾಟದ ಕೊಡುಗೆಯಾಗಿ ನೋಕಿಯಾ ಸಂಸ್ಥೆ ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರಿಗೆ ಆಕರ್ಷಕ ಲಾಂಚ್ ಆಫರ್ಗಳನ್ನು ನೀಡಿದೆ. ಶೇ.10 ರಷ್ಟು ಕ್ಯಾಶ್ ಬ್ಯಾಕ್, 120 ಜಿಬಿ ಏರ್ಟೆಲ್ 4ಜಿ ಹೆಚ್ಚುವರಿ ಡೇಟಾ, 12 ತಿಂಗಳ ವರೆಗೆ ವಿಮೆ ಸೌಲಭ್ಯಗಳನ್ನು ಮೊಬೈಲ್ ಖರೀದಿದಾರರು ಪಡೆಯಬಹುದಾಗಿದೆ.!

ನೋಕಿಯಾ 7 ಪ್ಲಸ್ ಸ್ಮಾರ್ಟ್‌ಪೋನ್ ಪ್ರೀ ಬುಕ್ಕಿಂಗ್ ಶುರು!!

ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ನೋಕಿಯಾ.ಕಾಮ್ ಹಾಗೂ ಅಮೇಜಾನ್‌ನಲ್ಲಿ ಮಾರಟಕ್ಕಿದ್ದು, ನೋಕಿಯಾ 8 ಸಿರೊಕ್ಕಾ ಸ್ಮಾರ್ಟ್‌ಪೋನ್ ಅನ್ನು ನೋಕಿಯಾ.ಕಾಮ್ ಹಾಗೂ ಪ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕಿದೆ. ಹಾಗಾದರೆ, ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ನೋಕಿಯಾ 7 ಪ್ಲಸ್ ಡಿಸ್‌ಪ್ಲೇ!

ನೋಕಿಯಾ 7 ಪ್ಲಸ್ ಡಿಸ್‌ಪ್ಲೇ!

ಮಲ್ಟಿಮೀಡಿಯಾದ ಉತ್ತಮ ಅನುಭವ ನೀಡುವ ಸಲುವಾಗಿ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್, 18:9 ಆಕಾರ ಅನುಪಾತದ 6 ಇಂಚಿನ ಪೂರ್ಣ ಹೆಚ್‌ಡಿ + (1080x2160) ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು 500-ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ರೇಟಿಂಗ್‌ನೊಂದಿದೆ ಬಂದಿದೆ.

ನೋಕಿಯಾ 7 ಪ್ಲಸ್ ಪ್ರೊಸೆಸರ್ ಮತ್ತು RAM!

ನೋಕಿಯಾ 7 ಪ್ಲಸ್ ಪ್ರೊಸೆಸರ್ ಮತ್ತು RAM!

ಮಧ್ಯಮ ಬೆಲೆಯ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ ನೋಕಿಯಾ 7 ಪ್ಲಸ್, ಆಕ್ಟಕೋರ್ ಸ್ನ್ಯಾಪ್‌ಡ್ರಾಗನ್ 660 SoC ಪ್ರೊಸೆಸರ್ ಅನ್ನು ಹೊಂದಿದೆ. 4GB RAM ಮತ್ತು 64GB ಮೆಮೊರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಕೂಡ ಲಭ್ಯವಿದೆ.

ನೋಕಿಯಾ 7 ಪ್ಲಸ್ ಕ್ಯಾಮೆರಾ!!

ನೋಕಿಯಾ 7 ಪ್ಲಸ್ ಕ್ಯಾಮೆರಾ!!

ಸೆಲ್ಫಿ ಆಧಾರಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಿಗೆ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಟಾಂಗ್ ನೀಡಿದೆ. ಹಿಂಬಾಗದಲ್ಲಿ f/1.75 ಅಪಾರ್ಚರ್ ಹೊಂದಿರುವ 12 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದರೆ, ವಿಶೇಷವೆಂಬಂತೆ f/1.75 ಅಪಾರ್ಚರ್ ಹೊಂದಿರುವ 16ಎಂಪಿ ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. 2ಎಕ್ಸ್ ಆಪ್ಟಿಕಲ್ ಜ್ಹೂಮ್, ಡ್ಯುಯಲ್ ಟೋನ್ ಎಲ್‌ಇಡಿ ಫ್ಲಾಶ್, ಜಿಯೋಸ್ ಆಪ್ಟಿಕ್ಸ್ ಮತ್ತು ಆಟೊ ಪೋಕಸ್ ತಂತ್ರಜ್ಞಾನವನ್ನು ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನಿನ ಕ್ಯಾಮೆರಾ ತಂತ್ರಜ್ಞಾನವನ್ನು ಹೆಚ್ಚಿಸಿವೆ.

ನೋಕಿಯಾ 7 ಪ್ಲಸ್ ಬ್ಯಾಟರಿ!

ನೋಕಿಯಾ 7 ಪ್ಲಸ್ ಬ್ಯಾಟರಿ!

ಮಲ್ಟಿಮೀಡಿಯಾ ಆಧಾರಿತ ಸ್ಮಾರ್ಟ್‌ಫೋನ್ ನೋಕಿಯಾ 7 ಪ್ಲಸ್ 3,800mAh ಬ್ಯಾಟರಿಯನ್ನು ಹೊಂದಿದೆ. ಫಾಸ್ಟ್ ಚಾರ್ಜಿಂಗ್ (2.0) ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್‌ಫೋನ್ 723 ಗಂಟೆಗಳ ಸ್ಟಾಂಡ್ ಬೈ ಮತ್ತು 19 ಗಂಟೆಗಳ ಟಾಕ್ ಟೈಮ್ ಚಾರ್ಜ್ ನೀಡಲಿದೆ ಎಂದು ಎಚ್ಎಂಡಿ ಗ್ಲೋಬಲ್ ಸಂಸ್ಥೆ ಹೇಳಿಕೊಂಡಿದೆ.

How to Check Your Voter ID Card Status (KANNADA)
ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4 ಜಿ ವೋಲ್ಸ್, ವೈ-ಫೈ 802.11ac, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಎನ್ಎಫ್ಸಿ, ಯುಎಸ್‌ಬಿ ಟೈಪ್-ಸಿ (2.0), ಮತ್ತು 3.5 ಎಂಎಂ ಆಡಿಯೋ ಜಾಕ್‌ನಂತಹ ಫೀಚರ್ಸ್‌ಗಳನ್ನು ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಒಳಗೊಂಡಿದೆ. ಇನ್ನು ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋ ಮೂಲಕ ಕಾರ್ಯನಿರ್ವಹಣೆ ನಿಡಲಿದೆ.

ನೋಕಿಯಾ 7 ಪ್ಲಸ್ ಬೆಲೆ ಎಷ್ಟು?

ನೋಕಿಯಾ 7 ಪ್ಲಸ್ ಬೆಲೆ ಎಷ್ಟು?

6 ಇಂಚಿನ ಬಿಗ್ ಸ್ಕ್ರೀನ್, ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಹಾಗೂ 16ಎಂಪಿ ಸೆಲ್ಫಿ ಕ್ಯಾಮೆರಾದಂತಹ ಫೀಚರ್ಸ್ ಹೊಂದಿರುವ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಭಾರತದಲ್ಲಿ 25,999 ರೂಪಾಯಿಗಳೀಗೆ ಬಿಡುಗಡೆಯಾಗಿದೆ. ಏಪ್ರಿಲ್ 30 ರಿಂದ ಅಮೆಜಾನ್‌ನಲ್ಲಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬರಲಿದೆ.

Best Mobiles in India

English summary
The Nokia 7 Plus and Nokia 8 Sirocco were announced for the Indian market earlier this month, and both phones are now up for pre-order. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X