Subscribe to Gizbot

ಶಾಕ್‌ ಮೇಲೆ ಶಾಕ್‌ ನೀಡುತ್ತಿರುವ ನೋಕಿಯಾ!..ಆಂಡ್ರಾಯ್ಡ್ ಆಯ್ತು ಇದೀಗ?

Written By:

ನೋಕಿಯಾ ಕಂಪೆನಿಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿ ಕೆಲವೇ ದಿನಗಳು ಕಳೆದಿವೆ. ನೋಕಿಯಾ ಅಭಿಮಾನಿಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಖರೀದಿಸಲು ಕಾತುರರಾಗಿದ್ದಾರೆ.! ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಕೈಗೆ ಸ್ಮಾರ್ಟ್‌ಫೋನ್‌ ದೊರೆಯುವಷ್ಟರಲ್ಲಿಯೇ ನೋಕಿಯಾ ಮತ್ತೊಂದು ಶಾಕ್ ನೀಡಿದೆ.!!

ಶಾಕ್‌ ಮೇಲೆ ಶಾಕ್‌ ನೀಡುತ್ತಿರುವ ನೋಕಿಯಾ!..ಆಂಡ್ರಾಯ್ಡ್ ಆಯ್ತು ಇದೀಗ?

ನೋಕಿಯಾ ಆಂಡ್ರಾಯ್ಡ್ ಬಗ್ಗೆ ಬಳಕೆದಾರರು ಏನೆಂದರು? ಹೇಗಿದೆಯಂತೆ "ನೋಕಿಯಾ 6"?

ಹೌದು. ನೋಕಿಯಾ ಈ ಪರಿ ಅಚ್ಚರಿ ಮೂಡಿಸಲು ಕಾರಣ ಏನು ಗೊತ್ತಾ? ನೋಕಿಯಾ, ಆಂಡ್ರಾಯ್ಡ್ ನಂತರ ಇದೀಗ ಮಡುಚಬಹುದಾದ (Foldabel) ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ.!! 2017ರಲ್ಲಿ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪ್ರವೇಶಿಸಲಿವೆ ಎನ್ನುವ ರೂಮರ್ಸ್ ಇರುವ ವೇಳೆಯೇ ನೋಕಿಯಾ ತನ್ನ ಮಡುಚಬಹುದಾದ ಸ್ಮಾರ್ಟ್‌ಫೋನ್‌ ತಯಾರಿಸುತ್ತಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಇದಕ್ಕಾಗಿ ನೋಕಿಯಾ ಯುಎಸ್‌ನ ಪೆಂಟೆಂಟ್ ಮತ್ತು ಟ್ರೇಡ್‌ಮಾರ್ಕ್ ಆಫಿಸ್‌ನಲ್ಲಿ ಪೇಟೆಂಟ್ ಮಾಡಿಸಿದ್ದು, ನೋಕಿಯಾದ ಮಡುಚಬಹುದಾದ (Foldabel) ಸ್ಮಾರ್ಟ್‌ಫೋನ್‌ಗಳು 2018 ರ ವೇಳೆಗೆ ಬಿಡುಗಡೆಯಾಗುತ್ತವೆ ಎಂದು ಮಾಹಿತಿ ಬಂದಿದೆ. ಇನ್ನು ಸ್ಯಾಮ್‌ಸಂಗ್, ಲೆನೊವೋ, ಆಪಲ್ ಮತ್ತು ಕ್ಸಿಯೋಮಿ ಕಂಪೆನಿಗಳು ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ ತಯಾರಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಆದರೂ ಬಿಡುಗಡೆಯಾಗುವ ಮಾಹಿತಿ ಹೊಬಿದ್ದಿಲ್ಲ.

ಶಾಕ್‌ ಮೇಲೆ ಶಾಕ್‌ ನೀಡುತ್ತಿರುವ ನೋಕಿಯಾ!..ಆಂಡ್ರಾಯ್ಡ್ ಆಯ್ತು ಇದೀಗ?

ಈಗಾಗಲೇ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಖರೀದಿಸಲು ಜನರು ತುದಿಗಾಲಿನಲ್ಲಿ ನಿಂತಿರುವಾಗಲೇ, ನೋಕಿಯಾದ ಮಡುಚಬಹುದಾದ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್‌ಗಳನ್ನು ಹೊಂದಿರಬಹುದು ಎನ್ನುವ ಕುತೋಹಲ ಶುರುವಾಗಿದೆ. ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ಗಳಿಗೂ ಮೀರಿ ಈ ಸ್ಮಾರ್ಟ್‌ಫೋನ್‌ ತಯಾರಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಓದಿರಿ: ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಯಾಕೆ ಮಾಡಿಸಬೇಕು? ಹೇಗೆ ಮತ್ತು ಎಷ್ಟು ಖರ್ಚು?

English summary
Nokia has been granted a patent for a “Foldable device” by the US Patent & Trademark Office (USPTO).to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot