ನೋಕಿಯಾ G21 ಫಸ್ಟ್‌ ಲುಕ್‌: ಬಜೆಟ್‌ ದರದಲ್ಲಿ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಫೋನ್‌!

|

ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆ ನೋಕಿಯಾ ಇತ್ತೀಚಿಗೆ ಬಿಡುಗಡೆ ಮಾಡಿರುವ ನೂತನ ನೋಕಿಯಾ G21 ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಜೊತೆಗೆ 5,050mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಪ್ರಮುಖ ಹೈಲೈಟ್‌ ಎನಿಸಿವೆ. ಇದರೊಂದಿಗೆ ಡಿಸೈನ್, ಅಧಿಕ RAM ಹಾಗೂ ವೇಗದ ಪ್ರೊಸೆಸರ್‌ ಫೀಚರ್ಸ್‌ಗಳಿಂದಲೂ ಈ ಮೊಬೈಲ್ ಮತ್ತಷ್ಟು ಗಮನ ಸೆಳೆದಿದೆ.

ಪಿಕ್ಸಲ್

ನೋಕಿಯಾ G21 ಸ್ಮಾರ್ಟ್‌ಫೋನ್‌ ಅಧಿಕ RAMಗೂ ಪ್ರಾಮುಖ್ಯತೆ ನೀಡಿದ್ದು, 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್‌ ಆಯ್ಕೆ ಹೊಂದಿದೆ. ಕ್ಯಾಮೆರಾ ಪ್ರಿಯರನ್ನು ಸೆಳೆಯಲು ತ್ರಿವಳಿ ಕ್ಯಾಮೆರಾ ರಚನೆ ಒದಗಿಸಿದ್ದು, 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಸ್ಕ್ರೀನ್ ರೆಸಲ್ಯೂಶನ್ ಅಧಿಕವಾಗಿದೆ. ಹಾಗಾದರೇ ನೋಕಿಯಾ G21 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಫಸ್ಟ್‌ ಲುಕ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳನ್ನು ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ನೋಕಿಯಾ G21 ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 20:9 ರಚನೆಯ ಅನುಪಾತವನ್ನು ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಅನ್ನೊ ಒಳಗೊಂಡಿದೆ. ಡಿಸ್‌ಪ್ಲೇಯು ಹೆಚ್ಚು ಪ್ರಕಾಶಮಾನವಾಗಿಲ್ಲ ಮತ್ತು ವೀಡಿಯೊ ಪ್ಲೇಬ್ಯಾಕ್ ಮತ್ತು ಕ್ಯಾಶುಯಲ್ ಗೇಮಿಂಗ್‌ಗೆ ಬಂದಾಗ ಹೆಚ್ಚಾಗಿ ಒಳಾಂಗಣ ಬಳಕೆಗೆ ಉತ್ತಮ ಎನಿಸುತ್ತದೆ. ಬಣ್ಣ ವೈಬ್ರನ್ಸಿ ಮತ್ತು ಕಾಂಟ್ರಾಸ್ಟ್ ತನ್ನ ವರ್ಗದಲ್ಲೇ ಉತ್ತಮವಾಗಿದೆ ಮತ್ತು LCD ಪ್ಯಾನೆಲ್‌ನಲ್ಲಿ ವೀಡಿಯೊಗಳು ಯೋಗ್ಯವಾಗಿ ಕಾಣುತ್ತವೆ.

ಪ್ರೊಸೆಸರ್‌ ಪವರ್ ಯಾವುದು?

ಪ್ರೊಸೆಸರ್‌ ಪವರ್ ಯಾವುದು?

ನೋಕಿಯಾ G21 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇದೊಂದು ಎಂಟ್ರಿ ಲೆವೆಲ್ ಪ್ರೊಸೆಸರ್‌ ಆಗಿದ್ದು, ಅಧಿಕ ಶ್ರಮದಾಯಕ ಕೆಲಸಗಳನ್ನು ಬಳಕೆ ಮಾಡದ ಬಳಕೆದಾರರಿಗೆ ಈ ಪ್ರೊಸೆಸರ್‌ ಸೂಕ್ತ ಎನಿಸಲಿದೆ. ಹಾಗೆಯೇ 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 512 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಧಿಕ ಮೆಮೊರಿ ಆಪ್‌ಗಳ ಬಳಕೆ ವೇಗವಾಗಿ ಕಂಡುಬರುವುದಿಲ್ಲ.

ಕ್ಯಾಮೆರಾ ರಚನೆ ವಿಶೇಷ

ಕ್ಯಾಮೆರಾ ರಚನೆ ವಿಶೇಷ

ನೋಕಿಯಾ G21 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್ ಹೊಂದಿದೆ. ಇದು ಹಗಲು ಬೆಳಕಿನಲ್ಲಿ ಕ್ರಿಸ್ಪಿ ಫೋಟೊಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಪೋರ್ಟೆಟ್ ಫೋಟೊ ಹಾಗೂ ಮಂದ ಬೆಳಕಿನಲ್ಲಿ ಫೋಟೊಗಳು ಉತ್ತಮವಾಗಿ ಮೂಡಿಬರುತ್ತೆ. ಇನ್ನು ಇದು ತನ್ನ ವರ್ಗದಲ್ಲಿನ ಫೋನ್‌ಗಳಂತೆ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ನೋಕಿಯಾ G21 ಸ್ಮಾರ್ಟ್‌ಫೋನ್‌ 5,050mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಅಧಿಕ ವೀಡಿಯೊ ಮತ್ತು ಮ್ಯೂಸಿಕ್ ಪ್ಲೇಬ್ಯಾಕ್, ವೆಬ್ ಬ್ರೌಸಿಂಗ್, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಮತ್ತು ಸಾಮಾನ್ಯ ಬಳಕೆಯನ್ನು ಒಳಗೊಂಡ ಬಳಕೆಯೊಂದಿಗೆ ಸುಲಭವಾಗಿ ಒಂದು ದಿನ ಬ್ಯಾಟರಿ ಬಾಳಿಕೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, FM ರೇಡಿಯೋ, GPS/ A-GPS, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದು OZO ಸ್ಪಾಟಿಯಲ್ ಆಡಿಯೊ ಕ್ಯಾಪ್ಚರ್ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ ಎರಡು ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನೋಕಿಯಾ G21 ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 4GB RAM + 64GB ಇಂಟರ್‌ ಸ್ಟೋರೇಜ್ ರೂಪಾಂತರ ಆಯ್ಕೆಗೆ 12,999ರೂ.ಬೆಲೆ ಹೊಂದಿದೆ. ಇನ್ನು ಈ ಫೋನ್ 6GB + 128GB ಮಾದರಿಯ ಆಯ್ಕೆಗೆ 14,999ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಡಸ್ಕ್ ಮತ್ತು ನಾರ್ಡಿಕ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಇದು ನೋಕಿಯಾ.ಕಾಮ್‌ ಸೈಟ್ ಮೂಲಕ ಖರೀದಿಗೆ ಲಭ್ಯವಾಗಲಿದೆ. ಇದು ಆಯ್ದ ಚಿಲ್ಲರೆ ಅಂಗಡಿಗಳು ಮತ್ತು ಪ್ರಮುಖ ಇ-ಕಾಮರ್ಸ್ ಸೈಟ್‌ಗಳ ಮೂಲಕವೂ ಮಾರಾಟವಾಗಲಿದೆ.

Best Mobiles in India

English summary
Nokia G21 First Look: Long-Lasting Battery Phone at Budget Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X