ಸ್ಮಾರ್ಟ್ ಅಲ್ಲದ ಟಿವಿಗೆ ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಕ್ಯಾಸ್ಟ್ ಮಾಡುವುದು ಹೇಗೆ?

|

ಅದು ಡೇರ್ ಡೆವಿಲ್ ಇರಬಹುದು ಅಥವಾ ನೆಟ್ ಫ್ಲಿಕ್ಸ್, ಯೂಟ್ಯೂಬಿನ ಒಂದು ವೈರಲ್ ವೀಡಿಯೋ ಅನ್ನು ನೋಡಲು ನಿಮ್ಮ ಸ್ಮಾರ್ಟ್ ಫೋನ್ ಉತ್ತಮ ಸಾಧನ, ದುಬಾರಿ ಆ್ಯಪಲ್ ಟಿವಿ ಅಥವಾ ಸೆಟ್ ಟಾಪ್ ಬಾಕ್ಸ್ ಖರೀದಿಸುವ ಗೋಜಿಲ್ಲ.

ಸ್ಮಾರ್ಟ್ ಅಲ್ಲದ ಟಿವಿಗೆ ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಕ್ಯಾಸ್ಟ್

ಆದರೆ ಸ್ಮಾರ್ಟ್ ಫೋನುಗಳ ಪರದೆ ತುಂಬ ದೊಡ್ಡದಾಗಿರುವುದಿಲ್ಲವಲ್ಲ! ಚಲನಚಿತ್ರಗಳನ್ನು ನೋಡಲು ದೊಡ್ಡ ಪರದೆಯಿದ್ದರೆ ಉತ್ತಮ. ಬಹುತೇಕರ ಮನೆಯಲ್ಲಿ ಈಗ ದೊಡ್ಡ ಪರದೆಯ ಎಲ್.ಇ.ಡಿ ಅಥವಾ ಎಲ್.ಸಿ.ಡಿ ಟಿವಿಗಳಿವೆ, ನಿಮ್ಮ ಸ್ಮಾರ್ಟ್ ಫೋನನ್ನು ಟಿವಿಗೆ ಕ್ಯಾಸ್ಟ್ ಮಾಡಲು ಸಾಧ್ಯವಾದರೆ ಒಳ್ಳೆಯದಲ್ಲವೇ?

ಓದಿರಿ: ಎಚ್ಚರ: ರಿಲಾಯನ್ಸ್ ಜಿಯೋ 4ಜಿ ಯಲ್ಲಿ ಕೇಳುತ್ತಿದೆ ಅಪಸ್ವರದ ಸದ್ದು

ನಿಮ್ಮ ಸ್ಮಾರ್ಟ್ ಫೋನನ್ನು ಟಿವಿಗೆ ಸಂಪರ್ಕಿಸಲು ಎರಡು ವಿಧಾನಗಳಿವೆ - ವೈರುಗಳನ್ನು ಉಪಯೋಗಿಸಿ ಅಥವಾ ಯಾವುದೇ ವೈರುಗಳ ಸಹಾಯವಿಲ್ಲದೇ. ವೈರ್ ಲೆಸ್ ಸರಳವೇನೋ ಹೌದು ಆದರೆ ಕೇಬಲ್ಲುಗಳನ್ನು ಉಪಯೋಗಿಸುವುದೇ ಬಹಳಷ್ಟು ಸಂದರ್ಭದಲ್ಲಿ ಉತ್ತಮ ವಿಧಾನ.

ಹೆಚ್.ಡಿ.ಎಂ.ಐ

ಹೆಚ್.ಡಿ.ಎಂ.ಐ

"ಹೈ ಡೆಫಿನಿಷನ್ ಮಲ್ಟಿಮೀಡಿಯಾ ಇಂಟರ್ ಫೇಸ್" ಅಥವಾ ಹೆಚ್.ಡಿ.ಎಂ.ಐ ತುಂಬ ಸರಳವಾದ ವಿಧಾನ. ಸ್ಮಾರ್ಟ್ ಫೋನಿನ ಸಂಪರ್ಕದ ವಿಷಯಕ್ಕೆ ಬಂದರೆ, ಹೆಚ್.ಡಿ.ಎಂ.ಐ ಮೂರು ವಿಭಾಗದಲ್ಲಿ ಲಭ್ಯವಿದೆ - ಟೈಪ್ ಎ (ಪೂರ್ತಿ ಸೈಜಿನ, ಸಾಮಾನ್ಯ), ಟೈಪ್ ಸಿ (ಮಿನಿ) ಮತ್ತು ಟೈಪ್ ಡಿ (ಮೈಕ್ರೋ). ಟೈಪ್ ಎ ದೊಡ್ಡ ಸಾಧನಗಳಲ್ಲಿದ್ದರೆ, ಟೈಪ್ ಸಿ ಮತ್ತು ಟೈಪ್ ಡಿ ಪೋರ್ಟಬಲ್ ಸಾಧನಗಳಲ್ಲಿದೆ.

ಎಂ.ಹೆಚ್.ಎಲ್.

ಎಂ.ಹೆಚ್.ಎಲ್.

ನಿಮ್ಮ ಆ್ಯಂಡ್ರಾಯ್ಡ್ ಸಾಧನವು ಹೆಚ್.ಡಿ.ಎಂ.ಐ ಪೋರ್ಟನ್ನು ಬೆಂಬಲಿಸದೇ ಇದ್ದರೆ, ಎಂ.ಹೆಚ್.ಎಲ್ ಅಥವಾ "ಮೊಬೈಲ್ ಹೈ ಡೆಫಿನಿಷನ್ ಲಿಂಕ್" ಉಪಯೊಗಿಸಿಕೊಂಡು ಹೆಚ್.ಡಿ.ಎಂ.ಐ ಕೇಬಲ್ ಬಳಸಬಹುದು. ಈ ಎಂ.ಹೆಚ್.ಎಲ್ ಕೇಬಲ್ ನಿಮ್ಮ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ಟಿನ ಮೈಕ್ರೋ ಯು.ಎಸ್.ಬಿ ಪೋರ್ಟಿಗೆ ಕೂರುತ್ತದೆ ಮತ್ತು ಇನ್ನೊಂದು ಬದಿಯಲ್ಲಿ ಹೆಚ್.ಡಿ.ಎಂ.ಐ ಕೇಬಲ್ಲನ್ನು ಸಂಪರ್ಕಿಸುತ್ತದೆ, ಅದರ ಮೂಲಕ ಟಿವಿಗೆ ಸಂಪರ್ಕ ಕಲ್ಪಿಸಬಹುದು.

ಕ್ರೋಮ್ ಕ್ಯಾಸ್ಟ್.

ಕ್ರೋಮ್ ಕ್ಯಾಸ್ಟ್.

ಗೂಗಲ್ಲಿನ ಕ್ರೋಮ್ ಕ್ಯಾಸ್ಟ್ ನಿಮ್ಮ ಸ್ಮಾರ್ಟ್ ಫೋನನ್ನು ಟಿವಿಯಲ್ಲಿ ನೋಡುವುದಕ್ಕೆ ಇರುವ ಅತ್ಯಂತ ಅಗ್ಗದ ವಿಧಾನ. ವೈಫೈ ಮೂಲಕ ನಿಮ್ಮ ಸ್ಮಾರ್ಟ್ ಫೋನ್ / ಟ್ಯಾಬ್ಲೆಟ್ಟಿನಿಂದಲೇ ಇದನ್ನು ನಿಯಂತ್ರಿಸಬಹುದು. ಕ್ರೋಮ್ ಕ್ಯಾಸ್ಟ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಕ್ರೋಮ್ ಕ್ಯಾಸ್ಟ್, ಆ್ಯಂಡ್ರಾಯ್ಡ್ 2.3 ಮತ್ತು ಉನ್ನತ ಆವೃತ್ತಿಯ ಫೋನುಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ವಿಂಡೋಸ್ 7 ಹಾಗೂ 8 ಮತ್ತು ಮ್ಯಾಕ್ ಒಸ್ 10.7 ನಂತರ ಆವೃತ್ತಿಗಳಲ್ಲಿರುವ ಕ್ರೋಮ್ ಬ್ರೌಸರ್ ಮತ್ತು ಕ್ರೋಮ್ 28ರ ನಂತರದ ಕ್ರೋಮ್ ಬುಕ್ಕುಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಮಿರಾಕ್ಯಾಸ್ಟ್.

ಮಿರಾಕ್ಯಾಸ್ಟ್.

ನಿಮ್ಮಲ್ಲಿ ಆ್ಯಂಡ್ರಾಯ್ಡ್ 4.2 ಅಥವಾ ನಂತರದ ಆ್ಯಂಡ್ರಾಯ್ಡ್ ಆವೃತ್ತಿಗಳಿದ್ದರೆ, ವೈರ್ ಲೆಸ್ ಪರದೆಯೆಂಬ ನೇರ ಆಯ್ಕೆ ಲಭ್ಯವಿದೆ. ಜೊತೆಗೆ ನಿಮ್ಮ ಟಿವಿಯಲ್ಲಿ 'ಮಿರರಿಂಗ್' ತಂತ್ರಜ್ಞಾನವಿರಬೇಕು. ನಿಮ್ಮ ಆ್ಯಂಡ್ರಾಯ್ಡ್ ಸಾಧನಗಳ ಮೂಲಕ ವೀಡಿಯೋ ಮತ್ತು ಚಿತ್ರಗಳನ್ನು ವೀಕ್ಷಿಸಲು ಮಿರಾಕ್ಯಾಸ್ಟ್ ಒಂದು ಉತ್ತಮ ಆಯ್ಕೆ. ಇದರಲ್ಲಿರುವ ಹೆಚ್.264 ವೀಡಿಯೋ ಟ್ರಾನ್ಸ್ ಮಿಷನ್ ತಂತ್ರಜ್ಞಾನ ಡಾಟಾ ಗಾತ್ರವನ್ನು ಕಡಿಮೆಗೊಳಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಚಿತ್ರಗಳನ್ನೂ ನೀಡುತ್ತದೆ.

Best Mobiles in India

Read more about:
English summary
Whether it is a Daredevil on Netflix, some viral video on Youtube, or watching the TED talks, your smartphone is a great way to access a huge amount of content without having to invest in some costly Apple TV or Set-Top box.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X