ಊಹಿಸಲೂ ಸಾಧ್ಯವಿಲ್ಲದ ಬೆಲೆಗೆ ಲಾಂಚ್ ಆಯ್ತು ಒನ್‌ಪ್ಲಸ್ 5T: ವಿಶೇಷತೆಗಳ ಕುರಿತ ಕಂಪ್ಲಿಟ್ ಸ್ಟೋರಿ

|

ಬಹುದಿನಗಳಿಂದ ಕುತೂಹಲ ಹುಟ್ಟಿಸಿದ್ದ ಒನ್‌ಪ್ಲಸ್ ಕಂಪನಿಯ ಟಾಪ್ ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 5T ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ ಫೋನ್ ಅನಾವರಣಗೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಮ್ಮೆಗೆ ಕಾಣಿಸಿಕೊಳ್ಳುವ ಈ ಸ್ಮಾರ್ಟ್‌ಪೋನ್ ಭಾರತದಲ್ಲಿ ನವೆಂಬರ್ 21 ರಿಂದ ರಾರಾಜಿಸಲಿದೆ.

ಊಹಿಸಲೂ ಸಾಧ್ಯವಿಲ್ಲದಷ್ಟು ಕಡಿಮೆ ಬೆಲೆಗೆ ಲಾಂಚ್ ಆಯ್ತು ಒನ್‌ಪ್ಲಸ್ 5T

ಓದಿರಿ: ನಿಮ್ಮ ಮಕ್ಕಳ ಫೋನ್‌ನಲ್ಲಿ ಈ ಆಪ್‌ ಹಾಕಿ: ಅಶ್ಲೀಲತೆ ಹುಡುಕಿದರೆ ದೇವರನಾಮ ಹಾಡಲಿದೆ...!

ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿರುವ ಈ ಸ್ಮಾರ್ಟ್‌ಫೋನ್, ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿತ್ತು. ಈಗಾಗಲೇ ಭಾರತ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಅಭಿಮಾನಿಗಳು ಒನ್‌ಪ್ಲಸ್ 5T ಸ್ಮಾರ್ಟ್‌ ಫೋನ್ ಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ ಫೋನ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಮತ್ತು ಲಭ್ಯತೆ:

ಬೆಲೆ ಮತ್ತು ಲಭ್ಯತೆ:

ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದೆ. 6GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಆವೃತ್ತಿಯ ಬೆಲೆ ರೂ. 32,999 ಆಗಿದೆ. ಇದೇ ಮಾದರಿಯಲ್ಲಿ 8GB RAM ಮತ್ತು 128GB ಇಂಟರ್ನಲ್ ಮೊಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ರೂ. 37,999ಕ್ಕೆ ದೊರೆಯಲಿದೆ.

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಲಾಚಿಂಗ್ ಆಫರ್:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಲಾಚಿಂಗ್ ಆಫರ್:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಳಕೆದಾರರಿಗೆ 12 ತಿಂಗಳ ಆಕ್ಸಿಡೆಂಟಲ್ ಡ್ಯಾಮೆಜ್ ಇನ್‌ಶ್ಯೂರೆನ್ಸ್ ನೀಡಲಿದೆ. ಅಲ್ಲದೇ ಇದಕ್ಕಾಗಿ ಕೊಟೆಕ್ 811 ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಅಲ್ಲದೇ ಅಮೆಜಾನ್ ಪ್ರೈಮ್ ಮತ್ತು ಕಿಂಡಲ್ ಉಚಿತ ಬಳಕೆಗೆ ದೊರೆಯಲಿದೆ. ಐಡಿಯಾ ಒನ್‌ಪ್ಲಸ್ 5T ಬಳಕೆದಾರರಿಗೆ 1008 GB ಡೇಟಾವನ್ನು ಬಳಕೆಗೆ ನೀಡಲಿದೆ.

ರೂ.1500 ಡಿಸ್ಕೌಂಟ್:

ರೂ.1500 ಡಿಸ್ಕೌಂಟ್:

ಇದಲ್ಲದೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್‌ನಲ್ಲಿ HDFC ಕಾರ್ಡ್ ಮೂಲಕ ಖರೀದಿಸಿದರೆ ರೂ. 1500 ಕಡಿತವನ್ನು ಪಡೆಯಬಹುದಾಗಿದೆ. ಈ ಸ್ಮಾರ್ಟ್‌ಫೋಣ್ ಅಮೆಜಾನ್ ನಲ್ಲಿ ಮಾತ್ರವೇ ಲಭ್ಯವಿರಲಿದೆ ಎನ್ನಲಾಗಿದೆ.

6 ಇಂಚಿನ ಡಿಸ್‌ಪ್ಲೇ:

6 ಇಂಚಿನ ಡಿಸ್‌ಪ್ಲೇ:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನಲ್ಲಿ 18:9 ಅನುಪಾತದ 6.01 ಇಂಚಿನ FHD + ಅಮೊಲೈಡ್ ಡಿಸ್‌ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ಕಾಣಬಹುದಾಗಿದೆ. ಇದು ಬ್ರಜಿಲ್ ಲೈಸ್ ವಿನ್ಯಾಸದಿಂದ ಕೂಡಿದೆ. ಅಲ್ಲದೇ 2.45GHz ವೇಗದ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅನ್ನು ಒಳಗೊಂಡಿದೆ.

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಇದಲ್ಲದೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 16 + 20 MP ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಅಳವಡಿಸಲಾಗಿದೆ. ಜೊತೆಗೆ LED ಫ್ಲಾಷ್ ಸಹ ನೀಡಲಾಗಿದೆ. ಈ ಕ್ಯಾಮೆರಾದಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಿದ್ದು, ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದೆ.

ಉತ್ತಮ ಬ್ಯಾಟರಿ:

ಉತ್ತಮ ಬ್ಯಾಟರಿ:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನಲ್ಲಿ 3300mAh ಬ್ಯಾಟರಿಯನ್ನು ನೀಡಲಾಗಿದ್ದು, ಜೊತೆಗೆ ವೇಗದ ಚಾರ್ಜಿಂಗ್ ಗಾಗಿ ಡ್ಯಾಷ್ ಚಾರ್ಜರ್ ಸಹ ಇದೆ. ಈ ಫೋನ್ ಮೆಟಲ್ ಯುನಿ ಬಾಡಿಯನ್ನು ಹೊಂದಿದ್ದು, 162 ಗ್ರಾಮ್ ತೂಕದಿಂದ ಕೂಡಿದೆ ಎನ್ನಲಾಗಿದೆ.

Best Mobiles in India

English summary
OnePlus 5T With 6.01-Inch 18:9 Display, 8GB of RAM Launched: Price in India, Specifications, Release Date. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X