ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌!..ಗ್ರಾಹಕರ ಫೇವರೇಟ್ ಯಾವುದು ಗೊತ್ತಾ?

|

ಬಹುನಿರೀಕ್ಷಿತ ಒನ್‌ಪ್ಲಸ್‌ 7 ಮತ್ತು ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿದ್ದು, ಅವುಗಳಲ್ಲಿ ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ ಫ್ಲ್ಯಾಗ್‌ಶಿಪ್‌ ಮಾದರಿಯಲ್ಲಿ ಗುರುತಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಈಗ ಪ್ರಮುಖ ಮೊಬೈಲ್‌ ಕಂಪನಿಗಳು ಸಹ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದು, ಆದರೆ ಒನ್‌ಪ್ಲಸ್‌ 7 ಪ್ರೊ ಭಿನ್ನವಾಗಿ ಗ್ರಾಹಕರನ್ನು ಆಕರ್ಷಿಸುವ ಗಮನಾರ್ಹ ಲಕ್ಷಣಗಳನ್ನು ಹೊಂದಿದೆ. ಇದೀಗ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಪೋನ್‌ಗಳಲ್ಲಿ ಪೈಪೋಟಿ ಸಮರ ಶುರುವಾಗಿದೆ.

ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌!..ಗ್ರಾಹಕರ ಫೇವರೇಟ್ ಯಾವುದು ಗೊತ್ತಾ?

ಹೌದು, ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ ಒಟ್ಟು ಮೂರು ವೇರಿಯಂಟ್ ಆಯ್ಕೆಗಳಲ್ಲಿ ಬಿಡುಗಡೆ ಆಗಿದ್ದು, ಆರಂಭಿಕ ವೇರಿಯಂಟ್ 6GB RAM+128GB ಬೆಲೆಯು 48,999ರೂ.ಗಳು ಆಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10, ಆಪಲ್ ಐಫೋನ್ XR ಮತ್ತು ಗೂಗಲ್ ಪಿಕ್ಸಲ್ 3a XL ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಾಂಚ್ ಆಗಿರುವುದು ಸ್ಯಾಮ್‌ಸಂಗ್, ಗೂಗಲ್, ಮತ್ತು ಐಫೋನ್‌ ಕಂಪನಿಗಳಿಗೆ ಭಾರಿ ಹೊಡೆತ ಕೊಡುವ ಸಾಧ್ಯತೆಗಳಿವೆ.

ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌!..ಗ್ರಾಹಕರ ಫೇವರೇಟ್ ಯಾವುದು ಗೊತ್ತಾ?

ಈಗಾಗಲೇ ಒನ್‌ಪ್ಲಸ್‌ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದಿದ್ದು, ತನ್ನದೆ ಅಭಿಮಾನಿಗಳನ್ನು ಹೊಂದಿದೆ. ಹಾಗೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10, ಆಪಲ್ ಐಫೋನ್ XR ಮತ್ತು ಗೂಗಲ್ ಪಿಕ್ಸಲ್ 3a XL ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಟಾಂಗ್ ನೀಡಲಿದೆ ಮತ್ತು ಫ್ಲ್ಯಾಗ್‌ಶಿಪ್ ಪ್ರಿಯರನ್ನು ಸೆಳೆಯಲಿದೆ. ಹಾಗಾದರೇ ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ ಮತ್ತು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳ ನಡುವಿನ ವ್ಯತ್ಯಾಸಗಳ ಹೈಲೈಟ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?

ಡಿಸ್‌ಪ್ಲೇ

ಡಿಸ್‌ಪ್ಲೇ

ಒನ್‌ಪ್ಲಸ್‌ 7 ಪ್ರೊ : 6.67 ಇಂಚಿನ AMOLED QHD+ ಸ್ಕ್ರೀನ್ (3120 x 1440 ರೆಸಲ್ಯೂಶನ್)
ಐಫೋನ್ XR : 6.1 ಇಂಚಿನ LCD ಸ್ಕ್ರೀನ್.(1792 x 828 ರೆಸಲ್ಯೂಶನ್)
ಪಿಕ್ಸಲ್ 3a XL : 6 ಇಂಚಿನ OLED FHD+ ಸ್ಕ್ರೀನ್. (2160 x 1080 ರೆಸಲ್ಯೂಶನ್)
ಗ್ಯಾಲ್ಯಾಕ್ಸಿ ಎಸ್‌10 : 6.1 ಇಂಚಿನ AMOLED QHD+ ಸ್ಕ್ರೀನ್ (3040 x 1440 ರೆಸಲ್ಯೂಶನ್)

ಪ್ರೊಸೆಸರ್

ಪ್ರೊಸೆಸರ್

ಒನ್‌ಪ್ಲಸ್‌ 7 ಪ್ರೊ : ಕ್ವಾಲಮ್ ಸ್ನ್ಯಾಪ್‌ಡ್ರಾಗನ್ 855 SoC
ಐಫೋನ್ XR : A12 ಬೈಯೊನಿಕ್ SoC
ಪಿಕ್ಸಲ್ 3a XL : ಕ್ವಾಲಮ್ ಸ್ನ್ಯಾಪ್‌ಡ್ರಾಗನ್ 670 SoC
ಗ್ಯಾಲ್ಯಾಕ್ಸಿ ಎಸ್‌10 : Exynos 9820 SoC

ಮೆಮೊರಿ

ಮೆಮೊರಿ

ಒನ್‌ಪ್ಲಸ್‌ 7 ಪ್ರೊ : 6GB, 8GB, 12GB RAM ಹಾಗೂ 128GB ಮತ್ತು 256GB
ಐಫೋನ್ XR : 3GB RAM ಹಾಗೂ 64GB, 128GB ಮತ್ತು 256GB
ಪಿಕ್ಸಲ್ 3a XL : 4GB RAM ಮತ್ತು 64GB ಆಯ್ಕೆ ಮಾತ್ರ
ಗ್ಯಾಲ್ಯಾಕ್ಸಿ ಎಸ್‌10 : 8GB RAM ಹಾಗೂ 128GB ಮತ್ತು 512GB ಆಯ್ಕೆ ಮಾತ್ರ

ಕ್ಯಾಮೆರಾ

ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ : 48MP (f/1.6) + 8MP (f/2.4) + 16MP (f/2.2 )
ಐಫೋನ್ XR : 12MP ವೈಲ್ಡ್‌ ಆಂಗಲ್ ಲೆನ್ಸ್‌ (f/1.8 ಅಪರ್ಚರ್)
ಪಿಕ್ಸಲ್ 3a XL : 12.2 MP ಡ್ಯುಯಲ್‌ ಪಿಕ್ಸಲ್ (f/1.8 ಅಪರ್ಚರ್)
ಗ್ಯಾಲ್ಯಾಕ್ಸಿ ಎಸ್‌10 : 12MP (f/1.5-2.4) + 16MP (f/2.2) + 12MP (f/2.4)

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ : 16MP ಮತ್ತು f/2.0 ಅಪರ್ಚರ್
ಐಫೋನ್ XR : 7MP ಮತ್ತು f/2.2 ಅಪರ್ಚರ್
ಪಿಕ್ಸಲ್ 3a XL : 8MP ಮತ್ತು f/2.0 ಅಪರ್ಚರ್
ಗ್ಯಾಲ್ಯಾಕ್ಸಿ ಎಸ್‌10 : 10MP ಮತ್ತು f/1.9 ಅಪರ್ಚರ್

ಬ್ಯಾಟರಿ

ಬ್ಯಾಟರಿ

ಒನ್‌ಪ್ಲಸ್‌ 7 ಪ್ರೊ : 4,000mAh
ಐಫೋನ್ XR : 2,945mAh (as per iFixit)
ಪಿಕ್ಸಲ್ 3a XL : 3,700mAh
ಗ್ಯಾಲ್ಯಾಕ್ಸಿ ಎಸ್‌10 : 3,400mAh

ಬೆಲೆ

ಬೆಲೆ

ಒನ್‌ಪ್ಲಸ್‌ 7 ಪ್ರೊ : .(6GB+128GB) 48,999ರೂ, (8GB+256GB) 52,999ರೂ, ಮತ್ತು (12GB+256GB) 57,999ರೂ.ಗಳು
ಐಫೋನ್ XR : (64GB) 59,900, (128GB) 64,900, ಮತ್ತು (256GB) 74,900ರೂ.ಗಳು
ಪಿಕ್ಸಲ್ 3a XL : (4GB+64GB) 44,999ರೂ.ಗಳು
ಗ್ಯಾಲ್ಯಾಕ್ಸಿ ಎಸ್‌10 : (8GB+128GB) 66,900, ಮತ್ತು (8GB+512GB) 84,900ರೂ.ಗಳು

ಕೊನೆಯ ಮಾತು

ಕೊನೆಯ ಮಾತು

ಒನ್‌ಪ್ಲಸ್‌, ಸ್ಯಾಮ್‌ಸಂಗ್, ಆಪಲ್ ಮತ್ತು ಗೂಗಲ್ ಕಂಪನಿಗಳ ಈ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಪೋನ್‌ಗಳ ಪ್ರಮುಖ ಕೀ ಹೈಲೈಟ್ಸ್‌ ಗಮನಿಸಿದಾಗ ಇದೇ ಮೇ 14ರಂದು ಬಿಡುಗಡೆ ಆಗಿರುವ ಒನ್‌ಪ್ಲಸ್‌ ಸಂಸ್ಥೆಯ ಒನ್‌ಪ್ಲಸ್‌ 7 ಪ್ರೊ ತನ್ನ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಆಶ್ವರ್ಯವಿಲ್ಲ.

ಓದಿರಿ : ಬಿಡುಗಡೆ ಆಗಿ ಕೇವಲ 72 ಗಂಟೆಗಳಲ್ಲಿ ದಾಖಲೆ ಬರೆದ ಹೊಸ 'ಗೇಮ್‌ ಆಫ್ ಪೀಸ್' ಗೇಮ್‌! ಓದಿರಿ : ಬಿಡುಗಡೆ ಆಗಿ ಕೇವಲ 72 ಗಂಟೆಗಳಲ್ಲಿ ದಾಖಲೆ ಬರೆದ ಹೊಸ 'ಗೇಮ್‌ ಆಫ್ ಪೀಸ್' ಗೇಮ್‌!

Best Mobiles in India

English summary
OnePlus 7 Pro vs iPhone XR vs Google Pixel 3a XL vs Samsung Galaxy S10: The battle of flagship phones..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X