ನಾಳೆಯಿಂದ 200ಡಿಗ್ರಿ ಸೆಲ್ಫಿ ಎಕ್ಸ್‌ಪರ್ಟ್ "ಒಪ್ಪೊ ಎಫ್ 3 ಪ್ಲಸ್" ಬುಕಿಂಗ್ ಸ್ಟಾರ್ಟ್!!!

Written By:

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಹೆಸರುಗಳಿಸುತ್ತಿರುವ ಒಪ್ಪೊ ಕಂಪೆನಿ ಇದೀಗ ಗ್ರೂಪ್ ಸೆಲ್ಫಿ ಎಕ್ಸ್‌ಪರ್ಟ್ " ಒಪ್ಪೊ ಎಫ್ 3 ಪ್ಲಸ್ "ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.!! "ಒನ್ ಫಾರ್ ಸೆಲ್ಫಿ, ಒನ್ ಫಾರ್ ಗ್ರೂಪ್ ಸೆಲ್ಫಿ" ಪರಿಕಲ್ಪನೆಯಲ್ಲಿ ಈ ನೂತನ ಮೊಬೈಲ್ ತಯಾರಾಗಿದ್ದು, ಇದೇ ಏಪ್ರಿಲ್ 1 ನೇ ತಾರೀಖಿನಿಂದ ಆನ್‌ಲೈನ್‌ನಲ್ಲಿ ಬುಕಿಂಗ್ ಆರಂಭವಾಗುತ್ತಿದೆ.!!

ಜಿಯೋ ನಂಬರ್ ಚೆಕ್ ಮಾಡೊದು ಹೇಗೆ?

ಪ್ರಪಂಚದಲ್ಲಿ ಇದೇ ಮೊದಲು ಸೆಲ್ಫಿಗಾಗಿಯೇ ಇಷ್ಟೊಂದು ತಂತ್ರಜ್ಞಾನವನ್ನು ಬಳಕೆ ಮಾಡಲಾದ ಸ್ಮಾರ್ಟ್‌ಫೋನ್ ಇದಾಗಿದ್ದು, 200ಡಿಗ್ರಿ ವೈಡ್-ಆಂಗಲ್ ಲೆನ್ಸ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತಗೆ ಡ್ಯುಯಲ್ ಫ್ರಂಟ್ ಕ್ಯಾಮೆರಾ ಹೊಂದಿರುವ ಸೆಲ್ಫಿ ಎಕ್ಸ್‌ಪರ್ಟ್ " ಒಪ್ಪೊ ಎಫ್ 3 ಪ್ಲಸ್ "ಸ್ಮಾರ್ಟ್‌ಫೋನ್ ಬೇರೆ ಏನೆಲ್ಲಾ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ರೂಪ್ ಸೆಲ್ಫಿ ಮೋಡ್!!

ಗ್ರೂಪ್ ಸೆಲ್ಫಿ ಮೋಡ್!!

ಮೂವರಿಗಿಂತ ಹೆಚ್ಚು ಜನ ಸೆಲ್ಫಿ ತೆಗೆದುಕೊಳ್ಳುವಾಗ, ಸೆಲ್ಫಿ ಎಕ್ಸ್‌ಪರ್ಟ್ " ಒಪ್ಪೊ ಎಫ್ 3 ಪ್ಲಸ್ " ಗ್ರೂಪ್ ಸೆಲ್ಫಿ ಮೋಡ್‌ಗೆ ಬದಲಾಗಲು ಸೂಚಿಸುತ್ತದೆ. 120ಡಿಗ್ರಿ ವೈಡ್-ಆಂಗಲ್ ಲೆನ್ಸ್ ಮೂಲಕ ಗ್ರೂಪ್ ಸೆಲ್ಫಿ ತೆಗೆಯಬಹುದಾದ್ದರಿಂದ ಅತ್ಯುತ್ತಮ ಗ್ರೂಪ್ ಸೆಲ್ಫಿ ತೆಗೆಯಲು ಇದೇ ಬೆಸ್ಟ್ ಸ್ಮಾರ್ಟ್‌ಫೋನ್

ಬ್ಯೂಟಿಫೈ 4.0 ಸೆಲ್ಫಿ ಮೆನಿಯಾ!!

ಬ್ಯೂಟಿಫೈ 4.0 ಸೆಲ್ಫಿ ಮೆನಿಯಾ!!

16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಸೆಲ್ಫಿ ಎಕ್ಸ್‌ಪರ್ಟ್ " ಒಪ್ಪೊ ಎಫ್ 3 ಪ್ಲಸ್ ಬ್ಯೂಟಿಫೈ 4.0 ಸೆಲ್ಫಿ ತತ್ರಜ್ಞಾನವನ್ನು ಹೊಂದಿದೆ. ಪ್ರತಿ ಚಿತ್ರವೂ ಪಕ್ವವಾಗಿ ತೆಗೆಯಬಹುದಾದ ಈ ತಂತ್ರಜ್ಞಾವನ್ನು ಹೊಂದಿರುವ ಏಕೈಕ ಸ್ಮಾರ್ಟ್‌ಫೋನ್ ಇದಾಗಿದೆ.

ಒಪ್ಪೋ ಎಫ್‌3 ಪ್ಲಸ್ ವಿನ್ಯಾಸ ಹೇಗಿದೆ?

ಒಪ್ಪೋ ಎಫ್‌3 ಪ್ಲಸ್ ವಿನ್ಯಾಸ ಹೇಗಿದೆ?

ಮೊದಲೇ ಹೇಳಿದಂತೆ ಒಂದು ಸ್ಮಾರ್ಟ್‌ಫೋನ್ ಹೊಂದಿರಬೇಕಾದ ಎಲ್ಲಾ ವಿಶೆಷತೆಗಳನ್ನು ಹೋಂದಿರುವ ಒಪ್ಪೊ ಎಫ್‌3 ಪ್ಲಸ್ ಸ್ಮಾರ್ಟ್‌ಫೋನ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ. ಮೆಟಲ್ ಬಾಡಿ,.ಆರು ಇಂಚ್ ಜೊತೆಗೆ 2.5D ಗೊರಿಲ್ಲಾ ಗ್ಲಾಸ್ ಡಿಸ್‌ಪ್ಲೇ ಹೊಂದಿರುವ ಎಫ್‌3 ಪ್ಲಸ್ ಸುರಕ್ಷತೆ ಜೊತೆಗೆ ಮತ್ತೊಂದು ಹೆಸರಾಗಿದ್ದು, ಗಟ್ಟಿಮುಟ್ಟಾದ ಸ್ಮಾರ್ಟ್‌ಫೋನ್ ಆಗಿದೆ.!!

ಬ್ಯಾಟರಿ ಹೇಗಿದೆ.?

ಬ್ಯಾಟರಿ ಹೇಗಿದೆ.?

ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಟರಿಯೇ ಜೀವ. ಹಾಗಾಗಿ, ಒಪ್ಪೋ 4000Amh ಬ್ಯಾಟರಿಯನ್ನು ಹೊಂದಿದ್ದು, ಎರಡು ದಿವಸಗಳ ಚಾರ್ಜ್ ಅನ್ನು ನೀಡಲಿದೆ.!! ಇನ್ನು ಪವರ್‌ ಸೇವಿಂಗ್ ಮೂಡ್ ನಂತರ ಅತ್ಯಾಧುನಿಕ ತಂತ್ರಜ್ಞಾನವೂ ಒಪ್ಪೊ ಎಫ್‌3 ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ ತುಂಬಿಕೊಂಡಿವೆ.

ಬೆಲೆ ಎಷ್ಟು? ಖರೀದಿಸಲು ಉತ್ತಮ ಸ್ಮಾರ್ಟ್‌ಫೋನ್ ಏಕೆ?

ಬೆಲೆ ಎಷ್ಟು? ಖರೀದಿಸಲು ಉತ್ತಮ ಸ್ಮಾರ್ಟ್‌ಫೋನ್ ಏಕೆ?

ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಆಗಿರುವ ಒಪ್ಪೊ ಎಫ್‌3 ಪ್ಲಸ್ 30 ಸಾವಿರ ರೂಪಾಯಿ ಬೆಲೆ ಹೊಂದಿದ್ದು, ಹೈ ಎಂಡ್‌ ಫೀಚರ್ ಮೊಬೈಲ್‌ಗಳಲ್ಲಿಯೇ ಅತ್ಯಂತ ಕಡಿಮೆ ಬಜೆಟ್‌ ಸ್ಮಾರ್ಟ್‌ಫೋನ್ ಆಗಿದೆ. ಎಫ್‌3 ಪ್ಲಸ್ ಹೊಂದಿರುವ ಫೀಚರ್‌ಗಳನ್ನು ಹೊಂದಿರುವ ಇತರೆ ಸ್ಮಾರ್ಟ್‌ಫೋನ್‌ಗಳು 50 ಸಾವಿರ ಬೆಲೆ ಹೊಂದಿದ್ದು, ಖರೀದಿಸಲು ಇದು ಉತ್ತಮ ಸ್ಮಾರ್ಟ್‌ಫೋನ್ ಎಂದು ಹೇಳಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OPPO has launched yet another class leading product the F3 Plus Selfie . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot