'ರೆನೋ' ಸ್ಮಾರ್ಟ್‌ಪೋನ್ ರಿಲೀಸ್‌ಗೆ ರೆಡಿ!..ಆಗಲಿದೆಯೇ ಸೆಲ್ಫಿ ಪ್ರಿಯರ ಫೇವರೆಟ್ ಬ್ಯ್ರಾಂಡ್‌.?

|

ಸೆಲ್ಫಿ ಎಕ್ಸ್‌ಪರ್ಟ್ ಎಂದೇ ಗುರುತಿಸಿಕೊಂಡಿರುವ 'ಒಪ್ಪೊ' ಕಂಪನಿ ಹೊಸದಾಗಿ 'ರೆನೋ' ಹೆಸರಿನ ಉಪಬ್ಯ್ರಾಂಡ್‌ ಅನ್ನು ಪರಿಚಯಿಸುವ ಸುದ್ದಿ ಭಾರೀ ಗಮನಸೆಳೆದಿದೆ. ಆದರೆ ರೆನೋ ಬ್ಯ್ರಾಂಡ್‌ ಮೂಲಕ ಬಿಡುಗಡೆ ಆಗುತ್ತಿರುವ ಹೊಸ ಸ್ಮಾರ್ಟ್‌ಫೋನಿನ 'ಸೆಲ್ಫಿ ಕ್ಯಾಮೆರಾ' ಫೀಚರ್ ಅದ್ಬುತವಾಗಿರಲಿದ್ದು, ಈ ಮೂಲಕ ಒಪ್ಪೊ 'ಸೆಲ್ಫಿ ಎಕ್ಸ್‌ಪರ್ಟ್' ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುವ ಪ್ರಯತ್ನದಲ್ಲಿದೆ.

'ರೆನೋ' ಪೋನ್ ರಿಲೀಸ್‌ಗೆ ರೆಡಿ!.ಆಗಲಿದೆಯೇ ಸೆಲ್ಫಿ ಪ್ರಿಯರ ಫೇವರೆಟ್ ಬ್ಯ್ರಾಂಡ್‌.

ಹೌದು, ಇದೇ ಏಪ್ರಿಲ್ 10 ರಂದು ಚೀನಾದಲ್ಲಿ ಅಧಿಕೃತವಾಗಿ 'ರೆನೋ ಬ್ರ್ಯಾಂಡ್' ರಿಲೀಸ್‌ ಆಗಲಿದ್ದು, ‌ಕಂಪನಿಯ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಸಹ ಘೋಷಣೆ ಮಾಡಲಾಗುವುದು ಎನ್ನಲಾಗುತ್ತಿದೆ. ರೆನೋ ಸ್ಮಾರ್ಟ್‌ಫೋನಿನ ಸೆಲ್ಫಿ ಕ್ಯಾಮೆರಾ ವಿಶೇಷವಾಗಿರಲಿದೆ ಎನ್ನುವ ವಿಡಿಯೊ ಲೀಕ್ ಆಗಿದ್ದು, ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಮುಂದೆ ರೆನೋ ಬ್ರ್ಯಾಂಡ್‌ ಮೂಲಕ ಪ್ರತ್ಯಕವಾಗಿ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ ಮಾಡಲಿದೆ.

'ರೆನೋ' ಪೋನ್ ರಿಲೀಸ್‌ಗೆ ರೆಡಿ!.ಆಗಲಿದೆಯೇ ಸೆಲ್ಫಿ ಪ್ರಿಯರ ಫೇವರೆಟ್ ಬ್ಯ್ರಾಂಡ್‌.

ಈಗಾಗಲೇ ಬಿಡುಗಡೆ ಆಗಿರುವ 'ರೆನೋದ ಲೋಗೋ' ಯುವಸಮೂಹವನ್ನು ಸೆಳೆಯುತ್ತಿದ್ದು, ಇದು ಒಪ್ಪೊ ಸ್ಮಾರ್ಟ್‌ಫೋನ್‌ ಡಿಸೈನ್‌ಗಿಂತ ವಿಶೇಷವಾದ ಡಿಸೈನ್‌ನಲ್ಲಿ ಬರಲಿದೆ. ಕ್ಯಾಮೆರಾ ಮತ್ತು ಪ್ರೊಸೆಸರ್‌ ಫೀಚರ್ಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಂದು ತಿಳಿದು ಬಂದಿದೆ. ಹಾಗಾದರೇ ಒಪ್ಪೊ ಕಂಪನಿಯ ಉಪ ಬ್ರ್ಯಾಂಡ್‌ 'ರೆನೋ' ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ ಮತ್ತು ಲೀಕ್ ವಿಡಿಯೊ ಹೇಗಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ರೆನೋ ಕಂಪನಿಯ ಮೊದಲ ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಹೈ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿರಲಿದೆ. ಈ ಫೋನ್ ಡಿಸ್‌ಪ್ಲೇ ಸುತ್ತಲೂ ಅತೀ ಕಡಿಮೆ ಅಂಚಿನ ಹೊಂದಿರಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಒಪ್ಪೊ ಕಂಪನಿಯ ಬರಲಿರುವ ರೆನೋ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಸ್ತುತ ಚಾಲ್ತಿ ಇರುವ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ ಅನ್ನು ಕಾಣಬಹುದಾಗಿದ್ದು, ಈ ಉನ್ನತ ಪ್ರೊಸೆಸರ್‌ನಲ್ಲಿ ಸ್ಮಾರ್ಟ್‌ಫೋನ್‌ ಕಾರ್ಯದಕ್ಷತೆ ಅದ್ಬುತವಾಗಿರಲಿದೆ. ಅತ್ಯುತ್ತಮ ಪ್ರೊಸೆಸರ್‌ ಸ್ಮಾರ್ಟ್‌ಫೋನ್ ಕಾರ್ಯದ ವೇಗವನ್ನು ಹೆಚ್ಚಿಸುತ್ತದೆ ಹಾಗೂ ಗೇಮ್ಸ್‌ಗೆ ಪೂರಕವಾಗಿರಲಿದೆ.

ಕ್ಯಾಮೆರಾ

ಕ್ಯಾಮೆರಾ

ರೆನೋ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ 48 ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾಗಳನ್ನು ಹೊಂದಿರಲಿದ್ದು, ಇದರೊಂದಿಗೆ 10x ಆಪ್ಟಿಕಲ್ ಝೂಮ್‌ ಆಯ್ಕೆಯನ್ನು ನೀಡುವ ಸಾಧತ್ಯಗಳಿವೆ. ಸೆಲ್ಫಿಗಾಗಿ 16 ಮೆಗಾಪಿಕ್ಸಲ್ ರೈಸಿಂಗ್ ಕ್ಯಾಮೆರಾ ಒದಗಿಸಲಾಗುವುದು ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಮುಕ್ತಾಯವಾದ 2019ರ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ ಮೇಳದಲ್ಲಿ ಕಂಪನಿ ಆಪ್ಟಿಕಲ್ ಝೂಮ್‌ ಪ್ರದರ್ಶಿಸಲಾಗಿತ್ತು.

ಬ್ಯಾಟರಿ

ಬ್ಯಾಟರಿ

ಮೊದಲಿನಿಂದಲೂ ಅಧಿಕ ಸಾಮರ್ಥ್ಯದ ಬ್ಯಾಟರಿಯನ್ನು ಪರಿಚಯಿಸುತ್ತಿರುವ ಒಪ್ಪೊ ತನ್ನ ಹೊಸ ಸಬ್‌ ಬ್ರ್ಯಾಂಡ್‌ ರೆನೋ ಸ್ಮಾರ್ಟ್‌ಫೋನ್‌ ನಲ್ಲಿ 4,065mAh ಸಾಮರ್ಥ್ಯದ ಬ್ಯಾಟರಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಫಾಸ್ಟ್ ಚಾರ್ಜರ್‌ ಒದಗಿಸಲಾಗುವುದು ಎನ್ನಲಾಗುತ್ತಿದ್ದು, ಕಲರ್‌OS 6.0 ಮತ್ತು ಬ್ಲೂಟೂತ್ 5.0. ಆಯ್ಕೆಗಳು ಇರಲಿದೆ.

Most Read Articles
Best Mobiles in India

English summary
Oppo will be launching a new sub-brand called 'Reno' on April 10 and it seems that the first smartphone will come with an unusual front camera, according to a leaked video.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X