Subscribe to Gizbot

ಶಿಯೋಮಿ ಎಂಐ5, ಎಂಐ ಮ್ಯಾಕ್ಸ್ ಸ್ಮಾರ್ಟ್ ಫೋನುಗಳ ಮೇಲೆ ಭಾರೀ ರಿಯಾಯಿತಿ.

Written By:

ಪೂರ್ವದ ಆ್ಯಪಲ್ ಶಿಯೋಮಿ ಭಾರತೀಯ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ತನ್ನ ಸ್ಮಾರ್ಟ್ ಫೋನುಗಳ ಮೇಲೆ ಭಾರೀ ರಿಯಾಯಿತಿಯನ್ನು ದೀಪಾವಳಿಯ ಪ್ರಯುಕ್ತ ನೀಡುತ್ತಿದೆ.

ಶಿಯೋಮಿ ಎಂಐ5, ಎಂಐ ಮ್ಯಾಕ್ಸ್ ಸ್ಮಾರ್ಟ್ ಫೋನುಗಳ ಮೇಲೆ ಭಾರೀ ರಿಯಾಯಿತಿ.

ಕಳೆದ ವಾರ ಶಿಯೋಮಿ ಹಲವು ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ ಮತ್ತೀಗ ದೀಪಾವಳಿಯ ಪ್ರಯುಕ್ತ ಇನ್ನೂ ಆಕರ್ಷಣೀಯ ಕೊಡುಗೆಗಳನ್ನು ಘೋಷಿಸಿದೆ, ಒಂದು ರುಪಾಯಿಯ ಫ್ಲಾಷ್ ಸೇಲ್, ಲಕ್ಕಿ ಡ್ರಾ ಸೇರಿದಂತೆ ಒಟ್ಟು ಹತ್ತು ಕೋಟಿಯಷ್ಟರ ಕೊಡುಗೆಗಳನ್ನು ಘೋಷಿಸಿದೆ ಶಿಯೋಮಿ.

ಓದಿರಿ: ಡಿಸೆಂಬರ್ 3'ರ ಒಳಗೆ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿಸಿದವರೇ ಜಾಣರು!

ದೀಪಾವಳಿಯ ಪ್ರಯುಕ್ತ ಶಿಯೋಮಿಯ ಹಲವು ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು ರುಪಾಯಿಯ ಫ್ಲಾಷ್ ಸೇಲ್.

ಒಂದು ರುಪಾಯಿಯ ಫ್ಲಾಷ್ ಸೇಲ್.

ದೀಪಾವಳಿಯ ಪ್ರಯುಕ್ತ ಶಿಯೋಮಿ ಒಂದು ರುಪಾಯಿಯ ಫ್ಲಾಷ್ ಸೇಲ್ ಘೋಷಿಸಿದೆ. 30 ರೆಡ್ ಮಿ 3ಎಸ್ ಪ್ರೈಮ್, ರೆಡ್ ಮಿ ನೋಟ್ 3(2ಜಿಬಿ+16 ಜಿಬಿ), ಎಂಐ 4, 100 ಎಂಐ ಬ್ಲೂಟೂಥ್ ಸ್ಪೀಕರ್, 20,000 ಎಂ.ಎ.ಹೆಚ್ ಎಂಐ ಪವರ್ ಬ್ಯಾಂಕ್ ಮತ್ತು ಎಂಐ ಬ್ಯಾಂಡ್ 2 ಅನ್ನು ಪ್ರತಿ ದಿನ ಮಧ್ಯಾಹ್ನ ಎರಡು ಘಂಟೆಗೆ ಫ್ಲಾಷ್ ಸೇಲ್ ಮೂಲಕ ಮಾರಲಿದೆ.

ಶಿಯೋಮಿ ರೆಡ್ ಮಿ 3ಎಸ್, ರೆಡ್ ಮಿ 3ಎಸ್ ಪ್ರೈಮ್, ರೆಡ್ ಮಿ ನೋಟ್ 3 ಮೇಲೆ 500 ರುಪಾಯಿ ರಿಯಾಯಿತಿ.

ಶಿಯೋಮಿ ರೆಡ್ ಮಿ 3ಎಸ್, ರೆಡ್ ಮಿ 3ಎಸ್ ಪ್ರೈಮ್, ರೆಡ್ ಮಿ ನೋಟ್ 3 ಮೇಲೆ 500 ರುಪಾಯಿ ರಿಯಾಯಿತಿ.

ದೀಪಾವಳಿ ಮಾರಾಟದ ಪ್ರಯುಕ್ತ ಶಿಯೋಮಿ ರೆಡ್ ಮಿ 3ಎಸ್, ರೆಡ್ ಮಿ 3ಎಸ್ ಪ್ರೈಮ್, ರೆಡ್ ಮಿ ನೋಟ್ 3 ಮೇಲೆ 500 ರುಪಾಯಿ ರಿಯಾಯಿತಿ ಘೋಷಿಸಿದೆ. ಇವುಗಳ ಬೆಲೆ ಈಗ ಕ್ರಮವಾಗಿ 6,499, 8499, 9499 ರುಪಾಯಿ ಇರಲಿದೆ.

ಶಿಯೋಮಿ ರೆಡ್ ಮಿ ನೋಟ್ 3ಯ 3ಜಿಬಿ, 32ಜಿಬಿ ಆವೃತ್ತಿಯ ಫೋನಿನ ಬೆಲೆಯಲ್ಲಿ 1000 ರುಪಾಯಿ ಕಡಿತವಾಗಿದೆ. ಅದೀಗ 10,999 ರುಪಾಯಿಗೆ ಲಭ್ಯವಾಗಲಿದೆ.

ಎಂಐ ಮ್ಯಾಕ್ಸ್ ಮೇಲೆ 1000 ರುಪಾಯಿ ರಿಯಾಯಿತಿ.

ಎಂಐ ಮ್ಯಾಕ್ಸ್ ಮೇಲೆ 1000 ರುಪಾಯಿ ರಿಯಾಯಿತಿ.

ದೊಡ್ಡ ಪರದೆಯ ಎಂಐ ಮ್ಯಾಕ್ಸ್ ಮೇಲೆ 1000 ರುಪಾಯಿ ರಿಯಾಯಿತಿ ಇದೆ. 13,999 ರುಪಾಯಿಗೆ ಲಭ್ಯವಿದೆ.

ಓದಿರಿ:ಟಾಪ್ ಯೂಟ್ಯೂಬ್ ಟ್ರಿಕ್ಸ್ ಮಿಸ್ ಮಾಡದೇ ಅರಿತುಕೊಳ್ಳಿ

19,999 ರುಪಾಯಿಗೆ ಶಿಯೋಮಿ ಎಂಐ 5.

19,999 ರುಪಾಯಿಗೆ ಶಿಯೋಮಿ ಎಂಐ 5.

ಶಿಯೋಮಿಯ ಫ್ಲಾಗ್ ಶಿಪ್ ಫೋನಾದ ಎಂಐ 5ರ ಬೆಲೆ 19,999 ರುಪಾಯಿ. ಇದು ಸದ್ಯ ಲಭ್ಯವಿರುವ ಅತ್ಯುತ್ತಮ ಫೋನು. ಶಿಯೋಮಿ ಇದಕ್ಕೆ 3,000 ದಷ್ಟು ರಿಯಾಯಿತಿ ಕೊಡುತ್ತಿದೆ.

ಎಂಐ ಮ್ಯಾಕ್ಸ್ ಪ್ರೈಮ್ ಭಾರತದಲ್ಲಿ ಲಭ್ಯ.

ಎಂಐ ಮ್ಯಾಕ್ಸ್ ಪ್ರೈಮ್ ಭಾರತದಲ್ಲಿ ಲಭ್ಯ.

ಅಕ್ಟೋಬರ್ 17ರಿಂದ ಭಾರತದಲ್ಲಿ ಎಂಐ ಮ್ಯಾಕ್ಸ್ ಪ್ರೈಮ್ ಗೋಲ್ಡ್ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯವಾಗಲಿದೆ. 6.44 ಇಂಚಿನ ಪರದೆಯ, ಸ್ನಾಪ್ ಡ್ರಾಗನ್ 652 ಚಿಪ್ ಇರುವ ಈ ಫೋನಿನ ಬೆಲೆ 19,999/-. 4ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹ ಸಾಮರ್ಥ್ಯವಿದೆ. ಕಂಪನಿಯ ವೆಬ್ ಪುಟ ಮತ್ತು ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿದೆ.

10,000 ಎಂ.ಎ.ಹೆಚ್ ಎಂಐ ಪವರ್ ಬ್ಯಾಂಕ್ ಪ್ರೋ.

10,000 ಎಂ.ಎ.ಹೆಚ್ ಎಂಐ ಪವರ್ ಬ್ಯಾಂಕ್ ಪ್ರೋ.

ಶಿಯೋಮಿಯ 12.58ಎಂಎಂ ಗಾತ್ರದ 10,000 ಎಂ.ಎ.ಹೆಚ್ ಎಂಐ ಪವರ್ ಬ್ಯಾಂಕ್ ಪ್ರೊ 1,999 ರುಪಾಯಿಗೆ ಲಭ್ಯವಿದೆ. ಎರಡು ರೀತಿಯ ಫಾಸ್ಟ್ ಚಾರ್ಜಿಂಗ್ ಮತ್ತು ಟೈಪ್ ಸಿ ಚಾರ್ಜಿಂಗ್ ಸೌಕರ್ಯವಿದೆ.

ಮತ್ತೊಂದೆಡೆ, 10,000 ಎಂ.ಎ.ಹೆಚ್ ಎಂಐ ಪವರ್ ಬ್ಯಾಂಕ್ ಮೇಲೆ 200 ರುಪಾಯಿ ರಿಯಾಯಿತಿಯಿದೆ, 1,099 ರುಪಾಯಿಗೆ ಲಭ್ಯವಿದೆ. 20,000 ಎಂ.ಎ.ಹೆಚ್ ಪವರ್ ಬ್ಯಾಂಕ್ ಮತ್ತು ಯು.ಎಸ್.ಬಿ ಫ್ಯಾನ್ 1,899 ರುಪಾಯಿಗೆ ಲಭ್ಯವಿದೆ.

ಎಂಐ ಏರ್ ಪ್ಯುರಿಫೈಯರ್ 2 ಮತ್ತು ಎಂಐ ಬ್ಯಾಂಡ್ 2.

ಎಂಐ ಏರ್ ಪ್ಯುರಿಫೈಯರ್ 2 ಮತ್ತು ಎಂಐ ಬ್ಯಾಂಡ್ 2.

ಮೇಲಿನ ಉತ್ಪನ್ನಗಳ ಜೊತೆಗೆ ಎಂಐ ಏರ್ ಪ್ಯುರಿಫೈಯರ್ 2 ಮತ್ತು ಎಂಐ ಬ್ಯಾಂಡ್ 2 ಕ್ರಮವಾಗಿ 9,999 ಮತ್ತು 1,999 ರುಪಾಯಿಗೆ ಲಭ್ಯವಾಗಲಿದೆ.

ಇತರೆ ಕೊಡುಗೆಗಳು.

ಇತರೆ ಕೊಡುಗೆಗಳು.

ಎಂಐ ಇನ್ ಹಿಯರ್ ಹೆಡ್ ಫೋನ್ ಪ್ರೊ, ಎಂಐ ಕ್ಯಾಪ್ಸೂಲ್ ಹಿಯರ್ ಫೋನು, ಎಂಐ ಬ್ಲೂಟೂಥ್ ಸ್ಪೀಕರ್ 1,399, 899 ಮತ್ತು 1,999 ರುಪಾಯಿಗೆ ಲಭ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi, the Apple of East, in order to lure Indian customers into buying its products, is offering huge discounts on smartphones and other accessories as part of its Diwali sale.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot