ಡಿಸೆಂಬರ್ 3'ರ ಒಳಗೆ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿಸಿದವರೇ ಜಾಣರು!

By Suneel
|

ರಿಲಾಯನ್ಸ್ ಜಿಯೋ ನೆನ್ನೆ(ಅಕ್ಟೋಬರ್ 20) ತಡವಾಗಿ ತನ್ನ 'ವೆಲ್ಕಮ್‌ ಆಫರ್‌' ನಲ್ಲಿ ಕೆಲವು ಬದಲಾವಣೆಯನ್ನು ಮಾಡಿರುವ ಬಗ್ಗೆ ಮಾಹಿತಿ ಪ್ರಕಟಿಸಿತು. ಇದುವರೆಗೆ ರಿಲಾಯನ್ಸ್ ಜಿಯೋ ತನ್ನ 'ವೆಲ್ಕಮ್‌ ಆಫರ್‌'ನಲ್ಲಿ ಉಚಿತ 4G ಡಾಟಾ, ವಾಯ್ಸ್ ಕರೆಗಳು ಮತ್ತು ಟೆಕ್ಸ್ಟ್‌ ಮೆಸೇಜ್ ಅನ್ನು ಡಿಸೆಂಬರ್‌ 31 ವರೆಗೆ ನೀಡುತ್ತಿತ್ತು. ಆದರೆ ಈಗ ವೆಲ್ಕಮ್‌ ಆಫರ್‌ನಲ್ಲಿ ಕೆಲವು ಬದಲಾವಣೆ ಮಾಡಿದೆ.

ರಿಲಾಯನ್ಸ್ ಜಿಯೋ ವೆಲ್ಕಮ್‌ ಆಫರ್‌ನಲ್ಲಿ ಬದಲಾವಣೆ ಮಾಡಿರುವ ಅಂಶಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.(Jio)

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ವೆಲ್ಕಮ್ ಆಫರ್ ಡಿಸೆಂಬರ್ 3 ಕ್ಕೆ ಅಂತ್ಯ

Read also:ಹೊಸ ಸ್ಮಾರ್ಟ್‌ಫೋನ್‌ನೊಂದಿಗೆ ರಿಲಾಯನ್ಸ್ ಜಿಯೋ 4G ಉಚಿತ ಡಾಟಾವನ್ನು 1 ವರ್ಷದವರೆಗೆ ಪಡೆಯುವುದು ಹೇಗೆ?

ಡಿಸೆಂಬರ್‌ 3 ರ ಒಳಗಾಗಿ ಜಿಯೋ 4G ಸಿಮ್ ಖರೀದಿಸಿ

ಡಿಸೆಂಬರ್‌ 3 ರ ಒಳಗಾಗಿ ಜಿಯೋ 4G ಸಿಮ್ ಖರೀದಿಸಿ

ರಿಲಾಯನ್ಸ್ ಜಿಯೋ ನೆನ್ನೆ ಹೊರಡಿಸಿದ ಪ್ರಕಟಣೆಯಲ್ಲಿ 'ರಿಲಾಯನ್ಸ್ ಜಿಯೋ 4G ಸಿಮ್‌ ಅನ್ನು ಡಿಸೆಂಬರ್ 3 ರಂದು ಅಥವಾ ಅದಕ್ಕಿಂತ ಮೊದಲು ಖರೀದಿಸಿದವರು ಮಾತ್ರ ವೆಲ್ಕಮ್‌ ಆಫರ್‌ ಅನ್ನು ಪಡೆಯುತ್ತಾರೆ' ಎಂದಿದೆ.

ಡಿಸೆಂಬರ್ 3 ರ ನಂತರ ವೆಲ್ಕಮ್‌ ಆಫರ್‌ ಇಲ್ಲ

ಡಿಸೆಂಬರ್ 3 ರ ನಂತರ ವೆಲ್ಕಮ್‌ ಆಫರ್‌ ಇಲ್ಲ

ಡಿಸೆಂಬರ್ 3 ರ ನಂತರ ಜಿಯೋ ಸಿಮ್‌ ಖರೀದಿಸಿದವರಿಗೆ 'ವೆಲ್ಕಮ್‌ ಆಫರ್' ಅಪ್ಲೇ ಆಗುವುದಿಲ್ಲ ಎಂದು ರಿಲಾಯನ್ಸ್ ಜಿಯೋ ಹೇಳಿದೆ. ಅದರ ಬದಲಾಗಿ ರಿಲಾಯನ್ಸ್ ಜಿಯೋ ನಂತರದಲ್ಲಿ ಹೊರಡಿಸಿದ ಸಾಮಾನ್ಯ ಪ್ಲಾನ್‌ಗಳಿಗೆ ಚಾರ್ಜ್ ಆಗುತ್ತದೆ ಎಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ಬದಲಾವಣೆ ಹಿಂದಿನ ಗ್ರಾಹಕರಿಗೆ ತೊಡಕಾಗುವುದಿಲ್ಲ

ಹೊಸ ಬದಲಾವಣೆ ಹಿಂದಿನ ಗ್ರಾಹಕರಿಗೆ ತೊಡಕಾಗುವುದಿಲ್ಲ

ಈಗಾಗಲೇ ಜಿಯೋ ಸಿಮ್ ಪಡೆದು, ವೆಲ್ಕಮ್‌ ಆಫರ್ ಪಡೆದಿರುವವರಿಗೆ ಯಾವುದೇ ತೊಂದರೆ ಆಫರ್‌ನಲ್ಲಿ ಆಗುವುದಿಲ್ಲ. ಈಗಾಗಲೇ ಸಿಮ್‌ ಖರೀದಿಸಿ ಬಳಸುತ್ತಿರುವವರಿಗೆ ವೆಲ್ಕಮ್‌ ಆಫರ್ ಡಿಸೆಂಬರ್ 31 ರವರೆಗೆ ಲಭ್ಯವಿರುತ್ತದೆ ಎಂದು ರಿಲಾಯನ್ಸ್ ಜಿಯೋ ಇನ್ಫೋಕಾಂ ಹೇಳಿದೆ. ಅಲ್ಲದೇ ಡಿಸೆಂಬರ್ 3 ಕ್ಕಿಂತ ಮೊದಲು ಜಿಯೋ ಖರೀದಿಸುವವರಿಗೂ ವೆಲ್ಕಮ್‌ ಆಫರ್‌ನ ಉಚಿತ 4G ಸೇವೆಗಳು ಮತ್ತು ವಾಯ್ಸ್ ಕರೆಗಳು ಸಿಗಲಿವೆ.

ಈ ಬದಲಾವಣೆ ಏಕೆ?

ಈ ಬದಲಾವಣೆ ಏಕೆ?

ಅಂದಹಾಗೆ ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ತಮ್ಮ ನೆಲೆಯನ್ನು ಬಿಗಿಗೊಳಿಸಿಕೊಂಡಿರುವ ಟೆಲಿಕಾಂಗಳು ಉಚಿತ ಸೇವೆ ಬಗ್ಗೆ ಹೆಚ್ಚು ಕಳವಳ ವ್ಯಕ್ತ ಪಡಿಸಿದ್ದಾರೆ. ಆದ್ದರಿಂದ ಟ್ರಾಯ್ ರಿಲಾಯನ್ಸ್ ಜಿಯೋ ತನ್ನ ಆಫರ್‌ ಅನ್ನು ಕಡಿಮೆ ಮಾಡಬೇಕು ಮತ್ತು ಪ್ರತಿಸ್ಪರ್ಧಿಗಳನ್ನು ಸಮಾಧಾನಗೊಳಿಸಲು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇತರೆ ಟೆಲಿಕಾಂಗಳಿಗೆ ಸಮಾಧಾನ

ಇತರೆ ಟೆಲಿಕಾಂಗಳಿಗೆ ಸಮಾಧಾನ

ರಿಲಾಯನ್ಸ್ ಜಿಯೋ ಲೇಟೆಸ್ಟ್ ಬದಲಾವಣೆ, 'ಏರ್‌ಟೆಲ್, ವೊಡಾಫೋನ್‌, ಐಡಿಯಾ ಮತ್ತು ಇತರೆ ಟೆಲಿಕಾಂಗಳಿಗೆ ಸಮಾಧಾನ ತಂದಿದ್ದು, ಆದರೆ ಇತರೆ ಟೆಲಿಕಾಂಗಳಿಗಿಂತ ಉತ್ತಮ ಆಫರ್ ಅನ್ನು ನೀಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Hurry Up and Grab a Reliance Jio 4G SIM Card Before December 3rd to Enjoy Free Services! To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X