ಟಾಪ್ ಯೂಟ್ಯೂಬ್ ಟ್ರಿಕ್ಸ್ ಮಿಸ್ ಮಾಡದೇ ಅರಿತುಕೊಳ್ಳಿ

By Shwetha
|

ನಮಗೆ ಮನರಂಜನೆಯನ್ನು ನೀಡುವ ವೇದಿಕೆ ಎಂದೆನಿಸಿರುವ ಯೂಟ್ಯೂಬ್ ನಮ್ಮ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿದೆ. ಚಲನಚಿತ್ರ, ಮ್ಯೂಸಿಕ್, ಟ್ರೈಲರ್ಸ್, ಲೈವ್ ವೀಡಿಯೊ, ಪರೋಡೀಸ್ ಹೀಗೆ ಪ್ರತಿಯೊಂದನ್ನು ಯೂಟ್ಯೂಬ್‌ನಲ್ಲಿ ನಮಗೆ ವೀಕ್ಷಿಸಬಹುದಾಗಿದೆ. ಆದರೆ ನೀವು ವೀಕ್ಷಣೆ ಮಾಡಿರುವಂತಹದ್ದನ್ನೇ ಇತರರಿಗೆ ಶೇರ್ ಮಾಡುವ ಟ್ರಿಕ್ಸ್ ಕೂಡ ಯೂಟ್ಯೂಬ್‌ನಲ್ಲಿದ್ದು ಅವುಗಳೇನು ಎಂಬುದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ನಿಮ್ಮದೇ ಏರ್‌ಟೆಲ್ ಸಂಖ್ಯೆಗೆ 3ಜಿಬಿ "ಫ್ರಿ" ಇಂಟರ್ನೆಟ್ ಪಡೆದುಕೊಳ್ಳಲು ಹೀಗೆ ಮಾಡಿ

ಈ ಟ್ರಿಕ್ಸ್‌ಗಳು ಹೆಚ್ಚು ಬಳಕೆದಾರಿ ಎಂದೆನಿಸಿದ್ದು ಇವುಗಳನ್ನು ಬಳಸಿಕೊಂಡು ಯೂಟ್ಯೂಬ್ ವೀಡಿಯೊಗಳನ್ನು ಇಂದಿಲ್ಲಿ ಶೇರ್ ಮಾಡಿಕೊಳ್ಳಬಹುದಾಗಿದೆ.

ಓದಿರಿ: ಜಿಯೋ ಸಿಮ್‌ನಲ್ಲಿ 'ನೊ ಸಿಗ್ನಲ್ ಸಮಸ್ಯೆ' ಪರಿಹಾರವೇನು?

ಪ್ರಸ್ತುತ ಸಮಯದಲ್ಲಿ ವೀಡಿಯೊ ಯುಆರ್‌ಎಲ್ ಪಡೆದುಕೊಳ್ಳಿ

ಪ್ರಸ್ತುತ ಸಮಯದಲ್ಲಿ ವೀಡಿಯೊ ಯುಆರ್‌ಎಲ್ ಪಡೆದುಕೊಳ್ಳಿ

ಪ್ರತಿಯೊಬ್ಬರೂ ಪೂರ್ಣ ವೀಡಿಯೊವನ್ನು ನೋಡಲು ಇಚ್ಛಿಸುವುದಿಲ್ಲ. ಈಗ ನೀವು ಪಾಸ್ ಮಾಡಿರುವಲ್ಲಿಂದ ವೀಡಿಯೊ ಯುಆರ್‌ಎಲ್‌ ಅನ್ನು ಸ್ನೇಹಿತರಿಗೆ ಶೇರ್ ಮಾಡಿಕೊಳ್ಳಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೀಡಿಯೊ ಪಾಸ್

ವೀಡಿಯೊ ಪಾಸ್

ಇದಕ್ಕಾಗಿ ನೀವು ವೀಡಿಯೊವನ್ನು ಪಾಸ್ ಮಾಡಬೇಕು ಬಲಕ್ಕೆ ಕ್ಲಿಕ್ ಮಾಡಿ "ಗೆಟ್ ಯುಆರ್‌ಎಲ್ ಎಟ್ ಕರೆಂಟ್ ಟೈಮ್" ಎಂಬುದನ್ನು ಆಯ್ಕೆಮಾಡಿ ನಿಮ್ಮ ಪರದೆಯಲ್ಲಿ ಕಾಣುತ್ತಿರುವ ಹೊಸ ಲಿಂಕ್ ಕಾಪಿ ಮಾಡಿ.

ಯೂಟ್ಯೂಬ್ ಉತ್ತಮ ಸೋರ್ಸ್

ಯೂಟ್ಯೂಬ್ ಉತ್ತಮ ಸೋರ್ಸ್

ಇತ್ತೀಚೆಗೆ ಬಿಡುಗಡೆಯಾಗಿರುವ ಜನಪ್ರಿಯ ವೀಡಿಯೊಗಳು, ಮ್ಯೂಸಿಕ್ ವೀಡಿಯೊಗಳು, ಲೇಟೆಸ್ಟ್ ಟ್ರೈಲರ್ ಮತ್ತು ಇನ್ನಷ್ಟನ್ನು ವೀಕ್ಷಿಸಲು ಯೂಟ್ಯೂಬ್ ಉತ್ತಮ ಸೋರ್ಸ್ ಎಂದೆನಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಎಲ್ಲಾ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಕಂಡು ಅಪ್‌ಡೇಟ್ ಆಗಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಚ್ ಫಲಿತಾಂಶಗಳನ್ನು ರಿಫೈನ್ ಮಾಡಿ

ಸರ್ಚ್ ಫಲಿತಾಂಶಗಳನ್ನು ರಿಫೈನ್ ಮಾಡಿ

ನೀವು ಹುಡುಕುತ್ತಿರುವುದಕ್ಕೆ ನಿಖರವಾದ ಹುಡುಕಾಟ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಿಲ್ಲ ಎಂದಾದಲ್ಲಿ, ಫೀಲ್ಟರ್‌ಗಳ ಸಹಾಯವನ್ನು ಪಡೆದುಕೊಳ್ಳಿ ನಂತರ ಹುಡುಕಾಡಿ ಮತ್ತು ನಿರ್ದಿಷ್ಟ ಫಲಿತಾಂಶಗಳನ್ನು ಪಡೆದುಕೊಳ್ಳಿ.

ಬೈಪಾಸ್ ನಿರ್ಬಂಧನೆಗಳು

ಬೈಪಾಸ್ ನಿರ್ಬಂಧನೆಗಳು

ಕೆಲವೊಂದು ಪ್ರದೇಶ ಮತ್ತು ಡಿವೈಸ್‌ಗಳಲ್ಲಿ ಯೂಟ್ಯೂಬ್ ವೀಡಿಯೊಗಳು ಪ್ರದರ್ಶನಗೊಳ್ಳುವುದಿಲ್ಲ. ಯುಆರ್‌ಎಲ್ ಬದಲಾಯಿಸುವುದರ ಮೂಲಕ ನಿರ್ಬಂಧನೆಗಳನ್ನು ಬೈಪಾಸ್ ಮಾಡಬಹುದಾಗಿದೆ. ಇದನ್ನು ಮಾಡಲು, ಯುಆರ್‌ಎಲ್‌ನಿಂದ ಐಡಿ ನಕಲಿಸಿ ಎಲ್ಲವನ್ನೂ ಅಳಿಸಿ ಡಾಟ್ ಕಾಮ್ ನಂತರ 'V/' ನೀವು ಕಾಪಿ ಮಾಡಿರುವ ಐಡಿಯನ್ನು ಇಲ್ಲಿ ಅಂಟಿಸಿ. "https://www.youtube.com/watch?v=ny3hScFgCIQ" ಎಂಬುದು ಮೂಲವಾಗಿದ್ದರೆ "https://www.youtube.com/v/ny3hScFgCIQ" ಹೀಗೆ ಇದನ್ನು ಮಾರ್ಪಡಿಸಿಕೊಳ್ಳಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡೀಫಾಲ್ಟ್ ವೀಡಿಯೊ ಗುಣಮಟ್ಟ ಹೊಂದಿಸಿ

ಡೀಫಾಲ್ಟ್ ವೀಡಿಯೊ ಗುಣಮಟ್ಟ ಹೊಂದಿಸಿ

ವೀಡಿಯೊವನ್ನು ನೋಡುವಾಗ ಪ್ರತೀ ಬಾರಿ ನೀವು ವೀಡಿಯೊ ಗುಣಮಟ್ಟವನ್ನು ಬದಲಾಯಿಸಬೇಕಾಗಿಲ್ಲ. ಯೂಟ್ಯೂಬ್ ಸೆಟ್ಟಿಂಗ್ಸ್‌ಗೆ ನೇರವಾಗಿ ಹೋಗಿ ಪರದೆಯ ಬಲಭಾಗದಲ್ಲಿ ಲೊಕೇಟ್ ಆಗಿರುವ ವೀಡಿಯೊ ಕ್ವಾಲಿಟಿಗೆ ಹೋಗಿ ಹೊಂದಿಸಬಹುದಾಗಿದೆ. ಇಲ್ಲಿಂದ ಅಕೌಂಟ್ ಸೆಟ್ಟಿಂಗ್ಸ್, ಸೆಲೆಕ್ಟ್ ಪ್ಲೇಬ್ಯಾಕ್, ತದನಂತರ "ಕನೆಕ್ಶನ್ ಮತ್ತು ಪ್ಲೇಯರ್ ಗಾತ್ರಕ್ಕಾಗಿ ಉತ್ತಮ ಕ್ವಾಲಿಟಿಯನ್ನು ಆರಿಸಿ" ಬಟನ್ ಅನ್ನು ಪರಿಶೀಲಿಸಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
There are a few tricks that YouTube has got up its sleeves no one told you about. Here are such tricks and tips, check them out below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X