ನಾಲ್ಕು ಕ್ಯಾಮೆರಾವುಳ್ಳ 'ರಿಯಲ್‌ ಮಿ 5 ಪ್ರೊ' ಫೋನಿನ ಕಂಪ್ಲೀಟ್‌ ರಿವ್ಯೂ!

|

ಇತ್ತೀಚಿಗೆ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಆಗಿರುವ 'ರಿಯಲ್ ಮಿ 5 ಪ್ರೊ' ಸ್ಮಾರ್ಟ್‌ಫೋನ್ ಹಲವು ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಸ್ಮಾರ್ಟ್‌ಫೋನ್ ಕಂಪನಿಯ 'ರಿಯಲ್‌ ಮಿ 3 ಪ್ರೊ' ಫೋನಿನ ಮುಂದುವರಿದ ಭಾಗವಾಗಿ ಗುರುತಿಸಿಕೊಂಡಿದ್ದು, ಬರೀ ಹೆಸರಿನಲ್ಲಷ್ಟೆ ಅಲ್ಲ ಬದಲಾಗಿ ಫೀಚರ್ಸ್‌ ಮತ್ತು ಸೌಲಭ್ಯಗಳಿಂದಲೂ 'ರಿಯಲ್ ಮಿ 3 ಪ್ರೊ' ಫೋನ್‌ಗಿಂತ ಬೆಸ್ಟ್‌ ಎನಿಸಿಕೊಂಡಿದೆ.

ನಾಲ್ಕು ಕ್ಯಾಮೆರಾವುಳ್ಳ 'ರಿಯಲ್‌ ಮಿ 5 ಪ್ರೊ' ಫೋನಿನ ಕಂಪ್ಲೀಟ್‌ ರಿವ್ಯೂ!

ರಿಯಲ್‌ ಮಿ 5 ಪ್ರೊ ಸ್ಮಾರ್ಟ್‌ಫೋನ್ 48ಎಂಪಿ ಕ್ವಾಡ್‌ ಕ್ಯಾಮೆರಾ, 4,035mAh ಬ್ಯಾಟರಿ ಬ್ಯಾಕ್‌ಅಪ್‌, VOOC ಚಾರ್ಜಿಂಗ್ ತಂತ್ರಜ್ಞಾನ, 16ಎಂಪಿ ಸೆಲ್ಫಿ ಕ್ಯಾಮೆರಾ, ಸ್ನ್ಯಾಪ್‌ಡ್ರಾಗನ್ 712 AIE ಪ್ರೊಸೆಸರ್‌, ಹಾಗೆಯೇ ಆಂಡ್ರಾಯ್ಡ್‌ 9 ಪೈ ಓಎಸ್‌ ಸೇರಿದಂತೆ ಕಂಪ್ಲೀಟ್‌ ಹೈ ರೇಂಜ್ ಫೀಚರ್ಸ್‌ಗಳ ಪ್ಯಾಕೆಜ್‌ ಒಳಗೊಂಡಿದೆ. ಆದ್ರೆ ಈ ಸ್ಮಾರ್ಟ್‌ಫೋನ್ ಕಾರ್ಯವೈಖರಿ ಹೇಗಿದೆ?.ಮತ್ತು ಕ್ಯಾಮೆರಾ ಗುಣಮಟ್ಟ ಹೇಗಿದೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಓದಿರಿ : ಈ ತಿಂಗಳು ಫೋನ್ ಖರೀದಿಸುವ ಪ್ಯ್ಲಾನ್‌ ಇದೆಯಾ?.ಹಾಗಿದ್ರೆ ಸ್ವಲ್ಪ ಕಾಯಿರಿ!ಓದಿರಿ : ಈ ತಿಂಗಳು ಫೋನ್ ಖರೀದಿಸುವ ಪ್ಯ್ಲಾನ್‌ ಇದೆಯಾ?.ಹಾಗಿದ್ರೆ ಸ್ವಲ್ಪ ಕಾಯಿರಿ!

ಕ್ಯಾಮೆರಾ ವಿಶೇಷತೆ ಏನು

ರಿಯಲ್‌ ಮಿ 5 ಪ್ರೊ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 48ಎಂಪಿ + 8ಎಂಪಿ + 2ಎಂಪಿ + 2ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. 48ಎಂಪಿ ಮುಖ್ಯ ರಿಯರ್ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್‌ನಲ್ಲಿದ್ದು, f/1.79 ಅಪರ್ಚರ್ ಅನ್ನು ಒಳಗೊಂಡಿದೆ. 8ಎಂಪಿ ಸೆನ್ಸಾರ್‌ನ ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್ನೊಂದಿಗೆ ವೈಲ್ಡ್‌ ಆಂಗಲ್ ಲೆನ್ಸ್ ಪಡೆದಿದೆ. ತೃತೀಯ ಕ್ಯಾಮೆರಾವು 2ಎಂಪಿಯ ಮೈಕ್ರೋ ಕ್ಯಾಮೆರಾ ಆಗಿದ್ದು, ಇನ್ನು ನಾಲ್ಕನೇಯದ್ದು, 2ಎಂಪಿ ಡೆಪ್ತ್ ಸೆನ್ಸಾರ್‌ನಲ್ಲಿದೆ.

ಹಿಂಬದಿ ಕ್ಯಾಮೆರಾಗಳು ಕ್ಲಿಕ್ ಆಟೋಫೋಕಸ್‌ ಮಾಡಿಕೊಳ್ಳುತ್ತವೆ. ಕ್ಯಾಮೆರಾವು ಆಯ್ಕೆಯಲ್ಲಿ ವಿಭಿನ್ನ 'ಸ್ಲಿಲ್ ಓವರ್‌' ಮೆನು ನೀಡಲಾಗಿದ್ದು, ಫುಲ್‌ ಸೈಜ್‌ ಜೂಮ್‌ನಲ್ಲಿ ಪ್ರತಿ ಶಾಟ್‌ 2-4MB ರಿಂದ 15MB ಸಾಮರ್ಥ್ಯ ಪಡೆಯುತ್ತವೆ. ಫೋಟೊ ರೆಸಲ್ಯೂಶನ್‌ 1600x1200 ಪಿಕ್ಸಲ್ ಸಾಮರ್ಥ್ಯದಲ್ಲಿ ಮೂಡಿಬರಲಿವೆ. ಎಚ್‌ಆರ್‌ಡಿ, ಫಿಲ್ಟರ್‌, ಕ್ರೋಮ್ ಬೂಸ್ಟ್‌, ಪನೋರಮಾ ಆಯ್ಕೆಗಳನ್ನು ಸಹ ಕಾಣಬಹುದಾಗಿದೆ. ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದ್ದು, ವಾಟರ್‌ಡ್ರಾಪ್‌ ಸ್ಟೈಲ್‌ ನಾಚ್‌ನಲ್ಲಿ ಕ್ಯಾಮೆರಾ ಫಿಕ್ಸ್‌ ಆಗಿದೆ. ಪೋರ್ಟೆಟ್‌ ಮೋಡ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಫೋಟೊಗಳನ್ನು ಸೆರೆಹಿಡಿಯಬಹುದು.

ಡಿಸೈನ್‌ ಮತ್ತು ಡಿಸ್‌ಪ್ಲೇ ಹೇಗಿದೆ

ಕ್ರಿಸ್ಟಲ್‌ ಡಿಸೈನ್ ಮತ್ತು ಡೈಮಂಡ್‌ ಕಟ್‌ ಡಿಸೈನ್‌ನಲ್ಲಿರುವ ರಿಯಲ್‌ ಮಿ 5 ಪ್ರೊ ಸ್ಮಾರ್ಟ್‌ಫೋನ್ ಆಕರ್ಷಕ ಲುಕ್‌ ಪಡೆದುಕೊಂಡಿದೆ. ಹಿಂಬದಿಯ ಕವರ್‌ ಪ್ಲಾಸ್ಟಿಕ್‌ನಲ್ಲಿದ್ದು, ರಿಫ್ಲೆಕ್ಟಿಂಗ್ ಮಾದರಿಯಲ್ಲಿದೆ. ಫೋನ್‌ ಕೆಳಭಾಗದಲ್ಲಿ 3.5mm ಆಡಿಯೊ ಜಾಕ್, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ಸ್ಪೀಕರ್ ಸೌಲಭ್ಯಗಳನ್ನು ನೀಡಲಾಗಿದೆ. ಬಲಭಾಗದಲ್ಲಿ ಪವರ್‌ ಬಟನ್ ಮತ್ತು ಎಡಭಾಗದಲ್ಲಿ ವ್ಯಾಲ್ಯೂಮ್ ಮತ್ತು ಸಿಮ್ ಸ್ಲಾಟ್‌ ನೀಡಲಾಗಿದೆ.

ಈ ಸ್ಮಾರ್ಟ್‌ಫೋನ್ 2340 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 LCD ಡಿಸ್‌ಪ್ಲೇಯನ್ನು ಒಳಗೊಂಡಿದೆ. ಡಿಸ್‌ಪ್ಲೇಯು ಗೇಮ್ಸ್‌ ಮತ್ತು ವಿಡಿಯೊ ವೀಕ್ಷಣೆಗೆ ಅತ್ಯುತ್ತಮ ಎನಿಸುವುದಂತು ಸುಳ್ಳಲ್ಲ. ಹೊರಗಡೆ ಬಿಸಿಲಿನಲ್ಲಿ ಮತ್ತು ಕತ್ತಲಿನಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬ್ರೈಟ್ನೆಸ್‌ ಹೊಂದಿಕೊಳ್ಳುವ ಮತ್ತು ಬ್ಯಾಟರಿ ಪವರ್‌ ಉಳಿಸುವ ರಚನೆಯ ಡಿಸ್‌ಪ್ಲೇ ಹೊಂದಿದೆ.

ಸಾಫ್ಟ್‌ವೇರ್ ಮತ್ತು ಬ್ಯಾಟರಿ ಹೇಗಿದೆ

ರಿಯಲ್‌ ಮಿ 5 ಪ್ರೊ ಸ್ಮಾರ್ಟ್‌ಫೋನ್ 10nm ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಗೇಮಿಂಗ್‌ಗೆ ಅತ್ಯುತ್ತಮ ಬಲ ಒದಗಿಸುವ ಶಕ್ತಿಯನ್ನು ಈ ಪ್ರೊಸೆಸರ್‌ ಗ್ರಾಫಿಕ್‌ಗೆ ಬೆಂಬಲ ನೀಡಲಿದೆ. ಗೇಮಿಂಗ್ ಅಗತ್ಯವಿಲ್ಲದ ಬಳಕೆದಾರರಿಗಂತೂ ಈ ಪ್ರೊಸೆಸರ್‌ ಕಾರ್ಯ ಇನ್ನಷ್ಟು ಉತ್ತಮ ಎನಿಸಲಿದೆ. 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಮಲ್ಟಿಟಾಸ್ಕ್‌ಗೆ ಪೂರ್ಣ ಸಪೋರ್ಟ್‌ ಒದಗಿಸಲಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ 4,035mAh ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಒಳಗೊಂಡಿದ್ದು, ಆದ್ರೆ, ಇತ್ತೀಚಿನ 15,000ರೂ ಪ್ರೈಸ್‌ಟ್ಯಾಗ್‌ನ ಸ್ಮಾರ್ಟ್‌ಫೋನ್‌ಗಳಲ್ಲಿ 4000mAh ಬ್ಯಾಟರಿ ನೀಡುವುದು ಸಹಜವಾಗಿದೆ. ಆದ್ರೆ VOOC 3.0 ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನ ಪಡೆದಿದ್ದು, ಕೇವಲ 30ನಿಮಿಷದಲ್ಲಿ ಶೇ.50% ಚಾರ್ಜ್‌ ಒದಗಿಸುವ ಸಾಮರ್ಥ್ಯವಿದೆ. ಆಕ್ಟಿವಿಟಿ ಟ್ರಾಕಿಂಗ್ ಆಪ್‌ ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುತ್ತಿರುತ್ತದೆ.

ಮೆಮೊರಿ ಮತ್ತು ಬೆಲೆ

ರಿಯಲ್‌ ಮಿ 5 ಪ್ರೊ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ ಮಾದರಿಯ ಆಯ್ಕೆಗಳನ್ನು ಒಳಗೊಂಡಿದೆ. ಅವುಗಳ ಕ್ರಮವಾಗಿ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಇದರ ಬೆಲೆಯು 13,999ರೂ.ಗಳು. 6GB RAM ಮತ್ತು 64GB ಆಂತರಿಕ ಸಂಗ್ರಹ ಸ್ಥಳಾವಕಾಶದ ವೇರಿಯಂಟ್ ಬೆಲೆಯು 14,999ರೂ. ಮತ್ತು 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ 16,999ರೂ.ಗಳಿಗೆ ದೊರೆಯಲಿದೆ.

ಕೊನೆಯ ಮಾತು

ರಿಯಲ್‌ ಮಿ 5 ಪ್ರೊ ಸ್ಮಾರ್ಟ್‌ಫೋನ್ ಪ್ರೊಸೆಸರ್‌, ಬ್ಯಾಟರಿ, ಡಿಸ್‌ಪ್ಲೇ, ಡಿಸೈನ್ನಂತಹ ಅತ್ಯುತ್ತಮ ವೈಶಿಷ್ಟತೆಗಳಿಂದ ಗ್ರಾಹಕರನ್ನು ಆಕರ್ಷಿಸಿದ್ದು, ಅದರಲ್ಲಿಯೂ ಮುಖ್ಯವಾಗಿ ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರುವುದು ಪ್ರಮುಖ ಅಟ್ರ್ಯಾಕ್ಷನ್‌ ಆಗಿದೆ. 15,000ರೂ. ಪ್ರೈಸ್‌ರೇಂಜ್‌ನಲ್ಲಿ ನಾಲ್ಕು ಕ್ಯಾಮೆರಾ ಲಭ್ಯವಿರುವುದು ಜೊತೆಗೆ VOOC ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುವುದು ಗ್ರಾಹಕರಿಗೆ ವಿಶೇಷ ಎನಿಸಲಿದೆ. ಆದರೆ ಬ್ಯಾಟರಿ ಬಾಳಿಕೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಬೇಕಿತ್ತು ಎನ್ನುವುದನ್ನು ಬಿಟ್ಟರೇ ರಿಯಲ್‌ ಮಿ 5 ಪ್ರೊ ಉತ್ತಮ ಫೋನ್ ಎನ್ನಬಹುದು.

Best Mobiles in India

English summary
Realme 5 Pro is literally best in camera performance as well as display. battery and vooc charging is plus point of realme 5 pro. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X