ರಿಯಲ್‌ ಮಿ 7 ಫಸ್ಟ್‌ ಲುಕ್: ಕಡಿಮೆ ಬೆಲೆಗೆ ಕ್ವಾಡ್‌ ಕ್ಯಾಮೆರಾ ಸ್ಮಾರ್ಟ್‌ಫೋನ್!

|

ರಿಯಲ್‌ ಮಿ ಸಂಸ್ಥೆಯು ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ ಸರಣಿಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ರಿಯಲ್‌ಮಿ ಸಂಸ್ಥೆಯು ಇತ್ತೀಚಿಗೆ ರಿಯಲ್ ಮಿ 7 ಸ್ಮಾರ್ಟ್‌ಫೋನ್ ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಸರಣಿಯು ರಿಯಲ್‌ಮಿ 7 ಮತ್ತು ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ರಿಯಲ್‌ಮಿ 7 ಸ್ಮಾರ್ಟ್‌ಫೋನ್ ಕೆಲ ಅಂಶಗಳಿಂದ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ರಿಯಲ್‌ಮಿ

ಮಾರುಕಟ್ಟೆಗೆ ಲಗ್ಗೆ ಹಾಕಿರುವ ರಿಯಲ್‌ಮಿ 7 ಸ್ಮಾರ್ಟ್‌ಫೋನ್ ಕಡಿಮೆ ದರದ ಫೋನ್‌ ಆಗಿದ್ದರು ಕೆಲವು ಉತ್ತಮ ಫೀಚರ್ಸ್‌ಗಳನ್ನು ಪಡೆದಿದೆ. ತನ್ನ ವರ್ಗದ ಇತರೆ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುವ ಲಕ್ಷಣಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೇಗದ ಪ್ರೊಸೆಸರ್, ಕ್ವಾಡ್ ಕ್ಯಾಮೆರಾ, ಬಿಗ್ ಬ್ಯಾಟರಿ, ಆಕರ್ಷಕ ಡಿಸೈನ್‌ನಂತಹ ಸ್ಪರ್ಧಾತ್ಮಕ ಫೀಚರ್ಸ್‌ಗಳನ್ನು ಪಡೆದಿದೆ. ಹಾಗಾದರೇ ರಿಯಲ್‌ಮಿ 7 ಸ್ಮಾರ್ಟ್‌ಫೋನ್ ಫಸ್ಟ್‌ ಲುಕ್ ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ರಿಯಲ್‌ ಮಿ 7 ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.5 ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 20: 9 ಆಕಾರ ಅನುಪಾತ ಹೊಂದಿದ್ದು, ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.8 ಆಗಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ. ಮೊದಲ ನೋಟದಲ್ಲಿಯೇ ಗ್ರಾಹಕರಿಗೆ ಈ ಫೋನ್ ಡಿಸೈನ್ ಹೆಚ್ಚು ಆಕರ್ಷಕ ಅನಿಸಲಿದೆ.

ಪ್ರೊಸೆಸರ್ ಕಾರ್ಯ ಹೇಗೆ

ಪ್ರೊಸೆಸರ್ ಕಾರ್ಯ ಹೇಗೆ

ರಿಯಲ್‌ ಮಿ 7 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ 6GB/64GB ಹಾಗೂ 8GB + 128GB ಸ್ಟೋರೇಜ್ ಆಯ್ಕೆ ಹೊಂದಿದೆ. ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಸಹ ಪಡೆದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ನೀಡಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ. ಸ್ಟಿರಿಯೋ ಸ್ಪೀಕರ್ಸ್‌ ಸೌಲಭ್ಯವನ್ನು ಪಡೆದಿದೆ. ಅಧಿಕ ಡೇಟಾದ ಗೇಮ್‌ಗಳನ್ನು ಸುಗಮವಾಗಿ ಆಡಬಹುದಾಗಿದೆ.

ಕ್ವಾಡ್‌ ಕ್ಯಾಮೆರಾ ಸ್ಪೆಷಲ್‌

ಕ್ವಾಡ್‌ ಕ್ಯಾಮೆರಾ ಸ್ಪೆಷಲ್‌

ರಿಯಲ್‌ ಮಿ 7 ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ. ಸದ್ಯ ಮಾರುಕಟ್ಟೆಯಲ್ಲಿ 64ಎಂಪಿ ಕ್ಯಾಮೆರಾ ಟ್ರೆಂಡಿಂಗ್‌ನಲ್ಲಿದ್ದು, ಹೀಗಾಗಿ ಅಧಿಕ ಕ್ಯಾಮೆರಾ ಸೆನ್ಸಾರ್‌ ಪಡೆದಿದೆ.

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ರಿಯಲ್‌ ಮಿ 7 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿಯನ್ನು ಪಡೆದಿದ್ದು, 30W ಸೂಪರ್‌ ಡಾರ್ಟ್‌ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಹಾಗೆಯೇ ಇದರೊಂದಿಗೆ ವೈಫೈ-802.11ac, ಜಿಪಿಎಸ್‌, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4G VoLTE, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬಜೆಟ್‌ ಬೆಲೆಯಲ್ಲಿ ಅಧಿಕ ಬ್ಯಾಟರಿ ನೀಡಿರುವುದು ಪ್ಲಸ್‌ ಪಾಯಿಂಟ್ ಆಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ರಿಯಲ್‌ ಮಿ 7 ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್ ಆಯ್ಕೆ ಹೊಂದಿದೆ. ಬೇಸ್‌ ವೇರಿಯಂಟ್ 6GB + 64GB ವೇರಿಯಂಟ್ ಬೆಲೆಯು 14,999ರೂ. ರೂ. ಆಗಿದೆ. ಮತ್ತು 8GB + 128GB ವೇರಿಯಂಟ್ ಬೆಲೆಯು 16,999ರೂ.ಆಗಿದೆ.

ಕೊನೆಯ ಮಾತು

ಕೊನೆಯ ಮಾತು

ರಿಯಲ್‌ಮಿ 7 ಫೋನ್ 15,000 ಸಾವಿರ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ತನ್ನ ವರ್ಗದಲ್ಲಿಯೇ ಇತರೆ ಬ್ರ್ಯಾಂಡ್‌ ಫೋನ್‌ಗಳಿಗೆ ಪೈಪೋಟಿ ನೀಡುವಂತಹ ಫೀಚರ್ಸ್‌ ಒಳಗೊಂಡಿದೆ. ಬಿಗ್ ಡಿಸ್‌ಪ್ಲೇ, ನಾಲ್ಕು ಕ್ಯಾಮೆರಾ ರಚನೆಯಿಂದ ಗಮನ ಸೆಳೆಯುತ್ತದೆ. ಆದರೆ ಬ್ಯಾಟರಿ ಬಾಳಿಕೆಯನ್ನು 5000mAh ನೀಡಿದ್ದರೇ ಇನ್ನಷ್ಟು ಪವರ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಹೊರತುಪಡಿಸಿ ಉಳಿದಂತೆ ಬಜೆಟ್‌ ಬೆಲೆಗೆ ಕ್ವಾಡ್‌ ಕ್ಯಾಮೆರಾ ಫೋನ್ ಖರೀದಿಸುವವರಿಗೆ ಈ ಫೋನ್ ಉತ್ತಮ ಆಯ್ಕೆ.

Best Mobiles in India

English summary
Realme 7 bring premium design, Full HD+ displays and are powered by powerful chipsets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X