ರಿಯಲ್‌ಮಿ 9 5G SE ಫಸ್ಟ್‌ ಲುಕ್: ಬಜೆಟ್‌ ಬೆಲೆಗೆ ಪವರ್‌ಫುಲ್‌ ಡಿಸ್‌ಪ್ಲೇ ಫೋನ್!

|

ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ರಿಯಲ್‌ಮಿಯು ಈಗಾಗಲೇ 9 ಸರಣಿಯಲ್ಲಿ ಹಲವು ಭಿನ್ನ ಶ್ರೇಣಿಯ ಫೋನ್‌ಗಳನ್ನು ಲಾಂಚ್ ಮಾಡಿ ಗಮನ ಸೆಳೆದಿದೆ. ಆ ಪೈಕಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ರಿಯಲ್‌ಮಿ 9 5G SE ಹಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಮುಖ್ಯವಾಗಿ 5G ಸಪೋರ್ಟ್‌ ನೊಂದಿಗೆ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿರುವುದು ವಿಶೇಷ ಎನಿಸಿದೆ.

ಆಂಡ್ರಾಯ್ಡ್‌

ಹೌದು, ರಿಯಲ್‌ಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ನೂತನವಾಗಿ ಪರಿಚಯಿಸಿರುವ ರಿಯಲ್‌ಮಿ 9 5G SE ಸ್ಮಾರ್ಟ್‌ಫೋನ್‌ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ 144Hz ರೀಫ್ರೇಶ್‌ ರೇಟ್ ಒಳಗೊಂಡಿದ್ದು, ಜೊತೆಗೆ ಅತ್ಯುತ್ತಮ ಬ್ರೈಟ್‌ನೆಸ್‌ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಹಾಗಾದರೇ ರಿಯಲ್‌ಮಿ 9 5G SE ಸ್ಮಾರ್ಟ್‌ಫೋನಿನ ಫಸ್ಟ್‌ ಲುಕ್ ಹೇಗಿದೆ?.. ಫೀಚರ್ಸ್‌ಗಳ ಕಾರ್ಯವೈಖರಿ ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ

ರಿಯಲ್‌ಮಿ 9 5G SE ಸ್ಮಾರ್ಟ್‌ಫೋನ್‌ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 1,080 x 2,412 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 144Hz ರೀಫ್ರೇಶ್ ರೇಟ್‌ ಅನ್ನು ಒಳಗೊಂಡಿದ್ದು, 600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಎಡ ಭಾಗದ ಮೂಲೆಯಲ್ಲಿ ಪಂಚ್ ಹೋಲ್ ಕಟ್ ನೀಡಲಾಗಿದೆ. ಕೈಗೆಟುಕುವ ಬೆಲೆಯಲ್ಲಿ 144Hz ರಿಫ್ರೆಶ್ ದರವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಆಗಿ ಕಾಣಿಸಿಕೊಂಡಿದೆ. ಇನ್ನು ಗೇಮಿಂಗ್ ಆಡುವವರಿಗೆ 144Hz ರೀಫ್ರೇಶ್ ರೇಟ್ ಬಗ್ಗೆ ತಿಳಿದಿರುತ್ತದೆ.

ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ?

ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ?

ರಿಯಲ್‌ಮಿ 9 5G SE ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಇದರ ಕಾರ್ಯವೈಖರಿಯು ತನ್ನ ವರ್ಗದ ಫೋನ್‌ಗಳಂತೆ ಇದ್ದು, ಬಳಕೆದಾರರಿಗೆ ನಿರಾಶಾದಾಯಕ ಎನಿಸುವುದಿಲ್ಲ. ಹಾಗೆಯೇ ಈ ಫೋನ್ 6GB RAM + 128 GB ಮತ್ತು 8GB + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿದೆ. ಈ ಫೋನ್ ವರ್ಚುವಲ್ RAM ವಿಸ್ತರಿಸುವ ಆಯ್ಕೆ ಸಹ ಪಡೆದಿದೆ. ಮೈಕ್ರೊ SD ಕಾರ್ಡ್ ಮೂಲಕ (1TB ವರೆಗೆ) ವಿಸ್ತರಿಸಬಹುದು. ಕಾಲ್ ಆಫ್ ಡ್ಯೂಟಿ ಮತ್ತು ಮಿನರಲ್ಸ್‌ನಂತಹ ಆಟಗಳನ್ನು ಆಡಲು ಪೂರಕವಾಗಿದೆ. ಜೊತೆಗೆ ಮೃದುವಾದ ಗ್ರಾಫಿಕ್ಸ್‌ ಬೆಂಬಲವು ಇದೆ.

ಕ್ಯಾಮೆರಾ ಕ್ವಾಲಿಟಿ ಹೇಗಿದೆ?

ಕ್ಯಾಮೆರಾ ಕ್ವಾಲಿಟಿ ಹೇಗಿದೆ?

ರಿಯಲ್‌ಮಿ 9 5G SE ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.ಎರಡನೇ ಕ್ಯಾಮೆರಾವು ಮೊನೋಕ್ರೋಮ್‌ ಪೋರ್ಟ್ರೆಟ್ ಸೆನ್ಸಾರ್ ಹಾಗೂ ತೃತೀಯ ಕ್ಯಾಮೆರಾವು ಮೈಕ್ರೋ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಬಳಕೆದಾರರು ಫುಲ್‌ ಹೆಚ್‌ಡಿ 1080p ವೀಡಿಯೊಗಳನ್ನು 30fps ನಲ್ಲಿ ಸೆರೆಹಿಡಿಯಬಹುದು. ಕಂಪನಿಯು ಮುಖ್ಯ ಕ್ಯಾಮೆರಾ ಸೆನ್ಸಾರ್‌ ಅನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ರಿಯಲ್‌ಮಿ 9 5G SE ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ಕ್ವಿಕ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5.2, GPS/ A-GPS ಸೇರಿವೆ. ಹ್ಯಾಂಡ್‌ಸೆಟ್‌ನಲ್ಲಿರುವ ಸಂವೇದಕಗಳು ಸಾಮೀಪ್ಯ ಸಂವೇದಕ, ಬೆಳಕಿನ ಸಂವೇದಕ, ಗೈರೊಸ್ಕೋಪ್, ಅಕ್ಸೆಲೆರೊಮೀಟರ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿವೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ರಿಯಲ್‌ಮಿ 9 5G SE ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. 6GB RAM + 128GB ಸ್ಟೋರೇಜ್‌ನ ಬೇಸ್ ವೇರಿಯಂಟ್‌ ಬೆಲೆಯು 19,999ರೂ. ಆಗಿದೆ. ಹಾಗೆಯೇ 8GB + 128GB ವೇರಿಯಂಟ್ ಬೆಲೆಯು 22,999ರೂ. ಆಗಿದೆ. ಇನ್ನು ಈ ಫೋನ್ Azure Glow ಮತ್ತು Starry Glow ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Realme 9 5G SE First Look: Powerful Display Phone at Mid-Range.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X