ರಿಯಲ್‌ ಮಿ x2 ಪ್ರೊ ವಿಮರ್ಶೆ : ಕೊಟ್ಟ ಕಾಸಿಗೆ ಮೋಸವಿಲ್ಲ!

|

ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ರಿಯಲ್‌ ಮಿ ಸಂಸ್ಥೆಯು ಹೊಸದಾಗಿ 'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಫ್ ಲಿಸ್ಟಿನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್, ಡಿಸೈನ್, ಡಿಸ್‌ಪ್ಲೇ ಪಿಕ್ಸಲ್ ರೆಸಲ್ಯೂಶನ್ ಫೀಚರ್ಸ್‌ಗಳು ಸಂಪೂರ್ಣ ಹೈ ಎಂಡ್‌ ಮಾದರಿಯಲ್ಲಿ ಇರುವುದು ವಿಶೇಷವಾಗಿ ಗ್ರಾಹಕರಿಗೆ ಅಟ್ರ್ಯಾಕ್ಟ ಆಗಿದೆ.

ರಿಯಲ್‌ ಮಿ ಎಕ್ಸ್‌2 ಪ್ರೊ

ರಿಯಲ್‌ ಮಿ ಕಂಪನಿಯ 'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್ ವ್ಯವಸ್ಥೆಗಾಗಿ VOOC ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಉನ್ನತ ಡಿಸ್‌ಪ್ಲೇ ಗುಣಮಟ್ಟಕ್ಕಾಗಿ ಎಚ್‌ಆರ್‌ಡಿ 10+ ಬೆಂಬಲದ ಸೂಪರ್‌ AMOLED ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಹಾಗೆಯೇ ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಸಹ ಪಡೆದುಕೊಂಡಿದೆ ಆದರೆ ಮುಖ್ಯ ಕ್ಯಾಮೆರಾ 64ಎಂಪಿ ಆಗಿರುವುದು ಗಮನಸೆಳೆಯುತ್ತದೆ. ಇನ್ನು ರಿಯಲ್‌ ಮಿ X2 ಪ್ರೊ ಸ್ಮಾರ್ಟ್‌ಫೋನ್ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್ ಹೇಗಿದೆ

ಡಿಸ್‌ಪ್ಲೇ ಮತ್ತು ಡಿಸೈನ್ ಹೇಗಿದೆ

'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಹೊಂದಿದೆ. ಪ್ರಖರತೆಯು ಉತ್ತಮವಾಗಿದೆ. ಇನ್ನು 20:9 ಅನುಪಾತದಲ್ಲಿರುವ ಡಿಸ್‌ಪ್ಲೇಯು ಸೂಪರ್‌ AMOLED (E3) ಮಾದರಿಯ ಜೊತೆಗೆ HRD 10+ ಗುಣಮಟ್ಟ ಬೆಂಬಲವನ್ನು ಪಡೆದಿದೆ. ಹಾಗೆಯೇ ಡಿಸ್‌ಪ್ಲೇಯು 90Hz ರಿಫ್ರೇಶ್ ರೇಟ್‌ ಹೊಂದಿದೆ. ಡಿಸ್‌ಪ್ಲೇ ರಚನೆಯು ಆಕರ್ಷಕವಾಗಿದ್ದು, ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರವು 91.7% ಆಗಿದೆ. ಡಿಸ್‌ಪ್ಲೇ ರಕ್ಷಣೆಗೆ ಸ್ಕ್ರೀನ್‌ಗೆ ಗೊರಿಲ್ಲಾ ಗ್ಲಾಸ್‌ ಒದಗಿಸಲಾಗಿದೆ. ಡಿಸ್‌ಪ್ಲೇ ಸುತ್ತಲೂ ಅಲ್ಯುಮಿನಿಯಮ್ ಫ್ರೇಮ್ ಹೊಂದಿದ್ದು, ಹಿಂಬದಿಯಲ್ಲಿಯೂ ಗೊರಿಲ್ಲಾ ಗ್ಲಾಸ್‌ ನೀಡಿರುವುದು ವಿಶೇಷ.

ಪ್ರೊಸೆಸರ್‌ ವೇಗ ಮತ್ತು ಮೆಮೊರಿ

ಪ್ರೊಸೆಸರ್‌ ವೇಗ ಮತ್ತು ಮೆಮೊರಿ

'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಮಲ್ಟಿಟಾಸ್ಕ್ ಕೆಲಸಗಳಿಗೆ ಅತ್ಯುತ್ತಮ ಸಪೋರ್ಟ್‌ ಇದಗಿಸುವುದರಲ್ಲಿ ಎರಡು ಮಾತಿಲ್ಲ. ಇನ್ನು ಪ್ರೊಸೆಸರ್‌ ವೇಗಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಹಾಗೂ ColorOS 6.1 ಬೆಂಬಲ ಸಹ ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 8GB + 128GB ಮತ್ತು 12GB + 256GB ವೇರಿಯಂಟ್ ಸಾಮರ್ಥ್ಯದ ಎರಡು ಆಯ್ಕೆಗಳನ್ನು ಹೊಂದಿದೆ. ಅಧಿಕ ಡಾಟಾ ಬೇಡುವ ಗೇಮ್ಸ್‌ಗಳಿಗೆ ಉತ್ತಮ ಪ್ಲಾಟ್‌ಫಾರ್ಮ್ ನೀಡುತ್ತದೆ.

ನಾಲ್ಕು ಕ್ಯಾಮೆರಾ ವಿಶೇಷ

ನಾಲ್ಕು ಕ್ಯಾಮೆರಾ ವಿಶೇಷ

ಸದ್ಯದ ಟ್ರೆಂಡ್‌ನಂತೆಯೇ 'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ ಸಹ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಆದರೆ ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿರುವುದು ಪ್ಲಸ್‌ ಪಾಯಿಂಟ್ ಅನಿಸಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು f/2.5 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನ ಸಾಮರ್ಥ್ಯದಲ್ಲಿದೆ. ಹಾಗೆಯೇ ನಾಲ್ಕನೇ ಕ್ಯಾಮೆರಾವು 2 ಎಂಪಿಯ ಸೆನ್ಸಾರ್‌ ಪಡೆದಿದೆ. ಫೋಟೊಗಳು ಉತ್ತಮವಾಗಿ ಮೂಡಿಬರುತ್ತವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಸಾಮರ್ಥ್ಯದಲ್ಲಿದ್ದು, ಈ ಕ್ಯಾಮೆರಾವು ಸೋನಿಯ IMX471 ಸೆನ್ಸಾರ್‌ ಪಡೆದಿದೆ. ಇದರಿಂದ ಸೆಲ್ಫಿ ಫೋಟೊಗಳ ಗುಣಮಟ್ಟಕ್ಕೆ ಅಗತ್ಯ ಸಪೋರ್ಟ್ ದೊರೆಯುತ್ತದೆ.

ಬ್ಯಾಟರಿ ಸಾಮರ್ಥ್ಯ ಅಂಶಗಳು

ಬ್ಯಾಟರಿ ಸಾಮರ್ಥ್ಯ ಅಂಶಗಳು

'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ ಒಟ್ಟು 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಉತ್ತಮ ಬ್ಯಾಕ್‌ಅಪ್‌ ಒದಗಿಸಲಿದೆ. ಇದರೊಂದಿಗೆ 50W ಸೂಪರ್ VOOC ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಿರುವುದು ಫೋನ್‌ ವೇಗದ ಚಾರ್ಜಿಂಗ್‌ಗೆ ನೆರವಾಗಿದೆ. ಈ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೇ ಕೇವಲ 35 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಪೂರ್ಣ ಚಾರ್ಜ್ ಪಡೆದುಕೊಳ್ಳುತ್ತದೆ. ಪಬ್‌ಜಿ ಅಂತಹ ಗೇಮ್ಸ್‌ಗಳಿಗೆ ಉತ್ತಮ ಬ್ಯಾಟರಿ ಲೈಫ್ ನೀಡಲಿದೆ.

ಬೆಲೆ ಮತ್ತು ಬಣ್ಣ ಆಯ್ಕೆ

ಬೆಲೆ ಮತ್ತು ಬಣ್ಣ ಆಯ್ಕೆ

ಭಾರತದಲ್ಲಿ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿರುವ ರಿಯಲ್‌ ಮಿ ಎಕ್ಸ್‌2 ಪ್ರೊ ಸ್ಮಾರ್ಟ್‌ಫೋನ್ ಆರಂಭಿಕ 8GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆಯು 29,999ರೂ.ಗಳಾಗಿದೆ. ಅದೇ ರೀತಿ 12GB + 256GB ವೇರಿಯಂಟ್‌ ಬೆಲೆಯು 33,999ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೈಟ್‌ ಮತ್ತು ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.

ಕೊನೆಯ ಮಾತು

ಕೊನೆಯ ಮಾತು

ದೇಶದಲ್ಲಿ ಶಿಯೋಮಿಯಂತೆ ಹೆಚ್ಚು ಗಮನಸೆಳೆಯುತ್ತಿರುವ ರಿಯಲ್‌ ಮಿ ಕಂಪನಿಯ ಈ ಹೊಸ ''ರಿಯಲ್‌ ಮಿ ಎಕ್ಸ್2 ಪ್ರೊ'' ಸ್ಮಾರ್ಟ್‌ಫೋನ್‌ ಒಂದು ದೈತ್ಯ ಫೋನ್ ಎನ್ನಬಹುದಾಗಿದೆ. ನಾಲ್ಕು ಕ್ಯಾಮೆರಾ, ವೇಗದ ಪ್ರೊಸೆಸರ್‌, ಡಿಸ್‌ಪ್ಲೇ ಪಿಕ್ಸಲ್ ನಂತಹ ಫೀಚರ್ಸ್‌ಗಳಿಂದ ಉತ್ತಮ ಅನಿಸುತ್ತದೆ. ಆದರೆ ಸದ್ಯ ನೀಡಿರುವ 4000mAh ಬ್ಯಾಟರಿಯು ಈ ಫೋನಿಗೆ ಕಡಿಮೆ ಅನಿಸುತ್ತದೆ. ಬ್ಯಾಟರಿಗೆ ಇನ್ನಷ್ಟು ಅಧಿಕ ಬಲ ನೀಡಿದ್ದರೇ ಚೆನ್ನಾಗಿರತಿತ್ತು ಎಂದೆನಿಸುತ್ತದೆ. ಅದನ್ನು ಹೊರತುಪಡಿಸಿದರೇ ''ರಿಯಲ್‌ ಮಿ X2'' ಫೋನ್ ಜಬರ್ದಸ್ತ್ ಆಗಿದೆ.

Best Mobiles in India

English summary
The Realme X2 Pro is indeed the best value for money smartphone to buy so far this year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X