ರೆಡ್ಮಿ 11 ಪ್ರೈಮ್‌ 5G ವಿಮರ್ಶೆ: ಬಜೆಟ್ ಬೆಲೆಯಲ್ಲಿ ಆಲ್ ರೌಂಡರ್ 5G ಫೋನ್!

|

ಶಿಯೋಮಿ ಸಂಸ್ಥೆಯು ಇತ್ತೀಚಿಗೆ ಹೊಸದಾಗಿ ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ಬಜೆಟ್‌ ಪ್ರೈಸ್‌ ಮತ್ತು ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. 5G ಸೌಲಭ್ಯ, 5,000mAh ಸಾಮರ್ಥ್ಯದ ಬ್ಯಾಟರಿ, ಹೈ ಎಂಡ್ ಕ್ಯಾಮೆರಾ ಸೆನ್ಸಾರ್ ಸೇರಿದಂತೆ ಫುಲ್‌ ಹೆಚ್‌ ಪ್ಲಸ್‌ನ 90Hz ರಿಫ್ರೆಶ್ ರೇಟ್‌ ಡಿಸ್‌ಪ್ಲೇಯನ್ನು ಪಡೆದಿರುವುದು ಪ್ರಮುಖ ಹೈಲೈಟ್‌ ಆಗಿ ಕಾಣಿಸುತ್ತದೆ.

ಫೋನ್ ರೆಡ್ಮಿ 11

ಶಿಯೋಮಿಯ ಕಂಪನಿಯ ಈ ಹೊಸ ಫೋನ್ ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಆಕ್ಟಾ-ಕೋರ್ 7nm ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ವೇಗದ ಕಾರ್ಯವೈಖರಿಯನ್ನು ಒಳಗೊಂಡಿದೆ.

6GB RAM + 128GB

ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿರುವ ಈ ಫೋನ 4GB RAM + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಳಕ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಆಯ್ಕೆ ಸಹ ನೀಡಲಾಗಿದೆ. ಹೊಸ ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು? ಈ ಪೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಹೇಗಿದೆ

ಡಿಸ್‌ಪ್ಲೇ ವಿನ್ಯಾಸ ಹೇಗಿದೆ

ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು 20.7:9 ರಚನೆಯ ಅನುಪಾತವನ್ನು ಹೊಂದಿದೆ. ಎಲ್‌ಸಿಡಿ ಮಾದರಿಯ ಡಿಸ್‌ಪ್ಲೇ ಒಳಗೊಂಡಿದ್ದು, HDR ಮತ್ತು ಡಾಲ್ಬಿ ಸರ್ಟಿಫೈಡ್‌ ಪ್ಯಾನೆಲ್‌ ಹೊಂದಿಲ್ಲ. ಈ ಡಿಸ್‌ಪ್ಲೇಯು ಗರಿಷ್ಠ 1080p ರೆಸಲ್ಯೂಶನ್ ವಿಡಿಯೋಗಳನ್ನು ಸಪೋರ್ಟ್‌ ಮಾಡಲಿದೆ. ಇದು ಅಧಿಕ ಬ್ರೈಟ್ನೆಸ್‌ ಬೂಸ್ಟ್ ಮಾಡಲು ಸಪೋರ್ಟ್ ಎನಿಸುವುದಿಲ ಹಾಗೂ ತನ್ನ ವರ್ಗದಲ್ಲಿಯೇ ಉತ್ತಮ ಆಯ್ಕೆಗಳನ್ನು ನೀಡುವ ಪ್ರಯತ್ನ ಮಾಡಿದೆ. ಇನ್ನು ಡಿಸ್‌ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 3 ಬೆಂಬಲ ಪಡೆದಿದೆ.

ಪ್ರೊಸೆಸರ್ ಕಾರ್ಯವೈಖರಿ ಹೇಗೆ?

ಪ್ರೊಸೆಸರ್ ಕಾರ್ಯವೈಖರಿ ಹೇಗೆ?

ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ 7nm ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್‌ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬಳಸಿ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇದು ತನ್ನ ವರ್ಗದಲ್ಲೇ ಮಲ್ಟಿಟಾಸ್ಕ್ ಕೆಲಸಗಳಿಗೆ ಈ ಪ್ರೊಸೆಸರ್‌ ಪೂರಕ ಎನಿಸಲಿದೆ. ಕರೆ ಮಾಡುವುದು, ಮೆಸೆಜ್ ಕಳುಹಿಸುವುದು, ಫೋಟೋಗಳನ್ನು ಕ್ಲಿಕ್ ಮಾಡುವುದು, ವೀಡಿಯೊಗಳನ್ನು ವೀಕ್ಷಿಸುವುದು ಬೆಂಬಲಿತವಾಗಿದೆ. ಇನ್ನು ಗೇಮಿಂಗ್ ಕಾರ್ಯವೈಖರಿಯಲ್ಲಿ ಪೊಕೊ M5 4G ಗಿಂತ ಉತ್ತಮ ಎನಿಸಲಿದೆ.

ಕ್ಯಾಮೆರಾ ಕ್ವಾಲಿಟಿ ಹೇಗಿದೆ?

ಕ್ಯಾಮೆರಾ ಕ್ವಾಲಿಟಿ ಹೇಗಿದೆ?

ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋಟ್ರೇಟ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಪ್ರಾಥಮಿಕ ಸೆನ್ಸಾರ್‌ನಿಂದ ಕ್ಲಿಕ್ ಮಾಡಲಾದ ಫೋಟೋಗಳು ನೈಜ ಬಣ್ಣಗಳು ಮತ್ತು ಉತ್ತಮ ವಿವರಗಳನ್ನು ಹೊಂದಿವೆ. ತನ್ನ ವರ್ಗದಲ್ಲೇ ಈ ಫೋನ್ ಕ್ಯಾಮೆರಾ HDR ಸ್ವಲ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಫೋಟೊ ಸೆರೆಹಿಡಿಯುವಾಗ ಶಟರ್ ಬಟನ್ ಅನ್ನು ಟ್ಯಾಪ್ ಮಾಡುವುದು ಮತ್ತು ಫೋಟೋ ಕ್ಲಿಕ್ ಮಾಡುವುದರ ನಡುವೆ ಯಾವುದೇ ವಿಳಂಬವಿಲ್ಲ.

ಬ್ಯಾಟರಿ ಬ್ಯಾಕ್‌ಅಪ್‌ ಉತ್ತಮವಾಗಿದೆಯೇ?

ಬ್ಯಾಟರಿ ಬ್ಯಾಕ್‌ಅಪ್‌ ಉತ್ತಮವಾಗಿದೆಯೇ?

ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಬಂಡಲ್ ಚಾರ್ಜರ್ 22.5W ವರೆಗೆ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, ಒಂದು ದಿನದ ಬಳಕೆಗೆ ಪೂರಕ ಎನಿಸುತ್ತದೆ. ಜೊತೆಗೆ ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈಫೈ 802.11 a/b/g/n/ac, ಯುಎಸ್‌ಬಿ OTG, IR ಬ್ಲಾಸ್ಟರ್, ಬ್ಲೂಟೂತ್ v5.1, GPS/ A-GPS, USB ಟೈಪ್-C, ಮತ್ತು 3.5 ಹಾಗೂ ಎಂಎಂ ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಇ-ಕಂಪಾಸ್‌, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 4GB RAM + 64GB ಸ್ಟೋರೇಜ್ ಆಯ್ಕೆಗೆ 13,999ರೂ. ಬೆಲೆ ಹೊಂದಿದೆ. ಇನ್ನು ಇದರ 6GB RAM + 128GB ಸ್ಟೋರೇಜ್ ಮಾದರಿಯ ಆಯ್ಕೆಗೆ 15,999ರೂ. ಬೆಲೆ ಪಡೆದಿದೆ. ಇದು ಮೆಡೋ ಗ್ರೀನ್, ಕ್ರೋಮ್ ಸಿಲ್ವರ್ ಮತ್ತು ಥಂಡರ್ ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತದೆ.

ಕೊನೆಯ ಮಾತು

ಕೊನೆಯ ಮಾತು

ಶಿಯೋಮಿ ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯ 5G ಸ್ಮಾರ್ಟ್‌ಫೋನ್ ಆಗಿದೆ. 15,000ರೂ ಪ್ರೈಸ್‌ಟ್ಯಾಗ್‌ ಬೆಲೆಯಲ್ಲಿ 5G, 50 ಮೆಗಾ ಪಿಕ್ಸಲ್ ಕ್ಯಾಮೆರಾ, 5,000mAh ಬ್ಯಾಟರಿ ಸೇರಿದಂತೆ ಕೆಲವು ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡಿದ್ದು ಇದರ ಪ್ಲಸ್‌ ಪಾಯಿಂಟ್‌ ಅನಿಸಲಿವೆ. ಈ ಫೋನಿನ ಡ್ಯುಯಲ್‌ ಕ್ಯಾಮೆರಾ ಬದಲಿಗೆ ಟ್ರಿಪಲ್‌ ಕ್ಯಾಮೆರಾ ನೀಡಬೇಕಿತ್ತು ಎಂದೆನಿಸುತ್ತದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವನ್ನು ಇನ್ನಷ್ಟು ಹೆಚ್ಚಿಸುವ ಜೊತೆಗೆ ಡಿಸ್‌ಪ್ಲೇ ಗುಣಮಟ್ಟದಲ್ಲಿ ಇನ್ನಷ್ಟು ಹೊಸತನ ನೀಡಬೇಕಿತ್ತು ಎನ್ನುವುದನ್ನು ಹೊರತುಪಡಿಸಿದರೇ ಈ ಫೋನ್ ಬಜೆಟ್‌ ಕೇಟಗರಿಯಲ್ಲಿ ಉತ್ತಮ ಆಯ್ಕೆ ಆಗಿದೆ.

Best Mobiles in India

English summary
Redmi 11 Pro 5G Review: All-Rounder 5G Phone at Budget Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X