ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ನೋಟಿಸ್ ನೀಡಿದೆ ಕೇಂದ್ರ ಸರ್ಕಾರ: ಕಾರಣ ಕೇಳಿದ್ರೆ ಶಾಕ್ ಆಗ್ತಿರಾ..!!

ಕೇಂದ್ರ ಸರ್ಕಾರವು ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿಗಳಿಗೆ ನೋಟಿಸ್ ಸಹ ಜಾರಿ ಮಾಡಿದೆ ಎನ್ನಲಾಗಿದೆ.

|

ನೀವು ಚೀನಾ ಕಂಪನಿಯ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತೀದ್ದಿರಾ? ಹಾಗಿದ್ರೆ ನಿಮ್ಮ ವೈಯಕ್ತಿಕ ಮಾಹಿತಿಗಳು ಲೀಕ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ಕಾರಣ ಈ ತಯಾರಿಕ ಕಂಪನಿಗಳು ಬಳಕೆದಾರರ ವೈಯುಕ್ತಿಕ ಮಾಹಿತಿ ಕಳುವು ಮಾಡಿವೆ ಎಂಬ ಸಂಶಯವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.

ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ನೋಟಿಸ್ ನೀಡಿದೆ ಕೇಂದ್ರ ಸರ್ಕಾರ

ಓದಿರಿ: ಸ್ವಾತಂತ್ರ ದಿನಾಚರಣೆಗೆ ಗಿಫ್ಟ್ ಕೊಟ್ಟ ಅಂಬಾನಿ: ರೂ.70ಕ್ಕೆ ವರ್ಷ ಪೂರ್ತಿ ಅನ್‌ಲಿಮಿಟೆಡ್ ಡೇಟಾ.!!

ಈ ಕಾರಣಕ್ಕಾಗಿ , ಕೇಂದ್ರ ಸರ್ಕಾರವು ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿಗಳಿಗೆ ನೋಟಿಸ್ ಸಹ ಜಾರಿ ಮಾಡಿದೆ ಎನ್ನಲಾಗಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯು ಚೀನಾ ಕಂಪನಿಗಳಾದ ಶಿಯೋಮಿ, ವಿವೋ, ಒಪ್ಪೋ ಸೇರಿದಂತೆ 21 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.

ಸ್ಯಾಮ್ಸಂಗ್ ಸಹ ಈ ಪಟ್ಟಿಯಲ್ಲಿದೆ:

ಸ್ಯಾಮ್ಸಂಗ್ ಸಹ ಈ ಪಟ್ಟಿಯಲ್ಲಿದೆ:

ಈ 21 ಕಂಪನಿಗಳ ಪೈಕಿ ಜಿಯೋನಿ, ಸ್ಯಾಮ್ಸಂಗ್ ಹಾಗೂ ಭಾರತೀಯ ಕಂಪನಿಯಾದ ಮೈಕ್ರೋಮ್ಯಾಕ್ಸ್ ಕೂಡಾ ಸೇರಿದೆ ಎನ್ನಲಾಗಿದ್ದು, ಈ ಕಂಪನಿಗಳು ಬಳಕೆದಾರರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿವೆ ಎನ್ನಲಾಗಿದೆ.

ಆಗಸ್ಟ್ 28ರ ಒಳಗೆ ಉತ್ತರಿಸಲು ಸೂಚನೆ:

ಆಗಸ್ಟ್ 28ರ ಒಳಗೆ ಉತ್ತರಿಸಲು ಸೂಚನೆ:

ಈ 21 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿರುವ ಕೇಂದ್ರ ಸರಕಾರವೂ ಇದಕ್ಕೆ ಆಗಸ್ಟ್ 28ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಇಲ್ಲವಾದರೆ ಕಠಿಣ ಕ್ರಮವನ್ನು ಜರುಗಿಸುವುದಾಗಿ ತಿಳಿಸಿದೆ.

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ಹ್ಯಾಕ್ ಮಾಡುತ್ತಿರುವ ಕಂಪನಿಗಳು:

ಹ್ಯಾಕ್ ಮಾಡುತ್ತಿರುವ ಕಂಪನಿಗಳು:

ಮೊಬೈಲ್ ತಯಾರಿಕಾ ಕಂಪನಿಗಳು ಹ್ಯಾಕಿಂಗ್ ಮೂಲಕ ಬಳಕೆದಾರರ ಕರೆಯ ಪಟ್ಟಿ, ಸಂದೇಶಗಳು ಹಾಗೂ ಮತ್ತಿತರ ವೈಯುಕ್ತಿಕ ಮಾಹಿತಿಗಳನ್ನು ಕಳುವು ಮಾಡಿವೆ ಎಂಬ ಸಂಶಯವನ್ನು ವ್ಯಕ್ತಪಡಿಸಲಾಗಿದೆ.

ತಪ್ಪಿತಸ್ಥ ಕಂಪನಿಗಳ ವಿರುದ್ಧ ಕಠಿಣ ಕ್ರಮ:

ತಪ್ಪಿತಸ್ಥ ಕಂಪನಿಗಳ ವಿರುದ್ಧ ಕಠಿಣ ಕ್ರಮ:

ನಿಯಮಗಳನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಅಲ್ಲದೇ ಸರಕಾರವೂ ಈಗಾಗಲೇ ಚೀನಾದಿಂದ ಆಮದಾಗುವ ಮೊಬೈಲ್ ಫೋನ್'ಗಳ ಪರಿಶೀಲನೆ ಆರಂಭಿಸಿದೆ ಎನ್ನಲಾಗಿದೆ.

ಎಚ್ಚರವಾಗಿರಿ:

ಎಚ್ಚರವಾಗಿರಿ:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಗಳು ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದರಿಂದ ನಿಮ್ಮ ಮಾಹಿತಿಗಳು ಲೀಕ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನಲೆಯಲ್ಲಿ ನೀವು ವೈಯಕ್ತಿಕ ಮಾಹಿತಿಗಳನ್ನು ಹೆಚ್ಚಾಗಿ ಫೋನಿನಲ್ಲಿ ಇಡದಿರುವುದು ಉತ್ತಮ

ಅಮೆಜಾನ್ ನಿಂದ ಪಾಠ:

ಅಮೆಜಾನ್ ನಿಂದ ಪಾಠ:

ಈ ಹಿಂದೆ ಅಮೆಜಾನ್, ಚೀನಾ ಮೂಲಕ ಬ್ಲೂ ಕಂಪನಿ ಬಳಕೆದಾರರ ಮಾತಿಹಿಯನ್ನು ಕದಿಯುತ್ತಿದೆ ಎನ್ನುವ ಕಾರಣಕ್ಕೆ ಆ ಸ್ಮಾರ್ಟ್‌ಫೋನ್ ಗಳ ಮಾರಾಟವನ್ನು ಬಂದ್ ಮಾಡಿತ್ತು. ಇದರಿಂದ ಕೇಂದ್ರ ಸರಕಾರವು ಎಚ್ಚೆತ್ತು ಕೊಂಡಿದೆ.

Best Mobiles in India

English summary
In a bid to ensure the privacy of users' data, the Centre has sent notices to all smartphone makers including a majority of Chinese manufacturers, asking them to provide the framework as well as the procedures they follow for data security. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X