Subscribe to Gizbot

ರೂ.49ಕ್ಕೆ 1GB ಡೇಟಾ-28 ದಿನ ವ್ಯಾಲಿಡಿಟಿ: ಟೆಲಿಕಾಂ ಮಾರುಕಟ್ಟೆಗೆ ಶಾಕ್‌ ಕೊಟ್ಟ ಜಿಯೋ..!

Written By:

ಈಗಾಗಲೇ ಜಿಯೋ ಹಲವಾರು ಬೊಂಬಾಟ್ ಆಫರ್‌ಗಳನ್ನು ಲಾಂಚ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಹವಾ ಹುಟ್ಟಿಹಾಕಿದೆ. ಈಗಾಗಲೇ ಜಿಯೋಯಿಂದಾಗಿ ಹಲವಾರು ಟೆಲಿಕಾಂ ಕಂಪನಿಗಳು ಮುಚ್ಚುವ ಹಂತವನ್ನು ತಲುಪಿದೆ. ಇದೇ ಮಾದರಿಯಲ್ಲಿ ಕಳೆದ 5 ತ್ರೈಮಾಸಿಕಗಳಿಂದ ನಷ್ಟದಲ್ಲಿ ಸಿಲುಕಿಕೊಂಡಿರುವ ಐಡಿಯಾ ಆಸ್ತಿತ್ವಕ್ಕಾಗಿ ಪರದಾಡುತ್ತಿರುವ ಸಂದರ್ಭದಲ್ಲಿಯೇ ಜಿಯೋ ಟೆಲಿಕಾಂ ಮಾರುಕಟ್ಟೆಯೇ ಬಿದ್ದು ಹೋಗುವ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈ ಮತ್ತಷ್ಟು ಮಂದಿಯಲ್ಲಿ ಜಿಯೋ ಕುಟುಂಬಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.

ರೂ.49ಕ್ಕೆ 1GB ಡೇಟಾ-28 ದಿನ ವ್ಯಾಲಿಡಿಟಿ: ಟೆಲಿಕಾಂ ಮಾರುಕಟ್ಟೆಗೆ ಶಾಕ್‌ ಕೊಟ್ಟ

ಕಳೆದ ವರ್ಷದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಫೀಚರ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಜಿಯೋ ಪೋನ್ ಮಾರಾಟವನ್ನು ಈ ವರ್ಷದಲ್ಲಿ ಮತ್ತಷ್ಟು ಹೆಚ್ಚು ಮಾಡುವ ಯೋಜನೆಯನ್ನು ರೂಪಿಸಿರುವ ರಿಲಯನ್ಸ್, ಕೇಲವ ರೂ.49ಕ್ಕೆ 28 ದಿನಗಳ ವ್ಯಾಲಿಡಿಟಿಯ ಆಫರ್ ಅನ್ನು ಜಿಯೋ ಫೋನ್‌ ಬಳಕೆದಾರರಿಗೆ ನೀಡಿದೆ. ಈ ಮೂಲಕ ತನ್ನ ಜಿಯೋ ಕುಟುಂಬದ ಗಾತ್ರವವನ್ನು ಮತ್ತಷ್ಟು ದೊಡ್ಡದು ಮಾಡಿಕೊಳ್ಳಲಿದೆ ಎನ್ನಲಾಗಿದೆ.

ಓದಿರಿ: ಮತ್ತೊಂದು ದಾಖಲೆ ನಿರ್ಮಿಸಿದ ಅಂಬಾನಿ: ಜಿಯೋ ಫೋನ್ ದೇಶದ ನಂ.1..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.49 ಪ್ಲಾನ್:

ರೂ.49 ಪ್ಲಾನ್:

ಜಿಯೋ ನೀಡಿರುವ ರೂ.49ರ ಪ್ಲಾನ್‌ನಲ್ಲಿ ಬಳಕೆದಾರರಿಗೆ 1GB 4G ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರು ಅನ್‌ಲಿಮೆಟೆಡ್ ಕರೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಇದು ಜಿಯೋ ಫೋನ್‌ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಲಿದೆ.

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ಸ್ಕ್ರಾಚ್ ಪ್ಲಾನ್‌ಗಳು:

ಸ್ಕ್ರಾಚ್ ಪ್ಲಾನ್‌ಗಳು:

ಇದಲ್ಲದೇ ಜಿಯೋ ತನ್ನ ಜಿಯೋ ಫೋನ್‌ ಬಳಕೆದಾರಿಗಾಗಿ ಹೊಸ ಮಾದರಿಯ ಆಫರ್ ಅನ್ನು ನೀಡಿದ್ದು, ರೂ.11, ರೂ.21, ರೂ.51 ಮತ್ತು ರೂ.101 ಆಫರ್ ಗಳನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ನಂಬರ್ 1:

ಮಾರುಕಟ್ಟೆಯಲ್ಲಿ ನಂಬರ್ 1:

ರೂ.1500ರ ಹಿಂತಿರುಗಿಸುವ ಠೇವಣಿಯನ್ನು ಪಡೆದು ಉಚಿತವಾಗಿ ನೀಡುತ್ತಿರುವ ಜಿಯೋ ಫೋನ್ ಮಾರುಕಟ್ಟೆಯಲ್ಲಿ ಶೇ.27%ರಷ್ಟು ಹಿಡಿತವನ್ನು ಸಾಧಿಸಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಜಿಯೋ ಫೋನ್ ನಂಬರ್ 1 ಸ್ಥಾನ ಅಲಂಕರಿಸಿದೆ.

ಜಿಯೋ ಫೀಚರ್ ಫೋನ್‌:

ಜಿಯೋ ಫೀಚರ್ ಫೋನ್‌:

ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio Launches a New Tariff Plan of Rs 49 for JioPhone Users. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot