Subscribe to Gizbot

ರಿಲಾಯನ್ಸ್ ಜಿಯೊ ನಂತರ, ಎಲ್‍ವೈಎಫ್ ವಾಟರ್ 1 ಸ್ಪೋಟ ಸುದ್ದಿ ಹುಟ್ಟಿಸಿದೆ: ಸ್ಮಾರ್ಟ್‍ಫೋನ್ ಸ್ಪೋಟಿಸದಂತೆ ತಡೆಯಲು 7 ತಂತ್ರಗಳು

ರಿಲಾಯನ್ಸ್ ಭಾರತದ ಮುಖ್ಯಾಂಶಗಳಲ್ಲಿ ತನ್ನ ಜಿಯೊ 4ಜಿ ಸೇವೆಗಾಗಿ ಇತ್ತು. ಅದರ ಸಸ್ತ 4ಜಿ ಸೇವೆ, ಉಚಿತ ಕಾಲ್ಸ್ ಮತ್ತು ಇತರ ಒಳ್ಳೆ ವಿಷಯಗಳ ಬಗ್ಗೆ ಸುದ್ದಿಯಲ್ಲಿತ್ತು. ಆದರೆ ಕಂಪನಿ ಕೆಟ್ಟ ವಿಷಯಕ್ಕಾಗಿ ಕೂಡ ಸುದ್ದಿಯಲ್ಲಿ ಇತ್ತು.

ರಿಲಾಯನ್ಸ್ ಜಿಯೊ ನಂತರ, ಎಲ್‍ವೈಎಫ್ ವಾಟರ್ 1 ಸ್ಪೋಟ ಸುದ್ದಿ ಹುಟ್ಟಿಸಿದೆ

ಎಲ್‍ವೈಎಫ್ ವಾಟರ್ 1 ಸ್ಮಾರ್ಟ್‍ಫೋನ್ ರೂ.14,699 ಬೆಲೆ ಗೆ ಬಿಡುಗಡೆಗೊಂಡಿದ್ದು ಸ್ಫೋಟಗೊಂಡು ಬಳಕೆದಾರನ ಕೈಯಿಗೆ ಪೆಟ್ಟುಮಾಡಿದೆ. ಬಳಕೆದಾರ ಹೇಳುವಂತೆ ಫೋನ್ ಒಮ್ಮೆಲೆ ಸ್ಫೋಟಗೊಂಡಾಗ ಫೇಸ್‍ಬುಕ್ ಅನ್ನು ಬ್ರೌಸ್ ಮಾಡುತ್ತಿದ್ದರು.

ಓದಿರಿ: 

ಈಗ ಸಧ್ಯಕ್ಕೆ, ಬಳಕೆದಾರ ಸ್ಮಾರ್ಟ್‍ಫೋನ್ ಸ್ಪೋಟದಿಂದ ಆದ ಗಾಯಕ್ಕೆ ಚಿಕಿತ್ಸೆ ಪಡೆದಿದ್ದಾನೆ ಆದರೆ ಅದರ ಕಾರಣ ಇನ್ನೂ ತಿಳಿಯಬೇಕಾಗಿದೆ. ಗಮನಿಸ ಬೇಕಾದ ವಿಷಯವೆಂದರೆ ಬಳಕೆದಾರ ಕೇವಲ ಫೇಸ್‍ಬುಕ್ ಬಳಸುತ್ತಿದ್ದು ಚಾರ್ಜಿಂಗ್ ಗೆ ಕೂಡ ಇಟ್ಟಿರಲಿಲ್ಲಾ.

ಓದಿರಿ: ಜಿಯೋನ ಆಫರ್ ಏನೇ ಇರಲಿ ನಾವು ಸಮರಕ್ಕೆ ಸಿದ್ಧ: ಬಿಎಸ್‌ಎನ್‌ಎಲ್

ಕಳೆದ ವಾರವಷ್ಟೆ ಕೆಲ ಸರಿಯಲ್ಲದ ಬ್ಯಾಟರಿ ಹೊಂದಿದ ಗ್ಯಾಲಾಕ್ಸಿ ನೋಟ್ 7 ಸ್ಮಾರ್ಟ್‍ಫೋನ್ ಗಳು ಸ್ಫೋಟಗೊಂಡು ಸ್ಯಾಮ್ಸಂಗ್ ನೋಟ್ 7 ಯುನಿಟ್ಸ್ ಗಳನ್ನು ವಾಪಸ್ ತರಿಸಿಕೊಂಡಿತು. ಇಲ್ಲಿ ನಾವು ಕೆಲ ಉಪಾಯಗಳೊಂದಿಗೆ ಬಂದಿದ್ದೇವೆ ಅದರಿಂದ ನೀವು ಸ್ಮಾರ್ಟ್‍ಫೋನುಗಳು ಸ್ಫೋಟಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುಎಸ್‍ಬಿ ಚಾರ್ಜಿಂಗ್

ಯುಎಸ್‍ಬಿ ಚಾರ್ಜಿಂಗ್

ಯುಎಸ್‍ಬಿ ಚಾರ್ಜಿಂಗ್ ಅಥವಾ ಲೊ ವೊಲ್ಟೇಜ್ ಚಾರ್ಜಿಂಗ್ ನಿಮ್ಮ ಸ್ಮಾರ್ಟ್‍ಫೋನನ್ನು ಬೇಗನೆ ಚಾರ್ಜ್‍ಮಾಡುವುದಿಲ್ಲಾ ಆದರೆ ಅದು ನಿಧಾನಗತಿಯ ಚಾರ್ಜಿಂಗ್ ನೀಡುತ್ತದೆ ಒಂದೇ ರೀತಿಯ ಕಡಿಮೆ ಪ್ರಮಾಣದ ವಿದ್ಯುತ್ ನೊಂದಿಗೆ. ಇದು ಉಷ್ಣತೆ ಹೆಚ್ಚುವುದನ್ನು ತಡೆಯುತ್ತದೆ ಮತ್ತು ಅಪಾಯದ ಸಂಭವವನ್ನು ಕಡಿಮೆ ಮಾಡುತ್ತದೆ.

ಫೋನನ್ನು ಉಷ್ಣತೆಗೆ ಒಡ್ಡಬೇಡಿ

ಫೋನನ್ನು ಉಷ್ಣತೆಗೆ ಒಡ್ಡಬೇಡಿ

ನಿಮ್ಮ ಫೋನನ್ನು ಅಥವಾ ಬೇರಾವುದೆ ಡಿವೈಜ್ ಅನ್ನು ಉಷ್ಣತೆಯಿರುವ ಜಾಗದಲ್ಲಿ ಬಿಡಬೇಡಿ ವಿಶೇಷವಾಗಿ ನೀವು ಚಾರ್ಜಿಂಗ್ ಗೆ ಇಟ್ಟಾಗ. ಇದು ಡಿವೈಜನ್ನು ಹೆಚ್ಚಿಗೆ ಬಿಸಿ ಮಾಡಿ ಸ್ಥಿತಿಯನ್ನು ಬಿಗಡಾಯಿಸುತ್ತದೆ. ನೆನಪಿರಲಿ ಬ್ಯಾಟರಿಗಳಿಗೆ ಉಷ್ಣತೆಯಿಂದ ಹೆಚ್ಚು ಪರಿಣಾಮಬೀರುತ್ತದೆ.

ಓವರ್ ಚಾರ್ಜಿಂಗ್ ಅಪಾಯಕಾರಿ

ಓವರ್ ಚಾರ್ಜಿಂಗ್ ಅಪಾಯಕಾರಿ

ನೀವು ನಿಮ್ಮ ಫೋನನ್ನು ರಾತ್ರಿಯಿಡಿ ಅಥವಾ ತುಂಬಾ ಸಮಯದ ತನಕ ಚಾರ್ಜಿಂಗ್ ಮಾಡುವವರಾದರೆ ನಿಮ್ಮ ಅಭ್ಯಾಸ ಬದಲಾಯಿಸಿಕೊಳ್ಳಿ ಏಕೆಂದರೆ ಇದು ನಿಮಗೆ ಹಾಗೂ ನಿಮ್ಮ ಬ್ಯಾಟರಿಗೆ ತುಂಬಾ ಅಪಾಯಕಾರಿ.

ಡಿವೈಜ್ ಮೇಲಿನ ಕೇಸ್ ಅಥವಾ ಕವರ್ ತೆಗೆಯಿರಿ

ಡಿವೈಜ್ ಮೇಲಿನ ಕೇಸ್ ಅಥವಾ ಕವರ್ ತೆಗೆಯಿರಿ

ಸುರಕ್ಷತೆಗಾಗಿ ಕವರ್ ಹಾಕಿದಲ್ಲಿ ಅದನ್ನು ತೆಗೆಯಿರಿ ಉಷ್ಣತೆಯನ್ನು ತಗ್ಗಿಸಲು. ಚಾರ್ಜ್ ಮಾಡುವಾಗ ಸ್ಮಾರ್ಟ್‍ಫೋನ್ ಗಳು ಸ್ವಲ್ಪ ಬಿಸಿಯಾಗುವುದು ಸಹಜ. ಉಷ್ಣತೆ ತಗ್ಗಿಸುವಂತೆ ನೋಡಿಕೊಂಡಲ್ಲಿ ಸ್ಫೋಟಗೊಳ್ಳುವುದಿಲ್ಲಾ.

ಚಾರ್ಜ್ ಮಾಡುವಾಗ ಫೋನ್ ಉಪಯೋಗಿಸಬೇಡಿ

ಚಾರ್ಜ್ ಮಾಡುವಾಗ ಫೋನ್ ಉಪಯೋಗಿಸಬೇಡಿ

ಫೋನ್ ಚಾರ್ಜಿಂಗ್ ಇಟ್ಟಾಗ ಅದನ್ನು ಆಟವಾಡಲು, ವೀಡಿಯೊಸ್ ನೋಡಲು ಅಥವಾ ಕಾಲ್ ಮಾಡಲು ಉಪಯೋಗಿಸಬೇಡಿ.ಇದು ನಿಮ್ಮ ಫೋನಿಗೆ ಬೆಂಕಿ ತಾಗುವ ಸಂಭವವನ್ನು ಹೆಚ್ಚಿಸುತ್ತದೆ ಕಾರಣ ಇದು ಉಷ್ಣತೆ ಮತ್ತು ಕೆಲಸದ ಒತ್ತಡವನ್ನು ಹೆಚ್ಚಿಸುತ್ತದೆ.

ಒರಿಜಿನಲ್ ಬ್ಯಾಟರಿ ಮತ್ತು ಚಾರ್ಜರ್ ಉಪಯೋಗಿಸಬೇಕು

ಒರಿಜಿನಲ್ ಬ್ಯಾಟರಿ ಮತ್ತು ಚಾರ್ಜರ್ ಉಪಯೋಗಿಸಬೇಕು

ಉತ್ಪಾದಕರಿಂದ ತಯಾರಿಸಲ್ಪಟ್ಟ ಒರಿಜಿನಲ್ ಬ್ಯಾಟರಿಯನ್ನು ಉಪಯೋಗಿಸಿ ಇಲ್ಲವೆ ಪ್ರತಿಷ್ಟಿತ ಕಂಪನಿಗಳಿಂದ ಮಾಡಲ್ಪಟ್ಟದ್ದನ್ನು ಉಪಯೋಗಿಸಿ. ನೀವು ಕಡಿಮೆ ದರದ ಬ್ಯಾಟರಿ ಬಳಸಲಿಚ್ಛಿಸಬಹುದು ಆದರೆ ನಂತರ ಅದು ನಿಮಗೆ ತೊಂದರೆ ನೀಡಬಹುದು.

ತುಂಬಾ ಕಡಿಮೆ ಇದ್ದಾಗ ಬ್ಯಾಟರಿ ಡಿಸ್ಚಾರ್ಜ್ ಮಾಡಬಾರದು

ತುಂಬಾ ಕಡಿಮೆ ಇದ್ದಾಗ ಬ್ಯಾಟರಿ ಡಿಸ್ಚಾರ್ಜ್ ಮಾಡಬಾರದು

30 ಶೇಕಡಾ ಆದಾಗ ಚಾರ್ಜಿಂಗ್ ಇಡುವುದು ಒಳ್ಳೆಯದು. ಲಿ-ಇಯೊನ್ ಬ್ಯಾಟರಿಸ್ ಲೊ ವೋಲ್ಟೆಜ್ ನಿಂದ ಹಾಳಾಗುವ ತೊಂದರೆಯನ್ನು ಎದುರಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Reliance LYF Water 1 smartphone is in the headlines as it catches fire injuring the user's hand. The device was not put for charge while it burst. Take a look at some tips to prevent smartphone explosions. Read more...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot