ರಿಲಯನ್ಸ್ ಜಿಯೋದ ಲೈಫ್ ಫ್ಲೇಮ್ 8 ಮತ್ತು ವಿಂಡ್ 3 4ಜಿ ಸ್ಮಾರ್ಟ್ ಫೋನುಗಳು ಫ್ಲಿಪ್ ಕಾರ್ಟಿನಲ್ಲಿ ಲಭ್ಯ.

|

ಲೈಫ್ ಶ್ರೇಣಿಯ ಹಲವು ಫೋನುಗಳನ್ನು ಮಾರುಕಟ್ಟೆಗೆ ಈಗಾಗಲೇ ಬಿಟ್ಟಿರುವ ರಿಲಯನ್ಸ್ ರೀಟೈಲ್ ಈಗ ಫ್ಲೇಮ್ 8 ಮತ್ತು ವಿಂಡ್ 3 ಸ್ಮಾರ್ಟ್ ಫೋನುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿ ಲೈಫ್ ಶ್ರೇಣಿಯ ಫೋನುಗಳ ಸಂಖೈಯನ್ನು ಹೆಚ್ಚಿಸಿದೆ.

ರಿಲಯನ್ಸ್ ಜಿಯೋದ ಲೈಫ್ ಫ್ಲೇಮ್ 8 ಮತ್ತು ವಿಂಡ್ 3 4ಜಿ ಸ್ಮಾರ್ಟ್ ಫೋನುಗಳು ಫ್ಲಿಪ್

ಎರಡೂ ಫೋನುಗಳು ಫ್ಲಿಪ್ ಕಾರ್ಟಿನಲ್ಲಿ ಮಾತ್ರ ಲಭ್ಯವಿರುತ್ತದೆ. ಫ್ಲೇಮ್ 8 ಮತ್ತು ವಿಂಡ್ 3 ಸ್ಮಾರ್ಟ್ ಫೋನುಗಳು ಫ್ಲಿಪ್ ಕಾರ್ಟಿನ ಸ್ವಾತಂತ್ರ್ಯ ದಿನದ ಮಾರಾಟದಲ್ಲಿ ಲಭ್ಯವಾಗುತ್ತದೆ. ಎರಡೂ ಫೋನುಗಳಲ್ಲಿರುವ ಕೆಲವು ಸಾಮಾನ್ಯ ಗುಣ ಲಕ್ಷಣಗಳೆಂದರೆ – ಎರಡು ಸಿಮ್ ಹಾಕುವ ಸೌಲಭ್ಯ, 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ, 4ಜಿ ವೋಲ್ಟೇ ಮತ್ತು ಎರಡರಲ್ಲೂ ಇರುವ ಓಎಸ್ ಆ್ಯಂಡ್ರಾಯ್ಡ್ 5.1 ಲಾಲಿಪಪ್.
ಓದಿರಿ: ಹೋನರ್ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ಏಕೆ ಅತ್ಯದ್ಭುತ

ಲೈಫ್ ಫ್ಲೇಮ್ 8ರಲ್ಲಿ 4.5 ಇಂಚಿನ ಎಫ್.ಡಬ್ಲ್ಯೂ.ವಿ.ಜಿ.ಎ ಪರದೆಯಿದೆ. ಫ್ಲೇಮ್ 8ರಲ್ಲಿ 1.1ಗಿಗಾಹರ್ಟ್ಜಿನ ನಾಲ್ಕು ಹೃದಯದ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 210 (ಎಂ.ಎಸ್.ಎಂ8909) ಪ್ರೊಸೆಸರ್ ಇದೆ.

ಫ್ಲೇಮ್ 8ರಲ್ಲಿ 1 ಜಿಬಿ ರ್ಯಾಮ್ ಇದೆ; 8ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ, ಮೈಕ್ರೋ ಎಸ್.ಡಿ ಕಾರ್ಡನ್ನು ಉಪಯೋಗಿಸಿಕೊಂಡು ಇದನ್ನು ವಿಸ್ತರಿಸಬಹುದು. 8ಮೆಗಾಪಿಕ್ಸೆಲ್ಲಿನ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಸ್ವಂತಿ ಕ್ಯಾಮೆರಾ, ವೈಫೈ, ಜಿ.ಪಿ.ಎಸ್ ಹಾಗೂ ಬ್ಲೂಟೂಥ್ ಇದರಲ್ಲಿರುವ ಮತ್ತಷ್ಟು ವಿಶೇಷತೆಗಳು. ಎರಡು ಸಿಮ್ಮಿನ ಸ್ಮಾರ್ಟ್ ಫೋನಿನಲ್ಲಿ 2000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ.

ರಿಲಯನ್ಸ್ ಜಿಯೋದ ಲೈಫ್ ಫ್ಲೇಮ್ 8 ಮತ್ತು ವಿಂಡ್ 3 4ಜಿ ಸ್ಮಾರ್ಟ್ ಫೋನುಗಳು ಫ್ಲಿಪ್

ಬಿಳಿ, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಲೈಫ್ ಫ್ಲೇಮ್ 8ರ ಬೆಲೆ 4,199 ರುಪಾಯಿಗಳು.
ಮತ್ತೊಂದೆಡೆ, ಲೈಫ್ ವಿಂಡ್ 3 ಫೋನಿನಲ್ಲಿ 5.5 ಇಂಚಿನ ಐ.ಪಿ.ಎಸ್ ಪರದೆಯಿದೆ. ಅಡ್ರಿನೋ 306 ಜಿ.ಪಿ.ಯು ಹಾಗು ನಾಲ್ಕು ಹೃದಯಗಳ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 410 ಪ್ರೊಸೆಸರ್ ಇದೆ.

ರಿಲಯನ್ಸ್ ಜಿಯೋದ ಲೈಫ್ ಫ್ಲೇಮ್ 8 ಮತ್ತು ವಿಂಡ್ 3 4ಜಿ ಸ್ಮಾರ್ಟ್ ಫೋನುಗಳು ಫ್ಲಿಪ್

ಈ ಸ್ಮಾರ್ಟ್ ಫೋನಿನಲ್ಲಿ 2 ಜಿಬಿ ರ್ಯಾಮ್, 16 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು ಸಂಗ್ರಹ ಸಾಮರ್ಥ್ಯವನ್ನು 32 ಜಿಬಿವರೆಗೆ ಹೆಚ್ಚಿಸಿಕೊಳ್ಳಬಹುದು. ಆ್ಯಂಡ್ರಾಯ್ಡ್ 5.1 ಲಾಲಿಪಪ್ ಓ.ಎಸ್ ಹೊಂದಿರುವ ವಿಂಡ್ 3 ಫೋನಿನಲ್ಲಿ 4ಜಿ ವೋಲ್ಟೇ, ವೈಫೈ 802.11, ಬ್ಲೂಟೂಥ್ 4.0, ಜಿ.ಪಿ.ಎಸ್ ಸೌಲಭ್ಯಗಳಿವೆ.

ಓದಿರಿ:ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 V/S ಹೋನರ್ 5ಸಿ

ಹಿಂಬದಿಯ ಪ್ರಾಥಮಿಕ ಕ್ಯಾಮೆರಾ 8 ಮೆಗಾಪಿಕ್ಸೆಲ್ಲಿನದ್ದಾಗಿದ್ದರೆ, ಮುಂಬದಿಯ ಸ್ವಂತಿ ಕ್ಯಾಮೆರಾ 2 ಮೆಗಾಪಿಕ್ಸೆಲ್ಲಿನದು. 2920 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ವಿಂಡ್ 3 ಫೋನಿನಲ್ಲಿದೆ.
ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿರುವ ಲೈಫ್ ವಿಂಡ್ 3 ಫೋನಿನ ಬೆಲೆ 6,999 ರುಪಾಯಿಗಳು.

Best Mobiles in India

English summary
Reliance Retail has expanded its portfolio under the Lyf line-up with the launch of Flame 8 and Wind 3 smartphones in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X