ಕುತೂಹಲ ಮೂಡಿಸಿದ ಗ್ಯಾಲ್ಯಾಕ್ಸಿ30, ಗ್ಯಾಲ್ಯಾಕ್ಸಿ60 ಮತ್ತು ಗ್ಯಾಲ್ಯಾಕ್ಸಿ90 ಫೋನ್‌ಗಳು!

|

ಸ್ಮಾರ್ಟ್‌ಫೋನ್‌ ಪ್ರಿಯರ ಎವರ್‌ಗ್ರೀನ್‌ ಫೆವರೇಟ್ ಕಂಪನಿ ಸ್ಯಾಮ್‌ಸಂಗ್‌ ಇತ್ತೀಚಿಗೆ ನೂತನವಾಗಿ A ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಘೋಷಿಸಿದ್ದು ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿವೆ. ಅವುಗಳಲ್ಲಿ A ಸರಣಿಯ ಗ್ಯಾಲ್ಯಾಕ್ಸಿ30, ಗ್ಯಾಲ್ಯಾಕ್ಸಿ60 ಮತ್ತು ಗ್ಯಾಲ್ಯಾಕ್ಸಿ90 ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ.

ಕುತೂಹಲ ಮೂಡಿಸಿದ ಗ್ಯಾಲ್ಯಾಕ್ಸಿ30, ಗ್ಯಾಲ್ಯಾಕ್ಸಿ60 ಮತ್ತು ಗ್ಯಾಲ್ಯಾಕ್ಸಿ90!

ಸ್ಯಾಮ್‌ಸಂಗ್ ಎ ಸರಣಿಯ ಗ್ಯಾಲ್ಯಾಕ್ಸಿ30 ಮಿಡ್‌ರೇಂಜ್‌ ಬೆಲೆಯನ್ನು ಹೊಂದಿದ್ದು, ಈಗಾಗಲೇ ಬಿಡುಗಡೆ ಆಗಿ ಲಭ್ಯವಿದೆ. ಗ್ಯಾಲ್ಯಾಕ್ಸಿ60 ಮತ್ತು ಗ್ಯಾಲ್ಯಾಕ್ಸಿ90 ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಗ್‌ಶಿಪ್‌ ಮಾದರಿಯಲ್ಲಿದ್ದು, ಗ್ರಾಹಕ ಕೈಸೇರಬೇಕಿವೆ. 6GB RAM ಸೇರಿದಂತೆ ಹೈ ಎಂಡ್‌ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ಗಳು ಗಮನ ಸೆಳೆಯುತ್ತಿವೆ.

ಕುತೂಹಲ ಮೂಡಿಸಿದ ಗ್ಯಾಲ್ಯಾಕ್ಸಿ30, ಗ್ಯಾಲ್ಯಾಕ್ಸಿ60 ಮತ್ತು ಗ್ಯಾಲ್ಯಾಕ್ಸಿ90!

ಗ್ಯಾಲ್ಯಾಕ್ಸಿ ಎ60 ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾವನ್ನು ಹೊಂದಿರಲಿದ್ದು, ಹಾಗೇ ಗ್ಯಾಲ್ಯಾಕ್ಸಿ ಎ90 ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಆಯ್ಕೆಯಲ್ಲಿರಲಿದೆ. ಜೊತೆಗೆ ವೇಗದ ಪ್ರೊಸೆಸರ್‌ ಸಹ ಹೊಂದಿರಲಿವೆ. ಹಾಗಾದರೇ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಮತ್ತು ಗ್ಯಾಲ್ಯಾಕ್ಸಿ ಎ ಸರಣಿಯಲ್ಲಿರುವ ಇತರೆ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಗ್ಯಾಲ್ಯಾಕ್ಸಿ ಎ30

ಗ್ಯಾಲ್ಯಾಕ್ಸಿ ಎ30

6.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ 4GB RAM ಜೊತೆಗೆ 64GB ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ.ಫೋನ್‌ ಹಿಂಬದಿಯಲ್ಲಿ 16ಎಂಪಿ ಮತ್ತು 5ಎಂಪಿ ಸಾಮರ್ಥ್ಯದ ಡ್ಯುಯಲ್‌ ಕ್ಯಾಮೆರಾವನ್ನು ಒಳಗೊಂಡಿದ್ದು, ಸ್ಯಾಮ್‌ಸಂಗ್‌ Exynos ಆಕ್ಟಾ 7904 ಪ್ರೊಸೆಸರ್‌ ಇದೆ. 4000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ.

ಗ್ಯಾಲ್ಯಾಕ್ಸಿ ಎ60

ಗ್ಯಾಲ್ಯಾಕ್ಸಿ ಎ60

ಗ್ಯಾಲ್ಯಾಕ್ಸಿ ಎ60 ಸ್ಮಾರ್ಟ್‌ಫೋನ್‌ 1,080 x 2,340 ಪಿಕ್ಸಲ್‌ ರೆಸಲ್ಯೂಶನ್‌ ನೊಂದಿಗೆ 6.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, 6GB RAM ಇದರಲ್ಲಿ ಕೆಲಸ ನಿರ್ವಹಿಸಲಿದೆ. ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಕ್ರಮವಾಗಿ 16ಎಂಪಿ+ 5ಎಂಪಿ ಮತ್ತು 8ಎಂಪಿ ಸಾಮರ್ಥ್ಯದಲ್ಲಿರಲಿವೆ. 3410mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ.

ಗ್ಯಾಲ್ಯಾಕ್ಸಿ ಎ90

ಗ್ಯಾಲ್ಯಾಕ್ಸಿ ಎ90

1080x2400 ಪಿಕ್ಸಲ್‌ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ 6GB RAM ಜೊತೆಗೆ 128GB ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ. ಫೋನ್‌ ಹಿಂಬದಿಯಲ್ಲಿ 48ಎಂಪಿ ಮತ್ತು 8ಎಂಪಿ ಸಾಮರ್ಥ್ಯದ ಡ್ಯುಯಲ್‌ ಕ್ಯಾಮೆರಾವನ್ನು ಒಳಗೊಂಡಿದ್ದು, ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ಇರಲಿದೆ. 3700mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ.

ಗ್ಯಾಲ್ಯಾಕ್ಸಿ ಎ70

ಗ್ಯಾಲ್ಯಾಕ್ಸಿ ಎ70

ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್‌ 1080x2400 ಪಿಕ್ಸಲ್‌ ರೆಸಲ್ಯೂಶನ್‌ ನೊಂದಿಗೆ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, 6GB RAM ಇದರಲ್ಲಿ ಕೆಲಸ ನಿರ್ವಹಿಸಲಿದೆ. ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಕ್ರಮವಾಗಿ 32ಎಂಪಿ+ 8ಎಂಪಿ ಮತ್ತು 5ಎಂಪಿ ಸಾಮರ್ಥ್ಯದಲ್ಲಿರಲಿವೆ. 4500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ.

ಗ್ಯಾಲ್ಯಾಕ್ಸಿ ಎ80

ಗ್ಯಾಲ್ಯಾಕ್ಸಿ ಎ80

6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ 8GB RAM ಜೊತೆಗೆ 128GB ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ.ಫೋನ್‌ ಹಿಂಬದಿಯಲ್ಲಿ 48ಎಂಪಿ ಮತ್ತು 8ಎಂಪಿ ಸಾಮರ್ಥ್ಯದ ಡ್ಯುಯಲ್‌ ಕ್ಯಾಮೆರಾವನ್ನು ಒಳಗೊಂಡಿದ್ದು, ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್‌ ಇರಲಿದೆ. 3700mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ.

Best Mobiles in India

English summary
Samsung Galaxy A30, Samsung Galaxy A60 and Samsung Galaxy A90.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X