ಬರಲಿದೆ ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎ60'!..ನೆಲಕಚ್ಚಲಿದೆ ಚೀನಾ ಸ್ಮಾರ್ಟ್‌ಫೋನ್' ಮಾರಾಟ.!!

|

ಜನಪ್ರಿಯ ಸ್ಯಾಮ್‌ಸಂಗ್ ಕಂಪನಿ ಇತ್ತೀಚಿಗಷ್ಟೆ ಭಾರತೀಯ ಮಾರುಕಟ್ಟೆಯಲ್ಲಿ ಗ್ಯಾಲ್ಯಾಕ್ಸಿ 'ಎ10' 'ಎ20' ಮತ್ತು 'ಎ50' ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಘೋಷಿಸಿ ಭಾರಿ ಸುದ್ದಿ ಮಾಡಿತ್ತು. ಇದೀಗ ಕಂಪನಿ ಮತ್ತೆ ಗ್ಯಾಲ್ಯಾಕ್ಸಿ 'ಎ' ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಒಂದನ್ನು ಪರಿಚಯಿಸಲು ಮುಂದಾಗಿದ್ದು, ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಮಾರಾಟ ನೆಲಕಚ್ಚುವಂತೆ ಮಾಡಲು ಸನ್ನದ್ದವಾದಂತಿದೆ.

ಬರಲಿದೆ 'ಗ್ಯಾಲ್ಯಾಕ್ಸಿ ಎ60'!..ನೆಲಕಚ್ಚಲಿದೆ ಚೀನಾ ಸ್ಮಾರ್ಟ್‌ಫೋನ್' ಮಾರಾಟ.!!

ಹೌದು, ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎ60' ಹೆಸರಿನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದ್ದು, ಈ ಸ್ಮಾರ್ಟ್‌ಫೋನ್‌ ರಿಲೀಸ್‌ ಆದ ನಂತರ ಕಂಪನಿಯು ಮತ್ತೆ 'ಗ್ಯಾಲ್ಯಾಕ್ಸಿ ಎ' ಸರಣಿಯಲ್ಲಿಯೇ 'ಗ್ಯಾಲ್ಯಾಕ್ಸಿ ಎ40' ಮತ್ತು 'ಗ್ಯಾಲ್ಯಾಕ್ಸಿ ಎ70' ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿದೆ. ಮುಂಬರಲಿರುವ ಈ ಸ್ಮಾರ್ಟ್‌ಫೋನ್‌ಗಳು ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.

ಬರಲಿದೆ 'ಗ್ಯಾಲ್ಯಾಕ್ಸಿ ಎ60'!..ನೆಲಕಚ್ಚಲಿದೆ ಚೀನಾ ಸ್ಮಾರ್ಟ್‌ಫೋನ್' ಮಾರಾಟ.!!

ಸದ್ಯದಲ್ಲಿಯೇ ರಿಲೀಸ್‌ ಆಗಲಿರುವ ಗ್ಯಾಲ್ಯಾಕ್ಸಿ ಎ60 ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಯು ಮಾದರಿಯ ಡಿಸ್‌ಪ್ಲೇಯನ್ನು ಹೊಂದಿರುವ ಜತೆಗೆ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರಲಿದೆ. ಹಾಗಾದರೇ ಗ್ಯಾಲ್ಯಾಕ್ಸಿ ಎ6೦ ಸ್ಮಾರ್ಟ್‌ಫೋನ್ ಇನ್ನಿತರೆ ಏನೆಲ್ಲಾ ಸ್ಪೆಷಲ್ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಯು ಮಾದರಿಯ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಸುತ್ತಲೂ ಅತಿ ಕಡಿಮೆ ಅಂಚನ್ನು ಹೊಂದಿರಲಿದ್ದು, ವಾಟರ್ ನಾಚ್ ಇರಲಿದೆ. ಪಿಕ್ಸಲ್‌ನ ಪ್ರತಿ ಇಂಚಿನ ನಡಿವಿನ ಅನುಪಾತವು 385ppi ಆಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನ್ಯಾಮ್‌ಡ್ರಾಗನ್ 675 ಸಾಮರ್ಥ್ಯದ ಪ್ರೊಸೆಸರ್ ಅನ್ನು ಒಳಗೊಂಡಿರಲಿದ್ದು, ಇದರೊಂದಿಗೆ ಅಡ್ರೆನೋ 612 ಗ್ರಾಫಿಕ್ಸ್ ಒದಗಿಸಲಾಗಿದೆ. ಆಂಡ್ರಾಯ್ಡ್‌ 9.0 ಪೈ ಅಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಮೆಮೊರಿ

ಮೆಮೊರಿ

6GB ಮತ್ತು 8GB RAM ಸಾಮರ್ಥ್ಯದ ಆಯ್ಕೆಗಳಲ್ಲಿ ಬರಲಿದ್ದು, ಇದರೊಟ್ಟಿಗೆ 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒದಗಿಸಲಾಗಿದೆ ಎನ್ನಲಾಗುತ್ತಿದೆ. ಬಾಹ್ಯ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೂ ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಲಿದೆ.

ಕ್ಯಾಮೆರಾ

ಕ್ಯಾಮೆರಾ

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾಗಳನ್ನು ಹೊಂದಿರಲಿದ್ದು, ಮುಖ್ಯ ಕ್ಯಾಮೆರಾ 32MPಯ ಪ್ರಾಥಮಿಕ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನೂ ಎರಡನೇ ಕ್ಯಾಮೆರಾ 8MP ವೈಲ್ಡ್ ಆಂಗಲ್ ಮತ್ತು ಮೂರನೇ ಕ್ಯಾಮೆರಾ 5MP ಸಾಮರ್ಥ್ಯದಲ್ಲಿರಲಿವೆ. ಸೆಲ್ಫಿಗಾಗಿ 32MP ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ಬ್ಯಾಟರಿ

ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ60 ಸ್ಮಾರ್ಟ್‌ಫೋನ್ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಿದ್ದು, ಸುಮಾರು ಎರಡು ದಿನಗಳವರೆಗೂ ಬಾಳಿಕೆ ಬರುವ ಶಕ್ತಿಯನ್ನು ಹೊಂದಿರಲಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಸೌಲಭ್ಯವನ್ನು ಅನ್ನು ಸಹ ನೀಡುವ ಸಾಧ್ಯತೆಗಳಿವೆ.

Best Mobiles in India

English summary
Samsung Galaxy A60 will be the next smartphone in the Galaxy A-series that is expected to go official soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X