ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ A70 ಮತ್ತು ಗ್ಯಾಲ್ಯಾಕ್ಸಿ A50 ನಡುವಿನ ವ್ಯತ್ಯಾಸ!

|

ಸ್ಯಾಮ್‌ಸಂಗ್‌ ಕಂಪನಿಯು ತನ್ನ ಗ್ಯಾಲ್ಯಾಕ್ಸಿ A ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೆ ಇದ್ದು, ಇತ್ತೀಚಿಗೆ ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಪೋನ್‌ ಅನ್ನು ಲಾಂಚ್‌ ಮಾಡಿದ್ದು, ಟಾಪ್‌ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಹಾಗೇ ಈ ಮೊದಲು ಲಾಂಚ್ ಆಗಿದ್ದ ಗ್ಯಾಲ್ಯಾಕ್ಸಿ ಎ 50 ಸ್ಮಾರ್ಟ್‌ಫೋನ್‌ ಸಹ ಸುದ್ದಿಯಲ್ಲಿದ್ದು, ಮೊಬೈಲ್‌ ಮಾರುಕಟ್ಟೆಯಲ್ಲಿಗ ಟ್ರೆಂಡ್‌ ಹುಟ್ಟುಹಾಕಿವೆ.

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ A70 ಮತ್ತು ಗ್ಯಾಲ್ಯಾಕ್ಸಿ A50 ನಡುವಿನ ವ್ಯತ್ಯಾಸ!

ಹೌದು, ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎ70 ಹೈ ಎಂಡ್‌ ಬೆಲೆಯನ್ನು ಹೊಂದಿದ್ದು ಮತ್ತು ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್‌ ಮಿಡ್‌ರೇಂಜ್‌ ದರವನ್ನು ಹೊಂದಿದೆ. ಆದರೆ ಈ ಸ್ಮಾರ್ಟ್‌ಫೋನ್‌ಗಳು ಫೀಚರ್ಸ್‌ಗಳು ಸ್ಕ್ರೀನ್‌ ಮಾದರಿ, ಸ್ಕ್ರೀನ್‌ ರೆಸಲ್ಯೂಶನ್‌, ಅಂಚು ರಹಿತ ಡಿಸ್‌ಪ್ಲೇ ಸಾಮ್ಯತೆಯನ್ನು ಹೊಂದಿದ್ದು, ಇನ್ನುಳಿದ ಫೀಚರ್ಸ್‌ಗಳಲ್ಲಿ ಭಿನ್ನತೆಯಿದೆ. ಹಾಗಾದರೇ ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎ70 ಮತ್ತು ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್‌ಗಳ ವಿಶೇಷ ಫೀಚರ್ಸ್‌ಗಳೆನು ಎಂಬುದನ್ನು ನೋಡೋಣ ಬನ್ನಿರಿ.

ಗ್ಯಾಲ್ಯಾಕ್ಸಿ ಎ70 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ70 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್ 2400 x 1080 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಅಂಚು ರಹಿತ ಡಿಸ್‌ಪ್ಲೇ ಇದ್ದು, ವಾಟರ್‌ ಡ್ರಾಪ್‌ ನಾಚ್‌ ಅನ್ನು ಹೊಂದಿದೆ.

ಗ್ಯಾಲ್ಯಾಕ್ಸಿ ಎ50 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ50 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್ 2400 x 1080 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 6.4 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸಹ ಅಂಚು ರಹಿತ ಡಿಸ್‌ಪ್ಲೇಯನ್ನು ಹೊಂದಿರುವ ಜೊತೆಗೆ ವಾಟರ್‌ ಡ್ರಾಪ್‌ ನಾಚ್‌ ಅನ್ನು ಹೊಂದಿದೆ.

ಗ್ಯಾಲ್ಯಾಕ್ಸಿ ಎ70 ಪ್ರೊಸೆಸರ್

ಗ್ಯಾಲ್ಯಾಕ್ಸಿ ಎ70 ಪ್ರೊಸೆಸರ್

ಆಕ್ಟಾಕೋರ್‌ ಪ್ರೊಸೆಸರ್ ಮಾದರಿಯಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಅನ್ನು ಹೊಂದಿದೆ. 2GHz ವೇಗದಲ್ಲಿ ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ಆಡ್ರಿನೊ 612 ಗ್ರಾಫಿಕ್ ಸಹ ಹೊಂದಿದೆ. 6GB ಸಾಮರ್ಥ್ಯದ RAM ಶಕ್ತಿಯನ್ನು ಪಡೆದಿದೆ.

ಗ್ಯಾಲ್ಯಾಕ್ಸಿ ಎ50 ಪ್ರೊಸೆಸರ್

ಗ್ಯಾಲ್ಯಾಕ್ಸಿ ಎ50 ಪ್ರೊಸೆಸರ್

ಆಕ್ಟಾಕೋರ್‌ ಪ್ರೊಸೆಸರ್ ಮಾದರಿಯಿದ್ದು, ಸ್ಯಾಮ್‌ಸಂಗ್ 675 Exynos 7 ( 9610) ಪ್ರೊಸೆಸರ್‌ ಅನ್ನು ಹೊಂದಿದೆ. 2.3GHz ವೇಗದಲ್ಲಿ ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು,Mali G72 MP3 ಗ್ರಾಫಿಕ್ ಸಹ ಹೊಂದಿದೆ. 4GB ಸಾಮರ್ಥ್ಯದ RAM ಶಕ್ತಿಯನ್ನು ಪಡೆದಿದೆ.

ಗ್ಯಾಲ್ಯಾಕ್ಸಿ ಎ70 ಕ್ಯಾಮೆರಾ

ಗ್ಯಾಲ್ಯಾಕ್ಸಿ ಎ70 ಕ್ಯಾಮೆರಾ

ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಒಳಗೊಂಡಿದ್ದು, ಪ್ರಾಥಮಿಕ ರೇರ ಕ್ಯಾಮೆರಾವು 32ಮೆಗಾಪಿಕ್ಸಲ್, ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸಲ್ ಮತ್ತು ಮೂರನೇ ಕ್ಯಾಮೆರಾವು 5ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒಳಗೊಂಡಿವೆ. ಇನ್ನು ಸೆಲ್ಫಿ ಕ್ಯಾಮೆರಾ ಸಹ 32ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ.

ಗ್ಯಾಲ್ಯಾಕ್ಸಿ ಎ50 ಕ್ಯಾಮೆರಾ

ಗ್ಯಾಲ್ಯಾಕ್ಸಿ ಎ50 ಕ್ಯಾಮೆರಾ

ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಒಳಗೊಂಡಿದ್ದು, ಪ್ರಾಥಮಿಕ ರೇರ ಕ್ಯಾಮೆರಾವು 25ಮೆಗಾಪಿಕ್ಸಲ್, ಸೆಕೆಂಡರಿ ಕ್ಯಾಮೆರಾವು 5 ಮೆಗಾಪಿಕ್ಸಲ್ ಮತ್ತು ಮೂರನೇ ಕ್ಯಾಮೆರಾವು 8 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒಳಗೊಂಡಿವೆ. ಇನ್ನು ಸೆಲ್ಫಿ ಕ್ಯಾಮೆರಾ ಸಹ 25 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ.

ಗ್ಯಾಲ್ಯಾಕ್ಸಿ ಎ70 ಬ್ಯಾಟರಿ

ಗ್ಯಾಲ್ಯಾಕ್ಸಿ ಎ70 ಬ್ಯಾಟರಿ

4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘಕಾಲ ಬಾಳಿಕೆ ಬರುವ ಶಕ್ತಿಯನ್ನು ಬ್ಯಾಟರಿ ಹೊಂದಿದೆ. ಇದರೊಂದಿಗೆ 25W ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ತಂತ್ರಜ್ಞಾನದ ಸೌಲಭ್ಯವನ್ನು ಪಡೆದಿದೆ.

ಗ್ಯಾಲ್ಯಾಕ್ಸಿ ಎ50 ಬ್ಯಾಟರಿ

ಗ್ಯಾಲ್ಯಾಕ್ಸಿ ಎ50 ಬ್ಯಾಟರಿ

4000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘಕಾಲ ಬಾಳಿಕೆ ಬರುವ ಶಕ್ತಿಯನ್ನು ಬ್ಯಾಟರಿ ಹೊಂದಿದೆ. ಇದರೊಂದಿಗೆ ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ತಂತ್ರಜ್ಞಾನದ ಸೌಲಭ್ಯವನ್ನು ಪಡೆದಿದೆ.

ಗ್ಯಾಲ್ಯಾಕ್ಸಿ ಎ70 ಬೆಲೆ

ಗ್ಯಾಲ್ಯಾಕ್ಸಿ ಎ70 ಬೆಲೆ

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್‌ ಪ್ರೀಮಿಯಮ್‌ ಮಿಡ್‌ರೇಂಜ್ ಮಾದರಿಯ ಫೋನಾಗಿದೆ. ಬ್ಲ್ಯಾಕ್‌, ವೈಟ್‌ ಮತ್ತು ಬ್ಲೂ ಬಣ್ಣದ ಆಯ್ಕೆಗಳನ್ನು ಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಇದರ ಆರಂಭಿಕ ಬೆಲೆಯು 28,990ರೂ.ಗಳು ಆಗಿವೆ.

ಗ್ಯಾಲ್ಯಾಕ್ಸಿ ಎ50 ಬೆಲೆ

ಗ್ಯಾಲ್ಯಾಕ್ಸಿ ಎ50 ಬೆಲೆ

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್‌ ಮಿಡ್‌ರೇಂಜ್ ಮಾದರಿಯ ಫೋನಾಗಿದೆ. ಬ್ಲ್ಯಾಕ್‌, ವೈಟ್‌ ಮತ್ತು ಬ್ಲೂ ಬಣ್ಣದ ಆಯ್ಕೆಗಳನ್ನು ಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಇದರ ಆರಂಭಿಕ ಬೆಲೆಯು 19,990ರೂ.ಗಳು ಆಗಿದೆ.

Best Mobiles in India

English summary
Samsung Galaxy A70 launched in India this week. Here’s how the latest Galaxy A70 compares with Samsung Galaxy A50.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X