ಚೀನಾ ಸ್ಮಾರ್ಟ್‌ಫೋನ್‌ಗಳ ದಹನಕ್ಕೆ ಸ್ಯಾಮ್‌ಸಂಗ್‌ನಿಂದ ಹೊಸ ಅಸ್ತ್ರ..!

|

ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಕ್ಯಾಮೆರಾ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಲು ಮುಂದಾಗಿವೆ, ಇದೇ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಗಳ ಹುಚ್ಚು ಹುಟ್ಟುಹಾಕಿದ ಸ್ಯಾಮ್ ಸಂಗ್ ಕಂಪನಿಯೂ ತನ್ನ ಬಳಕೆದಾರರಿಗಾಗಿ ಹೊಸ ಮಾದರಿಯ ಕ್ಯಾಮೆರಾ ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಚೀನಾ ಸ್ಮಾರ್ಟ್‌ಫೋನ್‌ಗಳ ದಹನಕ್ಕೆ ಸ್ಯಾಮ್‌ಸಂಗ್‌ನಿಂದ ಹೊಸ ಅಸ್ತ್ರ..!

ಓದಿರಿ: ನಷ್ಟದ ಹಾದಿಯಲ್ಲಿ ಏರ್‌ಟೆಲ್-ವೊಡಾ: ಜಿಯೋ ಸೆಪ್ಟೆಂಬರ್ ತಿಂಗಳ ಆದಾಯ ಎಷ್ಟು ಗೊತ್ತಾ..?

ಅದರಲ್ಲೂ ಚೀನಾ ಕಂಪನಿಗಳು ಸೆಲ್ಫಿ ಕ್ಯಾಮೆರಾಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಇದರಿಂದಾಗಿಯೇ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಇದೇ ಮಾದರಿಯಲ್ಲಿ ಸ್ಯಾಮ್‌ಸಂಗ್ ತನ್ನ ಮುಂದಿನ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಸೆಲ್ಪಿ ಕ್ಯಾಮೆಕರಾವನ್ನು ಅಳವಡಿಸುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಡಿಸೈನ್ ಇಮೇಜ್ ಲೀಕ್ ಆಗಿದೆ.

ಸ್ಯಾಮ್‌ಸಂಗ್ A8:

ಸ್ಯಾಮ್‌ಸಂಗ್ A8:

ಈಗಾಗಲೇ ಸ್ಯಾಮ್‌ಸಂಗ್ A ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಇದೇ ಸಾಲಿಗೆ ಸೇರಿಕೊಳ್ಳಲಿದೆ ಸ್ಯಾಮ್‌ಸಂಗ್ A8. ಈ ಸ್ಮಾರ್ಟ್‌ಫೋನ್ ಸೆಲ್ಫಿಗಾಗಿಯೇ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ. ಈ ಫೋನಿನಲ್ಲಿ ಉತ್ತಮ ಸೆಲ್ಫಿಗಳನಜ್ಜನು ತೆಗೆಯಬಹುದಾಗಿದೆ.

ಗ್ಯಾಲೆಕ್ಸಿ S8 ಮಾದರಿಯ ಡಿಸ್‌ಪ್ಲೇ:

ಗ್ಯಾಲೆಕ್ಸಿ S8 ಮಾದರಿಯ ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಕಂಪನಿಯ ಸದ್ಯದ ಟಾಪ್ ಎಂಡ್ ಫೋನ್ ಗ್ಯಾಲೆಕ್ಸಿ S8 ಸ್ಮಾರ್ಟ್‌ಫೋನಿನಲ್ಲಿರುವ ಇನ್‌ಫಿನಿಟಿ 18:9 ಅನುಪಾತದ ಮಾದರಿಯ ಡಿಸ್‌ಪ್ಲೇಯನ್ನು ಸ್ಯಾಮ್‌ಸಂಗ್ A8 ಸ್ಮಾರ್ಟ್‌ಫೋನಿನಲ್ಲಿಯೂ ಕಾಣಬಹುದಾಗಿದೆ. ಲೀಕ್ ಆಗಿರುವ ವಿನ್ಯಾಸದಲ್ಲಿ ಇದನ್ನು ಕಾಣಬಹುದಾಗಿದೆ.

ಸ್ಯಾಮ್‌ಸಂಗ್ A8 ವಿಶೇಷತೆ:

ಸ್ಯಾಮ್‌ಸಂಗ್ A8 ವಿಶೇಷತೆ:

ಸ್ಯಾಮ್‌ಸಂಗ್ A8 ಸ್ಮಾರ್ಟ್‌ಫೊನಿನಲ್ಲಿ 6 ಇಂಚಿನ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ 4GB RAM ಕಾಣಬಹುದಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೀನಾ ಫೋನ್ ಗಳಿಗೆ ನಡುಕ:

ಚೀನಾ ಫೋನ್ ಗಳಿಗೆ ನಡುಕ:

ಈಗಾಗಲೇ ಸೆಲ್ಫಿಗೆ ಪ್ರಮುಖ್ಯತೆ ನೀಡುತ್ತಿರುವ ಒಪ್ಪೋ, ಹೊಸದಾಗಿ ಸೆಲ್ಪಿ ಫೋನ್ ಬಿಟ್ಟ ಶಿಯೋಮಿಗಳಿಗೆ ಸ್ಯಾಮ್‌ಸಂಗ್ ನ ಈ ಹೊಸ ಫೋನ್ ಬಿಡುಗಡೆಯ ವಿಚಾರ ಸಾಕಷ್ಟು ಸಂಕಷ್ಟವನ್ನು ತರಲಿದೆ. ಈಗಾಗಲೇ ಸ್ಯಾಮ್‌ಸಂಗ್ A8 ಸ್ಮಾರ್ಟ್‌ಫೋನ್‌ ಸದ್ದು ಹೆಚ್ಚಾಗಿದೆ.

Best Mobiles in India

English summary
Samsung Galaxy A8 (2018) leak reveals Galaxy S8-like Infinity Display, dual front cameras. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X