ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ: ರೂ. 8,490ಕ್ಕೆ ಪೇಟಿಎಂ ಮಾಲ್‌ನಲ್ಲಿ ಲಭ್ಯ
ಸ್ಯಾಮ್‌ಸಂಗ್ ಸಹ ಬಜೆಟ್ ಸ್ಮಾರ್ಟ್‌ಫೋನ್‌ವೊಂದನ್ನು ಬಿಡುಗಡೆ ಮಾಡಿದೆ.
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ 10,000 ರೂ. ಒಳಗಿನ ಸ್ಮಾರ್ಟ್‌ಫೋನುಗಳ ಮಾರಾಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಲಿನೋವೋ, ಶಿಯೋಮಿ, ಒಪ್ಪೋ, ವಿವೋ, ಮೋಟೋ ಹಾಗೂ ಮುಂದೆ ಬರಲಿರುವ ನೋಕಿಯಾ ಸಹ ಇದೇ ಬೆಲೆಯ ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿವೆ. ಸದ್ಯ ಇದೇ ಹಾದಿಯಲ್ಲಿ ಸಾಗಿರುವ ಸ್ಯಾಮ್‌ಸಂಗ್ ಸಹ ಬಜೆಟ್ ಸ್ಮಾರ್ಟ್‌ಫೋನ್‌ವೊಂದನ್ನು ಬಿಡುಗಡೆ ಮಾಡಿದೆ.

ಓದಿರಿ: ಜಿಯೋ ಪ್ರೈಮ್ ಬಳಕೆದಾರರಿಗೆ ಟ್ರಾಯ್ ನೀಡಿದೆ ಸಿಹಿ ಸುದ್ದಿ
ಸದ್ಯ ಮಾರುಕಟ್ಟೆಗೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ ಕಾಲಿಟ್ಟಿದ್ದು, ಇದು ಸಹ ಕೇವಲ ಪೇಟಿಎಂ ಮಾಲ್‌ನಲ್ಲಿ ಮಾತ್ರ ಲಭ್ಯವಿರಲಿದೆ. ರೂ. 8,490ಕ್ಕೆ ಈ ಫೋನ್ ಮಾರಾಟವಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಶಿಯೋಮಿ ನೋಟ್ 4, ಮೋಟೋ G5 ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಸ್ಪರ್ಧೆಯನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ:
ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನಾಗಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ ಡೇಟಾ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿಯೇ ಹೊಸದೊಂದು ಆಯ್ಕೆಯನ್ನು ತನ್ನ ಬಳಕೆದಾರರಿಗಾಗಿ ನೀಡಲು ಮುಂದಾಗಿದೆ. ಇದಕ್ಕೆಂದೆ S ಮೋಡ್ ವೊಂದನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಬೇರೆ ಫೋನುಗಳಿಗೆ ಹೋಲಿಸಿಕೊಂಡರೆ ಶೇ 50% ಡೇಟಾವನ್ನು ಕಡಿಮೆ ಬಳಸಿಕೊಳ್ಳಲಿದೆ.

5 ಇಂಚಿನ HD ಡಿಸ್‌ಪ್ಲೇ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ 5 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. 1280 x 720 ರೆಸಲ್ಯೂಷನ್‌ನ ಸೂಪರ್ ಅಮೊಲೈಡ್ ಡಿಸ್‌ಪ್ಲೇ ಇದಾಗಿದೆ. ಗುಣಮಟ್ಟದ ವಿಡಿಯೋ ವೀಕ್ಷಣೆಯ ಅನುಭವ ಉತ್ತಮವಾಗಿರಲಿದೆ.

2 GB RAM ಮತ್ತು 16 GB ROM:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ 2 GB RAM ನೊಂದಿಗೆ 16 GB ಇಂಟರ್ನಲ್ ಮೆಮೊರಿಯನ್ನು ಸಹ ಹೊಂದಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳವ ಅವಕಾಶ ಈ ಫೋನಿನಲ್ಲಿದೆ.

8 MP/5 MP ಕ್ಯಾಮೆರಾ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ LED ಫ್ಲಾಷ್ ನೊಂದಿಗೆ 8 MP ಕ್ಯಾಮೆರಾವನ್ನು ಅವಳಡಿಸಲಾಗಿದ್ದು, ಮುಂಭಾಗದಲ್ಲಿ ಉತ್ತಮ ಸೆಲ್ಫಿಗಳನ್ನು ಸೆರೆಹಿಡಿಯಲು 5 MP ಕ್ಯಾಮೆರಾವನ್ನು ನೀಡಲಾಗಿದೆ.

ಇತರೇ ವಿಶೇಷತೆಗಳು:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಸಿಮ್ ಹಾಕಬಹುದಾಗಿದ್ದು, 4G LTE, Wi-Fi , Bluetooth 4.1, GPS/GLONASS, NFC ಮತ್ತು micro USB ಪೋರ್ಟ್ ಹೊಂದಿದೆ.

ಗ್ಯಾಲೆಕ್ಸಿ J3 ಪ್ರೋ ಮೈನಸ್ ಪಾಯಿಂಟ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J3 ಪ್ರೋ ಸ್ಮಾರ್ಟ್‌ಫೋನಿನ ಮೈನಸ್ ಪಾಯಿಂಟ್ ಎಂದರೆ ಈ ಫೋನು ಆಂಡ್ರಾಯ್ಡ್ 5.1 ಲಾಲಿಪಾಪ್ ನಲ್ಲಿ ಕಾರ್ಯನಿರ್ವಹಿಸಲಿದೆ. ಈಗಾಗಲೇ ಆಂಡ್ರಾಯ್ಡ್ 7.0 ಬಂದಿರುವ ಹಿನ್ನಲೆಯಲ್ಲಿ ಇದು ತೀರಾ ಹಿಂದುಳಿಯಲಿದೆ. ಅಲ್ಲದೇ 2600 mAh ಬ್ಯಾಟರಿ ಈ ಫೋನಿನ ಸಹ ಕಾರ್ಯಕ್ಷಮೆತೆಯನ್ನು ಕೊಂಚ ಕಡಿಮೆ ಮಾಡಲಿದೆ.


Click it and Unblock the Notifications








