Just In
Don't Miss
- Automobiles
ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು
- Sports
ಅಂಡರ್ಟೇಕರ್ vs ಬ್ರಾಕ್ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ
- News
ಯೋಗೀಶ್ವರ್ ಕೊಟ್ಟ ಸೀರೆಯನ್ನು ಬೀದಿಗೆ ಬಿಸಾಕಿದರು: ಜಿ.ಟಿ.ದೇವೇಗೌಡ
- Finance
ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್ ಐಡಿಯಾಗಳು
- Education
IAF ನೇಮಕಾತಿ: ದ್ವಿತೀಯ ಪಿಯುಸಿ ಪಾಸ್ ?... ತಿಂಗಳಿಗೆ 33,000/-ರೂ ವೇತನ ಪಡೆಯುವ ಅವಕಾಶ
- Lifestyle
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಗ್ಯಾಲ್ಯಾಕ್ಸಿ M30s ವಿಮರ್ಶೆ : ಬ್ಯಾಟರಿ ಬ್ಯಾಕ್‌ಅಪ್ ಪ್ಲಸ್ ಪಾಯಿಂಟ್!
ಸ್ಯಾಮ್‌ಸಂಗ್ ಕಂಪನಿಯು ಇದೀಗ ಬಜೆಟ್ ಪ್ರೈಸ್‌ಟ್ಯಾಗ್‌ಗಳಲ್ಲಿ ಬೆಸ್ಟ್ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದ್ದು, ಅದಕ್ಕೆ ಇತ್ತೀಚಿಗೆ ಬಿಡುಗಡೆ ಆಗಿರುವ 'ಗ್ಯಾಲ್ಯಾಕ್ಸಿ ಎಂ30ಎಸ್' ಉದಾಹರಣೆಯಂತಿದೆ. 48ಎಂಪಿ ರಿಯರ್ ಕ್ಯಾಮೆರಾ ಮತ್ತು 6000mAh ಬ್ಯಾಟರಿ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಈಗಾಗಲೇ ದೇಶಿಯ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಸೇಲ್ ಆರಂಭಿಸಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30ಎಸ್ ಫೋನ್ ಗ್ರಾಹಕರಿಗೆ ಎರಡು ವೇರಿಯಂಟ್ ಮಾದರಿಗಳಲ್ಲಿ ಲಭ್ಯವಾಗಲಿದ್ದು, ಅವುಗಳು ಕ್ರಮವಾಗಿ 4GB RAM/64GB ಮತ್ತು 6GB RAM/128GB ಸ್ಟೋರೇಜ್ ಆಯ್ಕೆಗಳಾಗಿವೆ. ಹಾಗೆಯೇ ಈ ಫೋನ್ ಓಪಲ್ ಬ್ಲ್ಯಾಕ್, ಶಾಪೈರ್ ಬ್ಲೂ ಮತ್ತು ಪರ್ಲ್ ವೈಟ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಪಡೆದಿದೆ. ಇನ್ನುಳಿದಂತೆ ಫೀಚರ್ಸ್‌ಗಳೆನು ?.ಮತ್ತು ಕಾರ್ಯವೈಖರಿ ಹೇಗಿದೆ ತಿಳಿಯಲು ಇಂದಿನ ಈ ಲೇಖನದಲ್ಲಿ 'ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30ಎಸ್' ಸ್ಮಾರ್ಟ್‌ಫೋನಿನ ಕುರಿತ ವಿಮರ್ಶೆ ನೀಡಲಾಗಿದೆ. ಮುಂದೆ ಓದಿರಿ.

ಪೂರ್ಣ ಹೆಚ್ ಡಿಸ್‌ಪ್ಲೇ
ಗ್ಯಾಲ್ಯಾಕ್ಸಿ ಎಂ30ಎಸ್ ಸ್ಮಾರ್ಟ್‌ಫೋನ್ 6.4 ಇಂಚಿನ AMOLED ಫುಲ್ ಹೆಚ್‌ಡಿ ಪ್ಲಸ್ ಇನ್‌ಫಿನಿಟಿ ಯು ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 1080 x 2340 ಆಗಿದ್ದು, ಹೆಚ್ಚು ಪರಿಣಾಮಕಾರಿಯಾಗಿದೆ. ಈ ಸ್ಕ್ರೀನಿನ ಅನುಪಾತವು ಶೇ.91% ಆಗಿದ್ದು, ಡಿಸ್‌ಪ್ಲೇಯ ಕಾಂಡ್ರಾಸ್ಟ್ ಅನುಪಾತವು 78960:1ರಷ್ಟಾಗಿದೆ. ಪ್ರತಿ ಇಂಚಿನ ಸಾಂದ್ರತೆಯು 403ppi ಆಗಿದ್ದು, ಬ್ರೈಟ್ನೆಸ್ ಸಾಮರ್ಥ್ಯವು 420nits ಆಗಿದೆ. ವಾಟರ್ ಡ್ರಾಪ್ ನಾಚ್ ಮಾದರಿ ಸಹ ಇದೆ. ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಡಿಸ್‌ಪ್ಲೇ ಎನ್ನಲು ಅಡ್ಡಿಯಿಲ್ಲ.

ಪವರ್‌ಫುಲ್ ಪ್ರೊಸೆಸರ್
ಆಕ್ಟಾಕೋರ್ ಸ್ಯಾಮ್‌ಸಂಗ್ Exynos 9611 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರುವ ಗ್ಯಾಲ್ಯಾಕ್ಸಿ M30s ಫೋನ್ ಕೆಲಸದ ವೇಗ ಚೆನ್ನಾಗಿದೆ. ಈ ಫೋನಿನಲ್ಲಿ ಸ್ಯಾಮ್‌ಸಂಗ್ ಒನ್ UI ಹಾಗೂ ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲವನ್ನು ಇದ್ದು, ಆಪ್ಸ್‌ಗಳ ಬಳಕೆ ಮತ್ತು ಅವುಗಳ ಕಾರ್ಯವೈಖರಿ ಉತ್ತಮ ಎನಿಸಿಲಿದೆ. ಈಗಾಗಲೇ ತಿಳಿಸಿದಂತೆ ಈ ಫೋನ್ 4GB RAM ಮತ್ತು 64GB ಸ್ಟೋರೇಜ್ ಮತ್ತು 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಇದರೊಂದಿಗೆ ಎಸ್‌ಡಿ ಕಾರ್ಡ್ ಮೂಲಕ 512GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ. ಸ್ಮಾರ್ಟ್‌ಫೋನಿಗೆ ಪ್ರೊಸೆಸರ್ ಅತ್ಯುತ್ತಮ ಸಪೋರ್ಟ್ ನೀಡಿದೆ.

48ಎಂಪಿ ಕ್ಯಾಮೆರಾ
ಗ್ಯಾಲ್ಯಾಕ್ಸಿ M30s ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾವು f2.0 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಮುಖ್ಯ ಕ್ಯಾಮೆರಾ ಕ್ವಾಲಿಟಿ ಅತ್ಯುತ್ತಮವಾಗಿದ್ದು, ಫೋಟೊ ರೆಸಲ್ಯೂಶನ್ ತನ್ನ ವರ್ಗದಲ್ಲಿಯೇ ಉತ್ತಮ ಎನ್ನಬಹುದು. ಇನ್ನು ಸೆಕೆಂಡರಿ ಕ್ಯಾಮೆರಾವು f2.2 ಅಪರ್ಚರ್‌ನೊಂದಿಗೆ 8ಎಂಪಿ ಅಲ್ಟ್ರಾ ವೈಲ್ಡ್ ಸೆನ್ಸಾರ್‌ನಲ್ಲಿದೆ ಮತ್ತು ಮೂರನೇ ಕ್ಯಾಮೆರಾವು 5ಎಂಪಿ ಸೆನ್ಸಾರ್‌ನಲ್ಲಿದ್ದು, f2.2 ಅಪರ್ಚರ್ ಸಾಮರ್ಥ್ಯವಿದೆ. ಇನ್ನು ಸೆಲ್ಫಿಗಾಗಿ 24ಎಂಪಿ ಕ್ಯಾಮೆರಾ ನೀಡಲಾಗಿದೆ. ಒಟ್ಟಾರೆ ಬಜೆಟ್ ಬೆಲೆಯಲ್ಲಿ ಉತ್ತಮ ಕ್ಯಾಮೆರಾ ಬಯಸುವ ಗ್ರಾಹಕರಿಗೆ ಇದು ಬೆಸ್ಟ್ ಆಯ್ಕೆ.

ದೈತ್ಯ ಬ್ಯಾಟರಿ ಲೈಫ್
ಗ್ಯಾಲ್ಯಾಕ್ಸಿ M30s ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಈ ಫೀಚರ್ ಫೋನಿಗೆ ವಿಶೇಷ ಬಲ ತಂದಿದೆ. ಬ್ಯಾಟರಿಗೆ ಸಪೋರ್ಟ್ ಆಗಿ 15w ಸಾಮರ್ಥ್ಯದ ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಈ ಫೋನಿನ ಬ್ಯಾಟರಿ ಬ್ಯಾಕ್‌ಅಪ್ ಅತ್ಯುತ್ತಮವಾಗಿದ್ದು, ಸುಮಾರು 49ಗಂಟೆ ವಾಯಿಸ್ ಕಾಲ್, 29ಗಂಟೆಗಳ ವಿಡಿಯೊ ಪ್ಲೇಬ್ಯಾಕ್ ಮತ್ತು 131ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ. ಅಧಿಕ ಬ್ಯಾಟರಿ ಬಯಸುವ ಗ್ರಾಹಕರಿಗೆ ಈ ಫೋನ್ ಬೆಸ್ಟ್.

ಗ್ಯಾಲ್ಯಾಕ್ಸಿ ಎಂ30ಎಸ್ ಬೆಲೆ
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30ಎಸ್ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ನಲ್ಲಿ ಬಿಡುಗಡೆ ಆಗಿದ್ದು, 4GB RAM ಮತ್ತು 64GB ಬೆಲೆಯು 13,999ರೂ.ಗಳಾಗಿದೆ. ಮತ್ತು 6GB RAM ಮತ್ತು 128GB ಸ್ಟೋರೇಜ್ ವೇರಿಯಮಟ್ ಬೆಲೆಯು 16,999ರೂ.ಗಳಾಗಿದೆ. ಇದೇ ಸೆಪ್ಟೆಂಬರ್ 29ರಿಂದ ಅಮೆಜಾನ್ ತಾಣ ಮತ್ತು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೇಲ್ ಆರಂಭವಾಗಿದೆ. ಈ ಫೋನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790