'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಲಾಂಚ್‌ ತಡೆ: ಬದಲಿಗೆ ಖರೀದಿಸಬಹುದಾದದ್ದು ಯಾವುದು ಗೊತ್ತೇ?

|

ಇತ್ತೀಚೆಗಂತೂ ಸ್ಯಾಮ್ಸಂಗ್ ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಲ್ಲಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಕಳೆದ ಆಗಷ್ಟಿನಲ್ಲಿ ಗ್ಯಾಲಕ್ಸಿ ನೋಟ್ 7 ಅನ್ನು ಬಿಡುಗಡೆಗೊಳಿಸಿತ್ತು. ಎರಡು ತಿಂಗಳಾಯಿತು ಬಿಡುಗಡೆಯಾಗಿ. ಸ್ಯಾಮ್ಸಂಗ್ ತನ್ನ ಫ್ಲಾಗ್ ಶಿಪ್ ಉತ್ಪನ್ನವನ್ನು ವಾಪಸ್ಸು ಪಡೆಯುವ ಕರೆ ಕೊಟ್ಟಿತು, ಕಾರಣ ಹತ್ತಿರತ್ತಿರ 35 ಬಳಕೆದಾರರ ಸ್ಮಾರ್ಟ್ ಫೋನುಗಳಲ್ಲಿ ಬೆಂಕಿ ಹೊತ್ತುಕೊಂಡಿದ್ದು.

 'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಲಾಂಚ್‌ ತಡೆ

ಸ್ಯಾಮ್ಸಂಗ್ ಅಮೆರಿಕಾ ಮತ್ತು ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ತನ್ನ ಸಾಧನವನ್ನು ವಾಪಸ್ಸು ಮಾಡಲು ಬಳಕೆದಾರರಿಗೆ ತಿಳಿಸಿತು. ಸುಮಾರು 2.5 ಮಿಲಿಯನ್ ಸಾಧನಗಳು ವಾಪಸ್ಸಾಗಿದೆ. ಸ್ಯಾಮ್ಸಂಗ್ ಅಮೆರಿಕಾದಲ್ಲಿ ಸುರಕ್ಷಿತ ನೋಟ್ 7 ಅನ್ನು ಮಾರುಕಟ್ಟೆಗೆ ಬಿಟ್ಟಿದೆ.

ಓದಿರಿ: ಅಮೆಜಾನ್ ಆಫರ್ಸ್: ಚಾರ್ಜರ್, ಹಾರ್ಡ್ ಡ್ರೈವ್ಸ್, ಹೆಡ್‌ಫೋನ್, ವೀಡಿಯೊ ಗೇಮ್ಸ್ ಡೀಲ್

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಭಾರತದಲ್ಲಿ ನೋಟ್ 7 ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗಿದೆ. ಕಾರಣ, ವಾಪಸ್ಸು ಪಡೆದುಕೊಂಡ 2.5 ಮಿಲಿಯನ್ ನೋಟ್ ಗಳ ಬದಲಿಗೆ ಹೊಸ ನೋಟ್ ಗಳನ್ನು ಮೊದಲು ಕಂಪನಿ ನೀಡಬೇಕಿದೆ. ದೀಪಾವಳಿಯಷ್ಟೊತ್ತಿಗೆ ನೋಟ್ 7 ಬರುತ್ತದೆಂಬ ನಿರೀಕ್ಷೆಯಿತ್ತು, ಆದರೆ ಭಾರತದ ಗ್ರಾಹಕರು ಮತ್ತಷ್ಟು ಕಾಯಬೇಕಾಗಿದೆ.

ಓದಿರಿ: ಜಿಯೋ ಕುರಿತ ಹತ್ತು ಸಂಗತಿಗಳು ನೀವು ತಿಳಿದಿದ್ದರೆ ಉತ್ತಮ

ದೇಶದಲ್ಲಿ ಬರುವ ವಾರಗಳಲ್ಲಿ ಲಭ್ಯವಿರುವ ಎಲ್ಲಾ ಫ್ಯಾಬ್ಲೆಟ್ ಗಳ ಬಗ್ಗೆ ಒಮ್ಮೆ ಕಣ್ಣಾಡಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆ್ಯಪಲ್ ಐಫೋನ್ 7 ಪ್ಲಸ್.

ಆ್ಯಪಲ್ ಐಫೋನ್ 7 ಪ್ಲಸ್.

ಇದು ಆ್ಯಪಲ್ ಗೆ ಖುಷಿ ಕೊಡುವ ವಿಚಾರ. ಆ್ಯಪಲ್ ದೇಶದಲ್ಲಿ ಫ್ಲಿಪ್ ಕಾರ್ಟ್ ಮೂಲಕ ಐಫೋನ್ 7 ಪ್ಲಸ್ ಅನ್ನು ಮಾರಾಟ ಮಾಡಲು ಜೊತೆಯಾಗಿದೆ ಮತ್ತು ಈಗಾಗಲೇ ಪ್ರೀ ಆರ್ಡರ್ ತೆಗೆದುಕೊಳ್ಳುತ್ತಿದೆ. ಗ್ಯಾಲಕ್ಸಿ ನೋಟ್ 7 ಗೆ ಕಾಯುತ್ತಿದ್ದವರು ಆ್ಯಪಲ್ ಐಫೋನ್ 7 ಪ್ಲಸ್ ಅನ್ನು ಗಮನಿಸಬಹುದು; ಇದರಲ್ಲಿ ಡುಯಲ್ ಹಿಂಬದಿಯ ಕ್ಯಾಮೆರ, ಕ್ಲಿಕ್ ಮಾಡಲಾಗದ ಹೋಮ್ ಬಟನ್, 3ಡಿ ಟಚ್ ಪರದೆಯಂತ ಆಸಕ್ತಿಕರ ವಿಶೇಷತೆಗಳಿವೆ.

ಗೂಗಲ್ ಪಿಕ್ಸೆಲ್ ಎಕ್ಸ.ಎಲ್.

ಗೂಗಲ್ ಪಿಕ್ಸೆಲ್ ಎಕ್ಸ.ಎಲ್.

ಗೂಗಲ್ ಈಗಾಗಲೇ ತನ್ನ ಹೊಸ ಆವೃತ್ತಿಯ ಫೋನುಗಳನ್ನು ಬಿಡುಗಡೆ ಮಾಡಲು ಅಣಿಯಾಗಿದೆ. ಗೂಗಲ್ ಪಿಕ್ಸೆಲ್ ಎಕ್ಸ್.ಎಲ್ ಮತ್ತು ಪಿಕ್ಸೆಲ್ ಫೋನುಗಳು ಅಮೆರಿಕಾದಲ್ಲಿ ಅಕ್ಟೋಬರ್ 4ರಂದು ಮತ್ತು ಭಾರತದಲ್ಲಿ ಅಕ್ಟೋಬರ್ 5ರಂದು ಬಿಡುಗಡೆಯಾಗುತ್ತಿದೆ.

ಗೂಗಲ್ ತನ್ನ ನೆಕ್ಸಸ್ ಸ್ಮಾರ್ಟ್ ಫೋನುಗಳಿಗೆ ಪಿಕ್ಸೆಲ್ ಎಂದು ಮರುನಾಮಕರಣ ಮಾಡಿದೆ, ಈ ಫೋನುಗಳನ್ನು ಹೆಚ್.ಟಿ.ಸಿ ತಯಾರಿಸುತ್ತಿದೆ. ಪಿಕ್ಸೆಲ್ ಎಕ್ಸ್.ಎಲ್ ನಲ್ಲಿ ಶಕ್ತಿಯುತ ಹಾರ್ಡ್ವೇರ್ ಸ್ನಾಪ್ ಡ್ರಾಗನ್ 821, 4 ಜಿಬಿ ರ್ಯಾಮ್ ಇರಲಿದೆ. ಎರಡೂ ಸಾಧನಗಳು ಭಾರತದಲ್ಲಿ ಅಕ್ಟೋಬರ್ 5ರಿಂದಲೇ ಲಭ್ಯವಿರುತ್ತದೆ ಎಂದು ಗೂಗಲ್ ತಿಳಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೊರೊಲ ಮೊಟೊ Z ಫೋರ್ಸ್.

ಮೊಟೊರೊಲ ಮೊಟೊ Z ಫೋರ್ಸ್.

ಗೂಗಲ್ ವಿಶ್ವದಾದ್ಯಂತ ಬಿಡುಗಡೆಗೊಳಿಸುವ ದಿನಾಂಕವನ್ನು ನಿಗದಿಗೊಳಿಸುತ್ತಿದ್ದಂತೆಯೇ, ಮೊಟೊರೊಲಾ ತನ್ನ ಮೊಟೊ Z ಮತ್ತು ಮೊಟೊ Z ಫೋರ್ಸ್ ಫೋನುಗಳನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ತಿಳಿಸಿತು. ಮೊಟೊ Z ಫೋರ್ಸ್ ನೋಟ್ 7 ಗೆ ತೀರ್ವ ಪೈಪೋಟಿ ನೀಡಲಿದೆ.

ತನ್ನ ವಿಶಿಷ್ಟ ಮೊಟೊ ಮೊಡ್ಸ್ ತಂತ್ರಜ್ಞಾನದಿಂದಾಗಿ ಮೊಟೊ Z ದೇಶದ ಹಲವು ಗ್ರಾಹಕರ ಗಮನ ಸೆಳೆದಿದೆ. ಬಿಡುಗಡೆಯಾದ ತಕ್ಷಣವೇ ಖರೀದಿಗೂ ಲಭ್ಯವಿರುತ್ತದೆ ಎನ್ನುವುದು ನಮ್ಮ ನಿರೀಕ್ಷೆ.

ಸೋನಿ ಎಕ್ಸ್ ಪೀರಿಯಾ XZ.

ಸೋನಿ ಎಕ್ಸ್ ಪೀರಿಯಾ XZ.

ಉದಯಪುರದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸೋನಿ ತನ್ನ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಎಕ್ಸ್ ಪೀರಿಯಾ XZ ಅನ್ನು ಬಿಡುಗಡೆಗೊಳಿಸಿತು. ಈ ವರುಷದ ಐಎಫ್.ಎನಲ್ಲಿ ಬಿಡುಗಡೆಯಾದ ಈ ಫೋನಿನ ವಿನ್ಯಾಸ ಮತ್ತು ಹಾರ್ಡ್ ವೇರ್ ಚೆನ್ನಾಗಿದೆ. ಆದರೆ 49,990 ರುಪಾಯಿ ಈ ಫೋನಿನ ಬೆಲೆ ತುಸು ಹೆಚ್ಚಾಯಿತು.

ಅಕ್ಟೋಬರ್ 10ರಿಂದ ಮಾರಾಟಗೊಳ್ಳಲಿದೆ ಸೋನಿ ಎಕ್ಸ್ ಪೀರಿಯಾ XZ. ಕಂಪನಿಯ ಪತ್ರಿಕಾ ಪ್ರಕಟಣೆಯ ಪ್ರಕಾರ ಅಮೆಜಾನ್ ಇಂಡಿಯಾದಲ್ಲಿ ಅಕ್ಟೋಬರ್ 1ರಿಂದ ಪ್ರಿ ಆರ್ಡರ್ ಮಾಡಬಹುದು.

ಶಿಯೋಮಿ ಎಂಐ 5ಎಸ್ ಪ್ಲಸ್.

ಶಿಯೋಮಿ ಎಂಐ 5ಎಸ್ ಪ್ಲಸ್.

ಶಿಯೋಮಿಯ ಈ ಹೊಸ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಅ‍ನ್ನು ಕೆಲ ದಿನಗಳ ಹಿಂದೆ ಚೀನಾದಲ್ಲಿ ಬಿಡುಗಡೆಗೊಳಿಸಲಾಯಿತು. ಆದರೆ, ಭಾರತದಲ್ಲಿ ಬಿಡುಗಡೆ ಯಾವಾಗ ಎನ್ನುವುದು ಇನ್ನೂ ಗೊತ್ತಿಲ್ಲ. ಈ ತಿಂಗಳ ಕೊನೆಯಷ್ಟೊತ್ತಿಗೆ ಬರಬಹುದೆಂಬ ಸುದ್ದಿಗಳಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

English summary
Samsung has been in the news for all the bad in recent times. The South-Korean giant launched the Galaxy Note 7 back in August, which is now two months, however, issued a recall against the smartphone because of nearly 35 users reported the smartphone catching fire.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more