ಜಿಯೋ ಕುರಿತ ಹತ್ತು ಸಂಗತಿಗಳು ನೀವು ತಿಳಿದಿದ್ದರೆ ಉತ್ತಮ

Written By:

ರಿಲಾಯನ್ಸ್ ಜಿಯೋ ಬಳಕೆದಾರರಲ್ಲಿ ಮಾಡುತ್ತಿರುವ ಮೋಡಿ ನಿಮಗೆಲ್ಲಾ ತಿಳಿದೇ ಇದೆ. ತನ್ನ 90 ದಿನಗಳ ಉಚಿತ ಇಂಟರ್ನೆಟ್ ಯೋಜನೆ, ಕರೆ, ಎಸ್‌ಎಮ್‌ಎಸ್ ಆಫರ್ ಹೀಗೆ ಪ್ರತಿಯೊಂದು ಯೋಜನೆಗಳಿಂದ ಕೂಡ ಜಿಯೋ ಈವರೆಗೆ ಯಾರೂ ಮಾಡದೇ ಇರುವ ಆಫರ್‌ಗಳ ಪ್ಯಾಕ್ ಅನ್ನೇ ಮುಂದಿಟ್ಟುಕೊಂಡು ಇತರ ಟೆಲಿಕಾಮ್ ಕಂಪೆನಿಗಳಿಗೆ ಸ್ಪರ್ಧೆಯನ್ನು ಒಡ್ಡಿದೆ.

ಓದಿರಿ: ಬಂಪರ್ ಆಫರ್! ಏರ್‌ಟೆಲ್‌ನ 5ಜಿಬಿ ಉಚಿತ 4ಜಿ ಇಂಟರ್ನೆಟ್ ಪಡೆಯುವುದು ಹೇಗೆ?

ಇಂದಿನ ಲೇಖನದಲ್ಲಿ ಜಿಯೋದ ಕುರಿತು ಅಷ್ಟೋ ಇಷ್ಟೋ ಮಾಹಿತಿ ತಿಳಿವರಿಗೆ ಸಂಪೂರ್ಣವಾಗಿ ಜಿಯೋ ಎಂದರೇನು ಎಂಬುದನ್ನು ತಿಳಿಸಿಕೊಡಲಿದ್ದೇವೆ. ಡಿಸೆಂಬರ್ 31, 2016 ರವರೆಗೆ ಜಿಯೋ ಸಂಪೂರ್ಣ ಉಚಿತವಾಗಿದ್ದು, "ವೆಲ್‌ಕಮ್ ಆಫರ್" ಎಂಬ ಹೊಸ ಯೋಜನೆಯನ್ನು ಇದು ಆರಂಭಿಸಿದೆ. ಹಾಗಿದ್ದರೆ ಜಿಯೋ ಸೇವೆಯ ಕುರಿತಾದ ವಿವರ ಮಾಹಿತಿಗಳನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಟಿಇ ಮಾತ್ರ

ಎಲ್‌ಟಿಇ ಮಾತ್ರ

ಇತರ ಕ್ಯಾರಿಯರ್‌ಗಳಂತೆಯೇ, ರಿಲಾಯನ್ಸ್ ಜಿಯೋ 2ಜಿ ಅಥವಾ 3ಜಿ ನೆಟ್‌ವರ್ಕ್‌ಗೆ ಬದಲಾವಣೆಗೊಳ್ಳುವುದಿಲ್ಲ. ಈ ಸೇವೆಯು ಎಲ್‌ಟಿಇ - ರೆಡಿ ಮೇಕಿಂಗ್ ಎಂದೆನಿಸಿದ್ದು 4ಜಿ ರೆಡಿ ನೆಟ್‌ವರ್ಕ್ ಹೊಂದಿರುವ ದೇಶದ ಪ್ರಥಮ ಟೆಲಿಕಾಮ್ ಎಂದೆನಿಸಿದೆ.

ಉಚಿತ ವಾಯ್ಸ್ ಕರೆಗಳು

ಉಚಿತ ವಾಯ್ಸ್ ಕರೆಗಳು

ಸಭೆಯಲ್ಲಿ ಮಾಡಿರುವ ದೊಡ್ಡ ಘೋಷಣೆ ಎಂದರೆ ಉಚಿತ ವಾಯ್ಸ್ ಕಾಲ್ ಆಗಿದೆ. ನಿಮ್ಮ ಜೀವನದುದ್ದಕ್ಕೂ ಜಿಯೋ ಉಚಿತ ಕರೆಗಳನ್ನು ಒದಗಿಸಲಿದೆ. ನೀವು ಇದಕ್ಕಾಗಿ ಹೆಚ್ಚುವರಿ ಡೇಟಾ ವೆಚ್ಚವನ್ನು ಭರಿಸಬೇಕಾಗಿಲ್ಲ, ವಾಯ್ಸ್ ಡೇಟಾವನ್ನು ಅದುವೇ ಬಳಸಿಕೊಂಡು ಕರೆಗಳನ್ನು ಮಾಡಲಿದೆ. ವಾಯ್ಸ್ ಕರೆಗಳನ್ನು ಮಾಡಲು ನಿಮ್ಮ ಫೋನ್ ವೋಲ್ಟ್‌ಗೆ ಬೆಂಬಲವನ್ನು ನೀಡುವಂತಿರಬೇಕು.

ಆಕರ್ಷಕ ಟಾರಿಫ್ ಯೋಜನೆಗಳು

ಆಕರ್ಷಕ ಟಾರಿಫ್ ಯೋಜನೆಗಳು

ಮುಖೇಶ್ ಅಂಬಾನಿ ಪ್ರಿಪೈಡ್ ಮತ್ತು ಪೋಸ್ಟ್ ಪೇಡ್ ಎರಡಕ್ಕೂ ಟಾರಿಫ್ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಪ್ಯಾಕ್ ರೂ 149 ರಿಂದ ಆರಂಭಗೊಂಡು ರೂ 4,999 ವರೆಗೆ ವಿಸ್ತರಣೆಯಾಗಲಿದೆ. ಇದೇ ಯೋಜನೆಗಳು ಪೋಸ್ಟ್ ಪೇಡ್ ಸಂಪರ್ಕಕ್ಕೂ ಅನ್ವಯವಾಗಲಿದೆ.

ಇಕೆವೈಸಿ ಆಕ್ಟಿವೇಶನ್

ಇಕೆವೈಸಿ ಆಕ್ಟಿವೇಶನ್

ಏರ್‌ಟೆಲ್ ಮತ್ತು ವೊಡಾಫೋನ್ ಅನ್ನು ಅನುಸರಿಸಿರುವ ಜಿಯೋ ಇಕವೈಸಿ ಆಕ್ಟಿವೇಶನ್‌ನೊಂದಿಗೆ ಸಿಮ್ ಕಾರ್ಡ್‌ಗಳನ್ನು ನೀಡುತ್ತಿದೆ. ಅಂದರೆ ನಿಮ್ಮ ಸಿಮ್ ಕಾರ್ಡ್ 15 ನಿಮಿಷಳಲ್ಲಿ ಆಕ್ಟಿವೇಶನ್‌ಗೊಳ್ಳಲಿದೆ. ಇದುವರೆಗೆ ಈ ಸೇವೆ ಬಂದಿಲ್ಲ.

ಜಿಯೋನೆಟ್ ವೈಫೈ ಹಾಟ್‌ಸ್ಪಾಟ್

ಜಿಯೋನೆಟ್ ವೈಫೈ ಹಾಟ್‌ಸ್ಪಾಟ್

ಜಿಯೋ ದೇಶಾದ್ಯಂತ ಉಚಿತ ವೈಫೈ ಹಾಟ್‌ಸ್ಪಾಟ್ ಅನ್ನು ಒದಗಿಸುವ ಗುರಿಯನ್ನು ಹೊಂದಿದೆ. ಜಿಯೋ ಪ್ರಕಾರ, ಇದು ನೆಟ್‌ವರ್ಕ್ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದಾಗಿದೆ. ಟಾರಿಫ್ ಯೋಜನೆಗಳೊಂದಿಗೆ ಪ್ರತಿಯೊಬ್ಬ ಬಳಕೆದಾರರೂ ಉಚಿತ ಜಿಯೋ ನೆಟ್ ಡೇಟಾವನ್ನು ಪಡೆದುಕೊಳ್ಳಲಿದ್ದಾರೆ.

ವಿದ್ಯಾರ್ಥಿ ಆಫರ್‌ಗಳು

ವಿದ್ಯಾರ್ಥಿ ಆಫರ್‌ಗಳು

ವಿದ್ಯಾರ್ಥಿಗಳಿಗಾಗಿ ಮುಕೇಶ್ ಅಂಬಾನಿ ಕಂಪೆನಿಯು 25 ಶೇಕಡಾ ಹೆಚ್ಚುವರಿ ಡೇಟಾವನ್ನು ನೀಡಲಿದೆ. ಟಾರಿಫ್ ಪ್ಲಾನ್ ಅನ್ನು ರಿಫಿಲ್ಲಿಂಗ್ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಐಡಿ ಕಾರ್ಡ್ ಅನ್ನು ತೋರಿಸಬೇಕು.

ಜಿಯೋಫೈ ಹಾಟ್‌ಸ್ಪಾಟ್ ಡಿವೈಸ್‌ಗಳು

ಜಿಯೋಫೈ ಹಾಟ್‌ಸ್ಪಾಟ್ ಡಿವೈಸ್‌ಗಳು

ಜಿಯೋಫೈ ಹಾಟ್‌ಸ್ಪಾಟ್ ಡಿವೈಸ್ ಅನ್ನು ಮಾರಾಟ ಮಾಡುವುದನ್ನು ರಿಲಾಯನ್ಸ್ ಆರಂಭಿಸಿದೆ. ಇದರಿಂದ ಪ್ರತೀ ಬಳಕೆದಾರರು ಒಂದೇ ಸಮಯಕ್ಕೆ 31 ಡಿವೈಸ್‌ಗಳನ್ನು ಸಂಪರ್ಕಪಡಿಸಿಕೊಳ್ಳಬಹುದು. ಹಾಟ್‌ಸ್ಪಾಟ್ ಡಿವೈಸ್‌ಗಳ ಆರಂಭ ಬೆಲೆ ರೂ 1,999 ಆಗಿದೆ. ಈವರೆಗೆ ಕಂಪೆನಿಯು ಮೂರು ಜಿಯೋಫೈ ಡಿವೈಸ್‌ಗಳನ್ನು ಬಿಡುಗಡೆ ಮಾಡಿದೆ.

ರೋಮಿಂಗ್ ಇಲ್ಲ

ರೋಮಿಂಗ್ ಇಲ್ಲ

ಇತರ ಟೆಲಿಕಾಮ್ ನೆಟ್‌ವರ್ಕ್‌ಗಳಂತೆಯೇ, ರಿಲಾಯನ್ಸ್ ರೋಮಿಂಗ್ ಸೇವೆಗಳಿಗೆ ಹೆಚ್ಚುವರಿ ಹಣವನ್ನು ಭರಿಸುವುದಿಲ್ಲ. ಏಕೆಂದರೆ ಇದು ವಾಯ್ಸ್ ಕಾಲಿಂಗ್‌ಗಾಗಿ ಡೇಟಾವನ್ನು ಬಳಸಿಕೊಳ್ಳುತ್ತದೆ ಮತ್ತು ಇಂಟರ್ನೆಟ್ ದೇಶಾದ್ಯಂತ ಉಚಿತವಾಗಿದೆ.

ಜಿಯೋ ಪ್ರೀಮಿಯಮ್ ಅಪ್ಲಿಕೇಶನ್‌ಗಳು

ಜಿಯೋ ಪ್ರೀಮಿಯಮ್ ಅಪ್ಲಿಕೇಶನ್‌ಗಳು

ಪ್ರತೀ ಜಿಯೋ ಬಳಕೆದಾರರು ಜಿಯೋ ಪ್ರೀಮಿಯಮ್ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಆನಂದಿಸುತ್ತಿದ್ದಾರೆ. ಜಿಯೋದ ಪ್ರೀಮಿಯಮ್ ಅಪ್ಲಿಕೇಶನ್ ಚಂದಾದಾರಿಕೆ ರೂ 15,000 ದೊಂದಿಗೆ ಪ್ರತೀ ಟಾರಿಫ್ ಪ್ಲಾನ್ ಬಂದಿದೆ.

ವೆಲ್‌ಕಮ್ ಆಫರ್

ವೆಲ್‌ಕಮ್ ಆಫರ್

ಇದು ಹೆಚ್ಚು ಮುಖ್ಯವಾದ ಅಂಶವಾಗಿದೆ. ಡಿಸೆಂಬರ್ 2017 ರವರೆಗೆ ಜಿಯೋ ಸಂಪೂರ್ಣ ಉಚಿತವಾಗಿದೆ. ಅದಾಗ್ಯೂ, ಟಾರಿಫ್ ಯೋಜನೆಗಳನ್ನು ಘೋಷಿಸಲಾಗಿದೆ, ಆದರೆ ಇವುಗಳು ಜನವರಿ 2017 ರಿಂದ ಇಫೆಕ್ಟೀವ್ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There were some interesting things announced by Mukesh Ambani at the launch event and here are the top 10 things to know about the newly announced service.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot