ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ 'ಸ್ಯಾಮ್‌ಸಂಗ್ ಎಸ್10 ಸ್ಮಾರ್ಟ್‌ಫೋನ್ ಸರಣಿ'!!

|

ಭಾರತೀಯ ಮಾರುಕಟ್ಟೆಗೆ ಹಲವಾರು ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳು ಲಗ್ಗೆ ಇಟ್ಟಿದ್ದರು, ಸ್ಯಾಮ್‌ಸಂಗ್ ಕಂಪನಿ ಮಾತ್ರ ತನ್ನ ಗುಣಮಟ್ಟದ ಉತ್ಪನ್ನಗಳಿಂದ ಈಗಲೂ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನದಲ್ಲಿದೆ. ಈಗಾಗಲೇ ಹಲವು ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಸ್ಯಾಮ್‌ಸಂಗ್‌ ಇದೀಗ ಮತ್ತೊಂದು ಅಪ್‌ಡೇಟೆಡ್ ಫೀಚರ್ಸ್‌ಗಳ ಬಿಗ್ ಸರ್ಪ್ರೈಸ್ ನೀಡಲು ಮುಂದಾಗಿದೆ.

ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ 'ಸ್ಯಾಮ್‌ಸಂಗ್ ಎಸ್10 ಸ್ಮಾರ್ಟ್‌ಫೋನ್ ಸರಣಿ'!!

ಹೌದು, ಸ್ಯಾಮ್‌ಸಂಗ್ ಕಂಪನಿಯು 'ಗ್ಯಾಲ್ಯಾಕ್ಸಿ ಎಸ್‌ 10' ಸ್ಮಾರ್ಟ್‌ಫೋನ್‌ ಸರಣಿಯನ್ನು ಇದೇ ಫೆಬ್ರುವರಿ 20 ರಂದು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ರಿಲೀಸ್ ಮಾಡುವುದಾಗಿ ಘೋಷಿಸಿದ್ದು, ಆ ಸಮಾರಂಭದಲ್ಲಿಯೇ ಕಂಪನಿಯು ತನ್ನ ಮುಂಬರಲಿರುವ ಬಹುನಿರೀಕ್ಷಿತ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ಕುರಿತು ಮಾಹಿತಿ ತಿಳಿಸಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಸರಣಿ ದೇಶಿಯ ಮಾರುಕಟ್ಟೆಗೂ ಶೀಘ್ರದಲ್ಲಿ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ.

ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ 'ಸ್ಯಾಮ್‌ಸಂಗ್ ಎಸ್10 ಸ್ಮಾರ್ಟ್‌ಫೋನ್ ಸರಣಿ'!!

ಸ್ಯಾಮ್‌ಸಂಗ್‌ನ ಎಸ್‌10 ಸ್ಮಾರ್ಟ್‌ಫೋನ್‌ ಸರಣಿಯು 'ಎಸ್10e', 'ಎಸ್‌10' ಮತ್ತು 'ಎಸ್‌10+' ಸ್ಮಾರ್ಟ್‌ಫೋನ್‌ಗಳುನ್ನು ಒಳಗೊಂಡಿರಲಿದೆ ಎಂದು ತಿಳಿದು ಬಂದಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಕ್ಯಾಮೆರಾಗಳನ್ನು ಸೇರಿದಂತೆ ಇನ್ನೂ ಹಲವು ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರಲಿವೆ ಎನ್ನಲಾಗುತ್ತಿದೆ. ಹಾಗಾದರೇ ಸ್ಯಾಮ್‌ಸಂಗ್ ಎಸ್‌10 ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಏನೆಲ್ಲಾ ಪ್ರಮುಖ ಫೀಚರ್ಸ್‌ಗಳಿರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಡಿಸ್‌ಪ್ಲೇ

ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಡಿಸ್‌ಪ್ಲೇ

ಪ್ರಸ್ತುತ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೆನ್ಸಾರ್ ಅಪ್‌ಡೇಟ್‌ ಫೀಚರ್ ಆಗಿದ್ದು, ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌ ಅನ್ನು ಇದೀಗ ಸ್ಯಾಮ್‌ಸಂಗ್ ತನ್ನ ಎಸ್‌10 ಸರಣಿ ಸ್ಮಾರ್ಟ್‌ಫೋನ್‌ಗಳಾದ ಎಸ್‌10 ಮತ್ತು ಎಸ್‌10+ ಗಳಲ್ಲಿ ಪರಿಚಯಿಸಲಿದೆ. ಮತ್ತು ಎಸ್‌10e ಸ್ಮಾರ್ಟ್‌ಫೋನ್‌ನಲ್ಲಿ ಸೈಡ್‌ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್‌ಅನ್ನು ಅಳವಡಿಸಲಿದೆ ಎನ್ನಲಾಗುತ್ತಿದೆ.

ಡ್ಯುಯಲ್ ಸೆಲ್ಫೀ ಕ್ಯಾಮೆರಾ

ಡ್ಯುಯಲ್ ಸೆಲ್ಫೀ ಕ್ಯಾಮೆರಾ

ಸ್ಯಾಮ್‌ಸಂಗ್ ಎಸ್‌10 ಸರಣಿ ಎಸ್‌10 ಮತ್ತು ಎಸ್‌10+ ಸ್ಮಾರ್ಟ್‌ಫೋನ್‌ಗಳಲ್ಲಿ ಹಿಂಬದಿಯಲ್ಲಿ ಒಟ್ಟು ಮೂರು ಕ್ಯಾಮೆರಾಗಳನ್ನು ನೀಡಲಿದೆ. ಎಸ್‌10+ ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫೀಗಾಗಿ ಮುಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಪರಿಚಯಿಸಲಿದ್ದು, ಎಸ್‌10 ಮತ್ತು ಎಸ್‌10e ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಸೆಲ್ಫೀ ಕ್ಯಾಮೆರಾ ಇರಲಿದೆ. ಅತ್ಯುತ್ತಮ ಪಿಲ್ಸಲ್ ಕ್ಯಾಮೆರಾಗಳಿದ್ದು, ಫೋಟೋಗಳು ಹೈ ರೆಸಲ್ಯೂಶನ್‌ಗಳಲ್ಲಿ ಮೂಡಿಬರಲಿವೆ.

ಎಸ್‌10 ಡಿಸ್‌ಪ್ಲೇ

ಎಸ್‌10 ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು ಸೂಪರ್ AMOLED ಯೊಂದಿಗೆ, 1440 x 2960 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ 6.1 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಬಾಡಿಯಿಂದ ಡಿಸ್‌ಪ್ಲೇ ನಡುವಿನ ಅನುಪಾತವು ಶೇ 89.85 ಇದೆ. ಇದರ ಡಿಸ್‌ಪ್ಲೇ ಬೆಜಲ್ ಲೆಸ್(ಅಂಚುರಹಿತ) ಆಗಿದ್ದು, ಸ್ಮಾರ್ಟ್‌ಫೋನಿನ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.

ಎಸ್‌10 ಕ್ಯಾಮೆರಾ

ಎಸ್‌10 ಕ್ಯಾಮೆರಾ

ಸ್ಯಾಮ್‌ಸಂಗ್‌ನ ಎಸ್‌10 ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ನೀಡಲಾಗಿದ್ದು, ಈ ಮೂರು ಕ್ಯಾಮೆರಾಗಳು ಕ್ರಮವಾಗಿ 12MP + 16MP + 13MP ಸಾಮರ್ಥ್ಯವನ್ನು ಹೊಂದಿವೆ. ಇನ್ನೂ ಫೋಟೋ 4000 x 3000 ಪಿಕ್ಸಲ್ ರೆಸಲ್ಯೂಶನ್‌ಯನ್ನು ಹೊಂದಿರಲಿದ್ದು, ಫೋಟೋ ಕ್ವಾಲಿಟಿ ಅತ್ಯುತ್ತಮವಾಗಿ ಮೂಡಿಬರುತ್ತವೆ. ಸೆಲ್ಫೀಗಾಗಿ 10 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ನೀಡಲಾಗಿದೆ.

ಎಸ್‌10 ಪ್ರೊಸೆಸರ್

ಎಸ್‌10 ಪ್ರೊಸೆಸರ್

ಈ ಹೊಸ ಸ್ಮಾರ್ಟ್‌ಫೋನಿನಲ್ಲಿ 'ಸ್ಯಾಮ್‌ಸಂಗ್ Exynos 9 ಆಕ್ಟಾಕೋರ್ 9820' ಸಾಮರ್ಥ್ಯದ ಪ್ರೊಸೆಸರ್ ಇದ್ದು, ಮಲ್ಟಿ ಟಾಸ್ಕ್ ಕೆಲಸಗಳನ್ನು ವೇಗವಾಗಿ ನಿರ್ವಹಿಸುವ ಶಕ್ತಿಯನ್ನು ಹೊಂದಿದೆ. ಸ್ಮಾರ್ಟ್‌ಫೋನಿನಲ್ಲಿ ಗ್ರಾಫಿಕ್‌ಗಾಗಿ G76MP12 ಸಾಮರ್ಥ್ಯದ ಶಕ್ತಿ ಒದಗಿಸಲಾಗಿದೆ ಗೇಮ್ಸ್ ಆಟವಾಡಲು ಸಹಕರಿಸುತ್ತದೆ. 6GB RAM ಜೊತೆಗೆ 128 GB ಆಂತರಿಕ ಶೇಖರಣೆಯ ಸಾಮರ್ಥ್ಯವನ್ನು ನೀಡಲಾಗಿದೆ.

ಎಸ್‌10 ಬ್ಯಾಟರಿ

ಎಸ್‌10 ಬ್ಯಾಟರಿ

ಸ್ಮಾಮ್‌ಸಂಗ್‌ ಎಸ್‌ ಸರಣಿಯ ಗ್ಯಾಲ್ಯಾಕ್ಸಿ ಎಸ್10 ಸ್ಮಾರ್ಟ್‌ಫೋನ್‌ 3,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಈ ಬ್ಯಾಟರಿ ದೀರ್ಘ ಬಾಳಕೆಯ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಸಹ ಒದಗಿಸಲಾಗುವುದು ಇದರ ಸಹಾಯದಿಂದ ನಿಮ್ಮ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್ ಆಗುತ್ತದೆ. ಇನ್ನೂ ಈ ಸ್ಮಾರ್ಟ್‌ಪೋನ್ ವೈಯರ್ ಲೆಸ್‌ ಚಾರ್ಜರ್ ಅನ್ನು ಸಹ ಹೊಂದಿದೆ.

ಎಸ್‌10 ಬೆಲೆ?

ಎಸ್‌10 ಬೆಲೆ?

ಬಹುನಿರೀಕ್ಷಿತ ಸ್ಯಾಮ್‌ಸಂಗ್ ಎಸ್10 ಸರಣಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲಿಯೇ ಬರಲಿದ್ದು, ಭಾರತದಲ್ಲಿ ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 63,800ರೂ.ಗಳು ಇರಲಿವೆ ಎಂದು ಅಂದಾಜಿಸಲಾಗಿದೆ.

ಗ್ಯಾಲ್ಯಾಕ್ಸಿ ಎಸ್‌10+ ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎಸ್‌10+ ಡಿಸ್‌ಪ್ಲೇ

ಸೂಪರ್ AMOLEDನೊಂದಿಗೆ, 1440 x 2960 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್‌ ಒಳಗೊಂಡ 6.4 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಈ ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್ ಹೊಂದಿರಲಿದೆ. ಡಿಸ್‌ಪ್ಲೇ ನಿಂದ ಫೋನಿನ್ ಬಾಹ್ಯ ಬಾಡಿಯ ನಡುವಿನ ಅಂತರವು ಶೇ 89.06ರಷ್ಟು ಇದೆ. ಡಿಸ್‌ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಪೋನಿನಲ್ಲಿ ಅಂಚುರಹಿತ ಡಿಸ್‌ಪ್ಲೇಯನ್ನು ನೀವು ಕಾಣಲಿದ್ದಿರಿ.

ಗ್ಯಾಲ್ಯಾಕ್ಸಿ ಎಸ್‌10+ ಪ್ರೊಸೆಸರ್

ಗ್ಯಾಲ್ಯಾಕ್ಸಿ ಎಸ್‌10+ ಪ್ರೊಸೆಸರ್

ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್ ಅತೀ ಮುಂದುವರಿದ ಪ್ರೊಸೆಸರ್ ಆದ 'ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855' ಸಾಮರ್ಥ್ಯದ ಪ್ರೊಸೆಸರ್ ಹೊಂದಿರಲಿದ್ದು, ಇದರೊಂದಿಗೆ ಅಂಡ್ರಿನೊ 640 ಸಿಪಿಯು ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಮಲ್ಟಿಟಾಸ್ಕ ಕೆಲಸಗಳನ್ನು ಅತೀ ಸರಳವಾಗಿ ನಿರ್ವಹಿಸುವ ಶಕ್ತಿ ಹೊಂದಿದೆ. 12GB ಸಾಮರ್ಥ್ಯದ RAM ಜೊತೆಗೆ 1000GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ.

ಗ್ಯಾಲ್ಯಾಕ್ಸಿ ಎಸ್‌10+ ಕ್ಯಾಮೆರಾ

ಗ್ಯಾಲ್ಯಾಕ್ಸಿ ಎಸ್‌10+ ಕ್ಯಾಮೆರಾ

ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿದ್ದು, ಮೆನ್ ಕ್ಯಾಮೆರಾ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಅಪರ್ಚರ್ ಗಾತ್ರವು F1.5/F2.4 ಆಗಿರಲಿದೆ. ಸೆಕೆಂಡರಿ ಕ್ಯಾಮರದಲ್ಲಿಯೂ ಸಹ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ನೀಡಿದ್ದು, ಇದರಲ್ಲಿ ಟೆಲಿಫೋಟೋ ಲೆನ್ಸ್ ಇರಲಿದೆ ಇದರ ಅಪರ್ಚರ್ ಗಾತ್ರವು F2.4 ಆಗಿರಲಿದೆ. ಇನ್ನೂ ಮುಂಭಾಗದಲ್ಲಿ ಸೆಲ್ಫೀಗಾಗಿ 10ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒದಗಿಸಲಾಗಿದೆ.

ಗ್ಯಾಲ್ಯಾಕ್ಸಿ ಎಸ್‌10+ ಬ್ಯಾಟರಿ ಪವರ್

ಗ್ಯಾಲ್ಯಾಕ್ಸಿ ಎಸ್‌10+ ಬ್ಯಾಟರಿ ಪವರ್

ಈ ಸ್ಮಾರ್ಟ್‌ಫೋನ್‌ 4100mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿರಲಿದ್ದು, ದೀರ್ಘಕಾಲ ಬ್ಯಾಟರಿ ಬಾಳಿಕೆ ಬರಲಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಅನ್ನು ಒದಗಿಸಲಾಗುತ್ತಿದ್ದು, ಸ್ಮಾರ್ಟ್‌ಫೋನ್ ಅತೀ ವೇಗವಾಗಿ ಚಾರ್ಜಿಂಗ್ ಆಗುತ್ತದೆ. ವೈಯರ್‌ಲೆಸ್ ಚಾರ್ಜಿಂಗ್ ವ್ಯೆವಸ್ಥೆಯನ್ನು ಸಹ ಒಳಗೊಂಡಿದೆ.

ಗ್ಯಾಲ್ಯಾಕ್ಸಿ ಎಸ್‌10+ ಬೆಲೆ?

ಗ್ಯಾಲ್ಯಾಕ್ಸಿ ಎಸ್‌10+ ಬೆಲೆ?

ಸ್ಯಾಮ್‌ಸಂಗ್ ಕಂಪನಿಯ ಹೈ ಎಂಡ್ ಸ್ಮಾರ್ಟ್‌ಪೋನ್ ಎಂದು ಹೇಳಲಾಗುತ್ತಿರುವ 'ಗ್ಯಾಲ್ಯಾಕ್ಸಿ ಎಸ್10+ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲಿಯೇ ಪ್ರವೇಶಿಸಲಿದ್ದು, ಭಾರತದಲ್ಲಿ ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 82,100ರೂ.ಗಳು ಆಗಿರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
launch event is taking place next Wednesday, February 20 in San Francisco where Samsung will announce the Samsung Galaxy S10 and its variants. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X