ಭಾರತದಲ್ಲಿ ಗ್ಯಾಲಕ್ಸಿ ಎಸ್6 ಲಾಂಚ್‌ನೊಂದಿಗೆ ಸ್ಯಾಮ್‌ಸಂಗ್ ಭರ್ಜರಿ ಆಟ

Posted By:

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್6 ಅನ್ನು ಭಾರತದಲ್ಲಿ ಲಾಂಚ್ ಮಾಡುವ ಕುರಿತು ಕೆಲವು ದಿನಗಳ ಹಿಂದೆಯಷ್ಟೇ ಸುದ್ದಿ ಬಿತ್ತರಿಸಿತ್ತು. ಈ ಮಾಹಿತಿಗೆ ಅನುಸಾರವಾಗಿಯೇ ಸ್ಯಾಮ್‌ಸಂಗ್ ತನ್ನ ಫ್ಲ್ಯಾಗ್‌ಶಿಪ್ ಮೊಬೈಲ್ ಆದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಡಿವೈಸ್ ಈಗಾಗಲೇ ಎಮ್‌ಡಬ್ಲ್ಯೂಸಿ (ಮೊಬೈಲ್ ವರ್ಲ್ಡ್ ಕಾಂಗ್ರೆಸ್) ನಲ್ಲಿ ಲಾಂಚ್ ಆಗಿತ್ತು. ಏಪ್ರಿಲ್ 10 ರಿಂದ ಇದು ಪೂರ್ಣ ಪ್ರಮಾಣದಲ್ಲಿ ಮಾರಾಟವನ್ನು ಕಾಣಲಿದೆ. [ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ]

ಇನ್ನು ಫೋನ್‌ನ ವೈಶಿಷ್ಟ್ಯತೆಗಳತ್ತ ಗಮನಿಸಿದಾಗ ಇದು 5.1 ಇಂಚಿನ 1440x2560 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಎಕ್ಸೋನಸ್ 7420 ಓಕ್ಟಾ ಕೋರ್ 64 ಬಿಟ್ ಚಿಪ್‌ಸೆಟ್ ಅನ್ನು ಇದು ಪಡೆದುಕೊಂಡಿದ್ದು, 3 ಜಿಬಿ RAM ಬೆಂಬಲವನ್ನು ಹೊಂದಿದೆ. ಇನ್ನು ಫೋನ್‌ನ ಸಂಗ್ರಹಣೆಯತ್ತ ಗಮನಹರಿಸಿದಾಗ ಇದು 32/64/128 ಜಿಬಿಯನ್ನು ಒಳಗೊಂಡಿದ್ದು ವಿಸ್ತರಣಾ ಸ್ಲಾಟ್ ಅನ್ನು ಪಡೆದುಕೊಂಡಿಲ್ಲ. ರಿಯರ್ ಕ್ಯಾಮೆರಾ 16 ಎಮ್‌ಪಿಯಾಗಿದ್ದು, ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ. ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್ ಡಿವೈಸ್‌ನಲ್ಲಿದ್ದು 2550mAh ಬ್ಯಾಟರಿಯನ್ನು ಹೊಂದಿದೆ. [ಹುವಾಯಿ ಹೋನರ್ 6 ಪ್ಲಸ್ ಐಫೋನ್ 6 ಪ್ಲಸ್ ಮತ್ತು ಡಿಎಸ್ಎಲ್ಆರ್ ಕ್ಯಾಮೆರಾ ಭಿನ್ನತೆ]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ

ಸ್ಯಾಮ್‌ಸಂಗ್ ಹೊಸ ಕಿಲಾಡಿ ಗ್ಯಾಲಕ್ಸಿ ಎಸ್6: ಡಿಸ್‌ಪ್ಲೇ

ಡಿವೈಸ್ 5.1 ಇಂಚಿನ 1440x2560 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ.

ಪ್ರೊಸೆಸರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಪ್ರೊಸೆಸರ್

ಎಕ್ಸೋನಸ್ 7420 ಓಕ್ಟಾ ಕೋರ್ 64 ಬಿಟ್ ಚಿಪ್‌ಸೆಟ್ ಅನ್ನು ಇದು ಪಡೆದುಕೊಂಡಿದ್ದು, 3 ಜಿಬಿ RAM ಬೆಂಬಲವನ್ನು ಪಡೆದುಕೊಂಡಿದೆ.

ಸಂಗ್ರಹಣೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಸಂಗ್ರಹಣೆ

ಗ್ಯಾಲಕ್ಸಿ ಎಸ್6 32/64/128 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಇನ್ನು ವಿಸ್ತರಣಾ ಸ್ಲಾಟ್ ಅನ್ನು ಪಡೆದುಕೊಂಡಿಲ್ಲ.

ಕ್ಯಾಮೆರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಕ್ಯಾಮೆರಾ

ರಿಯರ್ ಕ್ಯಾಮೆರಾ 16 ಎಮ್‌ಪಿಯಾಗಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ಸಾಫ್ಟ್‌ವೇರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಸಾಫ್ಟ್‌ವೇರ್

ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್ ಡಿವೈಸ್‌ನಲ್ಲಿದೆ. ಇನ್ನು ಫೋನ್ ಮೇಲ್ಭಾಗದಲ್ಲಿ ಟಚ್‌ವಿಜ್ ಯುಐ ಇದೆ.

ವಿನ್ಯಾಸ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ವಿನ್ಯಾಸ

ಫೋನ್ ಅಳತೆಯು 143.40 x 70.50 x 6.80 ಎಮ್‌ಎಮ್ ಆಗಿದ್ದು ತೂಕ 138 ಗ್ರಾಮ್‌ ಆಗಿದೆ.

ಸಂಪರ್ಕ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಸಂಪರ್ಕ

ಫೋನ್ ವೈಫೈ, ಜಿಪಿಎಸ್, ಬ್ಲ್ಯೂಟೂತ್, ಎನ್‌ಎಫ್‌ಸಿ, ಆಡಿಯೊ ಜ್ಯಾಕ್, 3ಜಿ, ಸೆನ್ಸಾರ್‌ಗಳು ಇದರಲ್ಲಿವೆ.

ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಬ್ಯಾಟರಿ

ಡಿವೈಸ್ ಬ್ಯಾಟರಿ ಸಾಮರ್ಥ್ಯ 2550mAh ಆಗಿದೆ.

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6, ಏಪ್ರಿಲ್ 10 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಫೋನ್ ಬೆಲೆ ರೂ 49,900, ರೂ 55,900, ರೂ 60,900 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Few days back Samsung has sent out the invites for the launch of much waited device Galaxy S6 in India. As promised Samsung has launched its flagship mobile Samsung Galaxy S6 in an event today. Here we have pointed out some facts about the phone under the sliders.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot