Subscribe to Gizbot

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9+: ಐಫೋನ್ X ಇದರ ಮುಂದೆ ಏನೇನು ಇಲ್ಲ..!

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಬಿಟ್ಟರೇ ಟಾಪ್‌ ಎಂಡ್ ಆಂಡ್ರಾಯ್ಡ್ ಫೋನ್‌ಗಳನ್ನು ಲಾಂಚ್ ಮಾಡುವುದು ಸ್ಯಾಮ್‌ಸಂಗ್ ಮಾತ್ರವೇ ಎನ್ನಲಾಗಿದ್ದು, ಅಲ್ಲದೇ ಆಂಡ್ರಾಯ್ಡ್‌ ಗ್ರಾಹಕರು ಐಫೋನ್‌ನಷ್ಟೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಸ್ಮಾರ್ಟ್‌ಫೋನ್‌ ಮೇಲೆ ಹಣವನ್ನು ಹೂಡಿಕೆಯನ್ನು ಮಾಡಲು ಸಿದ್ಧರಿದ್ದಾರೆ. ಇದೇ ಹಿನ್ನಲೆಯಲ್ಲಿ ಐಫೋನ್ X ಎದುರಾಗಿ ಶೀಘ್ರವೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್‌ಫೋನ್ ಶೀಘ್ರವೇ ಲಾಂಚ್ ಆಗಲಿದ್ದು, ಮುಂದಿನ ತಿಂಗಳು ನಡೆಯಲಿರುವ ಮೊಬೈಲ್ ವರ್ಡ್‌ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9+: ಐಫೋನ್ X ಇದರ ಮುಂದೆ ಏನೇನು ಇಲ್ಲ..!

ಈಗಾಗಲೇ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಬಿಡುಗಡೆ ಮಾಡಿರುವ ಟಾಪ್ ಎಂಡ್ ಫೋನ್‌ಗಳಾಗದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಸದ್ಯ ನಡೆಯುತ್ತಿರುವ CES 2018 ಕಾರ್ಯಕ್ರಮದಲ್ಲಿ ಮುಂದಿನ ತಿಂಗಳು ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್‌ಫೋನ್ ಗಳನ್ನು ಬಿಡುಗಡೆ ಮಾಡುವುದಾಗಿ ಸ್ಯಾಮ್‌ಸಂಗ್ ತಿಳಿಸಿದೆ ಎನ್ನಲಾಗಿದೆ.

ಓದಿರಿ: ಚೀನಾ ಫೋನ್‌‌ಗಳು ಸೈಡಿಗೆ: ಬಂದಿದೆ ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸೈನ್ ಮತ್ತ ಡಿಸ್‌ಪ್ಲೇ:

ಡಿಸೈನ್ ಮತ್ತ ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್‌ಫೋನ್ ಗಳಲ್ಲಿ ಇನ್ಫಿನಿಟಿ ಡಿಸ್‌ಪ್ಲೇ ಮತ್ತು ಬ್ರಜಿಲ್ ಲೈಸ್ ವಿನ್ಯಾಸವನ್ನು ಕಾಣಬಹುದಾಗಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ರಮವಾಗಿ 5.8 ಮತ್ತು 6.2 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದರಲಿದೆ ಎನ್ನಲಾಗಿದೆ. ಇದಲ್ಲದೇ ಈ ಡಿಸ್‌ಪ್ಲೇಗಳು 4K ಗುಣಮಟ್ಟವನ್ನು ಹೊಂದಿದೆ.

ಕಾರ್ಯಚರಣೆ:

ಕಾರ್ಯಚರಣೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್‌ಫೋನ್ ನಲ್ಲಿ ಕ್ವಾಲ್ಕಮ್ ಹೊಸದಾಗಿ ಲಾಂಚ್ ಮಾಡಿರುವ ಸ್ನಾಪ್‌ಡ್ರಾಗನ್ 845 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ. ಈ ಚಿಪ್‌ಸೆಟ್ ಆಕ್ಟಾಕೋರ್ ನದ್ದಾಗಿದೆ. ಇದು ಕಡಿಮೆ ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳಲಿದೆ. ಸದ್ಯ ಮಾರುಕಟ್ಟೆಯ ಅತೀ ವೇಗದ ಪ್ರೋಸೆಸರ್ ಇದಾಗಿರಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್‌ಫೋನ್ ಗಳಲ್ಲಿ ಕ್ಯಾಮರಾ ವಿಭಿನ್ನವಾಗಿರಲಿದೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಪ್ಲಸ್‌ನಲ್ಲಿ ಮಾತ್ರವೇ ಡ್ಯುಯಲ್ ಲೈನ್ಸ್ ಕ್ಯಾಮೆರಾ ನೀಡಿದ್ದು, ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9ನಲ್ಲಿ ಸಿಂಗಲ್ ಕ್ಯಾಮೆರಾ ವನ್ನು ಮಾತ್ರವೇ ಅಳವಡಿಸಿದೆ. ಇದು 4K ಗುಣಮಟ್ಟದ ವಿಡಿಯೋಗಳನ್ನು ರೆಕಾರ್ಡ್ ಮಾಡಲಿದೆ ಎನ್ನಲಾಗಿದೆ.

ಬೆಲೆ:

ಬೆಲೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಕುರಿತಂತೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ಈ ಬಾರಿ ಸ್ಯಾಮ್‌ ಸಂಗ್ ತನ್ನ ಪೋನ್ ಬೆಲೆಯನ್ನು ಕೊಂಚ ಹೆಚ್ಚು ಮಾಡಲಿದೆ ಎನ್ನಲಾಗಿದೆ. ಕಾರಣ ಮಾರುಟಕ್ಟೆಯಲ್ಲಿ ಹೆಚ್ಚಿನ ಸ್ಪರ್ಧೇ ಇರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to Sharing a Mobile Data Connection with Your PC (KANNADA)

ಓದಿರಿ: ಬಜೆಟ್ ಬೆಲೆಯಲ್ಲಿ ಟ್ಯಾಬ್ಲೆಟ್‌ ನೀಡಲಿದೆ ಸ್ಯಾಮ್‌ಸಂಗ್: ಸ್ಮಾರ್ಟ್‌ಫೋನ್ ಇನ್ಯಾಕೆ..?

English summary
Samsung Galaxy S9 and S9+ launched at MWC. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot